Dasara Holidays: ಶಾಲಾ ಮಕ್ಕಳಿಗೆ ದಸರಾ ರಜೆ ಗುಡ್‌ನ್ಯೂಸ್, ಯಾವಾಗ ಪ್ರಾರಂಭ - ಎಷ್ಟು ದಿನ ಇರಲಿದೆ ಸಂಪೂರ್ಣ ಮಾಹಿತಿ

Dasara Holidays: ಗೌರಿ - ಗಣೇಶದ ಸಂಭ್ರಮದ ಬೆನ್ನಲ್ಲೇ ದಸರಾ ರಜೆ ಹಾಗೂ ದಸರಾ ಹಬ್ಬ ಸಂಭ್ರಮಕ್ಕಾಗಿ ಶಾಲಾ ಮಕ್ಕಳು ಎದುರು ನೋಡುತ್ತಿದ್ದಾರೆ. ಇನ್ನು ಈ ಬಾರಿಯ ದಸರಾ ರಜೆಯ ವಿಚಾರದಲ್ಲಿ ಕರ್ನಾಟಕ ಸರ್ಕಾರವು ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದೆ. 2026 - 27ನೇ ಶೈಕ್ಷಣಿಕ ವೇಳಾಪಟ್ಟಿಯಲ್ಲಿ ಮೇ 29 ರಿಂದ ಕರ್ನಾಟಕ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ತರಗತಿಗಳು ಆರಂಭವಾಗಿವೆ.

2026 - 27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿಯಲ್ಲಿ ಒಟ್ಟು 245 ಶಾಲಾ ಕೆಲಸದ ದಿನಗಳಿವೆ. 2026ನೇ ಸಾಲಿನ ಅಕ್ಟೋಬರ್ 3ರಿಂದ 21 ರವರೆಗೆ ದಸರಾ ರಜೆ ಮತ್ತು 2027ರ ಏಪ್ರಿಲ್ 11 ರಿಂದ ಬೇಸಿಗೆ ರಜೆ ಘೋಷಿಸಲಾಗಿದೆ. ಬೇಸಿಗೆ ರಜೆಯು 2027ರ ಏಪ್ರಿಲ್ 11ರಿಂದ ಮೇ 28ರ ವರೆಗೆ ಇರಲಿದೆ.

Dasara Holidays Good News for School Students Check Start Date and Full Holiday Details

Dasara Holidays: 2026 - 2027ನೇ ಸಾಲಿನ ಶಾಲಾ ಕರ್ತವ್ಯ ದಿನಗಳು

2026 - 2027ನೇ ಸಾಲಿನ ಶಾಲಾ ಕರ್ತವ್ಯ ದಿನಗಳನ್ನು ಮೊದಲನೇ ಅವಧಿ ಹಾಗೂ ಎರಡನೇ ಅವಧಿ ಎಂದು ವಿಂಗಡಿಸಲಾಗಿದೆ. ಶಾಲೆಗಳ ಮೊದಲ ಅವಧಿಯು 2026ನೇ ಸಾಲಿನ ಮೇ 29 ರಿಂದ ಅಕ್ಟೋಬರ್ 2 ರವರೆಗೆ ಮತ್ತು ಎರಡನೇ ಅವಧಿ ಅಕ್ಟೋಬರ್ 22 ರಿಂದ ಪ್ರಾರಂಭವಾಗಿ 2027ರ ಏಪ್ರಿಲ್ 10 ರವರೆಗೆ ಇರಲಿದೆ. ಶಾಲೆ ಬಿಟ್ಟಿರುವ 6 ವರ್ಷದಿಂದ 18 ವರ್ಷದ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರಲು ದಾಖಲಾತಿ ಜಾಗೃತಿ ಅಭಿಯಾನ ನಡೆಸಬೇಕು ಎಂದು ಸಹ ಶಿಕ್ಷಣ ಇಲಾಖೆ ಸೂಚಿಸಿದೆ.

Dasara Holidays: 365 ರಲ್ಲಿ 119 ರಜೆ ದಿನಗಳಿವೆ

2026 - 2027ನೇ ಸಾಲಿನ ನೂತನ ಶೈಕ್ಷಣಿಕ ವರ್ಷದಲ್ಲಿ ಒಟ್ಟು 365 ದಿನಗಳಲ್ಲಿವೆ. ಇದರಲ್ಲಿ 119 ರಜಾ ದಿನಗಳಿರಲಿವೆ. 245 ಕರ್ತವ್ಯದ ದಿನಗಳೆಂದು ಪರಿಗಣಿಸಲಾಗಿದ್ದು, ಈ ದಿನಗಳಲ್ಲಿ ಪರೀಕ್ಷೆಗಳು ಮತ್ತು ಮೌಲ್ಯಾಂಕನ ಕಾರ್ಯಕ್ಕಾಗಿ 26 ದಿನಗಳು, ಪಠ್ಯೇತರ ಚಟುವಟಿಕೆಗಳ ನಿರ್ವಹಣೆಗಾಗಿ 24 ದಿನಗಳು, ಮೌಲ್ಯಮಾಪನ ಮತ್ತು ಫಲಿತಾಂಶ ವಿಶ್ಲೇಷಣೆ ಕಾರ್ಯಕ್ಕಾಗಿ 10 ದಿನಗಳು, ಶಾಲಾ ಸ್ಥಳೀಯ ರಜೆಗೆ 4 ದಿನಗಳು ಮತ್ತು ಕಲಿಕಾ ಪ್ರಕ್ರಿಯೆಗೆ 181 ದಿನಗಳನ್ನು ಮೀಸಲಿರಿಸಲಾಗಿದೆ.

2026-27ನೇ ಶೈಕ್ಷಣಿಕ ವರ್ಷದಲ್ಲಿ ಲಭ್ಯವಾಗುವ ಒಟ್ಟು ಶಾಲಾ ಕರ್ತವ್ಯದ ದಿನಗಳು: 245

ಪರೀಕ್ಷೆಗಳು ಮತ್ತು ಮೌಲ್ಯಾಂಕನ ಪ್ರಕ್ರಿಯೆಗಾಗಿ (FA & SA): 26

ಪಠ್ಯೇತರ ಚಟುವಟಿಕೆಗಳ/ಪಠ್ಯ ಚಟುವಟಿಕೆಗಳ ಸ್ಪರ್ಧೆಗಳ ನಿರ್ವಹಣಾ ಕಾರ್ಯಕ್ಕಾಗಿ: 24

ಮೌಲ್ಯಮಾಪನಾ ಮತ್ತು ಫಲಿತಾಂಶ ವಿಶ್ಲೇಷಣೆ ಕಾರ್ಯಕ್ಕಾಗಿ: 10

ಶಾಲಾ ಸ್ಥಳೀಯ ರಜೆಗಳು: 04

ಬೋಧನಾ-ಕಲಿಕಾ ಪ್ರಕ್ರಿಯೆಗೆ ಉಳಿಯಬಹುದಾದ ಕರ್ತವ್ಯ ದಿನಗಳು: 181

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+