By Election: ಒಬ್ಬರಿಂದ ಪಕ್ಷ ಗೆಲ್ಲಲ್ಲ, ಇದು ಕಾಂಗ್ರೆಸ್ ಸಿದ್ಧಾಂತಕ್ಕೆ ಸಿಗುವ ಜಯ: ಸಲೀಂ ಅಹ್ಮದ್ ಟಾಂಗ್ ಕೊಟ್ಟಿದ್ಯಾರಿಗೆ?
Davanagere South By Poll: ರಾಜ್ಯದಲ್ಲಿ ಉಪಚುನಾವಣೆ ಅಖಾಡಗಳು ರಂಗೇರಿವೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದೊಳಗೇ ತೀವ್ರ ಪೈಪೋಟಿ ಉಂಟಾಗಿತ್ತು. ಅದನ್ನು ಶಮನಗೊಳಿಸುವಲ್ಲಿ ಪಕ್ಷದ ಮುಖಂಡರು ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ ಸಾಕಷ್ಟು ಕೊಟ್ಟಿದೆ, ಆ ಸಮುದಾಯದ ಬೆಂಬಲ ಸದಾ ಕಾಂಗ್ರೆಸ್ಗೆ ಎಂದು ಪಕ್ಷ ನಂಬಿದೆ. ಬಿಜೆಪಿ-ಕಾಂಗ್ರೆಸ್ ನೇರ ಹಣಾಹಣಿ ಏರ್ಪಡಲಿದೆ. ಈ ಕುರಿತು 'ಒನ್ ಇಂಡಿಯಾ ಕನ್ನಡ' ಜೊತೆಗೆ ವಿಧಾನ ಪರಿಷತ್ ಮುಖ್ಯ ಸಚೇತಕ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್ ಅವರು ಮಾತನಾಡಿದ್ದಾರೆ.
ದಾವಣಗೆರೆಗೆ ಯಾರೇ ಪ್ರಚಾರಕ್ಕೆ ಬಂದರೂ ಬಾರದಿದ್ದರು. ಜನರು ಕಾಂಗ್ರೆಸ್ ಪಕ್ಷ, ಸಿದ್ಧಾಂತ, ಅಭಿವೃದ್ಧಿ ನೋಡಿ ಮತ ಹಾಕುತ್ತಾರೆ. ಯಾರೋ ಒಬ್ಬರಿಂದ ಗೆಲುವು ಅಲ್ಲ. ದೊಡ್ಡ ಇತಿಹಾಸ ಇರುವ ಕಾಂಗ್ರೆಸ್ ಯಾರೋ ಒಬ್ಬರಿಂದ ಅಲ್ಲ. ದಾವಣಗೆರೆಯಲ್ಲಿ ನಮ್ಮಿಂದ ಪಕ್ಷ ಗೆಲ್ಲಲಿದೆ ಎಂದುಕೊಂಡರೆ ಅದು ಅವರ ಭ್ರಮೆ ಎಂದು ಸಲೀಂ ಅಹ್ಮದ್ ಅವರು ಸ್ಪಷ್ಟಪಡಿಸಿದರು.

ದಾವಣಗೆರೆಯಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡದ್ದಕ್ಕೆ ಸಾಧಿಕ್ ಪೈಲ್ವಾನ್ ಸೇರಿ ಕೆಲವರು ಬಂಡಾಯ ಎದಿದ್ದರು. ಇದೀಗ ಸಾಧಿಕ್ ಅವರು ನಾಮಪತ್ರ ಹಿಂಪಡೆದಿದ್ದಾರೆ. ಇದೀಗ ಸಚಿವ ಜಮೀರ್ ಅಹ್ಮದ್ ಅವರು ಇಲ್ಲಿಗೆ ಪ್ರಚಾರಕ್ಕೆ ಬರುತ್ತಾರಾ? ಎಂಬ ಪ್ರಶ್ನೆಗೆ ಸಲೀಂ ಅಹ್ಮದ್ ಅವರು ಈ ರೀತಿ ಪ್ರತಿಕ್ರಿಯಿಸಿ ಪರೋಕ್ಷವಾಗಿ ಟಾಂಗ್ ನೀಡಿದರು.
