Get Updates
Get notified of breaking news, exclusive insights, and must-see stories!

Cyclone Effect: ಜೂ.11ರಿಂದ ಕರ್ನಾಟಕದ ಈ ಜಿಲ್ಲೆಗಳಿಗೆ ವ್ಯಾಪಕ ಮಳೆ, ಯೆಲ್ಲೋ ಅಲರ್ಟ್

ಬೆಂಗಳೂರು, ಜೂನ್ 08: ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾಗಿರುವ ಬಿಪರ್‌ಜಾಯ್ ಚಂಡಮಾರುತ ಪ್ರಭಾವವು ಕರಾವಳಿ ರಾಜ್ಯಗಳಲ್ಲಿ ಒಂದಾಗಿರುವ ಕರ್ನಾಟಕದ ಮೇಲೂ ಬೀರಿದೆ. ಮುಂದಿನ ಎರಡು ದಿನ ರಾಜ್ಯದಲ್ಲಿ ಹಗುರ ಮಳೆ ಕಂಡು ಬರಲಿದೆ. ಜೂನ್ 11ರಿಂದ ಮೂರು ದಿನ ಮಳೆ ಅಬ್ಬರ ಹೆಚ್ಚಿರಲಿದೆ. ಕೆಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಎಚ್ಚರಿಕೆ ಘೊಷಿಸಲಾಗಿದೆ.

ಅರಬ್ಬಿ ಸಮುದ್ರದ ಭಾಗದಲ್ಲಿ ವಾಯುಭಾರ ಕುಸಿತವು ಬೃಹತ್ ಚಂಡಮಾರುತವಾಗಿ ಬದಲಾಗಿದೆ. ಆದರೆ ಈ ಬಿಪರ್‌ಜಾಯ್ ಚಂಡಮಾರುತ ಆರಂಭಿಕ ಹಂತದಲ್ಲಿ ತುಸು ದುರ್ಬಲವಾಗಿದೆ. ಇತ್ತ ಕೇರಳ ರಾಜ್ಯ ಮುಂಗಾರು ಆಗಮನ ಸಹ ಆಗಿದೆ. ಇವೆರಡು ಕಾರಣದಿಂದ ವ್ಯಾಪಕ ಮಳೆ ಸಂಭವವಿದೆ.

Cyclone Effect On Karnataka: 3 Days From June 11 Very Heavy Rain Arrives in Many Districts

ಜೂನ್ 10ರವರೆಗೆ ರಾಜ್ಯದ ವಿವಿಧೆಡೆ ಹಗುರ ಇಲ್ಲವೇ ಸಾಧಾರಣ ಮಳೆ ಬರಲಿದೆ. ಜೂನ್ 11ರಿಂದ ಮೂರು ದಿನ ಕರಾವಳಿಯ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದಲ್ಲಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳಿಗೆ ಭಾರಿ ಮಳೆ ಬರಲಿದೆ. ಹೀಗಾಗಿ ಇಷ್ಟು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ರಾಜ್ಯದ ಇನ್ನುಳಿದ ಒಳನಾಡಿನ ಜಿಲ್ಲೆಗಳಾದ ಬಳ್ಳಾರಿ, ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ಚಾಮರಾಜನಗರ, ವಿಜಯನಗರ ಜಿಲ್ಲೆಗಳ ಹಲವೆಡೆ ಸಾಧಾರಣದಿಂದ ಧಾರಾಕಾರ ಮಳೆ ಬರುವ ಸಂಭವವಿದೆ.

ಇತ್ತ ಬಾಗಲಕೋಟೆ, ಬೆಳಗಾವಿ, ಧಾರವಾಡ, ವಿಜಯಪುರ, ಕೊಪ್ಪಳ, ಹಾವೇರಿ, ಗದಗ, ರಾಯಚೂರು, ಕಲಬುರಗಿ, ಯಾದಗಿರಿ, ಬೀದರ್ ಜಿಲ್ಲೆಗಳಲ್ಲಿ ಮೂರು ದಿನ ಹಗುರದಿಂದ ಸಾಧಾರಣವಾಗಿ ಮಳೆ ಆಗಮಿಸಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.

Cyclone Effect On Karnataka: 3 Days From June 11 Very Heavy Rain Arrives in Many Districts

ವಿವಿಧೆಡೆ ಮಳೆ ದಾಖಲು: ಬೆಂಗಳೂರಿಗೂ ಮಳೆ

ಈಗಾಗಲೇ ರಾಜ್ಯಾದ್ಯಂತ ಮಳೆ ಅಬ್ಬರ ಶುರುವಿಟ್ಟುಕೊಂಡಿದೆ. ಕಳೆದ 24 ಗಂಟೆಗಳಲ್ಲಿ ಯಾದಗಿರಿ, ಕಲಬುರಗಿ, ತುಮಕೂರು, ಬೆಂಗಳೂರು ನಗರ, ಮಂಗಳೂರು ಜಿಲ್ಲೆ ವ್ಯಾಪ್ತಿಯಲ್ಲಿ ಮಳೆಯಾಗಿದೆ. ಇನ್ನೂ ಕರಾವಳಿ ರಾಜ್ಯಗಳಾದ ಮಹಾರಾಷ್ಟ್ರ, ಗುಜರಾತ್ ರಾಜ್ಯದ ಹಲವು ಜಿಲ್ಲೆಗಳಲ್ಲೂ ವ್ಯಾಪಕ ಮಳೆ ದಾಖಲಾಗಿದೆ ಎಂದು ಐಎಂಡಿ ವರದಿಯಲ್ಲಿ ತಿಳಿಸಿದೆ.

ಇಂದು ಗುರುವಾರ ಸಂಜೆ ನಗರದಲ್ಲಿ ಮಳೆ ಆರಂಭವಾಗಿದ್ದು, ತಡರಾತ್ರಿವರೆಗೂ ಮುಂದುವರಿಯುವ ನಿರೀಕ್ಷೆ ಇದೆ. ಬೆಂಗಳೂರು ನಗರಕ್ಕೆ ಜೂನ್ 12ರವರೆಗೂ ವರುಣಾರ್ಭಟ ಮುಂದುವರಿಯಲಿದೆ. ಈ ವೇಳೆ ಕೆಲವೆಡೆ ಸಾಮಾನ್ಯದಿಂದ ಉತ್ತಮ ಮಳೆ ಬಂದರೆ, ಬಹುತೇಕ ಕಡೆ ಭಾರೀ ಮಳೆ ಬರಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+