Dasrshan: ಶೂಟಿಂಗ್ ಹಂತದಲ್ಲಿರುವ 'ಡೆವಿಲ್' ಸಿನಿಮಾ ನಿರ್ದೇಶಕ ಬಳ್ಳಾರಿ ಜೈಲಿಗೆ ಭೇಟಿ: ಯಾವ ಕಾರಣಕ್ಕೆ!

ಬೆಂಗಳೂರು, ಸೆಪ್ಟಂಬರ್ 26: ನಟ ದರ್ಶನ್ ತುಗೂದೀಪ ಅವರು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲು ಸೇರಿದ್ದಾರೆ. ಈ ಕಾರಣದಿಂದಾಗಿ ನಟ ದರ್ಶನ್ ಅಭಿನಯಿಸುತ್ತಿದ್ದ 'ಡೆವಿಲ್' ಶೂಟಿಂಗ್ ಅರ್ಧದಲ್ಲೇ ನಿಂತಿದೆ. ಇದೆಲ್ಲ ಬೆಳವಣಿಗೆಗಳು ಅವರ ಅಭಿಮಾನಿಗಳಲ್ಲಿ ಬೇಸರ ತರಿಸಿದೆ. ತಮ್ಮ ನೆಚ್ಚಿನ ನಟ ಯಾವಾಗ ಜೈಲಿನಿಂದ ಹೊರ ಬಂದು ಮತ್ತೆ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೋ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಇದೀಗ ಬಳ್ಳಾರಿ ಜೈಲಿಗೆ 'ಡೆವಿಲ್' ನಿರ್ದೇಶಕ ದರ್ಶನ್ ಭೇಟಿ ಮಾಡಿದ್ದಾರೆ.

'ಡೆವಿಲ್' ಚಿತ್ರದ ನಿರ್ದೇಶಕ ಪ್ರಕಾಶ್ ವೀರ್ ಅವರು ಇಂದು ಗುರುವಾರ ಬಳ್ಳಾರಿ ಜೈಲಿನಲ್ಲಿ ತಮ್ಮ ಸಿನಿಮಾ ನಟ ದರ್ಶನ್ ಅವರನ್ನು ಭೇಟಿ ಮಾಡಿದ್ದಾರೆ. ಇದು ಕುತೂಹಲಕ್ಕೆ ಕಾರಣವಾಗಿದೆ. ಏಕೆಂದರೆ ಈ ಹಿಂದೆ ರೇಣುಕಾಸ್ವಾಮಿ ವಿಚಾರದಲ್ಲಿ ದರ್ಶನ್ ಬಂಧಿಸುವ ವೇಳೆ ಡೆವಿಲ್ ಶೂಟಿಂಗ್‌ನಲ್ಲಿದ್ದರು. ಹೀಗಾಗಿ ಡೆವಿಲ್ ನಿರ್ದೇಶಕ ಪ್ರಕಾಶ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.

Devil Film Director Prakash Veer met Actor Darshan Thoogudeepa in Bellary Jail

ಇದೀಗ 'ಡೆವಿಲ್' ಚಿತ್ರದ ನಿರ್ದೇಶಕ ಪ್ರಕಾಶ್ ವೀರ್ ಅವರು ಬಳ್ಳಾರಿ ಜೈಲಿನಲ್ಲಿ ಭೇಟಿ ಮಾಡಿದ್ದಾರೆ. ಆರೋಗ್ಯ ಕುರಿತು ವಿಚಾರಿಸಿ, ಮಾತನಾಡಿಕೊಂಡು ಬಂದಿದ್ದಾರೆ. ಈ ವೇಳೆ ಅವರು ದರ್ಶನ್‌ಗಾಗಿ ಬಾಳೆಕಾಯಿ ಚೀಪ್ಸ್, ಬಿಸ್ಕೆಟ್ ಪ್ಯಾಕೆಟ್‌ಗಳನ್ನು ಹಾಗೂ ಇತರ ತಿನಿಸುಗಳನ್ನು ತಂದಿದ್ದರು. ಪೊಲೀಸರು ಎಲ್ಲ ತಪಾಸಣೆ ಮಾಡಿ ಒಳಗೆ ಬಿಟ್ಟಿದ್ದಾರೆ ಎನ್ನಲಾಗಿದೆ.

ಜೈಲಿನಲ್ಲಿ ಮಹತ್ವ ವಿಷಯಗಳ ಚರ್ಚೆ!

