ಕ್ರೈಂ: ನೆರೆಮನೆಯವರು ಯುವತಿ ಸುಟ್ಟು ಕೊಂದರು
ಬೆಂಗಳೂರು,ಅ.25: ಬಟ್ಟೆ ಒಣ ಹಾಕುವ ವಿಚಾರವಾಗಿ ಯುವತಿಯೊಂದಿಗೆ ಜಗಳ ತೆಗೆದ ನೆರೆ ಮನೆಯವರು ಆಕೆ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ಸೋಲದೇವನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ದೊಡ್ಡಬ್ಯಾಲದ ಹಳ್ಳಿಯ ರವಿಕಲಾ(26) ನೆರೆ ಮನೆಯ ವರಿಂದ ಸಜೀವ ದಹನಗೊಂಡ ನತದೃಷ್ಟೆ. ಕೃತ್ಯ ಎಸಗಿದ ನೆರೆಮನೆಯ ಮುನಿತಾಯಮ್ಮ ಹಾಗೂ ಈಕೆ ಮಕ್ಕಳಾದ ರೂಪ, ಮಂಜು ಮತ್ತು ಮುರಳಿ ತಲೆಮರೆಸಿ ಕೊಂಡಿದ್ದಾರೆ. ರವಿಕಲಾ ಅವರು ತಮ್ಮ ಮನೆ ಮುಂದೆ ಒಣ ಹಾಕುವ ಬಟ್ಟೆಯ ನೀರು ಸೋರಿ ಮುನಿತಾಯಮ್ಮನ ಮನೆ ಅಂಗಳ ಸೇರುತ್ತಿತ್ತು. ಇದರಿಂದಾಗಿ ಇಬ್ಬರ ನಡುವೆ ಆಗಾಗ ಜಗಳವಾಗುತ್ತಿತ್ತು ಎನ್ನಲಾಗಿದೆ.
ನಿನ್ನೆ ರಾತ್ರಿ ರವಿಕಲಾ ಒಬ್ಬರೇ ಮನೆಯಲ್ಲಿದ್ದಾಗ ಇದೇ ವಿಚಾರವಾಗಿ ಮುನಿಯಮ್ಮ ಹಾಗೂ ಆಕೆಯ ಮೂವರು ಮಕ್ಕಳು ಜಗಳ ತೆಗೆದಿದ್ದಾರೆ. ಒಂದು ಹಂತದಲ್ಲಿ ತಾಯಿ ಮಕ್ಕಳು ಸೇರಿ ರವಿಕಲಾ ಅವರ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಸಜೀವ ದಹನಗೊಳಿಸಿ ಪರಾರಿಯಾಗಿದ್ದಾರೆ. ಈ ಸಂಬಂಧ ಸೋಲದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಲೆಮರೆಸಿಕೊಂಡಿರುವ ತಾಯಿ ಮಕ್ಕಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಶಿವಮೊಗ್ಗ, ತುಮಕೂರು, ಚಿಕ್ಕಮಗಳೂರು, ಉಡುಪಿ, ಕೋಲಾರ ಮುಂತಾದ ಕಡೆಗಳಿಂದ ಬಂದಿರುವ ಕ್ರೈಂ ಸುದ್ದಿಗಳ ವರದಿ ಇಲ್ಲಿದೆ ತಪ್ಪದೇ ಓದಿ

