ವಿಜಯಲಕ್ಷ್ಮಿ ದರ್ಶನ್ ಬಳಿ ಸಾರಿ ಕೇಳಿದ ಲಾಯರ್ ಜಗದೀಶ್ !
ನಟ ಹಾಗೂ ರೇಣುಕಾಸ್ವಾಮಿ ಕೊಲೆ ಕೇಸ್‌ನ ಆರೋಪಿ ದರ್ಶನ್ ಬಗ್ಗೆ ಈಚೆಗೆ ಲಾಯರ್ ಜಗದೀಶ್ ಅವರು ಖಾರವಾಗಿಯೇ ಪ್ರತಿಕ್ರಿಯಿಸಿದ್ದರು. ಕಳೆದ ಕೆಲವು ದಿನಗಳಿಂದ ಕನ್ನಡ ಚಿತ್ರರಂಗ ಹಾಗೂ ಕರ್ನಾಟಕದ ವಿಷಯಗಳಿಗೆ ಲಾಯರ್ ಜಗದೀಶ್ ಅವರು ಭಾರೀ ಕಮೆಂಟ್ ಮಾಡುತ್ತಲ್ಲೇ ಇದ್ದಾರೆ. ಆದರೆ, ದರ್ಶನ್ ಅವರ ಅಭಿಮಾನಿಗಳು ಲಾಯರ್ ಜಗದೀಶ್ ಮೇಲೆ ಕೆಂಡ ಕಾರುವುದನ್ನ ಕಡಿಮೆ ಮಾಡಿಲ್ಲ. ಡಿ - ಬಾಸ್ ಹೆಸರು ಹೇಳಿಕೊಂಡು ಫೇಮಸ್ ಆಗಿರುವ ಲಾಯರ್ ಜಗದೀಶ್ ಬಾಯಿಗೆ ಬಂದಂಗೆ ಮಾತಾಡ್ತಿದ್ದಾರೆ. ಅವರು ಈ ರೀತಿ ಮಾತನಾಡುವುದು ತಪ್ಪು ಅಂತಿದ್ದರು. ಆದರೆ, ಲಾಯರ್ ಜಗದೀಶ್ ಅವರು ಯಾವ ವಿಷಯದ ಬಗ್ಗೆನೂ ತಲೆನೇ ಕೆಡಿಸಿಕೊಂಡಿರಲಿಲ್ಲ.
ಲಾಯರ್ ಜಗದೀಶ್ ಈಗ ಕರ್ನಾಟಕದಲ್ಲಿ ಟ್ರೆಂಡಿಂಗ್‌ನಲ್ಲಿ ಇರುವ ಹೆಸರು. ದರ್ಶನ್ ಅವರ ಬಗ್ಗೆ ಮಾತನಾಡಿದ ಮೇಲೆ ಅವರ ಬಗ್ಗೆ ಪರ - ವಿರೋಧ ಚರ್ಚೆಗಳು ಜೋರಾಗಿಯೇ ಇದೆ. ಈ ನಡುವೆ ಅವರು ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರ ಬಳಿ ಕ್ಷಮೆ ಕೇಳಿದ್ದಾರೆ. ದರ್ಶನ್ ಬಗ್ಗೆ ಮಾತನಾಡಿರುವ ವಿಚಾರದ ಬಗ್ಗೆ ಕ್ಷಮೆ ಕೇಳಿದ್ದಾರೆ ಎನ್ನಲಾಗಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ದರ್ಶನ್ ಬಗ್ಗೆ ನಾನೇನಾದರೂ ಮಾತನಾಡಿದ್ದರೆ, ಅದು ದರ್ಶನ್ ಬದಲಾವಣೆ ಮಾಡುವ ಉದ್ದೇಶದಿಂದ. ದರ್ಶನ್‌ನನ್ನು ಬೈದು ಅಥವಾ ಹೀಯಾಳಿಸಿ ನನಗೆ ಏನೂ ಆಗಬೇಕಾಗಿಲ್ಲ. ಅಕಸ್ಮಾತ್ ನಾನು ಮಾತನಾಡಿದ್ದರಿಂದ ನಿಮಗೆ (ವಿಜಯಲಕ್ಷ್ಮಿ) ಅವರಿಗೆ ನೋವಾಗಿದ್ದರೆ, ನಾನು ಯಾರಿಗೂ ಕ್ಷಮೆ ಕೇಳುವುದಿಲ್ಲ. ನನಗೆ ಗೊತ್ತು ದರ್ಶನ್ ಎಂದರೆ, ನಿನಗೆ ತುಂಬಾ ಇಷ್ಟ. ನಾನು ಯಾರ ಬಳಿಯೂ ಕ್ಷಮೆ ಕೇಳಲ್ಲ. ದರ್ಶನ್ ಅವರ ಅಭಿಮಾನಿಗಳ ಬಳಿಯೂ ನಾನು ಕೇಳಲ್ಲ. ಅವರ ಅಭಿಮಾನಿಗಳು ಸಹ ಅವನ ತರಾನೇ ಒರಟು ಅಂತ ಹೇಳಿರುವ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ.
