Get Updates
Get notified of breaking news, exclusive insights, and must-see stories!

ಕರ್ನಾಟಕದಲ್ಲಿ ಎಸ್‌ಸಿ, ಎಸ್‌ಟಿ ವಿರುದ್ಧದ ಅಪರಾಧ ಪ್ರಮಾಣ ಭಾರೀ ಏರಿಕೆ

ಬೆಂಗಳೂರು, ಜು. 02: ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ (ಎಸ್‌ಸಿ / ಎಸ್‌ಟಿ) ಸಮುದಾಯದ ಜನರ ಮೇಲೆ ಅಪರಾಧ ಪ್ರಮಾಣವು ತೀವ್ರ ಪ್ರಮಾಣದಲ್ಲಿ ಏರಿಕೆಯಾಗಿದೆ, ''ಏಪ್ರಿಲ್ 1, 2020 ರಿಂದ ಮಾರ್ಚ್ 31, 2021 ರವರೆಗೆ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ (ಎಸ್‌ಸಿ / ಎಸ್‌ಟಿ) ಸಮುದಾಯದ ಜನರ 2,327 ಕೊಲೆ, ಶೋಷಣೆ ಮತ್ತು ಇತರ ಪ್ರಕರಣಗಳು ದಾಖಲಾಗಿವೆ,'' ಎಂದು ರಾಜ್ಯ ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋನ ಅಂಕಿಅಂಶಗಳ ಪ್ರಕಾರ, ಈ ವರ್ಷ 1,504 ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಹಿಂದಿನ ವರ್ಷಕ್ಕಿಂತ ಶೇ. 54 ಕ್ಕಿಂತ ಅಧಿಕವಾಗಿದೆ. ಎಸ್‌ಸಿ / ಎಸ್‌ಟಿಸಮುದಾಯದ ಸದಸ್ಯರ ವಿರುದ್ಧ ಕೊಲೆ, ಶೋಷಣೆ ನಡೆಸಿರುವುದು ಹಾಗೂ ಬೆಂಕಿ ಹಾಕಿರುವುದು ಸೇರಿದಂತೆ ಇತರ ಅಪರಾಧಗಳು ಇದರಲ್ಲಿ ಒಳಗೊಂಡಿದೆ.

ಕಳೆದ 10 ದಿನಗಳಲ್ಲಿ ಕರ್ನಾಟಕದಲ್ಲಿ ಕನಿಷ್ಟ ಎರಡು ಮರ್ಯಾದಾ ಹತ್ಯೆಗಳನ್ನು ವರದಿಯಾಗಿದೆ. ಇನ್ನು ಜಾತಿ ಹೆಸರು ಕರೆದು ನಿಂದಿಸುವುದು, ಸೇವೆ ನಿರಾಕರಿಸುವುದು ಹಾಗೂ ವಾಗ್ದಾಳಿ ನಡೆಸುವಂತಹ ಹಲವಾರು ಪ್ರಕರಣಗಳ ವಿರುದ್ದ ಇನ್ನೂ ದೂರು ದಾಖಲಾಗಿಲ್ಲ ಎಂದು ಹೇಳಲಾಗಿದೆ.