ತುಮಕೂರು
ನಗರ ಠಾಣೆ ಮೊ.ನಂ.274/2013 ಕಲಂ 498(ಎ) ರೆ/ವಿ 34 ಐಪಿಸಿ ಜೊತೆಗೆ 3 & 4 ಡಿ.ಪಿ.ಆಕ್ಟ್ : ಅಸ್ಮಾ ಖಾನಂ: ನನ್ನನ್ನು 2010ರಲ್ಲಿ ಗೂಳೂರು ಗೋಮಾಳ ದಸ್ತಗೀರ್ ರವರ ಮಗ ಜಿ.ಶಾನ್ ರವರಿಗೆ ಕೊಟ್ಟು ಮದುವೆ ಮಾಡಿಕೊಡಲಾಗಿತ್ತು.
ಮದುವೆ ಸಮಯದಲ್ಲಿ ಮೂರು ಲಕ್ಷ ಬೆಲೆ ಬಾಳುವ ಒಡವೆಗಳು ಮತ್ತು ಒಂದು ಲಕ್ಷ ರೂಪಾಯಿಯನ್ನು ವರದಕ್ಷಿಣೆಯಾಗಿ ಕೊಟ್ಟಿರುತ್ತಾರೆ. ಮದುವೆಯಾದ ಮೂರು ತಿಂಗಳ ಕಾಲ ನನ್ನನ್ನು ನನ್ನ ಗಂಡನ ಮನೆಯಲ್ಲಿ ಚೆನ್ನಾಗಿ ನೋಡಿಕೊಂಡಿದ್ದರು. ತದನಂತರ ನನ್ನ ಗಂಡ ಪ್ರತಿನಿತ್ಯ ಹಿಂಸೆ ಕೊಡುವುದು, ಬಾಯಿಗೆ ಬಂದಂತೆ ಬೈಯುವುದು, ಹೊಡೆಯುವುದು ಮಾಡುತ್ತಿದ್ದು,
ತವರು ಮನೆಯಿಂದ ಒಂದು ಲಕ್ಷ ರೂ. ಹಣವನ್ನು ತರುವಂತೆ ಪೀಡಿಸುತ್ತಿದ್ದು ತರದಿದ್ದರೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಸಾಯಿಸುತ್ತೇನೆಂದು ಆಗಾಗ ಪ್ರಾಣಬೆದರಿಕೆ ಹಾಕುತ್ತಿರುತ್ತಾನೆ. ನನ್ನ ಹೆಣ್ಣು ಮಗುವಿಗೆ ನನ್ನ ಗಂಡ, ಅತ್ತೆಮಾವ ಸರಿಯಾಗಿ ಚಿಕಿತ್ಸೆ ಕೊಡಿಸದೆ ಇದ್ದುದರಿಂದ ಮರಣ ಹೊಂದಿರುತ್ತದೆ. ಈಗ್ಗೆ ನನ್ನ ಗಂಡ ರಾತ್ರಿ ಹೊತ್ತು ವರದಕ್ಷಿಣೆ ತರುವಂತೆ ನನ್ನ ಕೈಗಳಿಗೆ ಸಿಗರೇಟಿನಿಂದ ಸುಟ್ಟಿರುತ್ತಾನೆ.

ಚಿಕ್ಕಮಗಳೂರು ಕ್ರೈಂ
ಲಿಂಗದಹಳ್ಳಿ ಪೊಲೀಸ್ ಠಾಣೆ ಮೊ.ಸಂ. 65/2013 - ಕಲಂ: 302 ಐಪಿಸಿ:
ಪಿರ್ಯಾದಿ ಹಾಲಪ್ಪ ಕಂಬಿಹಳ್ಳಿ ವಾಸಿ ಇವರ ತಾಯಿ ಶ್ರೀಮತಿ ಗಿರಿಜಮ್ಮ ಇವರು ಬುದ್ದಿಮಾಂದ್ಯರಾಗಿದ್ದು, ಅವರಿಗೆ ಸರ್ಕಾರದಿಂದ ವೃದ್ಯಾಪ್ಯ ವೇತನ ಹಣವನ್ನು ಅವರಿವರು ತಂದು ಕೊಡುತ್ತಿದ್ದು, ಅವರಿವರು ಕೊಡುವ ಹಣವನ್ನು ತಾನೇ ಇಟ್ಟುಕೊಂಡು ಕಂಬಿಹಳ್ಳಿ ಗ್ರಾಮದ ಅಮ್ಮಯ್ಯಮ್ಮ ಸಭಾ ಸಭಾ ಭವನದ ಹತ್ತಿರ ಬಟ್ಟೆ ಹಾಸಿಗೆ ಹೊದಿಕೆ ಇಟ್ಟುಕೊಂಡು ಅಲ್ಲಿಯೇ ಮಲಗುತ್ತಿದ್ದು, ಈ ದಿವಸ ಪಿರ್ಯಾದಿಗೆ ಸೆಲ್ವರಾಜ್ ಎಂಬುವರು ಪೋನ್ ಮಾಡಿಮಾಡಿ ನಿಮ್ಮ ತಾಯಿ ಸಭಾಭವನದ ಹತ್ತಿರ ಮೃತಪಟ್ಟಿರುವುದಾಗಿ ತಿಳಿಸಿದ್ದು, ಪಿರ್ಯಾದಿ ಬಂದು ನೋಡಿದಾಗ ನಮ್ಮ ತಾಯಿಯ ಹತ್ತಿರ ಇದ್ದ ಹಣದ ಆಸೆಗಾಗಿ ಕಂಬಿಹಳ್ಳಿ ಗ್ರಾಮದ ಶಿವಲಿಂಗ, ಉನ್ನೀಕೃಷ್ಣ, ಮತ್ತು ಎಂಬುವರು ತಾಯಿಯ ಕತ್ತು ಹಿಸುಕಿ ಕೊಲೆ ಮಾಡಿರುವುದು ಕಂಡುಬಂದಿರುತ್ತದೆ,

