ಡೆಂಗ್ಯೂ ಮೂಲಕ ಹಣ ಗಳಿಸುವ ಪ್ಲ್ಯಾನ್‌ಗೆ ಬ್ರೇಕ್: ರಾಜ್ಯದಲ್ಲಿ ಏಕರೂಪ ದರ ನಿಗದಿ
ರಾಜ್ಯದಲ್ಲಿ ಹೆಚ್ಚುತ್ತಿರುವ ಡೆಂಗಿ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಮಹತ್ವದ ಆದೇಶವನ್ನು ನೀಡಿದೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಡೆಂಗಿ ಜ್ವರದ ತಪಾಸಣೆ ನಡೆಸುವ ರಕ್ತ ಪರೀಕ್ಷೆಗೆ ಒಂದೇ ದರವನ್ನು ನಿಗಿದ ಮಾಡಿದೆ. ಇದು ನಿಜಕ್ಕೂ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಡೆಂಗ್ಯು ಪ್ರಕರಣಗಳ ಸಂಖ್ಯೆ ಏರಿಕೆ ಆಗುತ್ತಿದೆ. ಇದರಿಂದ ರಾಜ್ಯದ ಜನರು ತೊಂದರೆ ಪಡುತ್ತಿದ್ದಾರೆ. ಅಲ್ಲದೆ ಆಸ್ಪತ್ರೆಗಳಲ್ಲಿ ಈ ಖಾಯಿಲೆಯ ರಕ್ತ ಪರೀಕ್ಷೆಗೆ ಸಾಕಷ್ಟು ಹಣವನ್ನು ಸಾರ್ವಜನಿಕರು ನೀಡಬೇಕಾಗುತ್ತಿತ್ತು. ಆದರೆ ಈಗ ಈ ಎಲ್ಲ ಸಮಸ್ಯೆಗಳಿಗೆ ಬ್ರೇಕ್ ಬಿದ್ದಿದೆ.

ಡೆಂಗ್ಯೂ ಜ್ವರವನ್ನು ಪತ್ತೆ ಹಚ್ಚುವ ಪರೀಕ್ಷೆಗಳಾ ಎಲಿಸಾ ಹಾಗೂ ರಾಪಿಡ್ ಟೆಸ್ಟ್‌ಗಳ ದರವನ್ನು ಸರ್ಕಾರ ನಿಗದಿ ಪಡೆಸಿದೆ. ಈ ಆದೇಶ ಖಾಸಗಿ ಆಸ್ಪತ್ರೆ, ಖಾಸಗಿ ಪ್ರಯೋಗಶಾಲೆ, ಡಯಾಗ್ನೋಸ್ಟಿಕ್ ಲ್ಯಾಬೋರೇಟರಿಗಳು ಬೇರೆ ಬೇರೆ ದರವನ್ನು ನೀಗದಿ ಪಡಿಸಲಾಗಿತ್ತು. ಆದರೆ ಇನ್ನು ಮುಂದೆ ಈ ಪರೀಕ್ಷೆಯ ದರ ಯಾವುದೇ ಆಸ್ಪತ್ರೆಯಲ್ಲಾದರೂ ಒಂದೇ ಆಗಿರುತ್ತದೆ.
ಡೆಂಗ್ಯೂ ಎಲಿಸಾ ಎನ್‌ಎಸ್1 ಪರೀಕ್ಷೆಗೆ 300 ರೂ. ಹಾಗೂ ಡೆಂಗ್ಯೂ ಎಲಿಸಾ ಐಜಿಎಂ ಪರೀಕ್ಷೆಗಳಿಗೆ300 ರೂಪಾಯಿ ನಿಗದಿ ಮಾಡಲಾಗಿದೆ. ಇನ್ನು ಸ್ಕ್ರೀನಿಂಗ್ ಟೆಸ್ಟ್ ಹಾಗೂ ರೆಪಿಡ್ ಕಾರ್ಡ್ ಟೆಸ್ಟ್‌ಗೆ 250 ರೂಪಾಯಿ ನಿಗದಿ ಪಡಿಸಲಾಗಿದೆ. ಅಲ್ಲದೆ ಸರ್ಕಾರ ನಿಗದಿ ಪಡಿಸಿದ ದರವನ್ನೇ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ.
6390 ಡೆಂಗ್ಯೂ ಪ್ರಕರಣ ಪತ್ತೆ
ಡೆಂಗ್ಯೂ ಪ್ರಕರಣಗಳು ರಾಜ್ಯದಲ್ಲಿ ದಿನೇ ದಿನೇ ಏರಿಕೆ ಆಗುತ್ತಿವೆ. ಬುಧವಾರ ರಾಜ್ಯದಲ್ಲಿರುವ ಡೆಂಗ್ಯೂ ಪ್ರಕರಣಗಳ ಬಗ್ಗೆ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು,ಬುಧವಾರ ರಾಜ್ಯದಲ್ಲಿ 13ಹೊಸ ಡೆಂಗ್ಯೂ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಮೂಲಕ ರಾಜ್ಯದಲ್ಲಿ ಸದ್ಯ 6390 ಪ್ರಕರಣಗಳು ದಾಖಲಾಗಿದ್ದು, 6 ಜನರು ಮೃತ ಪಟ್ಟಿದ್ದಾರೆ.

