ಆಸ್ಪತ್ರೆಯಲ್ಲಿ ವಿದ್ಯುತ್ ಇಲ್ಲದೆ ವೈದ್ಯರ ಪರದಾಟ: ಇದು ಕಾಂಗ್ರೆಸ್ಸಿನ ಕತ್ತಲೆ ಭಾಗ್ಯವೆಂದ ಬಿಜೆಪಿ
ಕರ್ನಾಟಕದಲ್ಲಿನ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದಿದೆ. ಕಾಂಗ್ರೆಸ್ ಗ್ಯಾರಂಟಿಗಳನ್ನು ನೀಡಿ ಜನರ ಮನ ಗೆದ್ದಿದೆ. ಆದರೆ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ವಿದ್ಯುತ್ ಇಲ್ಲದೆ, ಮೊಬೈಲ್ ಫ್ಲ್ಯಾಶ್ ಲೈಟ್‌ನಲ್ಲಿ ಚಿಕಿತ್ಸೆ ನೀಡುತ್ತಿರುವ ವಿಡಿಯೋ ಸಾಮಾಜಿಕ ತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ.
ಈ ವಿಡಿಯೋ ಹಾಗೂ ಫೋಟೋಗಳನ್ನು ಹಂಚಿಕೊಂಡಿರುವ ಬಿಜೆಪಿ ಇದು ಕಾಂಗ್ರೆಸ್ ಸರ್ಕಾರದಿಂದ ರೋಗಿಗಳಿಗೆ ಕತ್ತಲೆ ಭಾಗ್ಯ ಎಂದು ಹೇಳಿದೆ. ಸಖತ್ ವೈರಲ್ ಆಗುತ್ತಿರುವ ಈ ವಿಡಿಯೋ ಚಿತ್ರದುರ್ಗದ ಸರ್ಕಾರಿ ಆಸ್ಪತ್ರೆಯದ್ದಾಗಿದೆ. ಜಿಲ್ಲೆಯ ಮೊಳಕಾಲ್ಮುರು ಪಟ್ಟಣದ ಆಸ್ಪತ್ರೆಯಲ್ಲಿ ರೋಗಿಗಳಿಗೆ ಕರೆಂಟ್ ಇಲ್ಲದೆ ವೈದ್ಯರು ಮೆಣದಬತ್ತಿ ಹಚ್ಚಿ, ಮೊಬೈಲ್ ಫ್ಲ್ಯಾಶ್ ಸಹಾಯದಿಂದ ಚಿಕಿತ್ಸೆ ನೀಡುತ್ತಿದ್ದಾರೆ. ಈ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಮಳೆ ಆಗುತ್ತಿದ್ದು, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಹೀಗಾಗಿ ಇಲ್ಲಿ ಜನರು ವಿದ್ಯುತ್ ಕಣ್ಣಾ ಮುಚ್ಚಾಲೆಗೆ ಬೇಸತ್ತಿದ್ದಾರೆ.

ವಿದ್ಯುತ್ ಇಲ್ಲದೆ ಪರದಾಟ
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ಪಟ್ಟಣದ 100 ಹಾಸಿಗಿಗಳ ಸರ್ಕಾರಿ ಆಸ್ಪತ್ರೆಯ ಪರಿಸ್ಥಿತಿ ಇದಾಗಿದೆ. ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರು ಹಾಗೂ ನರ್ಸ್‌ಗಳು ಮೆಣದ ಬತ್ತಿ ಮೊಬೈಲ್ ಮೊರೆ ಹೋಗಿರುವುದು ಸಾಮಾನ್ಯವಾಗಿದ್ದು, ಸ್ಥಳೀಯರು ಸರ್ಕಾರದ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ.
ಬಿಜೆಪಿ ಕಿಡಿ
ಕಳೆದ ಒಂದು ವಾರದಿಂದ ಈ ಭಾಗದಲ್ಲಿ ವಿದ್ಯುತ್ ಅಭಾವ ಎದುರಾಗಿದೆ. ರಾಜ್ಯ ಸರ್ಕಾರ'ಗೃಹ ಜ್ಯೋತಿ' ಅಡಿಯಲ್ಲಿ ಮನೆಗಳಿಗೆ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡುವ ಆಡಳಿತಾರೂಢ ಕಾಂಗ್ರೆಸ್‌ನ ಗ್ಯಾರಂಟಿ ವಿರುದ್ಧ ವಿರೋಧ ಪಕ್ಷ ಬಿಜೆಪಿ ಕಿಡಿ ಕಾರಿದೆ. ಬಿಜೆಪಿ ಇದನ್ನು ಕತ್ತಲು ಭಾಗ್ಯ, ಕಾಂಗ್ರೆಸ್‌ನ ಇನ್ನೊಂದು ಗ್ಯಾರಂಟಿ ಎಂದು ಹೇಳಿದೆ. ಬಿಜೆಪಿ ಈ ಕುರಿತಾದ ವಿಡಿಯೋ ಒಂದನ್ನು ಸಹ ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದೆ.
