ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ವಿದ್ಯುತ್ ದರ ಏರಿಕೆ - ಸಿಪಿಐಎಂ ವಿರೋಧ

|
Google Oneindia Kannada News

ಬೆಂಗಳೂರು, ಏಪ್ರಿಲ್ 06: ಪ್ರತಿ ಯೂನಿಟ್ ವಿದ್ಯುತ್ ಬೆಲೆಯನ್ನು 10 ಪೈಸೆಗಳಿಂದ 20 ಪೈಸೆಗೆ ಮತ್ತು ವಾಣಿಜ್ಯಬಳಕೆಯ ವಿದ್ಯುತ್ ಅನ್ನು 15 ಪೈಸೆಯಿಂದ 25 ಪೈಸೆಗೆ ಹೆಚ್ಚಳ ಮಾಡುವ ಮೂಲಕ ಜನ ಸಾಮಾನ್ಯರ ಮೇಲೆ ಮತ್ತೊಂದು ಹೊರೆಯನ್ನು ಹೇರಲು ಮುಂದಾದ ವಿದ್ಯುತ್ ಕಂಪನಿಗಳ ಕ್ರಮವನ್ನು ಸಿಪಿಐಎಂ ತೀವ್ರವಾಗಿ ಖಂಡಿಸುತ್ತದೆ ಮತ್ತು ಇದು ಜನತೆಯ ಮೇಲೆ ಎರಡು ರೀತಿಯ ತೆರಿಗೆಯ ಬರೆಯನ್ನು ಎಳೆದಿದ್ದು ಈ ಕೂಡಲೇ ಬೆಲೆ ಏರಿಕೆಯ ಕ್ರಮಗಳನ್ನು ವಾಪಾಸು ಪಡೆಯುವಂತೆ ಬಲವಾಗಿ ಒತ್ತಾಯಿಸಿದೆ.

ಕಳೆದ 2009 ರಿಂದ 2022 ರ ಇಂದಿನ ವರೆಗೆ ಪ್ರತಿ ಯೂನಿಟ್ ವಿದ್ಯುತ್ ಬೆಲೆಯನ್ನು 2.70 ರುಗಳಷ್ಟು ಹೆಚ್ಚಿಸಲಾಗಿದೆ. ಈ ಬೆಲೆ ಏರಿಕೆಯು ಎಲ್ಲ ಮನೆಗಳ ಬಿಲ್ ಗಳನ್ನು ಹೆಚ್ಚಿಸಲಿದೆ ಮತ್ತು ವಾಣಿಜ್ಯ ಬಳಕೆಯ ವಿದ್ಯುತ್ ಬೆಲೆಗಳ ಏರಿಕೆಯು ಸಣ್ಣ ಕೈಗಾರಿಕೆಗಳು ಮುಚ್ಚುವಂತಹ ಪರಿಸ್ಥಿತಿಯನ್ನು ವ್ಯಾಪಕಗೊಳಿಸಲಿದೆ ಹಾಗೂ ಜನ ಸಾಮಾನ್ಯರ ಮೇಲೆ ಬೆಲೆ ಏರಿಕೆಯ ಮತ್ತೊಂದು ಹೊರೆಯನ್ನು ಹೇರಲಿದೆ. ಆದ್ದರಿಂದ ಕರ್ನಾಟಕ ರಾಜ್ಯ ಸರಕಾರ ಈ ಕೂಡಲೇ ಬೆಲೆ ಏರಿಕೆಯ ಈ ಕ್ರಮಗಳನ್ನು ಹಿಂಪಡೆಯಲು ಅಗತ್ಯ ಕ್ರಮವಹಿಸಲು ಮುಂದಾಗಬೇಕೆಂದು ಮುಖ್ಯಮಂತ್ರಿಗಳನ್ನು ಸಿಪಿಐಎಂ ಒತ್ತಾಯಿಸಿದೆ.