ಈ ವಿಡಿಯೋವನ್ನು ಅಖಿಲ ಕರ್ನಾಟಕ ದರ್ಶನ್ ತೂಗುದೀಪ ಅಭಿಮಾನಿಗಳ ಸಂಘ (ಹಿರಿಯೂರು) ಎನ್ನುವ ಫೇಸ್‌ಬುಕ್ ಖಾತೆಯಿಂದ ಹಂಚಿಕೊಳ್ಳಲಾಗಿದೆ. ಇದಕ್ಕೆ ದರ್ಶನ್ ಅಭಿಮಾನಿಗಳು ಇದು ಡಿ ಬಾಸ್ ತಾಕತ್ತು ಅಂತ ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ನೀನು ಯಾರು ದರ್ಶನ್‌ನ ಬದಲಾವಣೆ ಮಾಡೋಕೆ ಅಂತ ಕೇಳಿದ್ದಾರೆ.

ಆದರೆ, ಈ ವಿಡಿಯೋದಲ್ಲಿ ಜಗದೀಶ್ ಅವರು ಎಲ್ಲಿಯೂ ವಿಜಯಲಕ್ಷ್ಮಿ ಅವರ ಹೆಸರನ್ನು ತೆಗೆದುಕೊಂಡಿಲ್ಲ. ಆದರೆ, ಅವರ ಬಗ್ಗೆಯೇ ಮಾತನಾಡಿರುವುದು ಸ್ಪಷ್ಟವಾಗಿದೆ ಅಂತ ಹೇಳಲಾಗಿದೆ.
ನಾನು ದರ್ಶನ್ ವಿರೋಧಿಯಲ್ಲ, ದರ್ಶನ್ ಕೋಪದ ವಿರೋಧಿ ಮಾತ್ರ. ನೀವು ಅವರ ಬಗ್ಗೆ ಇರುವ ಕಾಳಜಿ ಹಾಗೂ ಅವರನ್ನು ಕಾಪಾಡಿಕೊಳ್ಳಲು ಪಡುತ್ತಿರುವ ಕಷ್ಟ ನನಗೆ ಅರ್ಥ ಆಗುತ್ತೆ ಎಂದಿದ್ದಾರೆ.
ಬಿಗ್‌ಬಾಸ್‌ಗೆ ಹೋಗಿದ್ದೇ ದರ್ಶನ್ ಹೆಸರಿಂದ: ಲಾಯರ್ ಜಗದೀಶ್ ಬಿಗ್‌ಬಾಸ್ ಸೀಸನ್‌ನಲ್ಲಿ ಸ್ಪರ್ಧೆ ಮಾಡಿದ್ದರು. ಇದಕ್ಕೂ ಮೊದಲು ಅವರು ದರ್ಶನ್ ಪರವಾಗಿ ಸಾಕಷ್ಟು ಮಾತನಾಡಿದ್ದರು. ದರ್ಶನ್ ಅವರು ಮಾಧ್ಯಮಗಳ ಫ್ರೇಮ್ ಮಾಡಿದ್ದವು ಎಂಬರ್ಥದಲ್ಲಿ ಲಾಯರ್ ಜಗದೀಶ್ ಅವರು ಮಾತನಾಡಿದ್ದರು. ಆದರೆ, ಬಿಗ್‌ಬಾಸ್‌ನಿಂದ ಬಂದ ಮೇಲೆ ದರ್ಶನ್ ಬಗ್ಗೆ ಟೀಕೆ ಸಹ ಮಾಡಿದ್ದರು ಎನ್ನಲಾಗಿದೆ.
ಇದೀಗ ಅವರ ಫ್ಯಾನ್ಸ್‌ಗಳು ಲಾಯರ್ ಜಗದೀಶ್ ಅವರು ಬಿಗ್‌ಬಾಸ್‌ಗೆ ಹೋಗಿದ್ದೇ ದರ್ಶನ್ ಫ್ಯಾನ್ಸ್ ಗಳ ಬೆಂಬಲದಿಂದ. ಈಗ ದರ್ಶನ್ ಮತ್ತೆ ದರ್ಶನ್ ಫ್ಯಾನ್ಸ್‌ನ ಬೈತಾ ಇದ್ದಾರೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications