ತಲಘಟ್ಟಪುರದಲ್ಲಿ ಪುಡಿ ರೌಡಿಗಳ ದಾಂಧಲೆ

ಬೆಂಗಳೂರು, ಫೆ.3 : ಬೆಂಗಳೂರು ಹೊರವಲಯದ ತಲಘಟ್ಟಪುರದಲ್ಲಿ ಪುಡಿ ರೌಡಿಗಳು ಅಟ್ಟಹಾರ ಮೆರೆದಿದ್ದಾರೆ. ಹಾಡ ಹಗಲೇ ಲಾಂಗು, ಮಚ್ಚುಗಳಿಂದ ಮೂವರ ಮೇಲೆ ಹಲ್ಲೆ ನಡೆಸಿದ್ದು, ಅಂಗಡಿ ಗಾಜುಗಳನ್ನು ಪುಡಿ-ಪುಡಿ ಮಾಡಿದ್ದಾರೆ. ಸದ್ಯ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಭಾನುವಾರ ಸಂಜೆ ಹತ್ತು ಮಂದಿ ರೌಡಿಗಳ ಗುಂಪು, ತಲಘಟ್ಟಪುರದ ಪ್ರಮುಖ ರಸ್ತೆಗಳಲ್ಲಿ ಲಾಂಗು, ಮಚ್ಚುಗಳಿಂದ ಮೂವರ ಮೇಲೆ ದಾಳಿ ನಡೆಸಿದ್ದಾರೆ. ದಾಳಿಗೆ ಒಳಗಾದವರನ್ನು ಜಯ ಕರ್ನಾಟಕ ಸಂಘಟನೆ ರೇಣುಕಾ ಮೋಹನ್, ಬಾಲರಾಜ್, ಶಂಕರ್ ಎಂದು ಗುರುತಿಸಲಾಗಿದ್ದು, ಮೂವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಂತರ ರೌಡಿಗಳು ಮೆಡಿಕಲ್ ಶಾಪ್ ಮತ್ತು ಇತರ ಅಂಗಡಿಗಳಿಗೆ ನುಗ್ಗಿ ಹಫ್ತಾ ನೀಡುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ನಿರಾಕರಿಸಿದ ಅಂಗಡಿಗಳ ಗಾಜುಗಳನ್ನು ಪುಡಿ ಮಾಡಿ ಪರಾರಿಯಾಗಿದ್ದಾರೆ. ರೌಡಿಗಳು ಲಾಂಗ್ ಹಿಡಿದು ಬೀದಿಗಳಲ್ಲಿ ತಿರುಗಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಹಲ್ಲೆ ಪ್ರಕರಣದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ತಲಘಟ್ಟಪುರದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ರಾಮನಗರ ಎಸ್ಪಿ ಅನುಪಮ್ ಅಗರ್ ವಾಲ್ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಸೋಮವಾರ ರೌಡಿಗಳನ್ನು ಬಂಧಿಸಬೇಕೆಂದು ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಸ್ತ್ ಕೈಗೊಳ್ಳಲಾಗಿದ್ದು, ರೌಡಿಗಳಿಗಾಗಿ ಹುಡುಕಾಟ ಮುಂದುವರೆದಿದೆ. [ಕರ್ನಾಟಕ ಇತರ ಕ್ರೈಂ ಸುದ್ದಿಗಳು]