ಡೆಂಗ್ಯೂ ನಿಯಂತ್ರಿಸಲು ಖಾಸಗಿ ಆಸ್ಪತ್ರೆಗಳು ಸಹ ಜವಾಬ್ದಾರಿಯಿಂದ ನಡೆದು ಕೊಳ್ಳಬೇಕು. ಸರ್ಕಾರ ಕಾಲಕಾಲಕ್ಕೆ ನೀಡುವ ಆದೇಶಗಳನ್ನು ತಪ್ಪದೇ ಅನುಸರಿಸಬೇಕು. ಅಲ್ಲದೆ ಖಾಸಗಿ ಆಸ್ಪತ್ರೆಗಳು ಸರ್ಕಾರದ ಜೊತೆ ಕೈ ಜೋಡಿಸಬೇಕು. ಇದೇ ಸಂದರ್ಭವನ್ನು ಉಪಯೋಗಿಸಿಕೊಂಡು ಲಾಭವನ್ನು ಮಾಡಲು ಮುಂದಾಗಬಾರದು ಎಂದು ಆರೊಗ್ಯ ಸಚಿವ ದಿನೇಶ್ ಗುಂಡುರಾವ್ ತಿಳಿಸಿದ್ದಾರೆ.
ಯಾವುದೇ ಕೊರತೆ ಇಲ್ಲ
ರಾಜ್ಯದಲ್ಲಿ ಟೆಸ್ಟಿಂಗ್ ಕಿಟ್‌ಗಳ ಕೊರತೆ ಸಹ ಇಲ್ಲ ಎಂದು ಇದೇ ವೇಳೆ ಸಚಿವರು ತಿಳಿಸಿದ್ದಾರೆ. ಅಲ್ಲದೆ ಈ ರೋಗಕ್ಕೆ ಪ್ಯಾರಾಸೆಟಮಾಲ್ ಒಂದೇ ಮದ್ದು, ಇದೇ ರೋಗ ಹೆಚ್ಚಾದರೆ ಪ್ಲೇಟ್ ಲೇಟ್ ಕಡಿಮೆ ಆಗುತ್ತದೆ. ರಕ್ತ ನಿಧಿ ಕೇಂದ್ರಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದು ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು. ರಾಜ್ಯದಲ್ಲಿ ಈಗ ಡೆಂಗ್ಯೂ ಪ್ರಕರಣಗಳ ಪರೀಕ್ಷೆಗಳನ್ನು ಹೆಚ್ಚಿಸಲಾಗಿದೆ. ಇದರಿಂದ ರಾಜ್ಯದಲ್ಲಿ ಪ್ರಕರಣಗಳ ಸಂಖ್ಯೆ ಏರಿಕೆ ಆಗಬಹುದು ಎಂದು ದಿನೇಶ್ ಗುಂಡುರಾವ್ ತಿಳಿಸಿದ್ದಾರೆ.












Click it and Unblock the Notifications