ರೇಣುಕಾಸ್ವಾಮಿ ಮನೆಯಲ್ಲಿ ಸಂಭ್ರಮ: ಪುತ್ರನ ನಾಮಕರಣ, ಹೆಸರೇನು ?
ಚಿತ್ರದುರ್ಗ ಮೃತ ರೇಣುಕಾಸ್ವಾಮಿ ಮನೆಯಲ್ಲಿ ಕೊನೆಗೂ ಸಂಭ್ರಮಾಚರಣೆ ನಡೆಯುತ್ತಿದೆ. ನಟ ದರ್ಶನ್ ಹಾಗೂ ಅವರ ಗ್ಯಾಂಗ್ ರೇಣುಕಾಸ್ವಾಮಿಯನ್ನು ಕ್ರೂರವಾಗಿ ಕೊಲೆ ಮಾಡಿದ್ದರು ಎನ್ನುವ ಆರೋಪ ಕೇಳಿ ಬಂದಿತ್ತು. ರೇಣುಕಾಸ್ವಾಮಿ ಅವರ ಕುಟುಂಬವೂ ಇಷ್ಟು ದಿನಗಳ ಕಾಲ ಕಣ್ಣೀರಿನಲ್ಲೇ ಕೈತೊಳೆದಿತ್ತು. ಇದೀಗ ರೇಣುಕಾಸ್ವಾಮಿ ಅವರ ಮಗನ ನಾಮಕರಣಕ್ಕೆ ಸಂಬಂಧಿಸಿದಂತೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಭಾನುವಾರ ಮೃತ ರೇಣುಕಾಸ್ವಾಮಿ ಅವರ ಪುತ್ರ ನಾಮಕರಣ ಸಮಾರಂಭವಿದ್ದು, ಈಗಾಗಲೇ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಅವರು ಜೈಲು ಸೇರಿದ್ದರು. ಇದೀಗ ಜೈಲಿನಿಂದ ಬಿಡುಗಡೆಯಾಗಿರುವ ನಟ ದರ್ಶನ್ ಅವರು ಹೊಸ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ನಟ ದರ್ಶನ್ ಅವರು ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದು. ಆರೋಗ್ಯ ಈಗಷ್ಟೇ ಚೇತರಿಸುತ್ತಿದೆ. ಅಲ್ಲದೆ ಅವರು ಸಿನಿಮಾ ರಂಗಕ್ಕೆ ಮರಳುವ ನಿಟ್ಟಿನಲ್ಲಿ ಭರ್ಜರಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಅತ್ತ ಈ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಪವಿತ್ರಾ ಗೌಡ ಅವರು ಸಹ ಅವರ ಹಳೆಯ ಉದ್ಯಮವನ್ನು ಪುನರಾರಂಭಿಸಿದ್ದು, ಹೊಸ ಜೀವನ ಕಟ್ಟಿಕೊಳ್ಳುತ್ತಿದ್ದಾರೆ. ಇದೀಗ ಮೃತ ರೇಣುಕಾಸ್ವಾಮಿ ಅವರ ಮನೆಯಲ್ಲೂ ಸಂಭ್ರಮದ ಕಾರ್ಯಕ್ರಮ ನಡೆಯುತ್ತಿದೆ. ರೇಣುಕಾಸ್ವಾಮಿ ಮೃತಪಟ್ಟ ಮೇಲೆ ನಡೆಯುತ್ತಿರುವ ಮೊದಲ ಶುಭ ಕಾರ್ಯಕ್ರಮ ಇದಾಗಿದೆ.

ರೇಣುಕಾಸ್ವಾಮಿ ಮೃತಪಟ್ಟ ಸಂದರ್ಭದಲ್ಲಿ ಅವರ ಪತ್ನಿ 5 ತಿಂಗಳ ಗರ್ಭಿಣಿಯಾಗಿದ್ದರು. ರೇಣುಕಾಸ್ವಾಮಿಯನ್ನು ನಟ ದರ್ಶನ್ ಹಾಗೂ ಅವರ ಗ್ಯಾಂಗ್ ಬರ್ಬರವಾಗಿ ಹಲ್ಲೆ ಮಾಡಿ ಹತ್ಯೆ ಮಾಡಿತ್ತು ಎನ್ನುವ ಆರೋಪ ಕೇಳಿ ಬಂದಿತ್ತು. 2024ನೇ ಸಾಲಿನಲ್ಲಿ ಅಕ್ಟೋಬರ್ 16ಕ್ಕೆ ರೇಣುಕಾಸ್ವಾಮಿ ಅವರ ಪತ್ನಿ ಸಹನಾ ಎನ್ನುವವರು ಗಂಡು ಮಗುವಿಗೆ ಜನ್ಮ ಕೊಟ್ಟಿದ್ದರು.
