ನೆಹರು ಬಗ್ಗೆ ನೀಡಿದ್ದ ವಿವಾದಿತ ಹೇಳಿಕೆಗೆ ಕ್ಷಮೆ ಕೋರಿದ ದಲೈಲಾಮಾ
Recommended Video

ನೆಹರು ಬಗ್ಗೆ ನೀಡಿದ್ದ ವಿವಾದಿತ ಹೇಳಿಕೆಗೆ ಕ್ಷಮೆ ಕೋರಿದ ದಲೈಲಾಮಾ | Oneindia Kannada
ಬೆಂಗಳೂರು, ಆಗಸ್ಟ್ 10: ಮೊದಲ ಪ್ರಧಾನಿ ಜವಾಹರ್‌ಲಾಲ್ ನೆಹರು ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದ ಬೌದ್ದ ಗುರು ದಲೈಲಾಮಾ ಅವರು ತಮ್ಮ ಹೇಳಿಕೆಗೆ ಕ್ಷಮೆ ಕೋರಿದ್ದಾರೆ.
ಟಿಬೆಟಿಯನ್ ಸಮುದಾಯದವರು ಬೆಂಗಳೂರಿನಲ್ಲಿ ಇಂದು ಹಮ್ಮಿಕೊಂಡಿದ್ದ "ಧನ್ಯವಾದಗಳು ಕರ್ನಾಟಕ" ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದಲೈಲಾಮಾ ಅವರು ನನ್ನ ಹೇಳಿಕೆಯಿಂದ ವಿವಾದ ಸೃಷ್ಟಿಯಾಗಿದೆ, ನಾನು ತಪ್ಪಾಗಿ ಮಾತನಾಡಿದ್ದರೆ ಕ್ಷಮೆ ಇರಲಿ' ಎಂದು ಹೇಳಿದ್ದಾರೆ.
ಬುಧವಾರ ಗೋವಾದ ಮ್ಯಾನೆಜ್‌ಮೆಂಟ್ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ವೇಳೆ, 'ಮಹಾತ್ಮ ಗಾಂಧಿ ಅವರು, ಮೊಹಮ್ಮದ್ ಅಲಿ ಜಿನ್ನಾ ಪ್ರಧಾನಿ ಆಗಲಿ ಎಂದು ಬಯಸಿದ್ದರು, ಆದರೆ ನೆಹರು ಅವರ ಸಣ್ಣ ಮಟ್ಟಿಗಿನ ಸ್ವಾರ್ಥದಿಂದಾಗಿ ಅದು ಸಾಧ್ಯವಾಗಲಿಲ್ಲ' ಎಂದು ಅವರು ಹೇಳಿದ್ದರು.

ಗಾಂಧಿ ಅವರ ಆಸೆಯಂತೆ ಜಿನ್ನಾ ಪ್ರಧಾನಿ ಆಗಿದ್ದರೆ ಆಗ ದೇಶ ವಿಭಜನೆ ಆಗುತ್ತಿರಲಿಲ್ಲ, ಪಾಕಿಸ್ತಾನ ನಾವು ಒಟ್ಟಿಗೆ ಇರುತ್ತಿದ್ದೆವು ಎಂದು ದಲೈಲಾಮಾ ಹೇಳಿದ್ದರು. ಲಾಮಾ ಅವರ ಈ ಮಾತುಗಳು ವಿವಾದ ಸೃಷ್ಟಿಸಿದ್ದವು.












Click it and Unblock the Notifications