ದೆಹಲಿಯಲ್ಲಿ ಕೆ.ಸಿ.ವೇಣುಗೋಪಾಲ್-ದೇವೇಗೌಡ ಭೇಟಿ, ಮಹತ್ವದ ಮಾತುಕತೆ
Recommended Video

ನವದೆಹಲಿ, ಅಕ್ಟೋಬರ್ 04: ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಹಾಗೂ ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ಅವರು ಇಂದು ನವದೆಹಲಿಯಲ್ಲಿ ಭೇಟಿಯಾಗಿ ಮಹತ್ವದ ಮಾತುಕತೆಯಾಡಿದ್ದಾರೆ.
ಎರಡನೇ ಹಂತದ ಸಂಪುಟ ವಿಸ್ತರಣೆಗೆ ಕೆಲವೇ ದಿನಗಳ ಬಾಕಿ ಇರುವಾಗ ನಡೆದಿರುವ ಈ ಭೇಟಿ ಮುಖ್ಯವಾದುದಾಗಿದೆ. ಅಕ್ಟೋಬರ್ 6 ರಂದು ಕುಮಾರಸ್ವಾಮಿ ಅವರು ರಾಹುಲ್ ಅವರ ಭೇಟಿ ಆಗಲಿದ್ದಾರೆ ಆ ಮುಂಚೆ ಇಂದೇ ದೇವೇಗೌಡ ಅವರು ವೇಣುಗೋಪಾಲ್ ಅವರ ಭೇಟಿ ಆಗಿದ್ದಾರೆ.
ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳು ಹೆಚ್ಚಿಗಿರುವ ಕಾರಣ, ಜೆಡಿಎಸ್ ಖಾತೆಯಲ್ಲಿ ಉಳಿದಿರುವ ಒಂದು ಖಾತೆ ಹಾಗೂ ಇನ್ನೂ ಕೆಲವು ಈಗಾಗಲೇ ಇರುವ ಜೆಡಿಎಸ್ ಸಚಿವರ ರಾಜೀನಾಮೆ ಪಡೆದು ಅದನ್ನು ಕಾಂಗ್ರೆಸ್‌ಗೆ ತೆಗೆದುಕೊಳ್ಳುವ ಬಗ್ಗೆ ವೇಣುಗೋಪಾಲ್ ಪ್ರಸ್ತಾವ ಇಟ್ಟಿದ್ದಾರೆ ಎನ್ನಲಾಗಿದೆ.

ಇದರ ಜೊತೆಗೆ ನಿನ್ನೆಯಷ್ಟೆ ಮಾಯಾವತಿ ಅವರು ಕಾಂಗ್ರೆಸ್ ಜೊತೆ ಮೈತ್ರಿ ಇಲ್ಲ ಎಂದಿರುವ ಕಾರಣ, ರಾಜ್ಯ ಮೈತ್ರಿ ಸರ್ಕಾರದಲ್ಲಿ ಈಗಿರುವ ಬಿಎಸ್‌ಪಿ ಮಂತ್ರಿ ಮಹೇಶ್‌ರನ್ನು ಸಂಪುಟದಿಂದ ಕೈಬಿಡುವ ಬಗ್ಗೆಯೂ ದೇವೇಗೌಡರ ಬಳಿ ಚರ್ಚಿಸಿದ್ದಾರೆ.
ಇದರ ಜೊತೆಗೆ ಲೋಕಸಭೆ ಚುನಾವಣೆಯಲ್ಲಿ ಸೀಟು ಹಂಚಿಕೆ ಬಗ್ಗೆ ಮೊದಲ ಹಂತದ ಚರ್ಚೆ ಸಹ ನಡೆದಿದೆ. ಅಗತ್ಯಕ್ಕೆ ತಕ್ಕಂತೆ ಮೈತ್ರಿ ಮಾಡಿಕೊಳ್ಳುವುದು ಸೂಕ್ತ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ.












Click it and Unblock the Notifications