Darshan Thoogudeepa: ತಪ್ಪು ಮಾಡಿದ್ದರಿಂದಲೇ ದರ್ಶನ್ ಜೈಲಿಗೆ ಹೋಗಿದ್ದು: ಜಮೀರ್ ಅಹ್ಮದ್ ಖಾನ್
ಹಾವೇರಿ, ಸೆಪ್ಟೆಂಬರ್ 03: ನಟ ದರ್ಶನ್ ವಿಚಾರವಾಗಿ ಮಾಧ್ಯಮದಲ್ಲಿ ನನ್ನ ಹೆಸರು ಸೇರಿಸುತ್ತಿದ್ದಾರೆ. ನಾನು ದರ್ಶನ್ ಆತ್ಮೀಯ ಸ್ನೇಹಿತರು. ದರ್ಶನ್ ತಪ್ಪು ಮಾಡಿದ್ದಕ್ಕೆ ಜೈಲಿಗೆ ಹೋಗಿದಾರೆ.ಸುಮ್ಮನೇ ಯಾರಾದರೂ ಜೈಲಿಗೆ ಹೋಗ್ತಾರಾ? ಎಂದು ವಸತಿ,ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದಖಾನ್ ತಿಳಿಸಿದ್ದಾರೆ.
ನಟ ದರ್ಶನ ಜೈಲು ಅತಿಥ್ಯ ಪ್ರಕರಣದಲ್ಲಿ ನಿಮ್ಮ ಹೆಸರು ಕೇಳಿಬರುತ್ತಿದೆ ಎಂದು ಹಾವೇರಿಯಲ್ಲಿ ಮಂಗಳವಾರ ಮಾಧ್ಯಮಗಳ ಪ್ರಶ್ನೆಗೆ ಉತ್ತರಸಿ, ದರ್ಶನ್ ತಪ್ಪು ಮಾಡಿದ್ದಕ್ಕೆ ಜೈಲಿಗೆ ಹೋಗಿದಾರೆ. ದರ್ಶನ್ ಅವರು ನನಗೆ ಆತ್ಮೀಯ ಸ್ನೇಹಿತರು ಎಂದು ಹೇಳಿದ್ದಾರೆ.

ಮುಡಾ ಮಾಜಿ ಆಯುಕ್ತ ಜಿ.ಟಿ ದಿನೇಶ್ ಕುಮಾರ್ ಅಮಾನತು ವಿಚಾರ ಕುರಿತಂತೆ ಮಾತನಾಡಿದ ಅವರು ದಿನೇಶ್ ಕುಮಾರ್ ಟ್ರಾನ್ಸಪರ್ ಮಾಡಿದ್ವಿ ರಾಜ್ಯಪಾಲರು ಸಸ್ಪೆಂಡ್ ಮಾಡಿದಾರೆ ಅಂತ ಮಾದ್ಯಮದವರು ಹೇಳ್ತಾ ಇದಿರಿ, ನನಗೆ ಗೊತ್ತಿಲ್ಲ ಎಂದು ತಿಳಿಸಿದರು. ಅದಕ್ಕೂ ಸಿಎಂ ಸಿದ್ದರಾಮಯ್ಯಗೂ ಏನು ಲಿಂಕ್ ಎಂದ ಜಮೀರ್ ಇದಕ್ಕೂ ಸಿದ್ದರಾಮಯ್ಯಗೂ ಲಿಂಕ್ ಇಲ್ಲ ನನಗೆ ಗೊತ್ತಿಲ್ಲ. ಮಾಹಿತಿ ತಗೊಂಡು ಹೇಳ್ತೀನಿ ಎಂದು ಜಮೀರ್ ಅಹ್ಮದ್ ತಿಳಿಸಿದರು.
ಸಿಎಂ ಸಿದ್ದರಾಮಯ್ಯ ಸಂಗೊಳ್ಳಿ ರಾಯಣ್ಣನನ್ನು ನಮ್ಮವರೇ ಹಿಡಿದುಕೊಟ್ಟರು. ನಮ್ಮವರೇ ನಮ್ಮನ್ನು ಹಿಡಿದು ಕೊಡ್ತಾರೆ ಎಂಬರ್ಥದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರ ಕುರಿತಂತೆ ಮಾತನಾಡಿದ ಜಮೀರ ಅಹ್ಮದ್ ಶತ್ರುಗಳು ಮನುಷ್ಯನಿಗೆ ಇರುವುದು ಸಹಜ.ಎಲ್ಲರಿಗೂ ಶತ್ರುಗಳು ಇರ್ತಾರೆ ಎಂದು ತಿಳಿಸಿದರು.
ನಮ್ಮ ಜೊತೆನೇ ಇರ್ತಾರೆ ಯಾರು ಶತ್ರು ಅಂತ ಗೊತ್ತಾಗುತ್ತೆ?ಯಾರು ಸ್ನೇಹಿತರು ಅಂತ ಗೊತ್ತಾಗುತ್ತೆ? ಆ ಲೆಕ್ಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದಾರೆ ಎಂದು ಸಚಿವ ಜಮೀರ್ ಅಹ್ಮದ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಯಣ್ಣ ಹೇಳಿಕೆ ಸಮರ್ಥನೆ ನೀಡಿದರು. ಶತ್ರುಗಳು ನಮ್ ಜೊತೆಗೇ ಇರ್ತಾರೆ ಆದರೆ ಗೊತ್ತಾಗಲ್ಲ ಎನ್ನುವ ಮೂಲಕ ಸಿದ್ದರಾಮಯ್ಯ ಸ್ವಪಕ್ಷೀಯ ವಿರೋಧಿಗಳಿಗೆ ಜಮೀರ್ ಅಹಮ್ಮದ್ ಟಾಂಗ್ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕಾಂಗ್ರೆಸ್ ನವರು ಯಾಕೆ ಹಾಕಿ ಕೊಡ್ತಾರೆ? ಎಂದು ಜಮೀರ್ ಅಹ್ಮದ್ ಪ್ರಶ್ನಿಸಿದರು. ವಕ್ಪ್ ಆಸ್ತಿ ವಿಚಾರದಲ್ಲಿ ಬಹಳಷ್ಟು ಸಮಸ್ಯೆ ಇದೆ ಹೀಗಾಗಿ ಹಾವೇರಿಯಲ್ಲಿ
ವಕ್ಪ್ ಅದಾಲತ್ ಹಮ್ಮಿಕೊಂಡಿದಿವಿ ಎಂದು ಜಮೀರ್ ಅಹ್ಮದ್ ತಿಳಿಸಿದರು.












Click it and Unblock the Notifications