CT Ravi: ‘ಸಿದ್ರಾಮುಲ್ಲಾ ಖಾನ್’ ಅಂತಿದ್ದ ಸಿಟಿ ರವಿ ಬಾಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬಗ್ಗೆ ಇದೆಂತಹ ಮಾತು?

ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿ ಲಾಕ್ ಆಗಿರುವ ಮಾನ್ಯ ಮಾಜಿ ಸಚಿವ ಸಿ.ಟಿ. ರವಿ ಮಾಡಿಕೊಂಡ ವಿವಾದಗಳು ಒಂದೆರಡಲ್ಲ. ಸಿ.ಟಿ. ರವಿ ಬಾಯಿ ಬಿಟ್ಟರೆ ಸಾಕು ಕಾಂಟ್ರವರ್ಸಿ ಗ್ಯಾರಂಟಿ ಅನ್ನುವಷ್ಟರ ಮಟ್ಟಿಗೆ ಆಕ್ರೋಶ ಮೊಳಗಿತ್ತು. ಹೀಗೆ, ಸಿ.ಟಿ. ರವಿ ವಿಚಾರ ದೊಡ್ಡ ಸಂಚಲನ ಸೃಷ್ಟಿ ಮಾಡಿದ್ದ ಸಮಯದಲ್ಲೇ 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮತದಾರರು ಮಕಾಡೆ ಮಲಗಿಸಿದ್ರು. ಹೀನಾಯ ಸೋಲು ಕಂಡ ಸಿ.ಟಿ. ರವಿ ಸ್ವಲ್ಪ ದಿನಗಳ ಕಾಲ ಸೈಲೆಂಟ್ ಆಗಿದ್ದರು!

ಸಿ.ಟಿ. ರವಿ 2023 ವಿಧಾನಸಭೆ ಚುನಾವಣೆ ಸಮಯದಲ್ಲಿ ಸೋತ ನಂತರ ಎಲ್ಲಾ ತಣ್ಣಗಾಗಿತ್ತು, ಅಲ್ಲದೆ ಕರ್ನಾಟಕ ಬಿಜೆಪಿ ನಾಯಕರೇ ಸಿಟಿ ರವಿ ಸೋಲಿಸಿದ್ದರು ಎಂಬ ಆರೋಪ ಕೇಳಿ ಬಂತು. ಸಿ.ಟಿ. ರವಿ ಇನ್ನೇನು ಗಪ್‌ಚುಪ್ ಆಗಿದ್ದಾರೆ ಬಿಡು ಅಂತಾನೇ ಎಲ್ಲರೂ ಅಂದುಕೊಂಡರು. ಆದರೆ ಮಾಜಿ ಸಿಎಂ ಯಡಿಯೂರಪ್ಪ ಅವರ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿದ್ದ ಸಿಟಿ ರವಿಗೆ ಬಿಜೆಪಿ ಒಳಗೆ ಸಿಕ್ಕಾಪಟ್ಟೆ ಬೆಂಬಲ ಇತ್ತು. ಇದೇ ಕಾರಣಕ್ಕೆ ಬಿಜೆಪಿ ಪಕ್ಷದ ದೊಡ್ಡ, ದೊಡ್ಡ ನಾಯಕರೇ ಸಿ.ಟಿ. ರವಿಗೆ ಬೆನ್ನೆಲುಬಾಗಿ ನಿಂತಿದ್ದರು.

CT Ravi Once Said This About Karnataka CM Siddaramaiah And Now CT Ravi Spoke About Lakshmi Hebbalkar

'ಸಿದ್ರಾಮುಲ್ಲಾ ಖಾನ್' ಅಂತಿದ್ದ ಸಿ.ಟಿ. ರವಿ!

