ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವೇಗೌಡರಿಗಿಂತಲೂ ಪತ್ನಿ ಚೆನ್ನಮ್ಮ ಅವರೇ ಹೆಚ್ಚು ಶ್ರೀಮಂತರು!

|
Google Oneindia Kannada News

ಬೆಂಗಳೂರು, ಮಾರ್ಚ್ 25: ತುಮಕೂರಿನಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿರುವ ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡ ಅವರು ಇಂದು ನಾಮಪತ್ರ ಸಲ್ಲಿಸಿದ್ದಾರೆ.

ನಾಮಪತ್ರದ ಜೊತೆಗೆ ಆಸ್ತಿವವರ ಸೇರಿ ಹಲವು ಮಾಹಿತಿಯನ್ನು ದೇವೇಗೌಡ ಅವರು ಚುನಾವಣಾ ಆಯೋಗಕ್ಕೆ ನೀಡಿದ್ದಾರೆ. ದೇವೇಗೌಡ ಹಾಗೂ ಪತ್ನಿ ಚೆನ್ನಮ್ಮ ಅವರ ಆಸ್ತಿ ವಿವರವನ್ನೂ ಚುನಾವಣಾ ಆಯೋಗಕ್ಕೆ ನಿಯಮದಂತೆ ನೀಡಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ದೇವೇಗೌಡ ಅವರ ಈ ಆರ್ಥಿಕ ವರ್ಷದ ಆದಾಯ 6.38 ಲಕ್ಷ ರೂಪಾಯಿಗಳಿವೆ. ಅವರಿಗೆ ಕೃಷಿ ಆದಾಯ ಕಳೆದ ಮೂರು ವರ್ಷದಿಂದ ಬಂದಿಲ್ಲ. ಆದರೆ ಪತ್ನಿ ಚೆನ್ನಮ್ಮ ಅವರಿಗೆ ಕೃಷಿ ಮೂಲದಿಂದ ಬಂದಿರುವ ವಾರ್ಷಿಕ ಆದಾಯ 15.03 ಲಕ್ಷ. ಅವರ ವಾರ್ಷಿಕ ಆದಾಯ 2.12 ಲಕ್ಷ ಒಟ್ಟು 17.15 ಲಕ್ಷ ಆದಾಯ ಈ ವರ್ಷದಲ್ಲಿ ಚೆನ್ನಮ್ಮ ಅವರಿಗೆ ಬಂದಿದೆ.

ಹಾಸನ : ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಆಸ್ತಿ, ಸಾಲ ವಿವರ ಹಾಸನ : ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಆಸ್ತಿ, ಸಾಲ ವಿವರ

ದೇವೇಗೌಡ ಅವರ ವಿವಿಧ ಬ್ಯಾಂಕ್ ಖಾತೆಗಳಲ್ಲಿರುವ ಒಟ್ಟು ಮೊತ್ತ 28.04 ಲಕ್ಷ ರೂಪಾಯಿ, ಅದೇ ಚೆನ್ನಮ್ಮ ದೇವೇಗೌಡ ಅವರ ಬ್ಯಾಂಕ್ ಖಾತೆಗಳಲ್ಲಿ ಇರುವ ಒಟ್ಟು ಮೊತ್ತ 63.27 ಲಕ್ಷ ರೂಪಾಯಿಗಳು. ದೇವೇಗೌಡ ಅವರು ಸಕ್ಕರೆ ಕಾರ್ಖಾನೆಯ ಮೇಲೆ 1000 ರೂಪಾಯಿ ಹೂಡಿಕೆ ಮಾಡಿದ್ದಾರೆ. ಚೆನ್ನಮ್ಮ ಅವರು ಚೆನ್ನಾಂಬಿಕ ಎಂಟರ್‌ಪ್ರೈಸಸ್ ನಲ್ಲಿ 25.16 ಲಕ್ಷ ಹೂಡಿಕೆ ಮಾಡಿದ್ದಾರೆ.

