ಇಂಗ್ಲಿಷ್‌ನಲ್ಲಿ ಕಾಂಗ್ರೆಸ್ ವಿರುದ್ಧ ಸಿಟಿ ರವಿ ‘ತುಘಲಕ್’ ಅಟ್ಯಾಕ್!

ಬೆಂಗಳೂರು: ಸಿಟಿ ರವಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ಸರ್ಕಾರವನ್ನ 'ತುಘಲಕ್ ದರ್ಬಾರ್'ಗೆ ಹೋಲಿಸಿದ್ದಾರೆ. ಮೊನ್ನೆ ತಾನೆ ಸಿಎಂ ಸಿದ್ದರಾಮಯ್ಯಗೆ ವಿಶ್ ಮಾಡಿದ್ದ ಸಿಟಿ ರವಿ ಈಗ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕೆಂಡದಂತಹ ಮಾತು ಆಡಿದ್ದಾರೆ. ಹಾಗಾದ್ರೆ ಸಿಟಿ ರವಿ ಹೇಳಿದ್ದು ಏನು? ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಸಿಟಿ ರವಿಗೆ ಸಿಟ್ಟೇಕೆ? ತಿಳಿಯೋಣ ಬನ್ನಿ.

ಸತತ 4 ಬಾರಿ ಗೆದ್ದು ಶಾಸಕರಾಗಿದ್ದ ಸಿಟಿ ರವಿ, ಈ ಬಾರಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಹೀನಾಯ ಸೋಲನ್ನ ಕಂಡಿದ್ದರು. ಚುನಾವಣೆಗೂ ಮುನ್ನ ಸಿದ್ದರಾಮಯ್ಯ ಅವರನ್ನು 'ಸಿದ್ರಾಮುಲ್ಲಾ ಖಾನ್'... 'ಸಿದ್ರಾಮುಲ್ಲಾ ಖಾನ್'... ಎನ್ನುವ ಮೂಲಕ ಸುದ್ದಿಯಾಗಿದ್ದರು ಸಿಟಿ ರವಿ. ಆದರೆ ಮೊನ್ನೆ ಮೊನ್ನೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅವರಿಗೆ ಶುಭಾಶಯ ಕೋರಿ ಟ್ವೀಟ್ ಮಾಡಿದ್ದರು. ಆದರೆ ಈಗ ಮತ್ತೆ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಟ್ವೀಟ್ ಮಾಡಿ 'ತುಘಲಕ್ ದರ್ಬಾರ್'ಗೆ ಸಿದ್ದರಾಮಯ್ಯ ಆಡಳಿತವನ್ನ ಹೋಲಿಸಿದ್ದಾರೆ.

CT Ravi attacks Karnataka congress government

ಸಿದ್ದರಾಮಯ್ಯ ಸರ್ಕಾರದ ಬಗ್ಗೆ ಸಿಟಿ ರವಿ ಹೇಳಿದ್ದೇನು?

ಅಷ್ಟಕ್ಕೂ ಯಾವ ವಿಚಾರದ ಹಿನ್ನೆಲೆಯಲ್ಲಿ ಸಿಟಿ ರವಿ ಟ್ವೀಟ್ ಮಾಡಿ, ಸಿದ್ದರಾಮಯ್ಯ ಸರ್ಕಾರದ ತುಘಲಕ್ ಅಟ್ಯಾಕ್ ಮಾಡಿದ್ದಾರೆ ಎಂಬುದು ಸ್ಪಷ್ಟವಾಗದೇ ಇದ್ರೂ ತಮ್ಮ ಟ್ವೀಟ್ಟರ್ ಅಕೌಂಟ್‌ನಲ್ಲಿ 'ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ನಡೆಯುತ್ತಿರುವ ದರ್ಬಾರ್ ಬಗ್ಗೆ ತುಘಲಕ್ ಹೆಮ್ಮೆ ಪಡುತ್ತಿದ್ದರು!' ಎಂದು ಬರೆದುಕೊಂಡಿದ್ದಾರೆ. ಅದೂ ಇಂಗ್ಲಿಷ್‌ನಲ್ಲಿ ಟ್ವೀಟ್ ಮಾಡಿದ್ದು, 'Tughlaq would have been proud about the Durbar that is happening in Karnataka under the CONgress!' ಎಂದು ಟ್ವೀಟ್ ಮಾಡಿದ್ದಾರೆ ಸಿಟಿ ರವಿ.

'ಸಿದ್ರಾಮುಲ್ಲಾ ಖಾನ್' ಅಂತಿದ್ರು ಸಿಟಿ ರವಿ!

ಹೌದು, ಚುನಾವಣೆಗೆ ಮೊದಲು ಸಿದ್ದರಾಮಯ್ಯ ಕುರಿತು ಸಿಟಿ ರವಿ ಪದೇ ಪದೆ ವಾಗ್ದಾಳಿ ನಡೆಸುತ್ತಿದ್ದರು. ಈ ವೇಳೆ 'ಸಿದ್ರಾಮುಲ್ಲಾ ಖಾನ್'.. 'ಸಿದ್ರಾಮುಲ್ಲಾ ಖಾನ್'.. ಎಂದು ಕರೆಯುತ್ತಿದ್ದರು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಕೂಡ ಬಹಿರಂಗ ಸಮಾವೇಶಗಳಲ್ಲಿ ಪ್ರಸ್ತಾಪ ಕೂಡ ಮಾಡಿದ್ರು. ಆದ್ರೆ ದಿಢೀರ್ ಸಿಎಂ ಸಿದ್ದರಾಮಯ್ಯ ಅವರನ್ನ 'ಮಾನ್ಯ ಶ್ರೀ ಸಿದ್ದರಾಮಯ್ಯ' ಎಂದು ಕರೆದು ಮೊನ್ನೆ ಮೊನ್ನೆ ಸುದ್ದಿಯಾಗಿದ್ದರು. ಈ ನೋಡಿದರೆ ಮತ್ತೊಮ್ಮೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಶುರುಮಾಡಿದ್ದಾರೆ.

