ಸೀಟು ಹಂಚಿಕೆ ಬಳಿಕ ಬದಲಾದ ದೇವೇಗೌಡರ ಚುನಾವಣಾ ಲೆಕ್ಕಾಚಾರ

Recommended Video

      ಎಚ್ ಡಿ ದೇವೇಗೌಡ ಸ್ಪರ್ಧಿಸುವ ಕ್ಷೇತ್ರ ಬದಲಾಯ್ತಾ? | Oneindia Kannada

      ಬೆಂಗಳೂರು, ಮಾರ್ಚ್‌ 14: ನಿನ್ನೆಯಷ್ಟೆ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷವು ಸೀಟು ಹಂಚಿಕೆ ಮುಕ್ತಾಯಗೊಳಿಸಿವೆ. ಜೆಡಿಎಸ್‌ಗೆ 8 ಮತ್ತು ಕಾಂಗ್ರೆಸ್‌ 20 ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದೆ. ಆದರೆ ಇದರಲ್ಲಿ ವಿಶೇಷವೆಂದರೆ ಜೆಡಿಎಸ್‌ ಪಕ್ಷವು ತುಮಕೂರು ಕ್ಷೇತ್ರವನ್ನು ತನ್ನದಾಗಿಸಿಕೊಂಡಿದೆ.

      ಕ್ಷೇತ್ರ ಹಂಚಿಕೆ ನಂತರ ದೇವೇಗೌಡರ ಲೆಕ್ಕಾಚಾರ ಬದಲಾಗಿದ್ದು, ದೇವೇಗೌಡ ಅವರು ಬೆಂಗಳೂರು ಉತ್ತರ ಕ್ಷೇತ್ರದ ಬದಲಿಗೆ ತುಮಕೂರು ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಕಣಕ್ಕೆ ಇಳಿಯುವ ಸಾಧ್ಯತೆ ಹೆಚ್ಚಿಗಿದೆ.

      ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಹೋಲಿಸಿದರೆ ತುಮಕೂರು ಕ್ಷೇತ್ರವು ಹೆಚ್ಚು ಗೌಡರಿಗೆ ಹೆಚ್ಚು ಸುರಕ್ಷಿತವಾಗಿರುವ ಕಾರಣ ಬೆಂಗಳೂರು ಉತ್ತರಕ್ಕೆ ಬದಲಿಗೆ ತುಮಕೂರಿನಿಂದ ಸ್ಪರ್ಧಿಸುವ ನಿರ್ಧಾರವನ್ನು ಕೈಗೊಳ್ಳುವ ಸಾಧ್ಯತೆ ಇದೆ.

      ತಮ್ಮ ರಾಜಕೀಯ ಕರ್ಮ ಭೂಮಿಯಾದ ಹಾಸನವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಬಿಟ್ಟುಕೊಟ್ಟ ನಂತರ ದೇವೇಗೌಡ ಅವರು ಸುರಕ್ಷಿತವಾದ ಲೋಕಸಭಾ ಕ್ಷೇತ್ರಕ್ಕಾಗಿ ಹುಡುಕಾಟ ನಡೆಸಿದ್ದರು. ಆಗ ಅವರಿಗೆ ಕಂಡದ್ದು ಅಲ್ಪ ಸವಾಲಿನ ಬೆಂಗಳೂರು ಉತ್ತರ. ಆದರೆ ಈಗ ಅದಕ್ಕಿಂತಲೂ ಸುಲಭ ಕ್ಷೇತ್ರವಾದ ತುಮಕೂರಿನ ಮೇಲೆ ಗೌಡರ ಕಣ್ಣು ನೆಟ್ಟಿದೆ.

