• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

3ನೇ ಅಲೆ ಎನ್ನುವ ಪೆಡಂಭೂತ: ಸಿಹಿಸುದ್ದಿ ನೀಡಿದ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆ

|
Google Oneindia Kannada News

ಕೊರೊನಾ ಎರಡನೇ ಅಲೆಯು ರಾಜ್ಯದಲ್ಲಿ ಮತ್ತು ದೇಶದಲ್ಲಿ ಗಣನೀಯವಾಗಿ ಕಮ್ಮಿಯಾಗುತ್ತಿದೆ. ಕಳೆದ 24 ಗಂಟೆಯಲ್ಲಿ ಒಟ್ಟಾರೆಯಾಗಿ 38,012 ಜನರು ಗುಣಮುಖರಾಗಿರುವುದು ಒಂದು ಕಡೆ. ಇನ್ನೊಂದು ಕಡೆ, ಕಳೆದ 24 ಗಂಟೆಯಲ್ಲಿ 27,176 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ.

ಸೆಪ್ಟಂಬರ್ ಹದಿನಾಲ್ಕಕ್ಕೆ ಅನ್ವಯವಾಗುವಂತೆ, ದೇಶದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 3,51,087. ಕೇರಳ ಹೊರತಾಗಿ ದೇಶದ ಎಲ್ಲಾ ರಾಜ್ಯಗಳಲ್ಲೂ ಕೊರೊನಾ ಸೋಂಕಿತರ ಸಂಖ್ಯೆ ಭಾರೀ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿರುವುದು ನೆಮ್ಮದಿಯ ವಿಚಾರ.

ಸಾಮಾಜಿಕ ಮಾಧ್ಯಮದಲ್ಲಿ ಕೊರೊನಾ ಸುಳ್ಳು ಮಾಹಿತಿ ಹರಡುವಿಕೆಯಲ್ಲಿ ಭಾರತವೇ ಮೊದಲುಸಾಮಾಜಿಕ ಮಾಧ್ಯಮದಲ್ಲಿ ಕೊರೊನಾ ಸುಳ್ಳು ಮಾಹಿತಿ ಹರಡುವಿಕೆಯಲ್ಲಿ ಭಾರತವೇ ಮೊದಲು

ಈ ನಡುವೆ, ಅಕ್ಟೋಬರ್ ತಿಂಗಳಿಂದ ಮೂರನೇ ಅಲೆಯ ಕಾಟ ಆರಂಭವಾಗಲಿದೆ ಮತ್ತು ಇತರ ಗಂಭೀರತೆಯ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ವೈದ್ಯಕೀಯ ಲೋಕದಲ್ಲೂ ಈ ವಿಚಾರದಲ್ಲಿ ಗೊಂದಲದ ಹೇಳಿಕೆಗಳೇ ಹೆಚ್ಚಾಗುತ್ತಿದೆ.

ಕೊರೊನಾ ಮಕ್ಕಳಿಗೆ ಹೆಚ್ಚಾಗಿ ಕಾಡಲಿದೆ, ಇದರ ತೀವ್ರತೆ ಹೆಚ್ಚಾಗಲಿದೆ, ಮತ್ತಷ್ಟು ಸಾವುನೋವುಗಳಿಗೆ ನಾವು ಸಾಕ್ಷಿಯಾಗಬೇಕಾಗುತ್ತದೆ ಎನ್ನುವ ಭಯಪಡುವ ಸುದ್ದಿಗಳ ನಡುವೆ, ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಯೊಂದು, ಈ ವಿಚಾರದಲ್ಲಿ ಅಧ್ಯಯನ ನಡೆಸಿ ವರದಿಯೊಂದನ್ನು ನೀಡಿದೆ.