ಕಾಂಗ್ರೆಸ್ ನಿಯಮ ಮೀರಿಲ್ಲ: ಎಲ್ಲರೂ ಒಪ್ಪಿಯೇ ಸಮರ್ಥ್ಗೆ ಟಿಕೆಟ್
ಅಲ್ಪಸಂಖ್ಯಾತರ ಬಂಡಾಯ, ಅವರಿಂದ ಕಾಂಗ್ರೆಸ್ಗೆ ಹೊಡೆತ ಬೀಳುತ್ತಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡಬೇಕು ಎಂಬ ಬೇಡಿಕೆ ಇದ್ದಿದ್ದು ನಿಜ. ಬಳಿಕ ಡಿಸಿಎಂ ಡಿಕೆ ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ನಿರಂತರ ಸಭೆ ಮಾಡಿದರು. ಬಳಿಕ ಅಲ್ಪಸಂಖ್ಯಾತರ ಮುಖಂಡರಾದ ಜಮೀರ್ ಅಹ್ಮದ್ ಖಾನ್, ಸಿಎಂ, ಡಿಸಿಎಂ, ಮಲ್ಲಿಕಾರ್ಜುನ್ ಖರ್ಗೆ ಅವರ ಆದಿಯಾಗಿ ಎಲ್ಲರು ಪಾಲ್ಗೊಂಡು ತಿರ್ಮಾನಿಸಿ ಒಪ್ಪಿಯೇ ಸಮರ್ಥ್ ಅವರಿಗೆ ಟಿಕೆಟ್ ನೀಡಲಾಗಿದೆ ಎಂದು ವಿವರಿಸಿದರು.
ಮೃತ ಶಾಸಕರ ಕುಟುಂಬಸ್ಥರಲ್ಲಿ ಒಬ್ಬರಿಗೆ ಟಿಕೆಟ್ ನೀಡುವ ನಿಯಮ ಕಾಂಗ್ರೆಸ್ನಲ್ಲಿದೆ. ಬಾಗಲಕೋಟೆಯಲ್ಲೂ ಇದೇ ನಿಯಮದಡಿ ಎಚ್ವೈ ಮೇಟಿ ಪುತ್ರ ಉಮೇಶ್ ಮೇಟಿ ಅವರಿಗೆ ಟಿಕೆಟ್ ನೀಡಿದ್ದೇವೆ. ಇಲ್ಲಿ ನೀಡದಿದ್ದರೆ ತಪ್ಪಾಗುತ್ತದೆ. ಶಾಮನೂರು ಶಿವಶಂಕರಪ್ಪ ಅವರ ಅಭಿವೃದ್ಧಿ ಕೆಲಸಗಳು, ಐದು ಗ್ಯಾರಂಟಿ, ಸರ್ಕಾರ ಅಭಿವೃದ್ಧಿ ಯೋಜನೆಗಳಿಂದ ಇಲ್ಲಿ ಜನರಿಗೆ ಒಳಿತಾಗಿದೆ. ಅಭಿವೃದ್ಧಿಗೆ ಮೆಚ್ಚಿದ್ದಾರೆ. ಜನರು ಖಷಿಯಲ್ಲಿದ್ದಾರೆ. ಶಾಮನೂರು ಅವರು ಇದ್ದಿದ್ದರೆ ಅವರೇ ಇನ್ನೆರಡು ವರ್ಷ ಶಾಸಕರಾಗಿರುತ್ತಿದ್ದರು. ಇಂದು ಅವರಿಲ್ಲ, ಅವರ ಕುಟುಂಬಸ್ಥರಿಗೆ ಟಿಕೆಟ್ ಕೊಡುವುದು ನ್ಯಾಯ ಎಂದು ಈ ತೀರ್ಮಾನಕ್ಕೆ ಬರಲಾಯಿತೆಂದು ತಿಳಿಸಿದರು.
ಕಾಂಗ್ರೆಸ್ನಲ್ಲಿಯೇ ಸಾಧಿಕ್ರನ್ನು ಎತ್ತಿ ಕಟ್ಟಲಾಯಿತು?
ಕಾಂಗ್ರೆಸ್ ಪಕ್ಷದೊಳಗೇ ಕೆಲವರು ಷಡ್ಯಂತ್ರ ಮಾಡಿದ್ದರಿಂದ ಸಾಧಿಕ್ ಪೈಲ್ವಾನ್ ಅವರು ಬಂಡಾವೆದಿದ್ದರು. ಅದನ್ನು ಅವರೇ ಸಿಎಂ ಬಳಿ ಹೇಳಿಕೊಂಡಿದ್ದಾರೆ. ಅವರೊಂದಿಗೆ ಸಂಧಾಯ ಮಾತುಕತೆ ಯಶಸ್ವಿಯಾಗಿದೆ. ಕ್ಷೇತ್ರದಲ್ಲಿ ಕೋಮುವಾದಿಗಳಿಗೆ ಅವಕಾಶ ಆಗಬಾರದು. ತಮ್ಮಿಂದ ಪಕ್ಷಕ್ಕೆ ತೊಂದರೆ ಆಗಬಾರದೆಂಬ ಕಾರಣಕ್ಕೆ ನಾಮಪತ್ರ ವಾಪಾಸ್ ಪಡೆದಿದ್ದಾರೆ. ಸಮರ್ಥ ಅವರಿಗೆ ಬೆಂಬಲ ಕೊಡುವುದಾಗಿ ಸಾಧಿಕ್ ಹೇಳಿದ್ದಾರೆ ಎಂದರು.
