Darshan Thoogudeepa: ಜೈಲಿನಲ್ಲಿದ್ದರೂ ಕರಗಲಿಲ್ಲ ಕೊಬ್ಬು: ಕ್ಯಾಮೆರಾ ನೋಡಿ, ಅಸಹ್ಯವಾಗಿ ಸಂಜ್ಞೆ ಮಾಡಿದ ದರ್ಶನ್
ಬಳ್ಳಾರಿ, ಸೆಪ್ಟೆಂಬರ್ 12: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಬರೋಬ್ಬರಿ ಮೂರು ತಿಂಗಳು ಜೈಲಿನಲ್ಲಿ ಕಳೆದಿದ್ದರೂ ನಟ ದರ್ಶನ್ ಅಹಂಕಾರ ಮಾತ್ರ ಸ್ವಲ್ಪವೂ ಕಡಿಮೆಯಾಗಿಲ್ಲ. ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿರುವ ದರ್ಶನ್‌ನನ್ನು ಭೇಟಿ ಮಾಡಲು ಬಂದ ವಕೀಲರನ್ನು ಭೇಟಿಯಾಗಲು ಹೈಸೆಕ್ಯೂರಿಟಿ ಜೈಲಿನಿಂದ ಹೊರಗೆ ಬರುವಾಗ ಮಾಧ್ಯಮಗಳ ಕ್ಯಾಮೆರಾಗಳನ್ನು ನೋಡಿ ಕೈಗಳ ಮಧ್ಯದ ಬೆರಳನ್ನು ತೋರಿಸಿ ಅಸಭ್ಯವಾಗಿ ವರ್ತಿಸುವುದು ಕ್ಯಾಮಾರದಲ್ಲಿ ಸೆರೆಯಾಗಿದೆ.
ಪೊಲೀಸರು ಬಂಧಿಸಿದ ಆರಂಭದಲ್ಲಿ ನಕಲಿ ಪಶ್ಚಾತ್ತಾಪ ತೋರ್ಪಡಿಸಿದ್ದ ದರ್ಶನ್ ಈಗ ತಮ್ಮ ನಿಜ ವ್ಯಕ್ತಿತ್ವ ಪ್ರದರ್ಶಿಸುತ್ತಿದ್ದಾರೆ. ತಮ್ಮದು ಅದೆಂಥಹಾ ದುರುಳ ವ್ಯಕ್ತಿತ್ವ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಈ ಹಿಂದೆ ಪರಪ್ಪನ ಅಗ್ರಹಾರ ಜೈಲನ್ನು ಹಣದ ದರ್ಪ ಬಳಸಿ ರೆಸಾರ್ಟ್ ಮಾಡಿಕೊಂಡು ಬಳ್ಳಾರಿ ಜೈಲಿಗೆ ಸ್ಥಳಾಂತರವಾಗಿರುವ ದರ್ಶನ್,ಸಂದರ್ಶಕರ ಕೊಠಡಿಗೆ ಬರುವಾಗ ಕ್ಯಾಮೆರಾಗಳನ್ನು ನೋಡಿ ಅಸಹ್ಯವಾಗಿ ಸಂಜ್ಞೆ ಮಾಡಿದ್ದಾರೆ.

ಇಂದು(ಗುರುವಾರ) ಬಳ್ಳಾರಿ ಜೈಲಿಗೆ ನಟ ದರ್ಶನ್ ಪತ್ನಿ ಭೇಟಿಯಾಗಲು ಬಂದಿದ್ದರು. ಈ ವೇಳೆ ಸೆಲ್‌ನಿಂದ ಹೊರ ಬಂದ ದರ್ಶನ್ ಮಿಡಲ್ ಫಿಂಗರ್ ತೋರಿಸಿ ಗಾಂಚಾಲಿ ತೋರಿಸಿದ್ದಾರೆ. ಜೈಲಿನ ಹೊರಗೂ ಇದೇ ದರ್ಪ ತೋರಿಸುತ್ತಿದ್ರು. ಈಗಲೂ ಇದೇ ರೀತಿ ಮಾಡಿದ್ದಾರೆ.ಪೊಲೀಸರ ಜೊತೆಗೆ ಬರುತ್ತಿದ್ದರು ಎರಡು ಕೈಗಳಲ್ಲೂ ಮಿಡಲ್ ಫಿಂಗರ್ ತೋರುತ್ತಾ ಬಂದಿದ್ದು, ಇದೀಗ ಎರಡು ಕೈಗಳಲ್ಲೂ ಮಿಡಲ್ ಫಿಂಗರ್ ತೋರುತ್ತಾ ಬಂದಿರುವ ಫೋಟೋ ಹಾಗೂ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿ ಬರೋಬ್ಬರಿ ಮೂರು ತಿಂಗಳು ಕಳೆದರು ನಟ ದರ್ಶನ್ ದುರಂಹಕಾರ ಮಾತ್ರ ಕಡಿಮೆಯಾಗಿಲ್ಲ. ಪೊಲೀಸರ ಸುತ್ತಮುತ್ತ ಇರುವಾಗಲೇ ನಟ ದರ್ಶನ್ ಅವರು ಅಸಭ್ಯ ವರ್ತನೆ ತೋರಿದ್ದಾರೆ.












Click it and Unblock the Notifications