ಅಂಜನಾದ್ರಿ ಬೆಟ್ಟಕ್ಕೆ ಪುನೀತ್ ಫೋಟೋ ಜೊತೆ ಭಕ್ತರ ಪಾದಯಾತ್ರೆ!

ಕೊಪ್ಪಳ, ಡಿಸೆಂಬರ್ 05; ಹನುಮ ಜಯಂತಿ ಅಂಗವಾಗಿ ಹನುಮ ಜನಿಸಿದ ಭೂಮಿ ಕೊಪ್ಪಳದ ಅಂಜನಾದ್ರಿಗೆ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ಭಕ್ತರ ಗುಪೊಂದು ಕನ್ನಡ ನಟ ದಿ. ಪುನೀತ್ ರಾಜ್ ಕುಮಾರ್ ಫೋಟೋ ಹಿಡಿದು ಪಾದಯಾತ್ರೆ ಮಾಡುತ್ತಿದೆ.

ಹನುಮ ಜನಿಸಿದ ಭೂಮಿ ಅಂಜನಾದ್ರಿಯಲ್ಲಿ ಹನುಮ ಜಯಂತಿಯಂದು ಪಾವನ ಹೋಮ ನಡೆಯುತ್ತದೆ. ಆದರೆ ಹನುಮ ಜಯಂತಿ ಮುನ್ನಾ ದಿನವಾದ ಡಿಸೆಂಬರ್ 4ರಂದೇ ಬೆಟ್ಟದಲ್ಲಿ ಹಬ್ಬದ ಸಂಭ್ರಮ ಕಂಡುಬಂದಿತು.

ಹನುಮವ್ರತ ಆಚರಿಸಿದ ಮಾಲಾಧಾರಿಗಳು ಪಾದಯಾತ್ರೆ ಮೂಲಕ ಕಿಷ್ಕಿಂದೆಯ ಅಂಜನಾದ್ರಿ ಪರ್ವತದತ್ತ, ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ಆಗಮಿಸಿದರು. ಭಕ್ತರು ಕೈಯಲ್ಲಿ ಭಗವಾದ್ವಜ ಹಿಡಿದು ಕೇಸರಿ ಧರಿಸಿನೊಂದಿಗೆ ಬೆಟ್ಟದತ್ತ ಸಾಲುಸಾಲಾಗಿ ಸಾಗುತ್ತಿರುವ ದೃಶ್ಯ ಕಂಡುಬಂದಿತು.

Devotes Padayatra For Anjanadri Hills With Puneeth Rajkumar Photo

ದೇವರ ದರ್ಶನಕ್ಕಾಗಿ ಕುಟುಂಬ ಸಮೇತ ಆಗಮಿಸುವ ಹಲವು ಭಕ್ತರು ಬಯಲು ಗದ್ದೆಗಳಲ್ಲಿ ವಾಸ್ತವ್ಯ ಹೂಡಿದ್ದರು. ಕೊಪ್ಪಳ, ಗಂಗಾವತಿ, ಕಾರಟಗಿ, ಕನಕಗಿರಿ ಮತ್ತು ರಾಜ್ಯದ ಬೇರೆ-ಬೇರೆ ಜಿಲ್ಲೆಗಳ ಹನುಮ ಮಾಲಾಧಾರಿಗಳು ತಂಡೋಪತಂಡವಾಗಿ ಬೆಟ್ಟಕ್ಕೆ ಆಗಮಿಸಿದ್ದಾರೆ.

ದೇವಾಲಯಗಳಲ್ಲಿ ಪೂಜೆ: ಅಂಜನಾದ್ರಿ ಬೆಟ್ಟಕ್ಕೆ ಆಗಮಿಸುತ್ತಿರುವ ಭಕ್ತರು ತಾವುಗಳು ನಡೆಯುವ ದಾರಿಯಲ್ಲಿನ ಹನುಮ ದೇವಾಲಯಗಳಲ್ಲಿ ಪೂಜೆ ನೆರವೇರಿಸಿ, ದೇವಾಲಯದ ಆವರಣದಲ್ಲಿ ವಿರಮಿಸಿ ಸಾಗಿದರು. ಅಭಯ ಆಂಜನೇಯ ಸ್ವಾಮಿ ದೇವಾಲಯ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಭಕ್ತರು ಆಶ್ರಯ ಪಡೆದಿದ್ದರು.