ಇಲ್ಲಿ 40 ಸಾವಿರ ಮತಗಳಿಂದ ಗೆಲ್ಲುತ್ತೇವೆ
ಉಪಚುನಾವಣೆ ಕಣದಲ್ಲಿ ಬಿಜೆಪಿಗೆ ಕಾಂಗ್ರೆಸ್ ನೇರ ಪೈಪೋಟಿ ನೀಡಲಿದೆ. ಅಲ್ಪಸಂಖ್ಯಾತರು ಯಾವತ್ತಿಗೆ ಬಿಜೆಪಿಯನ್ನು ಬೆಂಬಲಿಸುವುದಿಲ್ಲ. ಕಾಂಗ್ರೆಸ್ ಬೆಂಬಲಿಸುತ್ತಾರೆ. ದಾವಣಗೆರೆಯಲ್ಲಿ ಕನಿಷ್ಠ 40 ಸಾವಿರ ಹಾಗೂ ಬಾಲಗಕೋಟೆಯಲ್ಲಿ 25 ಸಾವಿರ ಮತಗಳ ಅಂತರದಲ್ಲಿ ಕಾಂಗ್ರೆಸ್ ಇಲ್ಲಿ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಿದ್ದರಾಮಯ್ಯರಿಂದ ಪ್ರಚಾರ
ಈಗಾಗಲೇ ಡಿಕೆ ಶಿವಕುಮಾರ್, ರಣದೀಪ್ ಸಿಂಗ್ ಸುರ್ಜೆವಾಲ ಅವರು ಪ್ರಚಾರ ನಡೆಸಿದ್ದು, ಶುಕ್ರವಾರವರೆಗೆ ಸಿಎಂ ಸಿದ್ದರಾಮಯ್ಯ ಅವರು ಪ್ರವಾಸ ಮಾಡಿ ಮತಯಾಚಿಸಲಿದ್ದಾರೆ. ಕ್ಷೇತ್ರದಲ್ಲಿ ಹಿರಿಯ ಮುಖಂಡರು ಬೂತ್ ಮಟ್ಟದಲ್ಲಿ ಕಾರ್ಯಕರ್ತರಂತೆ ಕೆಲಸ ಮಾಡುತ್ತಿದ್ದಾರೆ. ಮನೆ ಮನೆಗೆ ಭೇಟಿ ನೀಡಿ ಸರ್ಕಾರದ ಸಾಧನೆ, ಸಿದ್ಧಾಂತ ಹೇಳುತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕ್ರಮ, ವಿಚಾರಧಾರೆ ಜನರಿಗೆ ಮುಟ್ಟಿಸುವ ಜೊತೆಗೆ ಹನ್ನೆರಡು ವರ್ಷ ಬಿಜೆಪಿ ಮಾಡಿದ್ದೇನು? ಅವರ ಕರ್ಮಕಾಂಡಗಳನ್ನು, ಜನರಿಗೆ ಮಾಡಿದ್ದ ಮೋಸ ತಿಳಿಸಿ ಬಿಜೆಪಿಯನ್ನು ಬೆತ್ತಲೆಗೊಳಿಸುತ್ತೇವೆ ಎಂದು ಗುಡುಗಿದರು. ಸಮರ್ಥ ಶಾಮನೂರು ಮಲ್ಲಿಕಾರ್ಜುನ್ ಒಬ್ಬ ಯುವಕ. ಅವರಿಗೆ ಜನ ಆಶೀರ್ವಾದ ಮಾಡಿ ಗೆಲ್ಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
2028ರ ಚುನಾವಣೆ ಟಿಕೆಟ್ ನಿರ್ಧಾರ ಹೈಕಮಾಂಡ್ಗೆ ಬಿಟ್ಟದ್ದು
2028ರಲ್ಲಿ ಮತ್ತೆ ಅಲ್ಪಸಂಖ್ಯಾತರಿಗೆ ಟಿಕೆಟ್ ಸಿಗುತ್ತಾ? ಎಂಬ ಪ್ರಶ್ನೆಗೆ, ಅವರು ರಾಜ್ಯದಲ್ಲಿನ 224 ಕ್ಷೇತ್ರಗಳಲ್ಲಿ ಯಾರಿಗೆ ಎಲ್ಲಿಂದ ಟಿಕೆಟ್ ಕೊಡುತ್ತೆ ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ನಾವು ಅದನ್ನು ಒಪ್ಪಬೇಕಾಗುತ್ತದೆ. ಆಗ ಸಭೆ ಮಾಡಿ ಎಲ್ಲವನ್ನು ತೀರ್ಮಾನಿಸಲಾಗುತ್ತದೆ ಎಂದರು.
