ಕೆಪಿಜೆಪಿಯಲ್ಲಿ ಕಿರಿಕ್, ರಿಯಲ್ ಸ್ಟಾರ್ ಉಪೇಂದ್ರ ಉಚ್ಚಾಟನೆ?
ಬೆಂಗಳೂರು, ಮಾರ್ಚ್ 05 : ಭಾರಿ ನಿರೀಕ್ಷೆಯಿಂದ ಸ್ಥಾಪನೆಯಾಗಿದ್ದ ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷ (ಕೆ.ಪಿ.ಜೆ.ಪಿ ) ದಲ್ಲಿ ಭಿನ್ನಮತ ಸ್ಫೋಟಗೊಂಡಿದೆ.
ಮಾರ್ಚ್ 06ರಂದು ಪರೀಕ್ಷೆ ಫಲಿತಾಂಶ ಹೊರಬೀಳಲಿದೆ ಎಂದು ರಿಯಲ್ ಸ್ಟಾರ್ ಉಪೇಂದ್ರ ಟ್ವೀಟ್ ಮಾಡಿದ್ದರು. ಆದರೆ, ಇದಕ್ಕೂ ಮುನ್ನವೇ ಭಿನ್ನಮತದ ಮಾಹಿತಿ ಸೋರಿಕೆಯಾಗಿದೆ.

ಟಿಕೆಟ್ ಹಂಚಿಕೆ, ಸಮಿತಿ ರಚನೆ ವಿಷಯವಾಗಿ ಉಪೇಂದ್ರ ಅವರು ಯಾರೊಂದಿಗೂ ಮಾತನಾಡಿಲ್ಲ. ತಮ್ಮ ಅಭಿಪ್ರಾಯದಂತೆ ನಡೆಯುತ್ತಿದ್ದಾರೆ ಎಂದು ಕೋರ್ ಕಮಿಟಿಯ ಸದಸ್ಯರು ದೂರಿದ್ದಾರೆ. ಕೆಪಿಜೆಪಿ ಸಂಸ್ಥಾಪಕ ಮಹೇಶ್ ಗೌಡ ಅವರು ಸಭೆ ಕರೆದಿದ್ದಾರೆ.
ಪ್ರಜಾಕೀಯ ಮತ್ತು ರಾಜಕೀಯದ ಬಹು ದೊಡ್ಡ ಪರೀಕ್ಷೆ ಇದೇ ತಿಂಗಳು 6 ನೇ ತಾರೀಖು ಬಹಿರಂಗ ಆಗುತ್ತದೆ ದಯವಿಟ್ಟು ಕಾದು ನೋಡಿ. ಉಪೇಂದ್ರ.
— Upendra (@nimmaupendra) March 3, 2018
ಈ ಪಕ್ಷ ನನ್ನೊಬ್ಬನ ಪರಿಶ್ರಮವಲ್ಲ, ಕಾರ್ಮಿಕರ ಸಂದರ್ಶನ ನೀಡಿ ಅದರ ಆಧಾರ ಮೇಲೆ ನಿರ್ಮಾಣಗೊಂಡಿರುವ ಪಕ್ಷವಾಗಿದೆ. ನಾಳೆ ಎಲ್ಲಾ ಅಭ್ಯರ್ಥಿಗಳನ್ನು ಕರೆಸುತ್ತಿದ್ದೇನೆ. ಅವರೊಟ್ಟಿಗೆ ಮಾತನಾಡಿ ನಿರ್ಧಾರ ಪ್ರಕಟಿಸುತ್ತೇವೆ. ಕೆಲಸ ಮಾಡಿರುವ ಕ್ಯಾಂಡಿಡೇಟ್ ಗಳಿಗೆ ಟಿಕೆಟ್ ಕೊಡಬೇಕು ಎಂಬುದಷ್ಟೇ ನನ್ನ ವಾದ. ನನ್ನ ಮಾತು ನಡೆಯಬೇಕು ಎಂದು ನಾನು ಎಂದಿಗೂ ಕೇಳಿಲ್ಲ, ಬಯಸಿಲ್ಲ.
'ಹಣ, ಹೆಸರು ಬೇಡ, ನಿಮ್ಮ ಸಿದ್ಧಾಂತ ಒಪ್ಪಿದ್ದೇವೆ, ಪ್ರಜಾಕೀಯಕ್ಕೆ ಬೆಂಬಲವಿದೆ' ಎಂದು ಹೇಳಿದ್ದರಿಂದ ಅವರ ಜತೆ ಕೈಜೋಡಿಸಿದ್ದೆವು. ಆದರೆ, ಅವರ ಕಮಿಟಿಯವರು ಉಪೇಂದ್ರ ಸಿದ್ಧಾಂತ ಸರಿಯಿಲ್ಲ, ಅವರನ್ನು ಪಕ್ಷದಿಂದ ಹೊರ ಹಾಕೋಣ ಎಂದು ನಿರ್ಧರಿಸಿದರೆ, ಏನು ಮಾಡಲಿ ಎಂದು ಉಪೇಂದ್ರ ಪ್ರಶ್ನಿಸಿದ್ದಾರೆ.












Click it and Unblock the Notifications