CT Ravi attacks Karnataka congress government

ಕನಕಪುರ ಕ್ಷೇತ್ರದಲ್ಲಿ 'ಅಮೇಥಿ' ಮಾತು!

ಸಿಎಂ ಸಿದ್ದರಾಮಯ್ಯ ವಿರುದ್ಧ ಮಾತ್ರವಲ್ಲ ಚುನಾವಣೆಗೆ ಮುನ್ನ ಪ್ರಚಾರಕ್ಕೆ ಅಂತಾ ಕನಕಪುರ ಕ್ಷೇತ್ರಕ್ಕೆ ಬಂದಾಗ ಅಮೇಥಿಯನ್ನೇ ಬಿಟ್ಟಿಲ್ಲ ಇನ್ನು ಕನಕಪುರ ಬಿಡ್ತೀವಾ? ಅಂತಾ ಡೈಲಾಗ್ ಬೇರೆ ಹೊಡೆದಿದ್ದರು ಸಿಟಿ ರವಿ. ಆದ್ರೆ ಅದು ಬರೀ ಡೈಲಾಗ್ ಆಗಿಯೇ ಉಳಿದು ಹೋಯ್ತು. ಈಗ ಮತ್ತೆ ಕಾಂಗ್ರೆಸ್ ನಾಯಕರ ವಿರುದ್ಧ ತಮ್ಮ ಎಂದಿನ ಶೈಲಿಯ ಮಾತುಗಳ ಮೂಲಕ ವಾಗ್ದಾಳಿ ಶುರು ಮಾಡಿದ್ದಾರೆ ಸಿಟಿ ರವಿ. ಟ್ವಿಟ್ಟರ್‌ನಲ್ಲಿ ರವಿ ಅವರ ಟ್ವೀಟ್ ಬಗ್ಗೆ ಪರ ವಿರೋಧದ ಚರ್ಚೆಗಳು ಶುರುವಾಗಿವೆ.

ಮುಂದಿನ ಸಿಎಂ ಆಗುವ ಗುರಿ!

ಹೌದು, ಸಿಟಿ ರವಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ತಮ್ಮದೇ ಹವಾ ಇಟ್ಟಿದ್ದರು. ಸಾಲು ಸಾಲು ಗೆಲುವಿನ ಮೂಲಕ ಈ ಬಾರಿ ಕೂಡ ಮತ್ತೆ ಆಯ್ಕೆಯಾಗುವ ವಿಶ್ವಾಸದಲ್ಲಿ ಸಿಟಿ ರವಿ ಇದ್ದರು. ಈ ಚುನಾವಣೆ ಸೇರಿ ಒಟ್ಟು 6 ಬಾರಿ ಸ್ಪರ್ಧೆ ಮಾಡಿದ್ದರು ಸಿಟಿ ರವಿ. ಸತತ 4 ಗೆಲುವು ರವಿ ಅವರಿಗೆ ಭಾರಿ ಶಕ್ತಿ ತುಂಬಿದ್ದು, ಈಗ ಕೂಡ ಅದೇ ರೀತಿ ಗೆಲ್ಲುತ್ತೇನೆ ಎಂಬ ಉತ್ಸಾಹದಲ್ಲಿ ಇದ್ದರು. ಆದರೆ ಸಿ.ಟಿ.ರವಿ ಆಪ್ತನೇ 5ನೇ ಗೆಲುವಿನ ಕನಸಿಗೆ ಕೊಳ್ಳಿ ಇಟ್ಟಿದ್ದು, ಕರ್ನಾಟಕದ ಮುಂದಿನ ಸಿಎಂ ಆಗುವ ಕನಸು ಕಂಡಿದ್ದ ಸಿಟಿ ರವಿಗೆ ಹಿನ್ನಡೆ ಮಾಡಿದೆ.

CT Ravi attacks Karnataka congress government

ಒಟ್ನಲ್ಲಿ ಸಿಟಿ ರವಿ ಅವರು ಮತ್ತೆ ಮತ್ತೆ ಸದ್ದು ಮಾಡುತ್ತಿದ್ದು, ಈಗ 'ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ನಡೆಯುತ್ತಿರುವ ದರ್ಬಾರ್ ಬಗ್ಗೆ ತುಘಲಕ್ ಹೆಮ್ಮೆ ಪಡುತ್ತಿದ್ದರು!' ಎನ್ನುವ ಮೂಲಕ ಹೊಸ ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ. ಆದರೆ ಈ ಬಗ್ಗೆ ಇನ್ನೂ ಕಾಂಗ್ರೆಸ್ ನಾಯಕರು ರಿಯಾಕ್ಷನ್ ಕೊಟ್ಟಿಲ್ಲ, ಆದರೆ ಮುಂದಿನ ದಿನಗಳಲ್ಲಿ ಅದಕ್ಕೆ ರಿಯಾಕ್ಷನ್ ಸಿಗಬಹುದೇನೋ ಗೊತ್ತಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+