ಪತ್ನಿಗೆ ಸಾಲ ನೀಡಿದ್ದಾರೆ ದೇವೇಗೌಡ

ಪತ್ನಿಗೆ ಸಾಲ ನೀಡಿದ್ದಾರೆ ದೇವೇಗೌಡ

ದೇವೇಗೌಡ ಅವರು ಪತ್ನಿ ಚೆನ್ನಮ್ಮ ಅವರಿಗೆ 6.27 ಲಕ್ಷ ಸಾಲ ನೀಡಿದ್ದಾರೆ. ಜೊತೆಗೆ ಜೆಡಿಎಸ್‌ ಪಕ್ಷಕ್ಕೆ 9.45 ಲಕ್ಷ ನೀಡಿದ್ದಾರೆ. ಚೆನ್ನಮ್ಮ ಅವರು ಆರ್.ಸೂರಜ್ ಎಂಬುವರಿಗೆ 20 ಲಕ್ಷ, ಕಾಳೇಗೌಡ ಎಂಬುವರಿಗೆ 5.15 ಲಕ್ಷ ಸಾಲ ನೀಡಿದ್ದರೆ, ಅವರಿಗೆ ಪ್ರತಿ ತಿಂಗಳು 75 ಸಾವಿರ ಬಾಡಿಗೆ ಸಹ ಬರುತ್ತದೆ.

ಮಂಡ್ಯ : ಪಕ್ಷೇತರ ಅಭ್ಯರ್ಥಿ ಸುಮಲತಾ ಘೋಷಿಸಿದ ಆಸ್ತಿ ಎಷ್ಟು? ಮಂಡ್ಯ : ಪಕ್ಷೇತರ ಅಭ್ಯರ್ಥಿ ಸುಮಲತಾ ಘೋಷಿಸಿದ ಆಸ್ತಿ ಎಷ್ಟು?

ದೇವೇಗೌಡರ ಬಳಿ ಇರುವ ಕಾರುಗಳೆಷ್ಟು?

ದೇವೇಗೌಡರ ಬಳಿ ಇರುವ ಕಾರುಗಳೆಷ್ಟು?

ದೇವೇಗೌಡ ಅವರ ಬಳಿ ಮೂರು ಅಂಬಾಸಿಡರ್ ಕಾರುಗಳಿವೆ. ಅದರಲ್ಲಿ ಒಂದು 1974ರ ಮಾಡೆಲ್‌ನದ್ದು, ಅವುಗಳ ಒಟ್ಟು ಮೌಲ್ಯ 11.22 ಲಕ್ಷ. ಚೆನ್ನಮ್ಮ ಅವರ ಹೆಸರಿನಲ್ಲಿ ಎರಡು ಟ್ರಾಕ್ಟರ್‌ಗಳಿವೆ ಅವುಗಳ ಮೌಲ್ಯ 5.05 ಲಕ್ಷ ರೂಪಾಯಿ. ದೇವೇಗೌಡ ಅವರ ಬಳಿ 48,500 ಮೌಲ್ಯದ ಚಿನ್ನವಿದೆ. ಚೆನ್ನಮ್ಮ ಅವರ ಬಳಿ 4.50 ಲಕ್ಷ ಮೌಲ್ಯದ ಚಿನ್ನಾಭರಣಗಳಿವೆ. ಪೀಠೋಪಕರಣ, ಫ್ರಿಡ್ಜ್ ಇಂತಹುಗಳ ಒಟ್ಟು ಮೌಲ್ಯ 39,395 ಇದು ದೇವೇಗೌಡ ಅವರ ಹೆಸರಿನಲ್ಲಿದೆ.

ರಾಮನಗರ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ 100 ಕೋಟಿ ರೂ. ಆಸ್ತಿ ಒಡತಿರಾಮನಗರ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ 100 ಕೋಟಿ ರೂ. ಆಸ್ತಿ ಒಡತಿ