ಈ ನಡುವೆ ಹೇಗಾದ್ರೂ ಮಾಡಿ ಮತ್ತೆ ಸಿ.ಟಿ. ರವಿಗೆ ಕರ್ನಾಟಕದಲ್ಲಿ ಉನ್ನತವಾದ ರಾಜಕೀಯ ಸ್ಥಾನಮಾನ ಸಿಗುವಂತೆ ಮಾಡಬೇಕು, ಎಂಬುದು ಬಿಜೆಪಿಯ ರಾಷ್ಟ್ರೀಯ ನಾಯಕರ ಉದ್ದೇಶ ಆಗಿತ್ತು. ಹೀಗಿದ್ದಾಗ, ಸಿ.ಟಿ. ರವಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಕೆಲವು ರಾಷ್ಟ್ರೀಯ ನಾಯಕರು. ಇಂತಿಪ್ಪ ಸಿ.ಟಿ. ರವಿ ಸಿದ್ದರಾಮಯ್ಯ ಅವರಿಗೆ 'ಸಿದ್ರಾಮುಲ್ಲಾ ಖಾನ್' ಅಂತಿದ್ದರು, ಆದರೆ ಈಗ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬಗ್ಗೆ ಇದೆಂತಹ ಮಾತು?

ಸಿಟಿ ರವಿಗೆ ಸಿದ್ದರಾಮಯ್ಯ ತಿರುಗೇಟು!

ಹೌದು, ಸಿದ್ದರಾಮಯ್ಯ ಅವರು ಮಾಜಿ ಸಿಎಂ ಆಗಿದ್ದ ಸಮಯದಲ್ಲಿ & ಸಿ.ಟಿ. ರವಿ ಸಚಿವ ಸ್ಥಾನದಲ್ಲಿ ಕೂತಿದ್ದ ಸಮಯದಲ್ಲಿ ದೊಡ್ಡ ಗಲಾಟೆಗಳು ನಡೆದಿದ್ದವು. ಮಾತು ಮಾತಿಗೆಲ್ಲ ಸಿದ್ದರಾಮಯ್ಯ ಅವರನ್ನು ಸಿ.ಟಿ. ರವಿ, 'ಸಿದ್ರಾಮುಲ್ಲಾ ಖಾನ್, ಸಿದ್ರಾಮುಲ್ಲಾ ಖಾನ್' ಅಂತಾ ಕರೆದು ದೊಡ್ಡ ವಿವಾದ ಎಬ್ಬಿಸಿದ್ದರು. ಈ ವಿಚಾರವಾಗಿ ಸಿದ್ದರಾಮಯ್ಯ & ಸಿ.ಟಿ. ರವಿ ನಡುವೆ ಮಾತಿನ ಮಹಾಯುದ್ಧವೇ ನಡೆದಿತ್ತು.

ಇಷ್ಟೆಲ್ಲದರ ನಡುವೆ 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸಿಟಿ ರವಿ ಸೋತು ಹೋದರು. ಆ ನಂತರ ಸಿದ್ದರಾಮಯ್ಯ ಅವರು ಸಿಎಂ ಆದರು, ಅಲ್ಲಿಂದ ಸೈಲೆಂಟ್ ಆಗಿದ್ದ ಸಿಟಿಆರ್ ಇದೀಗ ಸಚಿವೆ ಹೆಬ್ಬಾಳ್ಕರ್ ಅವರ ಕುರಿತು ಅಶ್ಲೀಲ ಪದ ಬಳಸಿ ಮಾತನಾಡಿರುವ ಆರೋಪದಲ್ಲಿ ಸಿಲುಕಿದ್ದಾರೆ. ಹೀಗಾಗಿ ಸಿಟಿ ರವಿ ಅವರಿಗೆ ದೊಡ್ಡ ಕಂಟಕ ಎದುರಾಗಬಹುದು ಎಂಬ ಆರೋಪ ಕೇಳಿ ಬಂದಿದ್ದು, ಮುಂದೆ ಏನಾಗುತ್ತೆ ಅಂತಾ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+