Hd Deve Gowda: ನನ್ನ ಆತ್ಮಕ್ಕೆ ಶಾಂತಿ ಸಿಗುತ್ತೆ ನನ್ನ ಸೋಲಿಸಿದವರನ್ನ ಕಣ್ಣೀರು ಹಾಕಿಸಿ: ಹೆಚ್‌ ಡಿ ದೇವೇಗೌಡ

ತುಮಕೂರು,ಏಪ್ರಿಲ್25:‌ ಮಿಷನ್‌ 123 ಟಾರ್ಗೆಟ್‌ ಹಾಕಿಕೊಂಡಿರುವ ದಳಪತಿಗಳು ಅಬ್ಬರದ ಚುನಾವಣಾ ಪ್ರಚಾರವನ್ನ ಮಾಡುತ್ತಿದ್ದು, ಪಕ್ಷವನ್ನ ಅಧಿಕಾರಕ್ಕೆ ತರಲು ಭರ್ಜರಿ ತಯಾರಿ ನಡೆಸಿದ್ದಾರೆ. ಈಗಾಗಲೇ ರಾಜ್ಯಾದ್ಯಂತ ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಪಂಚರತ್ನ ರಥಯಾತ್ರೆ ನಡೆಸುತ್ತಿದ್ದಾರೆ.

ಇದೀಗ ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠರಾದ ಹೆಚ್‌ ಡಿ ದೇವೇಗೌಡರು ಚುನಾವಣಾ ಅಖಾಡಕ್ಕಿಳಿದಿದ್ದಾರೆ. ಈಗಾಗಲೇ ತಮ್ಮ ಅಭ್ಯರ್ಥಿಗಳ ಪರ ಮತ ಭೇಟೆಗೆ ಮುಂದಾಗಿದ್ದಾರೆ. ಮಂಡ್ಯ ಹಾಗೂ ಶಿವಮೊಗ್ಗ ಜಿಲ್ಲೆಯ ಚುನಾವಣಾ ಅಭ್ಯರ್ಥಿಗಳ ಜೊತೆಗೆ ಸಭೆ ನಡೆಸಿ ಚುನಾವಣಾ ತಂತ್ರಗಾರಿಕೆಯ ಪಾಠ ಮಾಡಿರುವ ದೇವೇಗೌಡರು, ತಾವು ಸೋತ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರವನ್ನ ಮಾಡಿದ್ದಾರೆ.

Defeat Those Who Defeated Me Deve Gowda Instructed The JDS Activists At Tumakuru

ಈ ಕುರಿತು ತುಮಕೂರಿನಲ್ಲಿ ತಮ್ಮ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಿದ ಬಳಿಕ ಹೆಚ್‌ ಡಿ ದೇವೇಗೌಡರು ಮಾತನಾಡಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ನಾನು ತುಮಕೂರಿನಿಂದ ನಿಲ್ಲಲು ಬಯಸಿದವನಲ್ಲ, ರಾಜಕೀಯ ನಿವೃತ್ತಿ ಘೋಷಿಸಲು ಬಯಸಿದ್ದೆ. ಆದರೆ ಜಿಲ್ಲೆಯ ಕೆಲವು ಮುಖಂಡರು ಚುನಾವಣೆಗೆ ನಿಲ್ಲಿಸಿ ನನ್ನನ್ನು ಬಲಿಪಶು ಮಾಡಿದರು ಎಂದು ಆರೋಪಿಸಿದ್ದಾರೆ.

ಜಿಲ್ಲೆಯ ಕೆಲ ಮುಖಂಡರು, ಮಾಜಿ ಶಾಸಕರು ನನ್ನನ್ನು ಬಲಿಪಶು ಮಾಡಿದ್ದು ಈ ಬಾರಿ ತಕ್ಕ ಪಾಠ ಕಲಿಸುವಂತೆ ಮನವಿ ಮಾಡಿದರು. ನಾನು ಬೇಡವೆಂದರೂ ಕರೆತಂದು ಲೋಕಸಭೆಯ ಚುನಾವಣೆಯಲ್ಲಿ ನನ್ನನ್ನು ಸೋಲಿಸಿ ಕಣ್ಣೀರು ಹಾಕಿಸಿದವರಿಗೂ ಕಣ್ಣೀರು ಹಾಕಿಸಬೇಕು. ಆಗಲೇ ನನ್ನ ಆತ್ಮಕ್ಕೆ ಶಾಂತಿಯೆಂದು ಮಾಜಿ ಪ್ರಧಾನಿ ದೇವೇಗೌಡರು ಕಣ್ಣೀರು ಹಾಕಿದ್ದಾರೆ.

ರಾಜ್ಯದಲ್ಲಿ ಜೆಡಿಎಸ್‌ 25 ಸ್ಥಾನ ಪಡೆಯುತ್ತದೆ ಎಂದು ಕಾಂಗ್ರೆಸ್‌ ನಾಯಕರ ಹೇಳಿದ್ದಾರೆ, ಬಹುಶಃ ಮಧುಗಿರಿ ಒಂದೇ ಸಾಕು ಕಾಂಗ್ರೆಸ್‌ ನಾಯಕರಿಗೆ ಉತ್ತರ ಕೊಡೋಕೆ. ಕಾಂಗ್ರೆಸ್‌ನವರಿಗೆ ಮಧುಗಿರಿಯಿಂದಲೇ ತಕ್ಕ ಉತ್ತರವನ್ನು ಕೊಡ್ತೀನಿ ಎಂದು ದೇವೇಗೌಡರು ಕಿಡಿಕಾರಿದರು.

ಈಗಾಗಲೇ ಎಚ್‌ ಡಿ ಕುಮಾರಸ್ವಾಮಿ ಜಿಲ್ಲೆಯ ಬಗ್ಗೆ ವಿಶ್ವಾಸವಿಟ್ಟಿದ್ದು ಪಂಚರತ್ನ ಯೋಜನೆ ಜಾರಿಗೊಳಿಸಲು ರಾಜ್ಯಾದ್ಯಂತ ಸುತ್ತಾಡುತ್ತಿದ್ದಾರೆ. ಮಹಿಳೆಯರು, ಮುಸ್ಲಿಮರು, ದಲಿತರು, ಹಾಗೂ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊಟ್ಟ ಜೆಡಿಎಸ್‌ ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲರೂ ಆಶೀರ್ವಾದ ಮಾಡಬೇಕು ಎಂದು ತುಮಕೂರು ಜಿಲ್ಲೆಯ ಜನತೆಗೆ ಮನವಿ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+