ಕುಂದಾನಗರಿ ಬೆಳಗಾವಿಯಲ್ಲಿ ಶ್ರೀರಾಮನ ಆರಾಧನೆ, ಸ್ಮರಣೆ & ಸಂಭ್ರಮಾಚರಣೆ!

ಬೆಳಗಾವಿ: ಅಯೋಧ್ಯೆಯ ಶ್ರೀರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ, ಎಲ್ಲೆಲ್ಲೂ ಸಂಭ್ರಮ ಬಲು ಜೋರಾಗಿದೆ. ಬರೋಬ್ಬರಿ 500 ವರ್ಷಗಳ ನಂತರ ಈ ಕನಸು ಈಡೇರುತ್ತಿದೆ ಅಂತಾ ಭಾರತೀಯರು ಸಂಭ್ರಮಿಸಿದ್ದಾರೆ. ಅದೇ ರೀತಿ ಕರ್ನಾಟಕದ ಗಡಿ ಜಿಲ್ಲೆ ಕುಂದಾ ನಗರಿ ಖ್ಯಾತಿಯ ಬೆಳಗಾವಿಯಲ್ಲಿ ಕೂಡ ಸಂಭ್ರಮ ಮೇಳೈಸಿದೆ. ಪ್ರಭು ಶ್ರೀರಾಮನ ಭಕ್ತರು ಈಗ, ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯನ್ನ ಸಂಭ್ರಮಿಸಿದ್ದಾರೆ.

ದೇಶದ ಪ್ರತಿ ರಾಜ್ಯ, ಜಿಲ್ಲೆ & ತಾಲೂಕು ಸೇರಿ ಹಳ್ಳಿಹಳ್ಳಿ, ಗಲ್ಲಿ ಗಲ್ಲಿಯಲ್ಲಿ ಶ್ರೀರಾಮನ ಸ್ಮರಣೆ ಜೋರಾಗಿದೆ. ಈ ಮೂಲಕ ರಾಷ್ಟೀಯ ಹಬ್ಬದಂತೆ ಈ ದಿನವನ್ನು ಸೆಲೆಬ್ರೇಟ್ ಮಾಡಿದ್ದಾರೆ ಭಕ್ತರು. ಈ ಪೈಕಿ ಕುಂದಾನಗರಿ ಬೆಳಗಾವಿಯಲ್ಲಿ ಪ್ರಭು ರಾಮಚಂದ್ರ ಆರಾಧನೆ ಜೋರಾಗಿದೆ. ಎಲ್ಲವೂ ರಾಮಮಯ ಆಗಿದ್ದು, ಭಕ್ತರು ತಮ್ಮ ಭಕ್ತಿಯ ಮೆರೆದಿದ್ದಾರೆ. ಈ ಕುರಿತು ಪೂರ್ಣ ಮಾಹಿತಿ ಇಲ್ಲಿ ತಿಳಿಯೋಣ, ಮುಂದೆ ಓದಿ.

Devotees Celebrated Lord Shri Ram Mandir Inauguration In Belagavi

ಬೆಳಗಾವಿ ಸಂಪೂರ್ಣ ರಾಮಮಯ!

ಅಂದಹಾಗೆ ರಾಮ ಮಂದಿರ ಉದ್ಘಾಟನೆ ಸಂತಸದ ಹಿನ್ನೆಲೆ ಎಲ್ಲೆಲ್ಲೂ ಕೇಸರಿ ಬಾವುಟಗಳೇ ರಾರಾಜಿಸಿದವು. ಅಲ್ಲದೆ ದೇವಾಲಯಗಳಿಗೆ ಭಾರಿ ಪ್ರಮಾಣದಲ್ಲಿ ಭಕ್ತರು ಹರಿದು ಬಂದರು. ಜೊತೆಗೆ ಗಲ್ಲಿ ಗಲ್ಲಿಯಲ್ಲೂ ಅಯೋಧ್ಯೆಯ ನೇರ ಪ್ರಸಾರ ಕಣ್ತುಂಬಿಕೊಂಡ ಜನ ಸಂಭ್ರಮ ವ್ಯಕ್ತಪಡಿಸಿದರು. ಈ ಮೂಲಕ ಕುಂದಾನಗರಿ ಬೆಳಗಾವಿ ಸಂಪೂರ್ಣ ರಾಮಮಯ ಆಗಿತ್ತು. ಅಲ್ಲದೆ ಶ್ರೀರಾಮನನ್ನ ಭಕ್ತರು ಭಕ್ತಿಯಿಂದ ನೆನೆದರು.