      ತುಮಕೂರಿನಲ್ಲಿ ಜಾರಿ ರಾಜಕೀಯ ಸುಲಭ

      ತುಮಕೂರಿನಲ್ಲಿ ಜಾರಿ ರಾಜಕೀಯ ಸುಲಭ

      ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಹೋಲಿಸಿದರೆ ದೇವೇಗೌಡ ಅವರಿಗೆ ತುಮಕೂರು ಹೆಚ್ಚು ಸುರಕ್ಷಿತ. ತುಮಕೂರಿನಲ್ಲಿ ಜಾತಿ ರಾಜಕೀಯ ಸುಲಭ. ಬೆಂಗಳೂರು ಉತ್ತರ ಕ್ಷೇತ್ರದ ಮತದಾರರು ಜಾತಿ ರಾಜಕೀಯಕ್ಕೆ ಮಹತ್ವ ನೀಡುವರಲ್ಲ. ಮತಗಳು ಸಹ ಜಾತಿಗಳಲ್ಲಿ ಹಂಚಿ ಹೋಗಿರುವುದರಿಂದ ಜಾತಿಯ ಧೃವೀಕರಣ ಇಲ್ಲಿ ಬಹುವೇ ಕಷ್ಟ.

      ತುಮಕೂರಿನಲ್ಲಿ ಬಿಜೆಪಿ ಅಶಕ್ತ

      ತುಮಕೂರಿನಲ್ಲಿ ಬಿಜೆಪಿ ಅಶಕ್ತ

      ತುಮಕೂರು ಕ್ಷೇತ್ರದಲ್ಲಿ ಬಿಜೆಪಿಗೆ ಶಕ್ತಿ ಇಲ್ಲ. ಬೆಂಗಳೂರು ಉತ್ತರ ಕ್ಷೇತ್ರದಿಂದ ಬಿಜೆಪಿಯ ಸದಾನಂದಗೌಡ ಅವರು ಕಳೆದ ಬಾರಿ ಗೆದ್ದಿದ್ದಾರೆ. ಇದೇ ಕ್ಷೇತ್ರದಲ್ಲಿ ಮೂರು ಬಾರಿ ಸತತವಾಗಿ ಬಿಜೆಪಿ ಗೆದ್ದಿದೆ. ಜೆಡಿಎಸ್‌ ನ ನಾರಾಯಣಸ್ವಾಮಿ ಅವರು ಈ ಕ್ಷೇತ್ರದಲ್ಲಿ ಕೇವಲ ಒಂದು ಬಾರಿ ಮಾತ್ರವೇ ಗೆದ್ದಿದ್ದಾರೆ. ಹಾಗಾಗಿ ಈ ಕ್ಷೇತ್ರ ಜೆಡಿಎಸ್‌ಗೆ ಅಷ್ಟೇನೂ ಸುರಕ್ಷಿತವಲ್ಲ ಎಂದು ಹೇಳಲಾಗುತ್ತಿದೆ.

      ದೇವೇಗೌಡ ಅವರು ಗೆಲ್ಲುವ ಅಭ್ಯರ್ಥಿಯೇ

      ದೇವೇಗೌಡ ಅವರು ಗೆಲ್ಲುವ ಅಭ್ಯರ್ಥಿಯೇ

      ಬೆಂಗಳೂರು ಉತ್ತರ ಜೆಡಿಎಸ್‌ಗೆ ಸುರಕ್ಷಿತ ಅಲ್ಲದೇ ಇರಬಹುದು ಆದರೆ ದೇವೇಗೌಡರೇ ಇಲ್ಲಿ ಗೆಲ್ಲುವ ಅಭ್ಯರ್ಥಿ ಎಂದು ಸುಲಭವಾಗಿ ವಿಶ್ಲೇಷಿಸಬಹುದು. ಸದಾನಂದ ಗೌಡ ಅವರು ಕಳೆದ ಬಾರಿ ಗೆದ್ದಿದ್ದಾರೆ. ಆದರೆ ಅವರ ವಿರುದ್ಧ ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಇದೆ. ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಅಡಕವಾಗಿರುವ ಒಂದು ವಿಧಾನಸಭೆ ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಶಾಸಕ ಇದ್ದಾರೆ. ಇನ್ನುಳಿದ ಏಳು ಕ್ಷೇತ್ರಗಳಲ್ಲಿ ಎರಡರಲ್ಲಿ ಜೆಡಿಎಸ್ ಐದರಲ್ಲಿ ಕಾಂಗ್ರೆಸ್ ಶಾಸಕರು ಇದ್ದಾರೆ.

