ನಿರ್ಮಲಾ ಸೀತಾರಾಮನ್ ವಿರುದ್ಧ ಪರಮೇಶ್ವರ್ ಟ್ವೀಟ್ ಟೀಕೆ

ಬೆಂಗಳೂರು, ಆಗಸ್ಟ್ 25: ನಿನ್ನೆ ಕೊಡಗಿಗೆ ಆಗಮಿಸಿದ್ದ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೊಡಗು ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಅವರ ಮೇಲೆ ಹರಿಹಾಯ್ದಿದ್ದಕ್ಕೆ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಘಟೆ ಕುರಿತು ಹಾಗೂ ನಿರ್ಮಲಾ ಸೀತಾರಾಮನ್ ಅವರ ದರ್ಪ ತುಂಬಿದ ವರ್ತನೆ ಬಗ್ಗೆ ಟ್ವಿಟ್ಟರ್ ಮೂಲಕ ಅಸಮಾಧಾನ ವ್ಯಕ್ತಪಡಿಸಿರುವ ಅವರು, ನಿಮ್ಮನ್ನು ಎಷ್ಟು ಗೌರವಪೂರ್ವಕವಾಗಿ ನಮ್ಮ ಸಂಪುಟ ಸಹೋದ್ಯೋಗಿ ನೆರವು ಬೇಡಿದರೋ, ನೀವು ಸಹ ಅಷ್ಟೆ ಗೌರಯುತವಾಗಿ ಅವರಿಗೆ ಉತ್ತರಿಸಬೇಕಿತ್ತು ಎಂದಿದ್ದಾರೆ.

ನಮ್ಮ ಸಚಿವರು ವಾರಗಳಿಂದಲೂ ಕೊಡಗಿನಲ್ಲೇ ಉಳಿದು ಅಲ್ಲಿ ಪರಿಹಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಆದರೆ ನೀವು ಅವರ ವಿರುದ್ಧವೇ ದರ್ಪ ತೋರಿದ್ದೀರಿ ಇದು ಸಹಿಸುವಂತದ್ದಲ್ಲ ಎಂದು ಅವರು ಟ್ವೀಟ್ ಮಾಡಿದ್ದಾರೆ.

ನಿರ್ಮಲಾ ಸೀತಾರಮನ್‌ಗೆ ಟ್ವೀಟ್ ಮಾಡಿದ ಡಿಸಿಎಂ

ನಿರ್ಮಲಾ ಸೀತಾರಾಮನ್ ಅವರಿಗೆ ಎರಡು ಟ್ವೀಟ್ ಮಾಡಿರುವ ಪರಮೇಶ್ವರ್ ಅವರು, ನಿರ್ಮಲಾ ಸೀತಾರಾಮನ್ ಅವರು ನಿನ್ನೆ ಹೇಳಿದ್ದ, 'ಕೇಂದ್ರ ಸಚಿವೆ, ಉಸ್ತುವಾರಿ ಸಚಿವರನ್ನು ಹಿಂಬಾಲಿಸಬೇಕಾ?' ಎಂಬ ಮಾತಿಗೂ ತಕ್ಕ ಉತ್ತರ ನೀಡಿದ್ದಾರೆ.

ರಾಜ್ಯಗಳು ಸಂವಿಧಾನದಿಂದ ಹಕ್ಕು ಪಡೆದಿವೆ

ರಾಜ್ಯಗಳು ಸಂವಿಧಾನದಿಂದ ಹಕ್ಕು ಪಡೆದಿವೆ

'ರಾಜ್ಯಗಳು ನಮ್ಮ ಹಕ್ಕನ್ನು ಸಂವಿಧಾನದಿಂದ ಪಡೆದುಕೊಳ್ಳುತ್ತೇವೆ, ಕೇಂದ್ರದಿಂದಲ್ಲ. ಸಂವಿಧಾನವು ಕೇಂದ್ರ ಮತ್ತು ರಾಜ್ಯಕ್ಕೆ ಸಮನಾದ ಆಡಳಿತದ ಶಕ್ತಿಯನ್ನು ನೀಡಿದೆ. ನಾವು ಕೇಂದ್ರಕ್ಕಿಂತ ಕೀಳಲ್ಲ ನಾವು ಅಭಿವೃದ್ಧಿಯಲ್ಲಿ ಪಾಲುದಾರರು ಎಂದು ಸಂವಿಧಾನದ ಪಾಠ ಮಾಡಿದ್ದಾರೆ ಪರಮೇಶ್ವರ್.

ಕೇಂದ್ರ ಸಚಿವೆ ಎಂಬ ದರ್ಪದಲ್ಲಿ ಮಾತಾಡಿದ್ದ ನಿರ್ಮಲಾ

ಕೇಂದ್ರ ಸಚಿವೆ ಎಂಬ ದರ್ಪದಲ್ಲಿ ಮಾತಾಡಿದ್ದ ನಿರ್ಮಲಾ

ಕೇಂದ್ರ ಸಚಿವೆಯಾದ ನಾನು ಉಸ್ತುವಾರಿ ಸಚಿವರನ್ನು ಹಿಂಬಾಲಿಸಬೇಕಾ? ಇದು ನಂಬಲಸಾಧ್ಯ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದರು. ಕೇಂದ್ರ ಸಚಿವೆಯಾದ ನಾನು ಉನ್ನತ ಸ್ಥಾನದಲ್ಲಿದ್ದೀನಿ, ರಾಜ್ಯವೊಂದರ ಜಿಲ್ಲೆಯ ಉಸ್ತುವಾರಿ ಸಚಿವ ನನಗಿಂತಲೂ ಕಡಿಮೆಯವ ಎಂಬ ಭಾವ ಅವರ ಮಾತಿನಲ್ಲಿ ಇಣುಕುತ್ತಿತ್ತು.

ನಿರ್ಮಲಾ ವರ್ತನೆಗೆ ಭಾರಿ ವಿರೋಧ

ನಿನ್ನೆ ನಿರ್ಮಲಾ ಸೀತಾರಾಮನ್ ಅವರು ತೋರಿದ್ದ ವರ್ತನೆಗೆ ಸಾಮಾಜಿಕ ಜಾಲತಾಣದಲ್ಲಿ ಮತ್ತು ಮಾಧ್ಯಮಗಳಲ್ಲಿ, ಸಾರ್ವಜನಿಕವಾಗಿಯೂ ಭಾರಿ ಅಸಮಾಧಾನ ವ್ಯಕ್ತವಾಗಿದೆ. ಕೇಂದ್ರ ಸಚಿವೆ ರಾಜ್ಯದ ಸ್ವಾಭಿಮಾನ ಕೆಣಕಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+