Gruha Lakshmi: ಖಾತೆಗೆ ಜಮೆಯಾಗದ ₹5,000 ಕೋಟಿ ಎಲ್ಲಿ ಹೋಯ್ತು?: ಸರ್ಕಾರದ ಮೇಲೆ ಸಿಟಿ ರವಿ ವಂಚನೆ ಆರೋಪ

ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ರಾಜ್ಯ ಸರ್ಕಾರವು ದೀಪಾವಳಿಗೆ ಫಲಾನುಭವಿಗಳಿಗೆ ಮೂರು ಕಂತುಗಳ ಹಣ ಒಮ್ಮೆಲೆ ನೀಡಲುವುದಾಗಿ ತಿಳಿಸಿ ಖುಷಿ ಸುದ್ದಿ ನೀಡಿದೆ. ಇದರ ಬೆನ್ನಲ್ಲೇ ಇದೇ 'ಗೃಹ ಲಕ್ಷ್ಮಿ' ಯೋಜನೆ ಅಡಿಯಲ್ಲಿ ಸರ್ಕಾರ ಕಂತಿನ ಹಣದಲ್ಲಿ ₹5,000 ಕೋಟಿ ರೂ. ಹಣ ಲೂಟಿ ಹೊಡೆದಿದೆ, ದೊಡ್ಡ ಹಗರಣ ನಡೆದಿದೆ ಎಂದು ಬಿಜೆಪಿ ನಾಯಕ ಸಿ.ಟಿ. ರವಿ ಅವರು ಆರೋಪಿಸಿದ್ದಾರೆ.

ಗೃಹ ಲಕ್ಷ್ಮೀ ಯೋಜನೆಯಡಿ ಮಾಸಿಕ 2000 ರೂ. ಅನ್ನು ಅರ್ಹ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುತ್ತಿದೆ. ಆದರೆ 2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳುಗಳ ಒಟ್ಟಾರೆ 1.27 ಕೋಟಿ ಮಹಿಳಾ ಫಲಾನುಭವಿಗಳಿಗೆ ನೀಡಬೇಕಿದ್ದ ₹5,000 ಕೋಟಿ ' ಗೃಹ ಲಕ್ಷ್ಮಿ' ಯೋಜನೆಯ ಹಣವನ್ನು ಸರ್ಕಾರ ಬಿಡುಗಡೆ ಮಾಡಿಲ್ಲ. ಆ ಹಣ ಏನಾಯಿತು ಎಂದು ಅವರು ಎಕ್ಸ್ ನಲ್ಲಿ ಪ್ರಶ್ನಿಸಿದ್ದಾರೆ.

Gruha Lakshmi Scheme

ಇದೇ ವಿಚಾರವನ್ನು ಹಿಂದಿನ ಕರ್ನಾಟಕ ವಿಧಾನಸಭೆ ಅಧಿವೇಶಣದಲ್ಲಿ ಪ್ರಶ್ನಿಸಲಾಯಿತು. ಆಗ ರಾಜ್ಯ ಸರ್ಕಾರವು 'ಸರ್ವರ್ ಸಮಸ್ಯೆ'ಗಳಿದ್ದವು. ಅದಕ್ಕಾಗಿ ಹಣ ತಡವಾಗಿದೆ ಎಂದು ನೆಪ ಹೇಳಿತು. ಮತ್ತೊಂದು ಹೈಕೋರ್ಟ್‌ನಲ್ಲಿ ಗೃಹ ಲಕ್ಷ್ಮೀ ಹಣ ವಿಳಂಬ, ತಡೆ ಹಿಡಿದಿರುವುದಕ್ಕೆ 'ತೀವ್ರ ಆರ್ಥಿಕ ಸಂಕಷ್ಟ'ವೇ ಕಾರಣ ಎಂದು ಮಾಹಿತಿ ಒದಗಿಸಿತ್ತು. ಈ ಕಾಂಗ್ರೆಸ್ ಸರ್ಕಾರವು ವಿಧಾನಸಭೆಯಲ್ಲಿ ಒಂದು ರೀತಿಯ ವಿವರಣೆ ನೀಡಿದರೆ, ನ್ಯಾಯಾಲಯದಲ್ಲಿ ಮತ್ತೊಂದು ರೀತಿಯ ವಿವರಣೆ ನೀಡಿದೆ ಎಂದು ಅವರು ಆಕ್ರೋಶ ಹೊರ ಹಾಕಿದರು.