ಕಳೆದ 10 ದಿನದಲ್ಲೇ ಎರಡು ಮರ್ಯಾದಾ ಹತ್ಯೆ

ಕಳೆದ 10 ದಿನದಲ್ಲೇ ಎರಡು ಮರ್ಯಾದಾ ಹತ್ಯೆ

ಜೂನ್ 24 ರ ವರದಿ ಪ್ರಕಾರ, ಬೆಂಗಳೂರಿನಿಂದ ಸುಮಾರು 525 ಕಿ.ಮೀ. ದೂರದಲ್ಲಿರುವ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲ್ಲೂಕಿನ ಸಲಾಡಹಳ್ಳಿ ಗ್ರಾಮದಲ್ಲಿ ಮರ್ಯಾದಾ ಹತ್ಯೆ ಪ್ರಕರಣ ವರದಿಯಾಗಿದೆ. ಪರಸ್ಪರ ಪ್ರೀತಿಸಿದ ದಲಿತ ಸಮುದಾಯಕ್ಕೆ ಸೇರಿದ ಬಾಲಕ ಮತ್ತು ಮುಸ್ಲಿಂ ಬಾಲಕಿಯನ್ನು ಬಾಲಕಿಯ ಕುಟುಂಬ ಮತ್ತು ಇತರರು ಬಂಡೆಗಳಿಂದ ತಲೆಯನ್ನು ಜಜ್ಜಿ ಇಬ್ಬರನ್ನು ಕೊಂದು ಹಾಕಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಬೆಂಗಳೂರಿನಿಂದ 351 ಕಿ.ಮೀ ದೂರದಲ್ಲಿರುವ ಕೊಪ್ಪಲ ಜಿಲ್ಲೆಯ ಬರಗೂರು ಗ್ರಾಮದಲ್ಲಿ, ಪ್ರೇಮ ಸಂಬಂಧ ಹೊಂದಿದ್ದ ಕಾರಣದಕ್ಕೆ ಮಾದಿಗ ಸಮುದಾಯಕ್ಕೆ ಸೇರಿದ ಬಾಲಕನನ್ನು ಕುರುಬ ಸಮುದಾಯಕ್ಕೆ ಸೇರಿದ ಬಾಲಕಿಯನ್ನು ಬಾಲಕಿಯ ಕುಟುಂಬಸ್ಥರು ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಬಗ್ಗೆ ವಕೀಲರು ಹೇಳಿದ್ದೇನು?

ಈ ಬಗ್ಗೆ ವಕೀಲರು ಹೇಳಿದ್ದೇನು?

ವಕೀಲ ಮತ್ತು ಬೆಂಗಳೂರು ಮೂಲದ ಸಾಮಾಜಿಕ ಕಾರ್ಯಕರ್ತ ಕ್ಲಿಫ್ಟನ್ ರೋಜಾರಿಯೊ, "ದೌರ್ಜನ್ಯಗಳು ನಡೆಯುತ್ತಿವೆ ಮತ್ತು ವರದಿಯಾಗಿದೆ. ನಾವು ಈ ಅಂಕಿಅಂಶಗಳನ್ನು ನೋಡಿದಾಗ, ದಾಖಲಾದ ಪ್ರತಿಯೊಂದು ದೌರ್ಜನ್ಯವನ್ನು ನೋಡಿದಾಗ ಅದು ಸಾಮಾನ್ಯವಾದ ಮತ್ತು ವಾಡಿಕೆಯಂತೆ ಮಾಡಲಾದ ಇತರ ದೌರ್ಜನ್ಯಗಳಾಗಿ ಬಿಟ್ಟಿದೆ ಎಂಬುದನ್ನು ನಾವು ನೆನಪಿನಲ್ಲಿಡಬೇಕು," ಎಂದು ತಿಳಿಸಿದ್ದಾರೆ. ತಂತ್ರಜ್ಞಾನ, ಸ್ಟಾರ್ಟ್ಅಪ್, ಏರೋಸ್ಪೇಸ್ ಮತ್ತು ಇತರ ಕ್ಷೇತ್ರಗಳಲ್ಲಿನ ಕರ್ನಾಟಕವು ತನ್ನದೇ ಆದ ಛಾಪು ಮೂಡಿಸಿದ್ದರೂ ರಾಜ್ಯದ ಗ್ರಾಮೀಣ ಭೂ ಪ್ರದೇಶದಲ್ಲಿ ಇಂತಹ ಪ್ರಕರಣಗಳು ಕಪ್ಪುಚುಕ್ಕೆಯಾಗಿದೆ. ನೋಂದಾಯಿತ ಪ್ರಕರಣಗಳ ಸಂಖ್ಯೆ ಕಡಿಮೆ ಇದ್ದರೂ, ಇನ್ನೂ ಅದೆಷ್ಟೋ ಪ್ರಕರಣಗಳು ದಾಖಲಾಗಿಲ್ಲ.

2,327 ಅಪರಾಧ ಪ್ರಕರಣಗಳು ಯಾವುವು?

2,327 ಅಪರಾಧ ಪ್ರಕರಣಗಳು ಯಾವುವು?

ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಸಮುದಾಯದ ವಿರುದ್ದ ನಡೆದ 2,327 ಅಪರಾಧ ಪ್ರಕರಣಗಳ ಪೈಕಿ, 87 ಕೊಲೆಗಳು, 216 ಶೋಷಣೆ ಪ್ರಕರಣಗಳು, 2,024 ಇತರ ನಿಂದನೆ ಮೊದಲಾದ ಪ್ರಕರಣಗಳು ಹಾಗೂ 3 ಬೆಂಕಿ ಹಾಕಿದ ಪ್ರಕರಣಗಳು ಆಗಿದೆ ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ. ಇನ್ನು ಈ ಅಪರಾಧಗಳಿಗೆ ಪರಿಹಾರವಾಗಿ ಸರ್ಕಾರ ಇದುವರೆಗೆ 4 284 ಕೋಟಿಗಳನ್ನು ನಿಗದಿಪಡಿಸಿದೆ. 2019 ರಲ್ಲಿ ಎಸ್‌ಸಿ / ಎಸ್‌ಟಿ ಸಮುದಾಯಗಳ ವಿರುದ್ಧ ನಡೆದ ಅಪರಾಧ ಮತ್ತು ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ 2,775 ಜನರಲ್ಲಿ ಮತ್ತು 2,945 ಆರೋಪಪಟ್ಟಿಗಳಲ್ಲಿ ಕೇವಲ 50 ಮಂದಿ ಮಾತ್ರ ಶಿಕ್ಷೆಗೊಳಗಾದರು ಮತ್ತು 1,513 ಜನರನ್ನು ಖುಲಾಸೆಗೊಳಿಸಲಾಗಿದೆ ಎಂದು ಈ ಸರ್ಕಾರದ ಅಂಕಿ ಅಂಶಗಳು ತೋರಿಸಿದೆ.

ಎಎಸ್‌-ಎಸ್‌ಟಿ ಸಮುದಾಯದ ವಿರುದ್ದ ದೌರ್ಜನ್ಯ

ಎಎಸ್‌-ಎಸ್‌ಟಿ ಸಮುದಾಯದ ವಿರುದ್ದ ದೌರ್ಜನ್ಯ

ದೇಶದಲ್ಲಿ ಅದೆಷ್ಟೋ ಅಭಿವೃದ್ದಿಗಳಾಗಿದ್ದರೂ ಎಎಸ್‌-ಎಸ್‌ಟಿ ಸಮುದಾಯದ ವಿರುದ್ದದ ದೌರ್ಜನ್ಯ ನಿಂತಿಲ್ಲ. ಪ್ರತಿದಿನ ಇಂತಹ ಜಾತಿ ಆಧಾರಿತ ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತಲಿದೆ. ದಂಪತಿಗಳ ನಡುವಿನ ವೈವಾಹಿಕ ಭಿನ್ನಾಭಿಪ್ರಾಯಕ್ಕೆ ಯುವಕನೋರ್ವ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ ಹಿನ್ನೆಲೆ ಬಂಧನಕ್ಕೆ ಒಳಗಾಗಿದ್ದ ಎಎಸ್‌-ಎಸ್‌ಟಿ ಸಮುದಾಯದ ಯುವಕನ ವಿರುದ್ದ ಪೊಲೀಸರು ತೀವ್ರ ದೌರ್ಜನ್ಯ ನಡೆಸಿದ್ದರು. ಯುವಕನು ಪೊಲೀಸರಲ್ಲಿ ನೀರು ಕೇಳಿದಾಗ ಇನ್ನೋರ್ವ ವ್ಯಕ್ತಿಯ ಬಳಿ ಮೂತ್ರ ವಿಸರ್ಜಿಸಲು ಹೇಳಿ ಅದನ್ನು ನೆಕ್ಕುವಂತೆ ಯುವಕನಿಗೆ ಒತ್ತಾಯ ಮಾಡಲಾಗಿದೆ. ಈ ಹಿನ್ನೆಲೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಅರ್ಜುನ್ ಗೌಡಗೆ ಚಿಕ್ಕಮಗಳೂರು ಜಿಲ್ಲೆಯ ಸ್ಥಳೀಯ ನ್ಯಾಯಾಲಯವು ಜಾಮೀನು ನಿರಾಕರಿಸಿ, ಇದು ''ಘೋರ ಕೃತ್ಯ'' ಎಂದು ಹೇಳಿದೆ.