ನಾಮಕರಣದ ಸಂಭ್ರಮ: ರೇಣುಕಾಸ್ವಾಮಿ ಮೃತಪಟ್ಟ ಮೇಲೆ ರೇಣುಕಾಸ್ವಾಮಿ ಅವರ ಕುಟುಂಬವು ಕಣ್ಣೀರಿನಲ್ಲಿ ಕೈತೊಳೆದಿತ್ತು. ಇದೀಗ ರೇಣುಕಾಸ್ವಾಮಿ ಅವರ ಮಗುವಿಗೆ 5 ತಿಂಗಳು ತುಂಬಿದ್ದು, ಅವರ ಕುಟುಂಬ ನಾಮಕರಣ ಮಾಡುವುದಕ್ಕೆ ಮುಂದಾಗಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ನಿವಾಸದಲ್ಲೇ ಶುಭ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಲಾಗಿದೆ.
ರೇಣುಕಾಸ್ವಾಮಿ ಪುತ್ರನ ಹೆಸರೇನು ?
ಇನ್ನು ರೇಣುಕಾಸ್ವಾಮಿ ಅವರ ಪುತ್ರನಿಗೆ ಯಾವ ಹೆಸರು ಇಡಲಿದ್ದಾರೆ ಎನ್ನುವ ಕುತೂಹಲವಿದೆ. ರೇಣುಕಾಸ್ವಾಮಿ ಅವರ ಮನೆಯಲ್ಲಿ ಈಗಾಗಲೇ ನಾಮಕರಣ ಶಾಸ್ತ್ರಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಇಷ್ಟು ದಿನಗಳಿಂದ ಶೋಕ ಸಾಗರದಲ್ಲಿ ಮುಳುಗಿದ್ದ ಕುಟುಂಬದಲ್ಲಿ ಇದೀಗ ಮೊದಲ ಬಾರಿ ಶುಭ ಸಮಾರಂಭವೊಂದು ನಡೆಯುತ್ತಿದೆ.
ರೇಣುಕಾಸ್ವಾಮಿ ಪುತ್ರನಿಗೆ ಶಶಿಧರ .. ಎಂದು ನಾಮಕರಣ
ಇನ್ನು ರೇಣುಕಾಸ್ವಾಮಿ ಮಗನಿಗೆ ಭಾನುವಾರ ನಾಮಕರಣ ಮಾಡಲಾಗಿದ್ದು. ಶಶಿಧರ ಸ್ವಾಮಿ ಎಂದು ನಾಮಕರಣ ಮಾಡಲಾಗಿದೆ. ರೇಣುಕಾಸ್ವಾಮಿ ಅವರ ತಂಗಿ ಸುಚೇತ ಅವರು ರೇಣುಕಾಸ್ವಾಮಿ ಪುತ್ರನಿಗೆ ನಾಮಕರಣ ಮಾಡಿರುವ ಫೋಟೋಗಳು ವೈರಲ್ ಆಗಿವೆ. ಮಗುವಿನ ಕಿವಿಯಲ್ಲಿ ಮೂರು ಬಾರಿ ಶಶಿಧರ ಸ್ವಾಮಿ ಎಂದು ಹೇಳಿ ಹೆಸರನ್ನು ಇಟ್ಟಿದ್ದಾರೆ. ಇನ್ನು ಈ ಶುಭ ಸಮಾರಂಭದಲ್ಲಿ ರೇಣುಕಾಸ್ವಾಮಿ ಅವರ ತಂದೆ ಶಿವನಗೌಡ್ರು ಹಾಗೂ ತಾಯಿ ರತ್ನಪ್ರಭ ಸೇರಿದ್ದಂತೆ ತೀರ ಆತ್ಮೀಯರು ಭಾಗವಹಿಸಿದ್ದರು.
ಸರಳ ಸಮಾರಂಭ: ಇನ್ನು ನಾಳೆ ರೇಣುಕಾಸ್ವಾಮಿ ಮನೆಯಲ್ಲಿ ಸರಳ ಸಮಾರಂಭ ನಡೆದಿದೆ. ಈ ಸರಳ ಸಮಾರಂಭದಲ್ಲಿ ಶಶಿಧರ ಸ್ವಾಮಿ ಎಂದು ನಾಮಕರಣ ಮಾಡಲಾಗಿದೆ.












Click it and Unblock the Notifications