ಯೋಜನೆಯ ಫಲಾನುಭವಿಗಳು ತಮಗೆ ಸಿಗಬೇಕಾದ ಸೌಲಭ್ಯಗಳು ಸಿಗದಿದ್ದಾಗ, ಅದನ್ನು ಪ್ರಶ್ನಿಸುವ ಹಕ್ಕು ಅವರಿಗಿದೆ ಎಂದೆಲ್ಲ ರಾಜ್ಯ ಸರ್ಕಾರ ವಾದಿಸಿತ್ತು. ಹಣ ವ್ಯರ್ಥವಾಗುವುದನ್ನು ತಪ್ಪಿಸಲು, 2025ರ ಮಾರ್ಚ್ 31ರಂದು, ಸಾರ್ವಜನಿಕರ 2,660 ಕೋಟಿ ರೂಪಾಯಿಯನ್ನು ಖಜಾನೆಯ ಡಿಬಿಟಿ (DBT) ವ್ಯವಸ್ಥೆಯಿಂದ ಕೆಎಸ್‌ಡಬ್ಲ್ಯೂಡಿಸಿ (KSWDC) ನಿಗಮದ ವಾಣಿಜ್ಯ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿದೆ. ಈ ಮಾಡಿದ್ದೇಕೆ? ಇದರಿಂದ ಸರ್ಕಾರವೇ ಆರ್ಥಿಕ ನಿಯಮಗಳನ್ನು ಉಲ್ಲಂಘಿಸಿದಂತಾಗಿದೆ ಎಂದು ಅವರು ವಿವರಿಸಿದ್ದಾರೆ.

₹5,000 ಕೋಟಿ ಖಾತೆಗೆ ಜಮೆಗೆ ಆಗ್ರಹ

ಯೋಜನೆ, ಹಣದ ಕುರಿತು ವಿಧಾನಸಭೆಯಲ್ಲಿ ವಿವಿಧ ನೆಪಗಳನ್ನು ಹೇಳಿ ಸಬೂಬು ನೀಡಿದ್ದ ಕಾಂಗ್ರೆಸ್ ಸರ್ಕಾರ, ಇದೀಗ ಹೈಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತನ್ನ ತಪ್ಪನ್ನು ಸರ್ಕಾರ ಒಪ್ಪಿಕೊಂಡಿದೆ. 'ಗೃಹ ಲಕ್ಷ್ಮಿ' ಯೋಜನೆಯ ಹೆಸರಿನಲ್ಲಿ, ಸರ್ಕಾರವು ಕರ್ನಾಟಕದ ತಾಯಂದಿರಿಗೆ ₹5,000 ಕೋಟಿ ವಂಚಿಸಿದೆ. ಬಾಕಿ ಇರುವ ಯಾವುದೇ ಕಂತು ಬಿಡದೇ ಎಲ್ಲ ಹಣವ ತಕ್ಷಣವೇ ಫಲಾನುಭವಿಗಳ ಖಾತೆಗೆ ಜಮೆ ಮಾಡುವಂತೆ ಅವರು ಆಗ್ರಹಿಸಿದ್ದಾರೆ.

ಯಾವುದೇ ವಿಷಯದಲ್ಲೂ ತಪ್ಪಿಸಲುಕೊಳ್ಳಲು ಕಾಂಗ್ರೆಸ್ ಸರ್ಕಾರವನ್ನು ಬಿಡುವುದಿಲ್ಲ. ಬಿಜೆಪಿ ಪಕ್ಷವು ಕರ್ನಾಟಕದ ಮಹಿಳೆಯರ ಪರ ನಿಲ್ಲಲಿದೆ. ಫಲಾನುಭವಿಗಳಿಗೆ ಸಿಗಬೇಕಾದ ಪ್ರತಿಯೊಂದು ರೂಪಾಯಿಯೂ ತಲುಪುವವರೆಗೂ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಮೂರು ಕಂತಿನ ಹಣ ಒಟ್ಟಿಗೆ ಬಿಡುಗಡೆ

ಗೃಹ ಲಕ್ಷ್ಮೀ ಫಲಾನುಭವಿಗಳಿಗೆ ಈಗಾಗಲೇ 33ನೇ ಕಂತಿನ ಹಣ ಸಿಕ್ಕಿದೆ. ನಂತರದ 34, 35 ಮತ್ತು 36ನೇ ಕಂತಿನ 7,405 ಕೋಟಿ ರೂ. ಹಣವನ್ನು ಒಟ್ಟಿಗೆ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಸಿಎಂ ಡಿಕೆ ಶಿವಕುಮಾರ್ ಹಣ ಬಿಡುಗಡೆ ಮಾಡುವ ಬಗ್ಗೆ ರಾಜ್ಯ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಅವರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+