Darshan Thoogudeepa: ಇಂದು ಕೋರ್ಟ್‌ನಲ್ಲಿ ನಟ ದರ್ಶನ್‌ ಭವಿಷ್ಯ ನಿರ್ಧಾರ: ಮತ್ತೆ ದಾಸನಿಗೆ ಜೈಲೇ ಗತಿ?

ಬೆಂಗಳೂರು, ಜುಲೈ 18: ನಟಿ ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್ ಮಾಡಿದ ಚಿತ್ರದುರ್ಗದ ರೇಣುಕಾ ಸ್ವಾಮಿಯನ್ನು ಕೊಲೆ ಮಾಡಿದ ಆರೋಪದ ಹಿನ್ನೆಲೆ ನಟ ದರ್ಶನ್ ಹಾಗೂ ಗ್ಯಾಂಗ್​ನ ಅರೆಸ್ಟ್ ಮಾಡಲಾಗಿದೆ. ಸದ್ಯ ದರ್ಶನ್ ಹಾಗೂ ಗ್ಯಾಂಗ್‌ ನ್ಯಾಯಾಂಗ ಬಂಧನದಲ್ಲಿ ಇದ್ದು, ಇಂದು (ಜುಲೈ 18) ನ್ಯಾಯಾಂಗ ಬಂಧನದ ಅವಧಿ ಪೂರ್ಣಗೊಳ್ಳಲಿದೆ. ಹೀಗಾಗಿ ನ್ಯಾಯಾಧೀಶರ ಎದುರು ಹಾಜರು ಪಡಿಸಲಾಗುತ್ತಿದೆ.

ನಟ ದರ್ಶನ್ ಹಾಗೂ ಗ್ಯಾಂಗ್‌ ರೇಣುಕಾಸ್ವಾಮಿ ಕೊಲೆ ಕೇಸ್‌ ನಲ್ಲಿ ಜೂನ್ 11ರಂದು ಬಂಧನಕ್ಕೆ ಒಳಗಾದರು. ಬಂಧನದ ಬಳಿಕ ಹಲವಾರು ಸತ್ಯಾಂಶಗಳು ಹೊರ ಬರುತ್ತಿದೆ. ಇನ್ನೂ ಚಾರ್ಜ್​ಶೀಟ್ ಸಲ್ಲಿಕೆ ಮಾಡಿಲ್ಲ. ಇದೇ ಕಾರಣ ಇಟ್ಟುಕೊಂಡು ನಟ ದರ್ಶನ್ ಅವರ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆಗೆ ಕೋರಲು ನಿರ್ಧರಿಸಲಾಗಿದೆ. ಆರೋಪಿಗಳನ್ನು ಜಡ್ಜ್​ ಮುಂದೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಹಾಜರುಪಡಿಸಲು ನಿರ್ಧರಿಸಲಾಗಿದೆ.ಇಂದು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಿದ್ದು, ನ್ಯಾಯಾಂಗ ಬಂಧನದ ಅವಧಿ ಮತ್ತೆ ವಿಸ್ತರಣೆ ಆಗೋ ಸಾಧ್ಯತೆ ಇದೆ.

Darshan And Gang Judicial Custody Ends Today

ನಟ ದರ್ಶನ್‌ ಕುರಿತು ಪೊಲೀಸರ ವಾದ ಏನು?

ನಟ ದರ್ಶನ್ ಅವರು ಒಬ್ಬ ಪ್ರಭಾವಿ ವ್ಯಕ್ತಿ. ರಾಜಕೀಯ ಗಣ್ಯರು ಸೇರಿದಂತೆ ಸಿನಿಮಾ ರಂಗದಲ್ಲೂ ಸಹ ದೊಡ್ಡ ದೊಡ್ಡ ವ್ಯಕ್ತಿಗಳ ಜೊತೆಗೆ ಉತ್ತಮ ಸಂಬಂಧವನ್ನ ಹೊಂದಿದ್ದಾರೆ. ಒಂದು ವೇಳೆ ಅವರಿಗೆ ಜಾಮೀನು ಸಿಕ್ಕರೆ ಹೊರ ಬಂದು ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಎಂದು ಪೊಲೀಸರು ಕೋರ್ಟ್ ಎದುರು ಆತಂಕ ಹೊರಹಾಕಲಿದ್ದಾರೆ. ಇದರ ಜೊತೆಗೆ ಅವರು ವಿದೇಶಕ್ಕೆ ತೆರಳುವ ಭಯವೂ ಇದೆ ಎಂದು ಪೊಲೀಸರು ಹೇಳಿದ್ದಾರೆ.

ಮನೆ ಊಟಕ್ಕೆ ಬೇಡಿಕೆ

ಜೈಲು ಊಟ ಸೇವಿಸಿದ್ದರಿಂದ ದರ್ಶನ್​ ಅವರಿಗೆ ಏನೆಲ್ಲ ಸಮಸ್ಯೆಗಳು ಆಗಿವೆ ಎಂಬುದನ್ನು ನ್ಯಾಯಾಲಯಕ್ಕೆ ವಕೀಲರು ವಿವರಿಸಿದ್ದರು. ಆ ಬಗ್ಗೆ ತಪಾಸಣೆ ನಡೆಸುವಂತೆ ಜೈಲಿನ ವೈದ್ಯರಿಗೆ ನ್ಯಾಯಾಲಯ ಸೂಚನೆ ನೀಡಿತ್ತು. ವೈದ್ಯರು ನೀಡುವ ವರದಿಯ ಆಧಾರದ ಮೇಲೆ ದರ್ಶನ್​ಗೆ ಮನೆ ಊಟ ತರಿಸಲು ಕೋರ್ಟ್​ ಅನುಮತಿ ಎಂಬುದು ಸದ್ಯಕ್ಕೆ ಸಾಕಷ್ಟು ಕುತೂಹಲವನ್ನ ಮೂಡಿಸಿದೆ.

ಅಲ್ಲದೇ ಮನೆ ಊಟ ಕಲ್ಪಿಸುವಂತೆ ಕೋರಿ ರಿಟ್ ಅರ್ಜಿಯೂ ಇಂದು ವಿಚಾರಣೆ ನಡೆಯಲಿದೆ. ನಟ ದರ್ಶನ್ ಅರ್ಜಿಗೆ ಜೈಲು ಅಧಿಕಾರಿಗಳು ಆಕ್ಷೇಪಣೆ ಸಲ್ಲಿಸಲಿದ್ದಾರೆ. ಪ್ರಕರಣದ ತನಿಖಾಧಿಕಾರಿಗಳಿಂದಲೂ ಆಕ್ಷೇಪಣೆ ಸಲ್ಲಿಸುವ ಸಾಧ್ಯತೆ ಇದೆ. ಮಧ್ಯಾಹ್ನದ ಬಳಿಕ ನಟ ದರ್ಶನ್ ರಿಟ್ ಅರ್ಜಿ ವಿಚಾರಣೆ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+