ದಲಿತ ಸಮುದಾಯಕ್ಕಿಲ್ಲ ದೇವಾಲಯಕ್ಕೆ ಪ್ರವೇಶ

ದಲಿತ ಸಮುದಾಯಕ್ಕಿಲ್ಲ ದೇವಾಲಯಕ್ಕೆ ಪ್ರವೇಶ

ಈ ಬಗ್ಗೆ ಮಾತನಾಡಿದ ಕೊಪ್ಪಳ ಜಿಲ್ಲೆಯ ದಲಿತ ಕಾರ್ಯಕರ್ತ ಸಣ್ಣ ಹನುಮಂತ, "ದಲಿತ ಸಮುದಾಯದ ಸದಸ್ಯರು ಹೋಟೆಲ್‌ಗಳು, ದೇವಾಲಯಗಳು ಮತ್ತು ಹಳ್ಳಿಗಳ ಒಳಗೆ ಪ್ರವೇಶಿಸಲು ನಿರಾಕರಿಸಿದ ಅದೇಷ್ಟೋ ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ," ಎಂದು ಹೇಳಿದ್ದಾರೆ. "ಕಳೆದ ವಾರ ಇಬ್ಬರು ಹುಡುಗರು ಚಹಾ ಕುಡಿಯಲು ಹೋಟೆಲ್‌ಗೆ ಪ್ರವೇಶಿಸಿದ್ದಕ್ಕೆ ಮೇಲ್ವರ್ಗದವರು ಎಂದು ಕರೆಯಲ್ಪಡುವ ಜನರು ಜಗಳವಾಡಿದರು. ಯುವಕರ ಮೋಟಾರುಬೈಕಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್‌ ಸ್ಟಿಕ್ಕರ್ ಇತ್ತು ಎಂಬ ಕಾರಣಕ್ಕೆ ನಮ್ಮ ಸಮುದಾಯದ ಹುಡುಗ ಮತ್ತು ಬೇರೆ ಸಮುದಾಯಕ್ಕೆ ಸೇರಿದ ಆತನ ಸ್ನೇಹಿತನನ್ನು ಹೊರ ದೂಡಿದರು," ಎಂದು ಹನುಮಂತ ತಿಳಿಸಿದ್ದಾರೆ.

ಮಾಜಿ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ

ಮಾಜಿ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ, ''ದೌರ್ಜನ್ಯದ ಬಗ್ಗೆ ಜನರಿಗೆ ತಿಳಿದಿಲ್ಲ ಎಂದಲ್ಲ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಪೊಲೀಸ್ ಠಾಣೆಗೆ ಬರುತ್ತಿದ್ದಾರೆ ಎಂಬುದನ್ನು ನಾವು ವೈಭವೀಕರಿಸಲು ಸಾಧ್ಯವಿಲ್ಲ. ಎಲ್ಲಾ ರೀತಿಯ ಸಾಮಾಜಿಕ ಅಶಾಂತಿಗಳ ಹೆಚ್ಚಳವೂ ಸಾಂಕ್ರಾಮಿಕ ರೋಗದಿಂದಾಗಿ ವಲಸೆ ಹೋಗಲೇ ಬೇಕಾದ ಕಾರಣ ಈಗ ಮತ್ತೆ ಹೆಚ್ಚಳವಾಗಿದೆ. ವಲಸೆ ಬಂದವರು ಆರ್ಥಿಕವಾಗಿ ಹಿಂದುಳಿದ ಜನರು ಮತ್ತು ಇದು ಹೆಚ್ಚಾಗಿ ಎಸ್‌ಸಿ / ಎಸ್‌ಟಿ, ಅಲ್ಪಸಂಖ್ಯಾತರು ಮತ್ತು ಇತರ ಸಮುದಾಯಗಳ ಸದಸ್ಯರು ಆಗಿದ್ದಾರೆ,'' ಎಂದು ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+