      ಒಂದು ಕ್ಷೇತ್ರವನ್ನು ಕಳೆದುಕೊಳ್ಳುತ್ತಿದೆಯೇ ಜೆಡಿಎಸ್?

      ಒಂದು ಕ್ಷೇತ್ರವನ್ನು ಕಳೆದುಕೊಳ್ಳುತ್ತಿದೆಯೇ ಜೆಡಿಎಸ್?

      ದೇವೇಗೌಡ ಅವರು ತುಮಕೂರಿನಿಂದ ಚುನಾವಣೆಗೆ ಸ್ಪರ್ಧಿಸಿದರೆ ಅವರೇನೋ ಗೆಲ್ಲುತ್ತಾರೆ. ಆದರೆ ಅಲ್ಲಿ ದೇವೇಗೌಡರ ಹೊರತಾಗಿ ಇನ್ನಾರೆ ಜೆಡಿಎಸ್‌ನ ಮುಖಂಡರು ಸ್ಪರ್ಧಿಸಿದರೂ ಗೆಲ್ಲುತ್ತಾರೆ ಅದರಲ್ಲಿ ಹೆಚ್ಚಿನ ಅನುಮಾನಗಳೇ ಇಲ್ಲ. ಆದರೆ ಬೆಂಗಳೂರು ಉತ್ತರ ಹಾಗಲ್ಲ ಅಲ್ಲಿ ದೇವೇಗೌಡ ಹಾಗೂ ಅವರಿಗೆ ಸರಿಸಮನಾದ ಜೆಡಿಎಸ್ ನಾಯಕರು ನಿಂತರಷ್ಟೆ ಜೆಡಿಎಸ್‌ಗೆ ಗೆಲುವು ಸಾಧ್ಯ. ಹಾಗಾಗಿ ದೇವೇಗೌಡ ಅವರು ತುಮಕೂರಿನಿಂದ ಸ್ಪರ್ಧಿಸಿದರೆ ಬೆಂಗಳೂರು ಉತ್ತರ ಬಹುತೇಕ ಮತ್ತೆ ಬಿಜೆಪಿ ತೆಕ್ಕೆಗೆ ಬೀಳುವ ಸಾಧ್ಯತೆ ಇದೆ.

      ಮುಖಂಡರು ಹೇಳುವುದೇನು?

      ಮುಖಂಡರು ಹೇಳುವುದೇನು?

      ಬೆಂಗಳೂರು ಉತ್ತರ ಕ್ಷೇತ್ರದ ಜೆಡಿಎಸ್ ಮುಖಂಡರು ದೇವೇಗೌಡ ಅವರು ಬೆಂಗಳೂರು ಉತ್ತರ ಕ್ಷೇತ್ರದಿಂದಲೇ ಸ್ಪರ್ಧಿಸಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ. ದಾಸರಹಳ್ಳಿಯ ಜೆಡಿಎಸ್ ಶಾಸಕ ಮಂಜುನಾಥ ಮಾತನಾಡಿ, ಇಲ್ಲಿನ ಜೆಡಿಎಸ್ ಕಾರ್ಯಕರ್ತರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ದೇವೇಗೌಡ ಅವರನ್ನು ಗೆಲ್ಲಿಸಲು ಕಾಯುತ್ತಿದ್ದಾರೆ. ಅವರು ಈ ಕ್ಷೇತ್ರದಿಂದಲೇ ಸ್ಪರ್ಧಿಸಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+