ಪ್ರೀತಿ ನಿರಾಕರಿಸಿದ ಯುವತಿಗೆ ಮಚ್ಚಿನೇಟು

ಪ್ರೀತಿ ನಿರಾಕರಿಸಿದ ಯುವತಿಗೆ ಮಚ್ಚಿನೇಟು

ಪ್ರೀತಿಸಲು ನಿರಾಕರಿಸಿದ ಯುವತಿಯ ಮೇಲೆ ಯುವಕನೊಬ್ಬ ಮಚ್ಚಿನಿಂದ ಹಲ್ಲೆ ಮಾಡಿರುವ ಘಟನೆ ಮೈಸೂರು ನಗರದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ. ನಾಗನಹಳ್ಳಿ ಗ್ರಾಮದ ಸ್ವಾಮಿ ಎಂಬಾತ ಮರಿಮಲ್ಲಪ್ಪ ಕಾಲೇಜಿನ ವಿದ್ಯಾರ್ಥಿಯ ಮೇಲೆ ಹಲ್ಲೆ ಮಾಡಿದ್ದು, ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಸ್ಥಳೀಯ ನಿವಾಸಿಗಳು ಹಲ್ಲೆ ಮಾಡಿದ ಸ್ವಾಮಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಪತ್ನಿಗೆ ಗುಂಡಿಕ್ಕಿದ ಪಾಪಿ ಪತಿ

ಪತ್ನಿಗೆ ಗುಂಡಿಕ್ಕಿದ ಪಾಪಿ ಪತಿ

ಕೌಟುಂಬಿಕ ಕಲಹದಿಂದ ಬೇಸತ್ತ ಪತಿಯೊಬ್ಬ ಪತ್ನಿಯನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಮಾಗಡಿ ಬಳಿಯ ಕರೇನಹಳ್ಳಿ ಗ್ರಾಮದಲ್ಲಿ ಬಡೆದಿದೆ. ಮೃತ ಮಹಿಳೆಯನ್ನು ಗಂಗಮ್ಮ (30) ಎಂದು ಗುರುತಿಸಲಾಗಿದ್ದು, ಪರಾರಿಯಾಗಿರುವ ಆಕೆಯ ಪತಿ ಸೋಮಣ್ಣನಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ನೀರುಗಂಟಿಯಾಗಿದ್ದ ಸೋಮಣ್ಣ ಪತ್ನಿ ಗಂಗಮ್ಮ ಜೊತೆ ದಿನವೂ ಜಗಳ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಭಾನುವಾರ ರಾತ್ರಿಯೂ ಇಬ್ಬರ ನಡುವೆ ಜಗಳ ನಡೆದಿದ್ದು, ಜನಗಳ ವಿಕೋಪಕ್ಕೆ ಹೋದಾಗ ಗುಂಡು ಹಾರಿಸಿ ಪತ್ನಿಯನ್ನು ಹತ್ಯೆ ಮಾಡಿ ಆತ ಪರಾರಿಯಾಗಿದ್ದಾನೆ. ಮಾಗಡಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಸುಗೂಸಿನ ಶವ ಪತ್ತೆ

ಹಸುಗೂಸಿನ ಶವ ಪತ್ತೆ

ಒಂದು ದಿನದ ಹಸುಗೂಸನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಬಂಗಾರಪೇಟೆ ರೈಲ್ವೆ ನಿಲ್ದಾಣದ ಸಮೀಪದ ಹಳಿಯ ಮೇಲೆ ಎಸೆದು ಹೋಗಿರುವ ಧಾರುಣ ಘಟನೆ ಸೋಮವಾರ ಬೆಳಗ್ಗೆ ಬೆಳಿಕಿಗೆ ಬಂದಿದೆ. ಚೀಲವನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ರೈಲ್ವೆ ಪೊಲೀಸರು ಚೀಲವನ್ನು ಪರಿಶೀಲಿಸಿದಾಗ ಗಂಡು ಮಗುವಿನ ಶವ ಪತ್ತೆಯಾಗಿದೆ. ಮಗು ಭಾನುವಾರ ರಾತ್ರಿ ಜನಿಸಿರಬಹುದು ಎಂದು ಶಂಕಿಸಲಾಗಿದೆ. ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆಸಿದ್ದಾರೆ.