ಒಂದು ವರ್ಷದ ಗ್ಯಾರಂಟಿ ಕತ್ತಲು ಭಾಗ್ಯ ಇದು ವರ್ಷದ ಸಂಭ್ರಮಾಚರಣೆಯಲ್ಲಿರುವ @INCKarnataka ದ ಉಡುಗೊರೆ!@siddaramaiah ಸರ್ಕಾರ ಇಂದು ಆಸ್ಪತ್ರೆಗಳಿಗೂ ಕರೆಂಟ್ ಪೂರೈಸದಷ್ಟು ಹೀನಾಯ ಸ್ಥಿತಿಗೆ ಬಂದು ತಲುಪಿದೆ.
— BJP Karnataka (@BJP4Karnataka) May 21, 2024
ಖಜಾನೆ ಖಾಲಿ, ವಿದ್ಯುತ್ ಖಾಲಿ !
ಇದು ಖಚಿತನೇ ಉಚಿತನೇ ನಿಶ್ಚಿತನೇ ಚಿಪ್ಪು ಚೊಂಬು!#CongressFailsKarnataka pic.twitter.com/GFzLXa3c8y
ಬಿಜೆಪಿ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ರೋಗಿಗಳಿಗೆ ವೈದ್ಯರು ಮೊಬೈಲ್ ಫ್ಲಾಶ್ ಲೈಟ್ ಬಳಸಿ ಚಿಕಿತ್ಸೆ ನೀಡುತ್ತಿರುವುದು ಕಂಡು ಬಂದಿದೆ. ಬರೀ ಆಸ್ಪತ್ರೆ ಅಷ್ಟೇ ಅಲ್ಲ ಔಷಧದ ಅಂಗಡಿಯಲ್ಲೂ ಕರೆಂಟ್ ಇಲ್ಲದೆ ಮೊಬೈಲ್ ಫ್ಲಾಶ್ ಮೆಣದ ಬತ್ತಿ ಬಳೆಸಲಾಗುತ್ತಿದೆ.
ಕತ್ತಲೆ ಭಾಗ್ಯ
ಈ ಘಟನೆಯನ್ನು ಬಿಜೆಪಿ ಖಂಡಿಸಿದೆ. ಅಲ್ಲದೆ ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ ಕಾಂಗ್ರೆಸ್ ಸರ್ಕಾರ ಮನೆಗಳಿಗೆ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡುವ ಸರ್ಕಾರದ ಯೋಜನೆಗೆ ಹಿಡಿದ ಕೈಗನ್ನಡಿಯಾಗಿದೆ. ಇದನ್ನು ಬಿಜೆಪಿ 'ಕತ್ತಲೆ ಭಾಗ್ಯ' ಎಂದು ಕರೆದಿದೆ. ಅಲ್ಲದೆ ಒಂದು ವರ್ಷದ ಸಂಭ್ರಮಾಚರಣೆಯಲ್ಲಿರುವ ಕಾಂಗ್ರೆಸ್ ಸರ್ಕಾರದ ಉಡುಗೊರೆ ಆಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಆಸ್ಪತ್ರೆಗೆ ವಿದ್ಯುತ್ ಪೂರೈಸದಷ್ಟು ಹೀನಾಯ ಪರಿಸ್ಥಿತಿಗೆ ತಲುಪಿದೆ. ಖಜಾನೆ ಖಾಲಿ, ವಿದ್ಯುತ್ ಖಾಲಿ ! ಇದು ಖಚಿತನೇ ಉಚಿತನೇ ನಿಶ್ಚಿತನೇ ಚಿಪ್ಪು ಚೊಂಬು!'' ಎಂದು ವ್ಯಂಗ್ಯ ಮಾಡಿದೆ.












Click it and Unblock the Notifications