 ಸಾಮಾಜಿಕ ತಾಣದಲ್ಲಿ ಕೊರೊನಾ ಸುಳ್ಳುಸುದ್ದಿ ಹಬ್ಬಿಸುವಲ್ಲಿ ಭಾರತ ನಂಬರ್ ಒನ್

ಸಾಮಾಜಿಕ ತಾಣದಲ್ಲಿ ಕೊರೊನಾ ಸುಳ್ಳುಸುದ್ದಿ ಹಬ್ಬಿಸುವಲ್ಲಿ ಭಾರತ ನಂಬರ್ ಒನ್

ಇತ್ತೀಚೆಗೆ ಕೊರೊನಾ ಮೊದಲನೇ ಮತ್ತು ಎರಡನೇ ಅಲೆ ಆರಂಭವಾದ ನಂತರ ಅಧ್ಯಯನವೊಂದನ್ನು ನಡೆಸಲಾಗಿತ್ತು. ಅದು, ಸಾಮಾಜಿಕ ಜಾಲತಾಣದಲ್ಲಿ ಕೋವಿಡ್ ಸಂಬಂಧ ಹರಡುವ ಸುದ್ದಿಯ ಬಗ್ಗೆ. ಕೊರೊನಾ ಸೋಂಕಿನ ಕುರಿತು ಹೆಚ್ಚು ಸುಳ್ಳು ಸುದ್ದಿಗಳನ್ನು ಹರಡುವ ವಿಚಾರದಲ್ಲಿ ನಡೆಸಲಾದ ಅಧ್ಯಯನದಲ್ಲಿ ಭಾರತ ಮೊದಲನೇ ಸ್ಥಾನದಲ್ಲಿದೆಯಂತೆ. ಸಜನ್ ಇಂಟರ್ ನ್ಯಾಷನಲ್ ಫೆಡರೇಷನ್ ಆಫ್ ಲೈಬ್ರರಿ ಅಸೋಸಿಯೇಟ್ಸ್ ಅಂಡ್ ಇನ್‌ಸ್ಟಿಟ್ಯೂಷನಲ್ ಜರ್ನಲ್‌ನಲ್ಲಿ ಈ ಅಧ್ಯಯನದ ವರದಿಯನ್ನು ಪ್ರಕಟಿಸಲಾಗಿದೆ.

 ಚಂಡೀಗಢದ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಯಾಗಿರುವ ಪಿಜಿಐಎಂಇಆರ್

ಚಂಡೀಗಢದ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಯಾಗಿರುವ ಪಿಜಿಐಎಂಇಆರ್

ಚಂಡೀಗಢದ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಯಾಗಿರುವ ಪಿಜಿಐಎಂಇಆರ್ ನಡೆಸಿರುವ ಸಮೀಕ್ಷೆಯ ಪ್ರಕಾರ, ಮೂರನೇ ಅಲೆಯ ಕಾಟ ಅಷ್ಟಾಗಿ ಮಕ್ಕಳಿಗೆ ಇರುವುದಿಲ್ಲ. ಈ ವಿಚಾರದ ಬಗ್ಗೆ ಮಾತನಾಡುತ್ತಿದ್ದ ಸಂಸ್ಥೆಯ ನಿರ್ದೇಶಕರಾದ ಡಾ.ಜಗತ್ ರಾಮ್, "ಮಕ್ಕಳಲ್ಲಿ ಪ್ರತಿಕಾಯ ಶಕ್ತಿ ಹೆಚ್ಚಾಗಿರುತ್ತದೆ ಮತ್ತು ಉತ್ಪತ್ತಿಯಾಗುತ್ತಲೇ ಇರುತ್ತದೆ. ಹಾಗಾಗಿ, ಮಕ್ಕಳು ಮೂರನೇ ಅಲೆಯಿಂದ ಸುರಕ್ಷಿತ"ಎಂದು ಹೇಳಿದ್ದಾರೆ.