ಬೆಲೆ ಏರಿಕೆ ಬಿಸಿ ನಡುವೆ ಕರೆಂಟ್ ಶಾಕ್: ದರ ಏರಿಕೆಗೆ ಕಾರಣಗಳೇನು? ಬೆಲೆ ಏರಿಕೆ ಬಿಸಿ ನಡುವೆ ಕರೆಂಟ್ ಶಾಕ್: ದರ ಏರಿಕೆಗೆ ಕಾರಣಗಳೇನು?

ವಿದ್ಯುತ್ ಸರಬರಾಜು ಕಂಪನಿಗಳು ತಮ್ಮ ಸರಬರಾಜುಗಳಲ್ಲಿನ ಸಮಸ್ಯೆಗಳನ್ನು ನಿವಾರಿಸಿಕೊಳ್ಳದೇ ಆ ಮೂಲಕ ಆಗುವ ವಿದ್ಯುತ್ ನಷ್ಠವನ್ನು ಜನ ಸಾಮಾನ್ಯರ ಮೇಲೆ ಹೇರುತ್ತಿರುವುದನ್ನು ಒಪ್ಪಲಾಗದು. ಇದಕ್ಕೆ ಆ ಕಂಪನಿಗಳು ಮತ್ತು ಸರಕಾರ ಅಗತ್ಯ ಕ್ರಮವಹಿಸಬೇಕು.

CPIM condemns Power Tariff hike in Karnataka

ಸಾರ್ವಜನಿಕ ಕ್ಷೇತ್ರದ ಕೆಪಿಸಿಲ್ ಮೂಲಕ ಅತ್ಯಂತ ಕಡಿಮೆ ಬೆಲೆಗೆ ವಿದ್ಯುತ್ ಉತ್ಪಾದನೆಯಾಗುತ್ತಿದ್ದರೂ ಖಾಸಗೀ ಕಂಪನಿಗಳ ದುಬಾರಿ ವಿದ್ಯುತ್ ಖರೀದಿಯನ್ನು ಮುಂದುವರೆಸಲು ಆಗಿಂದಾಗ್ಗೆ ರಾಜ್ಯದ ಹಲವು ಘಟಕಗಳಲ್ಲಿ ಸಲ್ಲದ ನೆಪ ಹೇಳಿ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗುತ್ತಿದೆ.ಈ ಕುರಿತು ಅಗತ್ಯ ಸ್ವತಂತ್ರ ನ್ಯಾಯಾಂಗದ ತನಿಖೆಗೆ ಕ್ರಮವಹಿಸುವುದು ಅಗತ್ಯವಿದೆ.

ಏಪ್ರಿಲ್ 1ರಿಂದ ಕರ್ನಾಟಕದಲ್ಲಿ ವಿದ್ಯುತ್ ದರ ಏರಿಕೆ?ಏಪ್ರಿಲ್ 1ರಿಂದ ಕರ್ನಾಟಕದಲ್ಲಿ ವಿದ್ಯುತ್ ದರ ಏರಿಕೆ?

ಅದೇ ರೀತಿ, ಸಾರ್ವಜನಿಕ ರಂಗದ ವಿದ್ಯುತ್ ಉತ್ಪಾದನೆ (ಕೆಪಿಸಿಎಲ್) ಹಾಗೂ ಸರಬರಾಜು ಕಂಪನಿಗಳನ್ನು ಖಾಸಗೀಕರಿಸುವ ಲೂಟಿಕೋರ ಸಂಚಿನ ದುರುದ್ದೇಶವು ಈ ಬೆಲೆ ಏರಿಕೆಯ ಹಿಂದೆ ಅಡಗಿರುವುದನ್ನು ಸಾರ್ವಜನಿಕರು ಗಮನಿಸಿ ಪ್ರತಿರೋಧಿಸುವಂತೆ ಸಿಪಿಐಎಂ ಕರೆ ನೀಡುತ್ತದೆ ಎಂದು ಸಿಪಿಐಎಂ ಕಾರ್ಯದರ್ಶಿ ಯು ಬಸವರಾಜ ಹೇಳಿದರು.

English summary
The Karnataka Electricity Regulatory Commission (KERC) hiked power tariff in state. New fare will come to effect from April 1st. CPIM condemns Power Tariff hike in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X