ದರ್ಶನ್ ಭೇಟಿ ವೇಳೆ ನಿರ್ದೇಶಕ ಪ್ರಕಾಶ್ ಅವರು, ಕೆಲವು ಮಹತ್ವದ ವಿಷಯಗಳನ್ನು ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ. ಈ ವೇಳೆ ಸಿನಿಮಾದ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ ಎನ್ನಲಾಗಿದೆ. ಶೀಘ್ರದಲ್ಲೇ ಎಲ್ಲವು ಒಳ್ಳೆಯದಾಗಲಿದೆ. ನಿಮಗೆ ಜಾಮೀನು ಸಿಗಲಿದೆ ಎಂದು ಅವರು ಧೈರ್ಯ ತುಂಬಿದ್ದಾರೆ ಎಂಬ ಮಾಹಿತಿ ಲಭ್ಯಾಗಿದೆ.

ಇತ್ತೀಚೆಗೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಹಾಗೂ ದರ್ಶನ್ ತಾಯಿ, ನಟ ಧನ್ವೀರ್ ಸೇರಿದಂತೆ ಇತರರು ಬಳ್ಳಾರಿ ಜೈಲಿಗೆ ಭೇಟಿ ನೀಡಿದ್ದರು. ದರ್ಶನ್ ಜೊತೆ ಕೆಲ ಹೊತ್ತು ಮಾತನಾಡಿ, ಆರೋಗ್ಯ ವಿಚಾರಿಸಿದರು. ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಹೋಲಿಕೆ ಮಾಡಿದರೆ,ಬಳ್ಳಾರಿ ಜೈಲಿಗೆ ನಟ ದರ್ಶನ್ ಭೇಟಿಗೆ ಬರುವವರ ಸಂಖ್ಯೆ ಕಡಿಮೆ ಎನ್ನಲಾಗಿದೆ.

ಜಾಮೀನು ಸಿಗುವುದು ಯಾವಾಗ?

ನಟ ದರ್ಶನ್ ಕೇಸಿನಲ್ಲಿ ಚಾರ್ಜ್‌ಶೀಟ್ ಸಲ್ಲಿಕೆ ಆದ ಬಳಿಕ ಮೊದಲ ಬಾರಿಗೆ ದರ್ಶನ್ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ನಟಿ ಪವಿತ್ರಾ ಗೌಡ ಎರಡು ಬಾರಿ ಜಾಮೀನು ಸಲ್ಲಿಸಿದ್ದಾರೆ. ಸದ್ಯ ಮೂವರಿಗೆ ಮಾತ್ರವೇ ರೇಣುಕಾಸ್ವಾಮಿ ಪ್ರಕರಣದಲ್ಲಿ ಜಾಮೀನು ಸಿಕ್ಕಿದೆ.

ಸದ್ಯ ದರ್ಶನ್ ಜಾಮೀನು ಅರ್ಜಿ ಎರಡು ಬಾರಿ ಮುಂದೂಡಿಕೆ ಆಗಿದೆ. ನಾಳೆ ಸೆಪ್ಟಂಬರ್ 27ರಂದು ಮತ್ತೆ ವಿಚಾರಣೆಗೆ ಬರಲಿದೆ. ಅಂದು ಪವಿತ್ರಾ ಗೌಡ ಅರ್ಜಿ ಸೇರಿದಂತೆ ಇತ್ತೀಚೆಗೆ ಜಾಮೀನು ಕೋರಿ ಸಲ್ಲಿಸಿರುವ ಐವರು ಆರೋಪಿಗಳ ಅರ್ಜಿ ವಿಚಾರಣೆ ಸಹ ನಡೆಯುವ ಸಾಧ್ಯತೆ ಇದೆ.

ಮೂಲಗಳ ಪ್ರಕಾರ ನಟ ದರ್ಶನ್‌ಗೆ ಜಾಮೀನು ಸಿಗುವುದು ಇನ್ನೂ ಕೆಲವು ತಿಂಗಳು ತಡವಾಗಬಹುದು ಎನ್ನಲಾಗಿದೆ. ಇದಕ್ಕೆ ದರ್ಶನ್ ಪ್ರಭಾವಿ, ಹಣವಂತ, ಪ್ರಭಾವಿಗಳ ಪರಿಚಯ ಹಿನ್ನೆಲೆಯಲ್ಲಿ ಇದನ್ನೆ ಮುಂದಿಟ್ಟುಕೊಂಡು ಎಸ್‌ಪಿಪಿ ವಾದ ಮಾಡಿ ಜಾಮೀನು ನೀಡದಂತೆ ಮನವಿ ಮಾಡಬಹುದು ಎಂದು ಹೇಳಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+