ಕರ್ನಾಟಕದ ಬಗ್ಗೆ ಮಾತನಾಡದ ಕೇಂದ್ರದ 5 ಮಂತ್ರಿಗಳು
ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ರಾಜ್ಯದ ಕೇಂದ್ರ ಸಚಿವರ ವಿರುದ್ಧ ಸಲೀಂ ಕೆಂಡ ಕಾರಿದರು. ಬಿಜೆಪಿ ನಾಯಕರು ನಮ್ಮ ಮೇಲೆ ಟೀಕೆ ಮಾಡುತ್ತಾರೆ. ಪ್ರಧಾನಿ ಹೇಳಿದ ಹದಿನೈದು ಕೋಟಿ ಎಲ್ಲಿದೆ?, ಸುಳ್ಳಿಗೆ ಅವಾರ್ಡ್ ಕೊಡುವುದಿದ್ದರೆ ಅದು ಮೋದಿಗೆ ಸಲ್ಲುತ್ತದೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಕೊಡುವುದಾಗಿ ಹೇಳಿದ್ದರು. ಈವರೆಗೆ 24 ಕೋಟಿ ಅಲ್ಲ, 24 ಲಕ್ಷ ಉದ್ಯೋಗ ಸಹ ನೀಡಿಲ್ಲ. ಇಂಧನ, ಅಡುಗೆ ಅನಿಲ ದರವೆಲ್ಲವು ಹೆಚ್ಚಾಗಿದೆ. ದೇಶದ ಜನರಿಗೆ ನಕರ ತೋರಿಸಿದ್ದಾರೆ.
ಕೇಂದ್ರ ಸರ್ಕಾರವು ಮಹದಾಯಿ, ಮೇಕೆದಾಟು ಸೇರಿ ಕೆಲವು ಯೋಜನೆಗಳ ವಿಚಾರದಲ್ಲಿ ಮಲತಾಯಿ ಧೋರಣೆ ಹೊಂದಿದೆ. ರಾಜ್ಯಕ್ಕೆ ಅನ್ಯಾಯ ಆದಾಗ ರಾಜ್ಯದ ಐದು ಕೇಂದ್ರ ಸಚಿವರಿದ್ದರು, ಆ ಬಗ್ಗೆ ಮಾತನಾಡುವುದಿಲ್ಲ. ಅವರೆಲ್ಲ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ದೂರಿದರು.
-
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
ಬಾಗಲಕೋಟೆ, ದಾವಣಗೆರೆ ಉಪಚುನಾವಣೆ: ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ನಿಶ್ಚಿತ-ಬಿ.ಎಸ್.ಯಡಿಯೂರಪ್ಪ -
ಸಿದ್ದರಾಮಯ್ಯ ವಿರುದ್ಧ ಆರ್. ಅಶೋಕ್ ತೀವ್ರ ವಾಗ್ದಾಳಿ: ರಾಜಕೀಯದಲ್ಲಿ ಹೊಸ ವಿವಾದ -
ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಕೈ ಹಿಡಿಯುತ್ತವೆ: ಸಿದ್ದರಾಮಯ್ಯ ಹೇಳಿಕೆ -
ಉಜ್ವಲ ಯೋಜನೆ ಬದಲು ಸೌದೆ ಒಲೆ ಯೋಜನೆ: ಡಿಸಿಎಂ ಡಿ.ಕೆ. ಶಿವಕುಮಾರ್ ಕಿಡಿ -
Vijay Thalapathi: ಟಿವಿಕೆ ಸಂಸ್ಥಾಪಕ, ನಟ ವಿಜಯ್ ದಳಪತಿ ವಿರುದ್ಧ ಪ್ರಕರಣ ದಾಖಲು -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ತಮಿಳುನಾಡಿನಲ್ಲಿ ರಂಗೇರಿದ ಅಖಾಡ: ಹೊಸ ಶಕ್ತಿಯಾಗಿ ವಿಜಯ್ ಪ್ರವೇಶ, ಪ್ರಮುಖ ಪಕ್ಷಗಳು, ಚರ್ಚೆಯ ವಿಷಯಗಳು -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ













Click it and Unblock the Notifications