ದೇವೇಗೌಡ ಅವರ ಜಮೀನು ವಿವರ

ದೇವೇಗೌಡ ಅವರ ಜಮೀನು ವಿವರ

ದೇವೇಗೌಡ ಅವರ ಹೆಸರಿನಲ್ಲಿ 23 ಎಕರೆ 5 ಗುಂಟೆ ಕೃಷಿ ಭೂಮಿ ಇದೆ ಅದರ ಈಗಿನ ಮಾರುಕಟ್ಟೆ ಮೌಲ್ಯ 27.05 ಲಕ್ಷ. ಚೆನ್ನಮ್ಮ ಅವರ ಹೆಸರಿನಲ್ಲಿ 3 ಎಕರೆ 28 ಗುಂಟೆ ಕೃಷಿ ಭೂಮಿ ಇದೆ, ಇದರ ಈಗಿನ ಮಾರುಕಟ್ಟೆ ಮೌಲ್ಯ 5.55 ಲಕ್ಷ ರೂಪಾಯಿಗಳು. ದೇವೇಗೌಡ ಅವರ ಹೆಸರಲ್ಲಿ ಕೃಷಿಯೇತರ ಭೂಮಿ ಇಲ್ಲ, ಆದರೆ ಚೆನ್ನಮ್ಮ ಅವರ ಹೆಸರಿನಲ್ಲಿ 3.67 ಕೋಟಿ ಮೌಲ್ಯದ ಕೃಷಿಯೇತರ ಆಸ್ತಿ ಇದೆ.

ಜೆಡಿಎಸ್ ಸಂಸದರು ಏನು ವಿದ್ಯಾರ್ಹತೆ ಪಡೆದಿದ್ದಾರೆ?

ಚೆನ್ನಮ್ಮ ಎಲ್ಲರಿಂದಲೂ ಸಾಲ ಪಡೆದಿದ್ದಾರೆ

ಚೆನ್ನಮ್ಮ ಎಲ್ಲರಿಂದಲೂ ಸಾಲ ಪಡೆದಿದ್ದಾರೆ

ದೇವೇಗೌಡ ಅವರಿಗೆ ಯಾವುದೇ ಸಾಲಗಳಿಲ್ಲ, ಆದರೆ ಚೆನ್ನಮ್ಮ ಅವರು ತಮ್ಮ ಬಹುತೇಕ ಎಲ್ಲ ಮಕ್ಕಳಿಂದಲೂ, ಪತಿ ದೇವೇಗೌಡ ಅವರಿಂದ ಸಾಲ ಪಡೆದಿದ್ದಾರೆ. ಮೊಮ್ಮಗ ರೇವಣ್ಣ ಅವರಿಂದಲೂ 20 ಲಕ್ಷ ಸಾಲ ಪಡೆದಿದ್ದಾರೆ. ಚೆನ್ನಮ್ಮ ಅವರಿಗಿರುವ ಒಟ್ಟು ಸಾಲದ ಮೊತ್ತ 97.98 ಲಕ್ಷ ರೂಪಾಯಿ.

ಚೆನ್ನಮ್ಮ ದೇವೇಗೌಡ ಅವರೇ ಹೆಚ್ಚು ಶ್ರೀಮಂತರು

ಚೆನ್ನಮ್ಮ ದೇವೇಗೌಡ ಅವರೇ ಹೆಚ್ಚು ಶ್ರೀಮಂತರು

ದೇವೇಗೌಡ ಅವರ ಸ್ಥಿರಾಸ್ತಿ ಮತ್ತು ಚರಾಸ್ತಿಯ ಒಟ್ಟು ಮೌಲ್ಯ 95.31 ಲಕ್ಷ ರೂಪಾಯಿಗಳು, ಚೆನ್ನಮ್ಮ ಅವರ ಸ್ಥಿರಾಸ್ತಿ ಮತ್ತು ಚರಾಸ್ತಿಯ ಒಟ್ಟು ಮೌಲ್ಯ 4.91 ಕೋಟಿ. ಅವರ ಮೇಲೆ ಇರುವ ಸಾಲದ ಹೊರೆ 97.98 ಲಕ್ಷ. ದೇವೇಗೌಡ ಅವರು ಚುನಾವಣಾ ಆಯೋಗಕ್ಕೆ ನೀಡಿರುವ ಮಾಹಿತಿಯಂತೆ ದೇವೇಗೌಡ ಅವರಿಗಿಂತ ಅವರ ಪತ್ನಿಯೇ ಹೆಚ್ಚು ಶ್ರೀಮಂತರು. ಜೊತೆಗೆ ಮಾಜಿ ಪ್ರಧಾನಿ ದೇವೇಗೌಡ ಅವರು ಕೋಟ್ಯಾಧಿಪತಿಯೂ ಅಲ್ಲ.

English summary
JDS president Deve Gowda filed nomination today from Tumkur. As per his affidavit wife Chennamma Deve Gowda is more richer than Deve Gowda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X