ಕುತೂಹಲ ಕೆರಳಿಸಿದೆ ದೇವೇಗೌಡರ ದೆಹಲಿ ಪ್ರಯಾಣ
Recommended Video

ಬೆಂಗಳೂರು, ಜೂನ್ 27: ರಕ್ಷಣಾ ಸಚಿವಾಲಯ ಕರೆದಿರುವ ಮಹತ್ವದ ಸಭೆಯಲ್ಲಿ ಭಾಗವಹಿಸಲು ಇಂದು ದೆಹಲಿಗೆ ತೆರಳುತ್ತಿರುವ ಸಂಸದ ದೇವೇಗೌಡ ಅವರು ಜೊತೆಗೆ ಕಾಂಗ್ರೆಸ್ ಹೈಕಮಾಂಡ್ ಅನ್ನೂ ಭೇಟಿಯಾಗಲಿದ್ದಾರೆ.
ರಾಹುಲ್ ಗಾಂಧಿ ಮತ್ತು ಸೊನಿಯಾ ಗಾಂಧಿ ಅವರೊಂದಿಗೆ ದೇವೇಗೌಡ ಅವರು ಮಾತುಕತೆ ನಡೆಸುವ ಸಾಧ್ಯತೆ ಇದ್ದು ಜೊತೆಗೆ ಗುಲಾಂ ನಬಿ ಆಜಾದ್ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರ ಜೊತೆಯೂ ಮಾತುಕತೆ ನಡೆಸಲಿದ್ದಾರೆ.
ದಿನೇ ದಿನೇ 'ಸಿದ್ದರಾಮಯ್ಯ ವರ್ಸಸ್ ಸಮ್ಮಿಶ್ರ ಸರ್ಕಾರ' ಎಂಬ ಸ್ಥಿತಿ ರಾಜ್ಯ ರಾಜಕೀಯದಲ್ಲಿ ನಿರ್ಮಾಣವಾಗುತ್ತಿರುವ ಕಾರಣ ದೇವೇಗೌಡರು ಹೈಕಮಾಂಡ್ ಬಳಿ ಕೆಲವು ನಿಗದಿತ ಷರತ್ತುಗಳನ್ನು ಇಡಲಿದ್ದಾರೆ. ಕೆಲವು ನಾಯಕರು ಸರ್ಕಾರದಲ್ಲಿ ಹಸ್ತಕ್ಷೇಪ ಮಾಡದಂತೆ ತಡೆಯುವ ಪ್ರಯತ್ನವನ್ನೂ ಮಾಡಲಿದ್ದಾರೆ ಎನ್ನಲಾಗಿದೆ.

ಜೊತೆಗೆ ಲೋಕಸಭೆ ಚುನಾವಣೆಯ ಬಗ್ಗೆಯೂ ವಿಸ್ತೃತ ಚರ್ಚೆ ನಡೆಸುವ ಸಾಧ್ಯತೆ ಇದ್ದು, ಜಂಟಿಯಾಗಿ ಲೋಕಸಭೆ ಚುನಾವಣೆ ಎದುರಿಸುತ್ತಿರುವ ಕಾರಣ ಟಿಕೆಟ್ ಅನುಪಾತದ ಚರ್ಚೆ ನಡೆಯಲಿದೆ.
ಬಜೆಟ್, ಸಂಪುಟ ವಿಸ್ತರಣೆ ಹಾಗೂ ಸಿದ್ದರಾಮಯ್ಯ ಅಸಮಾಧಾನದ ನಡುವೆ ದೇವೇಗೌಡ ಅವರು ದೇಹಲಿಗೆ ತೆರಳಿ ಹೈಕಮಾಂಡ್ ಭೇಟಿ ಮಾಡಲಿರುವುದು ಅತ್ಯಂತ ಮಹತ್ವದ್ದೆಂದೇ ಪರಿಗಣಿಸಲಾಗಿದೆ.












Click it and Unblock the Notifications