ಸಿಂಧೋಗಿ ಹತ್ತಿರದ ಒದ್ನಾಳದಿಂದ ಅಂಜನಾದ್ರಿಗೆ ಹೊರಟಿದ್ದ ಮಾಲಾಧಾರಿಗಳು ಅಗಳಕೇರಾದಲ್ಲಿರುವ ಜಮೀನಿನಲ್ಲಿ ವಿಶ್ರಾಂತಿ ಪಡೆದಿದ್ದರು. ದಾರಿಯಲ್ಲಿ ಸಂಚರಿಸುತ್ತಿದ್ದ ಮಾಲಾಧಾರಿಗಳಿಗೆ ಬನ್ನಿ ಸ್ವಾಮಿಗಳೇ ಎಂದು ಕರೆಯುತ್ತ ಅಗಳಕೇರಾದ ಮಂಜುನಾಥ ಶೆಟ್ರು, ರಾಜು ಗಡಾದ ಮತ್ತು ಮೇಘರಾಜ ಸಿಂಧೋಗಿ ಅವರು ಫಲಾವ್ ಮತ್ತು ಮಜ್ಜಿಗೆಯ ವಿತರಣೆ ಸೇವೆ ಮಾಡಿದರು.

Devotes Padayatra For Anjanadri Hills With Puneeth Rajkumar Photo

ಅಂಜನಾದ್ರಿ ಬೆಟ್ಟದತ್ತ ಹೆಜ್ಜೆ ಹಾಕುತ್ತಿದ್ದ ಭಕ್ತರು ಮೊಬೈಲ್‌ನಲ್ಲಿ ಆಂಜನೇಯ ದೇವರ ಕುರಿತ ಭಕ್ತಿ ಗೀತೆ ಕೇಳುತ್ತ, ಕೆಲ ಭಕ್ತರು ನಟ ಪುನೀತ್ ರಾಜಕುಮಾರ್ ಫೋಟೋ ಹಿಡಿದು ಸಾಗುತ್ತಿರುವುದು ಕಂಡು ಬಂದಿತು.

ಹೆಚ್ಚಿನ ಪೊಲೀಸ್ ಬಂದೋಬಸ್ತ್; ಅಂಜನಾದ್ರಿ ಬೆಟ್ಟಕ್ಕೆ ಆಗಮಿಸುವ ಭಕ್ತರ ಸುರಕ್ಷತೆಯ ದೃಷ್ಟಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸಹಾಯವಾಣಿ ಸ್ಥಾಪಿಸಲಾಗಿದೆ. ಮಾಲಾಧಾರಿಗಳು ನಿರ್ಭಯದಿಂದ ಬಂದು ಹೋಗಬಹುದು ಎಂದು ಜಿಲ್ಲಾಡಳಿತ ಹೇಳಿದೆ.

ಹನುಮ ಮಾಲಾಧಿಕಾರಿಗಳಿಗೆ ಆಂಜನೇಯ ದರ್ಶನಕ್ಕಾಗಿ ಅನುಕೂಲವಾಗಲು ವಿಶೇಷ ನೋಡಲ್ ಅಧಿಕಾರಿ ನೇಮಕ ಮಾಡಲಾಗಿದೆ. ಕೊಪ್ಪಳ ಜಿಲ್ಲಾಡಳಿತ ಸಹ ಅಗತ್ಯ ವ್ಯವಸ್ಥೆ ಮಾಡಿದೆ.

ಹನುಮಮಾಲಧಾರಿಗಳಾದ ಹಗರಿಬೊಮ್ಮನಹಳ್ಳಿ ಮಹೇಶ ಮತ್ತು ಬ್ಯಾಲ್ಯಾಳದ ಶ್ರೀಧರ ಮಾತನಾಡಿ, "ನಮ್ಮ ನೆಚ್ಚಿನ ದೇವರಾದ ಆಂಜನೇಯ ದರ್ಶನಕ್ಕಾಗಿ ನಾವು ಪ್ರತಿ ವರ್ಷವೂ ನಮ್ಮೂರಿನಿಂದ‌ ನಡೆದು ಬರುತ್ತೇವೆ" ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+