ಮತದಾರರ ಪಟ್ಟಿಯಲ್ಲಿ ಡಿಜಿಪಿ ನೀಲಮಣಿ ರಾಜು ಹೆಸರೇ ಇಲ್ಲ!
ಬೆಂಗಳೂರು, ಮೇ 11: ಶನಿವಾರ ನಡೆಯಲಿರುವ ಬಹು ನಿರೀಕ್ಷಿತ ಕರ್ನಾಟಕ ವಿಧಾನಸಭೆ ಚುನಾವಣೆ 2018ರ ಭದ್ರತೆಯ ಹೊಣೆ ಹೊತ್ತವರು ಕರ್ನಾಟಕ ಪೊಲೀಸ್ ಮಹಾನಿರ್ದೇಶಕಿ ಎನ್. ನೀಲಮಣಿ ರಾಜು.
ಆದರೆ ಅವರ ಹೆಸರೇ ಮತದಾರರ ಪಟ್ಟಿಯಲ್ಲಿಲ್ಲ. ದೆಹಲಿಯಲ್ಲಿಯೂ ಅವರ ಹೆಸರು ಮತದಾರರ ಪಟ್ಟಿಯಲ್ಲಿಲ್ಲ. ಇತ್ತ ಬೆಂಗಳೂರಿನಲ್ಲಿಯೂ ಅವರ ಹೆಸರು ಮತದಾರರ ಪಟ್ಟಿಯಿಂದ ನಾಪತ್ತೆಯಾಗಿದೆ.
ಮಲ್ಲೇಶ್ವರಂನಲ್ಲಿ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಇತ್ತು. ಆದರೆ ಈ ಬಗ್ಗೆ ಪರಿಶೀಲನೆ ಮಾಡಿದಾಗ ಡಿಲೀಟ್ ಆಗಿರುವುದಾಗಿ ಮಾಹಿತಿ ಸಿಕ್ಕಿದೆ.

ಈ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ, 'ಏನ್ ಮಾಡೋದು ಹೇಳಿ' ಎಂದು ನೀಲಮಣಿ ರಾಜು ಮುಗುಳ್ನಕ್ಕಿದ್ದಾರೆ.
ಹೀಗಾಗಿ ಶನಿವಾರ ಮತ ಚಲಾಯಿಸುವ ಹಕ್ಕನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕಿಯೇ ಕಳೆದುಕೊಂಡಿದ್ದಾರೆ.












Click it and Unblock the Notifications