ಸಿಗರೇಟ್ ಕೊಡಲಿಲ್ಲ ಎಂದು ಚಾಕುವಿನಿಂದ ಚುಚ್ಚಿದ

ಸಿಗರೇಟ್ ಕೊಡಲಿಲ್ಲ ಎಂದು ಚಾಕುವಿನಿಂದ ಚುಚ್ಚಿದ

ಕನಕಪುರ ತಾಲೂಕಿನ ಚುಂಚಿ ಕಾಲೀನಿಯ ಚಿಕ್ಕಣ್ಣ ಎಂಬುವವರ ಮಗನಾದ ಚಂದ್ರಚೂಡ್ ಎನ್ನುವವರು ಸಿಗರೇಟ್ ಕೊಡಿಸಲಿಲ್ಲ ಎಂದು ದುಷ್ಕರ್ಮಿಗಳು ಅವರಿಗೆ ಚಾಕುವಿನಿಂದ ಚುಚ್ಚಿದ ಘಟನೆ ಭಾನುವಾರ ತಡರಾತ್ರಿ ನಡೆದಿದೆ. ಇದೇ ಗ್ರಾಮದ ಚನ್ನವೀರಯ್ಯ ಎಂಬವವನು ಮದ್ಯ ಮತ್ತು ಸಿಗರೇಟ್ ಕೊಡಿಸುವಂತೆ ಎಲ್ಲರನ್ನೂ ಪೀಡಿಸುತ್ತಿದ್ದ. ಭಾನುವಾರ ಸಂಜೆಯೂ ಚಂದ್ರಚೂಡ್ ಬಳಿ ಸಿಗರೇಟ್ ಕೊಡಿಸುವಂತೆ ಒತ್ತಾಯಿಸಿದ್ದಾನೆ. ಇದಕ್ಕೆ ನಿರಾಕರಿಸಿದ ಹಿನ್ನಲೆಯಲ್ಲಿ ಆತನಿಗೆ ಚಾಕುವಿನಿಂದ ಚುಚ್ಚಿ ಪರಾರಿಯಾಗಿದ್ದಾನೆ. ಚಂದ್ರಚೂಡ್ ಪ್ರಾಣಾಪಾಯದಿಂದ ಪಾರಾಗಿದ್ದು, ಕನಕಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚನ್ನವೀರಯ್ಯನಿಗಾಗಿ ಹುಡುಕಾಟ ಆರಂಭವಾಗಿದೆ.

ಇಮ್ತಿಯಾಜ್ ಕೊಲೆ ಪ್ರಕರಣ ಬಯಲು

ಇಮ್ತಿಯಾಜ್ ಕೊಲೆ ಪ್ರಕರಣ ಬಯಲು

ಜ. 24ರಂದು ಶಾಮಣ್ಣ ಗಾರ್ಡನ್ 8ನೇ ಮುಖ್ಯ ರಸ್ತೆಯಲ್ಲಿ ನಡೆದ ಇಮ್ತಿಯಾಜ್ ಕೊಲೆ ಪ್ರಕರಣವನ್ನು ಭೇಧಿಸುವಲ್ಲಿ ಬ್ಯಾಟರಾಯನಪುರ ಪೊಲೀಸರು ಯಶಸ್ವಿಯಾಗಿದ್ದು, ಕೊಪಲೆ ಮಾಡಿರುವ ಆರೋಪಿಗಳಾದ ಇದಾಯತ್, ನೂರುಲ್ಲ, ನಯಾಜ್, ಟಿಪ್ಪು ಖಾನ್ ಮತ್ತು ಶಫೀರ್ ಅವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ 2 ಲಾಂಗ್, 3 ಮಚ್ಚು, 1 ಡ್ರಾಗರ್, 1 ಚಾಕುವನ್ನು ವಶಪಡಿಸಿಕೊಳ್ಳಲಾಗಿದೆ. ಮೃತ ಇಮ್ತಿಯಾಜ್ ಇದಾಯತ್ ಅವರ ಬಳಿ ಸಾಲ ಮಾಡಿದ್ದ, ಸಾಲ ವಾಪಸ್ ನೀಡುವಂತೆ ಇದಾಯತ್ ಹಲವು ಬಾರಿ ಇಮ್ತಿಯಾಜ್ ಗೆ ಹೇಳಿದ್ದ. ಆದರೂ ಆತ ಸಾಲ ವಾಪಸ್ ನೀಡದ ಹಿನ್ನಲೆಯಲ್ಲಿ ಕೊಲೆ ಮಾಡಿದ್ದಾಗಿ ವಿಚಾರಣೆ ವೇಳೆ ಅವರು ಒಪ್ಪಿಕೊಂಡಿದ್ದಾರೆ.

