Dasara Special: “ಮಹಿಷಾಸುರ ಅಹಂಕಾರದ ಸಂಕೇತ” ಎಂದ ನಟಿ ರಮ್ಯಾ, ವಿಶೇಷ ಟ್ವೀಟ್ ವೈರಲ್

Dasara Special: ದಸರಾ: ನಮ್ಮೊಳಗಿನ ಹೋರಾಟ ಎಂದು ನಟಿ ರಮ್ಯಾ ಅವರು ಹೇಳಿದ್ದಾರೆ. ದಸರಾ ಸಂಭ್ರಮಾಚರಣೆಯ ಸಂದರ್ಭದಲ್ಲಿ ನಟಿ ರಮ್ಯಾ ಅವರು ಸೋಷಿಯಲ್ ಮೀಡಿಯಾ ಎಕ್ಸನಲ್ಲಿ ಮಾಡಿರುವ ಟ್ವೀಟ್ ವೈರಲ್ ಆಗುತ್ತಿದೆ.

ಪ್ರತಿ ವರ್ಷ ನಾವು ದಸರಾವನ್ನು ಕೆಟ್ಟದ್ದರ ವಿರುದ್ಧ ಒಳ್ಳೆಯದರ ವಿಜಯವೆಂದು ಆಚರಿಸುತ್ತೇವೆ. ಕರ್ನಾಟಕದಲ್ಲಿ ಬೆಳೆದ ನನಗೆ, ಮೈಸೂರಿನ ಚಾಮುಂಡಿ ಬೆಟ್ಟದಿಂದ ನಮ್ಮನ್ನು ಕಾಯುತ್ತಿರುವ ಚಾಮುಂಡೇಶ್ವರಿಯ ಕಥೆ ದೇವತೆಗಳು ಮತ್ತು ರಾಕ್ಷಸರ ನಡುವಿನ ಹೋರಾಟದ ಕಥೆಯಾಗಿ ಕಾಣುತ್ತಿತ್ತು. ಆದರೆ ವಯಸ್ಸು ಹೆಚ್ಚಾದಂತೆ, ಈ ಕಥೆ ನಮ್ಮ ಬಗ್ಗೆಯೇ ಇದೆ ಎಂಬುದು ಹೆಚ್ಚು ಅರ್ಥವಾಗುತ್ತಿದೆ. ನನ್ನ ದೃಷ್ಟಿಯಲ್ಲಿ ಚಾಮುಂಡೇಶ್ವರಿ ಎಂದರೆ ಶಕ್ತಿ. ನಮ್ಮೆಲ್ಲರೊಳಗೂ ಇರುವ ಅರಿವಿನ ಜೀವಂತ ಶಕ್ತಿ. ಮಹಿಷಾಸುರ ಎಂದರೆ ಅಹಂಕಾರ.

Dasara Special Ramya s Take on Mahishasura Goes Viral DK Shivakumar HDK Greet People

ಮಹಿಷಾಸುರನ ಕಥೆಯನ್ನು ಗಮನಿಸಿ. ಅವನು ರೂಪ ಬದಲಾಯಿಸುತ್ತಿರುತ್ತಾನೆ. ಎಮ್ಮೆಯ ರೂಪದಲ್ಲಿದ್ದಾಗ ಅವನ ಮೇಲೆ ದಾಳಿ ಮಾಡಿದರೆ ಸಿಂಹವಾಗುತ್ತಾನೆ. ಸಿಂಹವನ್ನು ಸೋಲಿಸಿದರೆ ಆನೆಯಾಗುತ್ತಾನೆ, ನಂತರ ಮನುಷ್ಯನ ರೂಪ ತಾಳುತ್ತಾನೆ. ನಮ್ಮ ಅಹಂಕಾರವೂ ಹೀಗೆಯೇ ವರ್ತಿಸುವುದಿಲ್ಲವೇ? ಒಂದು ಕಡೆ ಹೆಮ್ಮೆಯನ್ನು ಬಿಟ್ಟರೆ, ಅದು ಮತ್ತೊಂದು ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಅಭದ್ರತೆಯಾಗಿ, ಕೆಲವೊಮ್ಮೆ ನಾವೇ ಸರಿ ಎಂಬ ಹಠವಾಗಿ, ಇನ್ನು ಕೆಲವೊಮ್ಮೆ ವಿನಯವಂತರು ಎಂಬ ಹೆಮ್ಮೆಯ ರೂಪದಲ್ಲಿಯೂ ಕಾಣಿಸಿಕೊಳ್ಳುತ್ತದೆ.