ಎಲ್ಲೆಡೆಯೂ ಹಬ್ಬದ ವಾತಾವರಣ

ಬೆಳಗಾವಿ ಹಿಮು ಕಲಾನಿ ಚೌಕ್‌ನಲ್ಲಿ ಶ್ರೀರಾಮ ಭಕ್ತರು ಅನ್ನ ಸಂತರ್ಪಣೆ ಮಾಡಿದ್ರೆ ಬೆಳಗಾವಿ ಖಡಕ್‌ ಗಲ್ಲಿ, ರಾಮಖಿಂಡ ಗಲ್ಲಿ & ಸದಾಶಿವ ನಗರವೂ ಸೇರಿ ಬೆಳಗಾವಿ ವಿವಿಧೆಡೆ ಶ್ರೀರಾಮ ಮೂರ್ತಿಯ ಬ್ಯಾನರ್ ಹಾಕಿ ಸಂಭ್ರಮಿಸಿದರು. ವಿವಿಧ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನ ಸಲ್ಲಿಸಲಾಯಿತು. ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ವಕೀಲರು ಕೂಡ ಈ ವೇಳೆ ಸಂಭ್ರಮಿಸಿದರು ಹಾಗೇ ಜೈ ಶ್ರೀರಾಮ ಘೋಷಣೆ ಕೂಗಿದರು. ಮಹಿಳಾ ಭಕ್ತರು ಅಯೋಧ್ಯೆಯ ಸಂಭ್ರಮಕ್ಕೂ ಸಾಥ್ ನೀಡಿದರು. ಶ್ರೀರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ದೇವರನ್ನು ಭಕ್ತಿಯಿಂದ ನೆನೆದರು.

Devotees Celebrated Lord Shri Ram Mandir Inauguration In Belagavi

ಜಗತ್ತಿನಾದ್ಯಂತ ಭಕ್ತರಿಂದ ಶ್ರೀರಾಮ ಸ್ಮರಣೆ

ಭಾರತ ಮಾತ್ರವಲ್ಲದೆ ಜಗತ್ತಿನ ವಿವಿಧೆಡೆ ಕೂಡ ಶ್ರೀರಾಮನ ಜಪ ಮಾಡುತ್ತಿದ್ದಾರೆ ಭಕ್ತರು. ಹಲವು ದಿನದಿಂದ ಅಮೆರಿಕದಲ್ಲಿ ವಿಶೇಷ ಕಾರ್ಯಕ್ರಮ ಹಾಗೂ ಕಾರ್ ರ್‍ಯಾಲಿಗಳನ್ನು ಭಕ್ತರು ಆಯೋಜನೆ ಮಾಡಿದ್ದರು. ಈ ಮೂಲಕ ಶ್ರೀರಾಮ ಮಂದಿರ ಉದ್ಘಾಟನೆಯ ಸಂಭ್ರಮವನ್ನು ಆರಂಭಿಸಿದ್ದರು. ಇದೀಗ ಭರ್ಜರಿಯಾಗಿ ಶ್ರೀರಾಮ ದೇಗುಲ ಉದ್ಘಾಟನೆ ಆಗಿದ್ದು, ಇದೇ ವೇಳೆ ವಿಶಿಷ್ಟವಾಗಿ ಗೌರವ ಸಲ್ಲಿಸಿದ್ದಾರೆ ಶ್ರೀರಾಮನ ಭಕ್ತರು. ಅಮೆರಿಕದ ದೇಗುಲದಲ್ಲಿ ಶ್ರೀರಾಮನ ಜಪ ಮಾಡಿದ್ದಾರೆ ಭಕ್ತರು.

ಒಟ್ನಲ್ಲಿ ಜಗತ್ತಿನಾದ್ಯಂತ ಈಗ ಶ್ರೀರಾಮ ನಾಮವೇ ಕೇಳಿಬರುತ್ತಿದೆ. ಅದ್ರಲ್ಲೂ ಅಯೋಧ್ಯೆಯ ಭೂಮಿಯಲ್ಲಿ ಹಬ್ಬವೇ ಶುರುವಾಗಿದೆ. ಪ್ರಧಾನಿ ಮೋದಿ ಕೂಡ ಈ ಸಂಭ್ರಮದ ಭಾಗವಾಗಿ ಶ್ರೀರಾಮನಿಗೆ ನಮಿಸಿದ್ದಾರೆ. ಅದರಲ್ಲೂ ಕುಂದಾನಗರಿ ಬೆಳಗಾವಿಯಂತೂ ಈ ಸಂಭ್ರಮಕ್ಕೆ ಸಾಕ್ಷಿಯಾಗಿತ್ತು. ಲಕ್ಷಾಂತರ ಭಕ್ತರು ತಮ್ಮ ನೆಚ್ಚಿನ ದೇವರಿಗೆ ನಮಿಸಿದರು. ಗಲ್ಲಿ ಗಲ್ಲಿಯು ಈ ಸಂಭ್ರಮಕ್ಕೆ ಸಾಕ್ಷಿಯಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+