 ಪಿಜಿಐಎಂಇಆರ್ ವೈದ್ಯಕೀಯ ಸಂಸ್ಥೆಯ ನಿರ್ದೇಶಕರಾದ ಡಾ.ಜಗತ್ ರಾಮ್

ಪಿಜಿಐಎಂಇಆರ್ ವೈದ್ಯಕೀಯ ಸಂಸ್ಥೆಯ ನಿರ್ದೇಶಕರಾದ ಡಾ.ಜಗತ್ ರಾಮ್

"ದೇಶದಲ್ಲಿ ಒಟ್ಟಾರೆಯಾಗಿ ಶೇ. ಎಪ್ಪತ್ತರಷ್ಟು ಮಕ್ಕಳಿಗೆ ಕೊರೊನಾ ಸೋಂಕಿನ ವಿರುದ್ದ ಹೋರಾಡುವ ಪ್ರತಿಕಾಯ ಶಕ್ತಿಯಿರುತ್ತದೆ. ಇದರ ಜೊತೆಗೆ, ಕೊರೊನಾ ವಿರುದ್ದ ಹೋರಾಡುವುದಕ್ಕೂ ದೇಹದಲ್ಲಿ ಶಕ್ತಿ ಬಂದಿರುತ್ತದೆ. ಚಂಡೀಗಢದ ಭಾಗದ ಹಲವು ಮಕ್ಕಳಲ್ಲಿ ತಪಾಸಣೆಗೆ ಒಳಪಡಿಸಿ ಈ ಅಧ್ಯಯನವನ್ನು ಮಾಡಲಾಗಿದೆ. ಹಾಗಾಗಿ, ಮೂರನೇ ಮಕ್ಕಳು ಟಾರ್ಗೆಟ್ ಎನ್ನುವ ಅಂಶಕ್ಕೆ ಪುಷ್ಟೀಕರಣ ನೀಡುವ ಅಂಶಗಳಿಲ್ಲ"ಎಂದು ಡಾ. ಜಗತ್ ರಾಮ್ ಹೇಳಿದ್ದಾರೆ.

  ತಾಲಿಬಾನ್ ಮೇಲೆ ದಾಳಿ ಮಾಡಲು ಭಾರತದ ಸೇನೆಯ ಸಹಾಯ ಕೋರಿದ ಅಮೆರಿಕ | Oneindia Kannada
   ಲಸಿಕೆ ಹಾಕಿಸಿಕೊಳ್ಳುವುದನ್ನು ಜನರು ಆದ್ಯತೆಯಿಂದ ಮಾಡಬೇಕು

  ಲಸಿಕೆ ಹಾಕಿಸಿಕೊಳ್ಳುವುದನ್ನು ಜನರು ಆದ್ಯತೆಯಿಂದ ಮಾಡಬೇಕು

  "ರಾಜಧಾನಿ ನವದೆಹಲಿ ಮತ್ತು ಮುಂಬೈ ಭಾಗದಲ್ಲೂ ಸೆರೋ ಸಂಸ್ಥೆ ಈ ವಿಚಾರದ ಮೇಲೆ ಅಧ್ಯಯನ ನಡೆಸಿದೆ. ಅಲ್ಲೂ, ಇದೇ ರೀತಿಯ ಫಲಿತಾಂಶಗಳು ಬಂದಿರುವುದು ನಿಟ್ಟುಸಿರು ಬಿಡುವ ವಿಚಾರ. ಆದರೆ, ಸರಕಾರದ ಮಾರ್ಗಸೂಚಿಗಳನ್ನು ಜನರು ತಪ್ಪದೇ ಪಾಲಿಸಬೇಕು, ಇನ್ನೊಂದಷ್ಟು ದಿನ ಜನರು ಸಹಕರಿಸಿದರೆ ಈ ಮಾರಿ ನಮ್ಮಿಂದ ದೂರವಾಗುವ ದಿನ ದೂರವಿಲ್ಲ. ಕೂರೊನಾ ಲಸಿಕೆ ಹಾಕಿಸಿಕೊಳ್ಳುವುದನ್ನು ಜನರು ಆದ್ಯತೆಯಿಂದ ಮಾಡಬೇಕು"ಎಂದು ಡಾ.ಜಗತ್ ರಾಮ್ ಹೇಳಿದ್ದಾರೆ.

  English summary
  No possibility of Covid 3rd wave in India, claims PGIMER scientist. Know More
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X