ಮಹಿಷಾಸುರನನ್ನು ಎಮ್ಮೆ ರೂಪದ ರಾಕ್ಷಸನಾಗಿ ಚಿತ್ರಿಸಿರುವುದಕ್ಕೂ ಒಂದು ಅರ್ಥವಿದೆ. ಎಮ್ಮೆ ತಮೋಗುಣವನ್ನು ಸೂಚಿಸುತ್ತದೆ. ಅಂದರೆ ಭಾರವಾದ, ಮಂದವಾದ ಮತ್ತು ಬದಲಾವಣೆಯನ್ನು ವಿರೋಧಿಸುವ ಸ್ವಭಾವ. ನಾವು ಬದಲಾವಣೆಯನ್ನು ಒಪ್ಪಿಕೊಳ್ಳದೆ, ನಮ್ಮ ಬಗ್ಗೆ ನಾವು ಕಟ್ಟಿಕೊಂಡಿರುವ ಭಾವನೆಯನ್ನೇ ಗಟ್ಟಿಯಾಗಿ ಹಿಡಿದುಕೊಳ್ಳುತ್ತೇವೆ. ಕೇವಲ ಆಲೋಚನೆಯಿಂದ ಅಹಂಕಾರವನ್ನು ಸೋಲಿಸಲು ಸಾಧ್ಯವಿಲ್ಲ. ಅದಕ್ಕಾಗಿ ದೇವಿಯು ಒಂಬತ್ತು ರಾತ್ರಿಗಳ ಕಾಲ ಹೋರಾಡಬೇಕಾಗುತ್ತದೆ. ನಮ್ಮೊಳಗಿನ ಬದಲಾವಣೆಯ ಪ್ರಯತ್ನಕ್ಕೂ ಸಮಯ ಬೇಕು. ಅದಕ್ಕೆ ಬುದ್ಧಿಶಕ್ತಿಗಿಂತಲೂ ಆಳವಾದ ಶಕ್ತಿ ಅಗತ್ಯವಿದೆ ಎಂದು ನಟಿ ರಮ್ಯಾ ಅವರು ಅಭಿಪ್ರಾಯಪಟ್ಟಿದ್ದಾರೆ.

ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಟ್ವೀಟ್

ಇನ್ನು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ನಾಡಿನ ಜನತೆಗೆ ಶುಭಕೋರಿದ್ದಾರೆ. "ಓಂ ನಮೋ ಭಗವತೇ ಗಜವಾಹನಾಯ, ಅಶ್ವವಾಹನಾಯ, ಸರ್ವವಾಹನ ಪ್ರಿಯಾಯ ನಮಃ ಪ್ರಚೋದಯಾತ್" ನಮ್ಮ ದೈನಂದಿನ ಬದುಕಿನ ಭಾಗವಾಗಿರುವ ಪ್ರತಿಯೊಂದು ವಸ್ತುವಿಗೂ ಕೃತಜ್ಞತೆ ಸಲ್ಲಿಸಲಾಯಿತು. ಈ ಪವಿತ್ರ ಹಬ್ಬವು ಎಲ್ಲರ ಬಾಳಿನಲ್ಲೂ ಹೊಸ ಚೈತನ್ಯ ತರಲಿ. ಕಾಯಕವೇ ಕೈಲಾಸ ಎಂಬಂತೆ ಪ್ರತಿಯೊಬ್ಬರ ಶ್ರಮಕ್ಕೂ ತಕ್ಕ ಪ್ರತಿಫಲ ದೊರೆಯಲಿ. ನಾಡದೇವತೆ ಶ್ರೀ ಚಾಮುಂಡೇಶ್ವರಿ ತಾಯಿಯು ರಾಜ್ಯದ ಸಮಸ್ತ ಜನತೆಗೆ ಸುಖ, ಶಾಂತಿ, ಆರೋಗ್ಯ ಹಾಗೂ ಸಮೃದ್ಧಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.

ನಾಡಿನ ಸಮಸ್ತ ಜನತೆಗೆ ಮಹಾನವಮಿ ಹಾಗೂ ಆಯುಧ ಪೂಜೆಯ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ. ಆ ಜಗನ್ಮಾತೆ ಶ್ರೀ ಚಾಮುಂಡೇಶ್ವರಿ ಎಲ್ಲರ ಜೀವನದಲ್ಲಿ ಸುಖ, ಶಾಂತಿ, ಯಶಸ್ಸು ಹಾಗೂ ನೆಮ್ಮದಿ, ಸಮೃದ್ಧಿಯನ್ನು ನೆಲೆಸುವಂತೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ನಮ್ಮ ವೃತ್ತಿ ಮತ್ತು ಬದುಕಿಗೆ ಆಧಾರವಾಗಿರುವ ಸಾಧನ, ಸಲಕರಣೆಗಳಲ್ಲಿ ದೈವವನ್ನು ಕಂಡು ಅವುಗಳನ್ನು ಭಕ್ತಿಯಿಂದ ಪೂಜಿಸೋಣ ಎಂದು ಕೇಂದ್ರ ಸಚಿವ ಎಚ್‌.ಡಿ ಕುಮಾರಸ್ವಾಮಿ ಅವರು ಶುಭ ಕೋರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+