ಜೀವ ಬೆದರಿಕೆ ಪ್ರಕರಣ
ಸುನೀಲ್ ಕುಮಾರ್ ಮತ್ತು ರಾಘವೇಂದ್ರ ದಾಸ್ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಇರುವ ಉಜ್ವಲ ಬಾರಿಗೆ ಹೋಗಿ ಮದ್ಯ ಸೇವಿಸಿ ನಂತರ ಬಂದು ಇಬ್ಬರು ರಸ್ತೆಯಲ್ಲಿ ನಿಂತಿರುವಾಗ ಸನ್‌ರಾಜ್ ಬಾಳಿಗ ಮತ್ತು ಯೂಸುಪ್ ಯಾನೆ ಮುನ್ನಾ ಎಂಬವರು ಮೆಮೊರಿ ಕಾರ್ಡ್ ವಿಷಯದಲ್ಲಿ ಜಗಳ ಪ್ರಾರಂಬಿಸಿದ್ದು ಅದನ್ನು ತಪ್ಪಿಸಲು ಹೋದ ಫಿರ್ಯಾದಿ ಸುನೀಲ್‌ಕುಮಾರ್‌ರವರಿಗೆ ಸನ್‌ರಾಜ್ ಬಾಳಿಗನು ಖಾಲಿ ಬಿಯರ್ ಬಾಟಲಿಯಲ್ಲಿ ಹೊಡೆಯಲು ಬಂದಾಗ ತಡೆದ ಕಾರಣಕ್ಕೆ ಅವಾಚ್ಯ ಶಬ್ದಗಳಿಂದ ಬೈದು ನೀನು ತಡೆಯುತ್ತಿಯಾ ಎಂದು ತಲೆಗೆ ಹೊಡೆದ ಪರಿಣಾಮ ಹಣೆಗೆ ತಾಗಿ ರಕ್ತ ಗಾಯವಾಗಿರುತ್ತದೆ.. ಇನ್ನೊಮ್ಮೆ ಹೊಡೆಯಲು ಬಂದಾಗ ಎಡಮೊಣಗಂಟಿಗೆ ರಕ್ತ ಗಾಯವಾಗಿರುತ್ತದೆ. ಆ ಸಮಯ ಯೂಸುಫ್ ಕೂಡ ಫಿರ್ಯಾದಿದಾರರಿಗೆ ಕಾಲಿನಿಂದ ತುಳಿದಿರುತ್ತಾನೆ. ಪೊಲೀಸ್ ಕಂಪ್ಲೇಂಟ್ ಕೊಟ್ಟರೆ ನೋಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿ ಹೋಗಿರುತ್ತಾರೆ ಎನ್ನುವುದಾಗಿ ಸುನೀಲ್ ಕುಮಾರ್ ರವರು ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಅಪರಾಧ ಸಂಖ್ಯೆ 425/13 ಕಲಂ 504,323,506 ಜೊತೆಗೆ 34 ಐಪಿಸಿ ರಂತೆ ಪ್ರಕರಣ

ಕೋಲಾರ ಶಿವಮೊಗ್ಗ ಕ್ರೈಂ
ಕೋಟೆ ಠಾಣೆ; ಬೈಕ್ ಕಳ್ಳತನ ಪ್ರಕರಣ;
ಪಿರ್ಯಾದಿ ಚಂದ್ರಶೇಖರ್ ವಾಸ; ವಿದ್ಯಾನಗರ ಶಿವಮೊಗ್ಗ ಇವರು ತಮ್ಮ ಬೈಕ್ ಕೆಎ-14-ಎಲ್-0660 ಹಿರೋಹೊಂಡ ಸ್ಲ್ಪೆಂಡರ್ ಅನ್ನು ಕೇಂದ್ರಗ್ರಂಥಾಲಯ ದಲ್ಲಿ ನಿಲ್ಲಿಸಿ ಪತ್ರಿಕೆ ಓದಿ ವಾಪಸ್ಸು ಬಂದು ನೋಡಿದಾಗ ಯಾರೋ ಕಳ್ಳರು ತಮ್ಮ ಬೈಕನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ದೂರುನೀಡಿರುತ್ತಾರೆ.












Click it and Unblock the Notifications