ರಾಗಿ ಚೀಲದಲ್ಲಿತ್ತು 2 ಕೆಜಿ ಚಿನ್ನ

ರಾಗಿ ಚೀಲದಲ್ಲಿತ್ತು 2 ಕೆಜಿ ಚಿನ್ನ

ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿ ವಿಚಾರಣೆ ನಡೆಸಿದ ಮಹಾಲಕ್ಮೀ ಲೇಔಟ್ ಪೊಲೀಸರು ಬೆಚ್ಚಿ ಬಿದ್ದಿದ್ದಾರೆ. ಅವನ ಬಳಿ ಇದ್ದ ರಾಗಿ ಚೀಲದಲ್ಲಿ 2 ಲಕ್ಷ ರೂ. ಮೌಲ್ಯದ ಚಿನ್ನದ ನಾಣ್ಯಗಳಿದ್ದವು. ಬಂಧಿತ ವ್ಯಕ್ತಿಯನ್ನು ರಾಮನಗರ ಜಿಲ್ಲೆಯ ಚಲುವರಾಜು ಎಂದು ಗುರುತಿಸಲಾಗಿದೆ. ಈತ ಸೋಮವಾರ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನುಮಾನಾಸ್ಪದವಾಗಿ ಒಡಾಡುತ್ತಿದ್ದ. ಅನುಮಾನ ಬಂದ ಪೊಲೀಸರು ಆತನನ್ನು ವಿಚಾರಣೆ ನಡೆಸಿದಾಗ ಚಿನ್ನದ ಗಟ್ಟಿಗಳು ಪತ್ತೆಯಾಗಿವೆ. ಈ ಚಿನ್ನದ ಗಟ್ಟಿಯನ್ನು ಎಲ್ಲಿಗೆ ಸಾಗಿಸಲಾಗುತ್ತಿತ್ತು ಎಂಬುದು ವಿಚಾರಣೆ ನಂತರ ತಿಳಿದು ಬರಲಿದೆ.

ಮಾವನಿಂದಲೇ ಸೊಸೆ ಹತ್ಯೆ

ಮಾವನಿಂದಲೇ ಸೊಸೆ ಹತ್ಯೆ

ಮಾವ ಸೊಸೆಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ. ಕೊಲೆಯಾದ ಮಹಿಳೆಯನ್ನು ಲಕ್ಷ್ಮೀ ಬಡಚಿ ಎಂದು ಗುರುತಿಸಲಾಗಿದೆ. ಹತ್ಯೆ ನಡೆಸಿದ ಆರೋಪಿಯನ್ನು ಬಸಪ್ಪ ಎಂದು ಗುರುತಿಸಲಾಗಿದ್ದು ಆತ ಪರಾರಿಯಾಗಿದ್ದಾನೆ. ಬಸಪ್ಪ ಪುತ್ರ ರಾಜೀವ್ ಅವರಿಗೆ ಕಳೆದ ವರ್ಷ ಲಕ್ಷ್ಮೀಯನ್ನು ವಿವಾಹ ಮಾಡಿಕೊಡಲಾಗಿತ್ತು. ಭಾನುವಾರ ರಾತ್ರಿ ರಾಜೀವ್ ಮನೆಯಲ್ಲಿ ಇಲ್ಲದ ಸಮಯದಲ್ಲಿ ಬಸಪ್ಪ ಸೊಸೆ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾನೆ. ಅಥಣಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಹುಡುಕಾಟ ಆರಂಭವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+