2.5 ಲಕ್ಷ ಲಂಚಕ್ಕೆ ಬೇಡಿಕೆ: ರೆಡ್ ಹ್ಯಾಂಡಾಗಿ ಲೋಕಾಯುಕ್ತಗೆ ಸಿಕ್ಕಿಬಿದ್ದ ಹೆಡ್‌ಕಾನ್‌ಸ್ಟೇಬಲ್!
ಬೆಂಗಳೂರು, ಜುಲೈ 17: ಹಣಕಾಸು ವಂಚನೆ ಆರೋಪವಿರುವ ಖಾಸಗಿ ಕಂಪನಿ ಉದ್ಯೋಗಿಯೊಬ್ಬರಿಂದ 50 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ಪೊಲೀಸ್ ಪೇದೆಯೊಬ್ಬ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಮಾಗಡಿ ಮುಖ್ಯರಸ್ತೆ ನಿವಾಸಿ ಮಂಜೇಗೌಡ (35) ಎಂಬಾತನನ್ನು 2020ರಲ್ಲಿ ಸರಕು ಖರೀದಿ ಯೋಜನೆ ಮೂಲಕ ವಂಚಿಸುತ್ತಿದ್ದ ಆರೋಪದ ಮೇಲೆ ಬಂಧಿಸಲಾಗಿತ್ತು. ಅವರು ಇನ್ನೂ ಜೈಲಿನಲ್ಲಿದ್ದಾಗ ರಾಮನಗರ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್‌ಸ್ಟೆಬಲ್ ಆಗಿರುವ ಮಹೇಶ್ ಎಸ್ (43) ಅವರು 2.5 ಲಕ್ಷ ರೂ ನೀಡಿದರೆ ಪ್ರಕರಣದಿಂದ ಜಾಮೀನು ನೀಡುವ ಪ್ರಸ್ತಾಪದೊಂದಿಗೆ ಅವರನ್ನು ಸಂಪರ್ಕಿಸಿದ್ದನು.

ಅದರಂತೆ ಮಂಜೇಗೌಡ ಒಪ್ಪಿ ಹೆಡ್‌ಕಾನ್‌ಸ್ಟೇಬಲ್ ಮಹೇಶ್‌ಗೆ ಮೊದಲ ಕಂತಾಗಿ 75 ಸಾವಿರ ರೂ. ನೀಡಿ ಜೈಲಿನಿಂದ ಹೊರಬದಿದ್ದರು ಮಹೇಶ್ ಮಾಡಿದ ಸಹಾಯದಿಂದ ಆತ ಹೊರಗೆ ಬಂದಿದ್ದರು. ಆದರೆ ಮಂಜೇಗೌಡ ಇನ್ನೂ ಸಿಇಎನ್ ಅಪರಾಧ ಪೊಲೀಸ್ ಠಾಣೆಗೆ ಭೇಟಿ ನೀಡಿ ರಿಜಿಸ್ಟರ್‌ನಲ್ಲಿ ಸಹಿ ಮಾಡಬೇಕಾಗಿತ್ತು.
ಆರೋಪಿ ಮಂಜೇಗೌಡ ಪ್ರತಿ ವಾರ ಠಾಣೆಗೆ ಭೇಟಿ ನೀಡಿದಾಗ ಪ್ರಕರಣದಲ್ಲಿ ಕ್ಲೀನ್ ಚಿಟ್ ಪಡೆಯಬೇಕಾದರೆ ಉಳಿದ ಹಣವನ್ನು ನೀಡುವಂತೆ ಪೊಲೀಸ್ ಮಹೇಶ್ ಆತನಿಗೆ ಕಿರುಕುಳ ನೀಡುತ್ತಿದ್ದರು. ಆಗ ಮಂಜೇಗೌಡನ ಬಳಿ ಹಣವಿರಲಿಲ್ಲ. ಕಾನ್‌ಸ್ಟೆಬಲ್‌ನ ಕಿರುಕುಳದಿಂದ ತೀವ್ರ ಆಘಾತಕ್ಕೊಳಗಾದ ಅವರು ಲೋಕಾಯುಕ್ತರನ್ನು ಸಂಪರ್ಕಿಸಲು ನಿರ್ಧರಿಸಿದನು.
ಆ ಮೇರೆಗೆ ಹೆಡ್‌ಕಾನ್‌ಸ್ಟೇಬಲ್ ಮಹೇಶ್‌ಗಾಗಿ ಬಲೆ ಬೀಸಲು ಲೋಕಾಯುಕ್ತ ಪೊಲೀಸರು ನಿರ್ಧರಿಸಿದರು. ಆರೋಪಿ ಮಂಜೇಗೌಡ ಹಣವನ್ನು ಉತ್ತರಹಳ್ಳಿಯ ವೈಷ್ಣವಿ ಪಾರ್ಟಿ ಹಾಲ್‌ಗೆ ತರುವಂತೆ ಮಹೇಶ್ ಮಂಜೇಗೌಡನಿಗೆ ಹೇಳಿದ್ದನು. ಅದರಂತೆ ಭಾನುವಾರ ಬೆಳಗ್ಗೆ ರಮೇಶ್ ಡಿ (53) ಎಂಬ ಸ್ನೇಹಿತನೊಂದಿಗೆ ಮಹೇಶ್ ಬಂದಿದ್ದರು. ಲೋಕಾಯುಕ್ತ ಪೊಲೀಸರು ಮಹೇಶ್ ಗಾಗಿ ಕುಳಿತಿದ್ದರು ಮಂಜೇಗೌಡನಿಂದ 50 ಸಾವಿರ ರೂ. ಲಂಚ ಪಡೆಯುವಾಗ ಮಹೇಶ್‌ನನ್ನು ತಕ್ಷಣ ಹಿಡಿದು ಹಾಕಿದರು.
ಆದರೆ ಮಹೇಶ್ ಪರವಾಗಿ ರಮೇಶ್ ಹಣ ಸಂಗ್ರಹಿಸಿದ್ದರು. ಈ ವೇಳೆ ಲೋಕಾಯುಕ್ತ ಪೋಲೀಸ್ ಅಧಿಕಾರಿಗಳು ಸಾಮಾನ್ಯ ಉಡುಪಿನಲ್ಲಿ ಅಡ್ಡಾಡುತ್ತಿದ್ದಾಗ ಮಹೇಶ್ ಮತ್ತು ರಮೇಶ್ ಅವರನ್ನು ಸುತ್ತುವರೆದು ಬಂಧಿಸಿದರು ಎಂದು ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಾಥ್ ಮಹದೇವ್ ಜೋಶಿ ಹೇಳಿದ್ದಾರೆ.
ಮಹೇಶ್ ಇಂತಹ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಕಂಡುಬಂದಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಅವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 7ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಾಥ್ ಮಹದೇವ್ ಜೋಶಿ ತಿಳಿಸಿದ್ದಾರೆ.












Click it and Unblock the Notifications