• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜ್ಯದಲ್ಲಿ ಐದು ಜಿಲ್ಲೆಗಳಲ್ಲಿ ಲಸಿಕೆ ಡ್ರೈ ರನ್ ಇಂದು: ಎಲ್ಲೆಲ್ಲಿ, ಹೇಗೆ?

|

ಬೆಂಗಳೂರು, ಜನವರಿ 2: ದೇಶದಾದ್ಯಂತ ಶನಿವಾರದಿಂದ ಕೋವಿಡ್ ಲಸಿಕೆ ಪೂರ್ವಾಭ್ಯಾಸ ಕಾರ್ಯಕ್ರಮ ನಡೆಯಲಿದೆ. ಕೋವಿಡ್ ಲಸಿಕೆಗಳು ಅಧಿಕೃತವಾಗಿ ಅನುಮೋದನೆಗೊಂಡು ಚುಚ್ಚುಮದ್ದು ಕಾರ್ಯಕ್ರಮ ಆರಂಭವಾದ ಬಳಿಕ ಯಾವುದೇ ಅಡೆತಡೆ, ಗೊಂದಲಗಳಿಲ್ಲದಂತೆ ನಡೆಸಲು ಈ ತಾಲೀಮು ನೆರವಾಗಲಿದೆ. ಈಗಾಗಲೇ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಸಿಕೆ ಕಾರ್ಯಕ್ರಮಕ್ಕೆ ಸಕಲ ತಯಾರಿ ನಡೆಸಲಾಗಿದೆ.

   Sreesanth was seen on the field after 8 years | Oneindia Kannada

   ಲಸಿಕೆ ಕಾರ್ಯಕ್ರಮದ ಯೋಜನೆ, ಜಾರಿ ಹಾಗೂ ಅದರ ಸವಾಲುಗಳನ್ನು ಅರಿಯಲು ಈ ಅಣಕು ಕಾರ್ಯಾಚರಣೆ ನಡೆಸಲಾಗುತ್ತಿದೆ. ಕೊರೊನಾ ವಾರಿಯರ್ಸ್‌ಗಳನ್ನು ಪೂರ್ವಾಭ್ಯಾಸ ಕಾರ್ಯಕ್ರಮಕ್ಕೆ ಬಳಸಿಕೊಳ್ಳಲಾಗುತ್ತಿದೆ.

   ರಾಜ್ಯದ ಐದು ಜಿಲ್ಲೆಗಳಲ್ಲಿನ ಪ್ರತಿ ಮೂರು ಕೇಂದ್ರಗಳಲ್ಲಿ ಶನಿವಾರ ಪೂರ್ವಾಭ್ಯಾಸ ನಡೆಯಲಿದೆ. ಪ್ರತಿ ಕೇಂದ್ರದಲ್ಲಿ 25 ಜನರಂತೆ ಎರಡು ಗಂಟೆಗಳ ಕಾಲ ತಾಲೀಮು ನಡೆಯಲಿದೆ. ಪ್ರತಿ ಜಿಲ್ಲೆಯಲ್ಲಿ ಒಟ್ಟು 75 ಮಂದಿ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಜ್ಯದಲ್ಲಿ ಈಗಾಗಲೇ ಲಸಿಕೆ ಪಡೆದುಕೊಳ್ಳಲು 6.22 ಲಕ್ಷ ಜನರನ್ನು ನೋಂದಣಿ ಮಾಡಲಾಗಿದೆ.

   ಇಂದು ನಡೆಯುವ ತಾಲೀಮಿನ ವೇಳೆ ಆರೋಗ್ಯ ಸಿಬ್ಬಂದಿ ಲಸಿಕೆ ನೀಡುವ ತಾಲೀಮು, ಲಸಿಕೆ ಬಗ್ಗೆ ಮಾಹಿತಿ ನೀಡುವ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಒಬ್ಬರು ವೈದ್ಯರು ಮತ್ತು ನಾಲ್ವರು ಸಹಾಯಕರು ಭಾಗವಹಿಸಲಿದ್ದಾರೆ. ಮುಂದೆ ಓದಿ.

   ಅಲ್ಲಿ ಏನೇನು ನಡೆಯುತ್ತದೆ?

   ಅಲ್ಲಿ ಏನೇನು ನಡೆಯುತ್ತದೆ?

   ಇದರಲ್ಲಿ ಭಾಗವಹಿಸುವ ವಾರಿಯರ್ಸ್‌ಗಳು ನೋಂದಣಿ ಸಮಯದಲ್ಲಿ ನೀಡಿದ್ದ ದಾಖಲೆಗಳನ್ನು ಹಾಜರುಪಡಿಸಬೇಕು. ಆರೋಗ್ಯ ಕೇಂದ್ರದಲ್ಲಿ ಮೊದಲು ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ. ಬಳಿಕ ವಿಶ್ರಾಂತಿ ಕೊಠಡಿಗೆ ರವಾನಿಸಿ ಅಲ್ಲಿ ಲಸಿಕೆ ಬಗ್ಗೆ ಸಿಬ್ಬಂದಿಯಿಂದ ಮಾಹಿತಿ ನೀಡಲಾಗುತ್ತದೆ. ಬಳಿಕ ವ್ಯಾಕ್ಸಿನ್ ಕೊಠಡಿಯಲ್ಲಿ ಲಸಿಕೆ ನೀಡುವ ತಾಲೀಮು ನಡೆಸಿ ನಿಗಾ ಘಟಕಕ್ಕೆ ಕರೆದೊಯ್ಯಲಾಗುತ್ತದೆ. ಅಲ್ಲಿ 30 ನಿಮಿಷ ನಿಗಾದಲ್ಲಿ ಇರಿಸಲಾಗುತ್ತದೆ. ಈ ಪ್ರಕ್ರಿಯೆಯ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ವರದಿ ನೀಡಲಾಗುತ್ತದೆ.

   ಬೆಂಗಳೂರು, ಕಲಬುರಗಿ

   ಬೆಂಗಳೂರು, ಕಲಬುರಗಿ

   ಬೆಂಗಳೂರು: ದಕ್ಷಿಣ ವಲಯದ ವಿದ್ಯಾಪೀಠ ಸಾರ್ವಜನಿಕ ಆರೋಗ್ಯ ಕೇಂದ್ರ, ಪಶ್ಚಿಮ ವಲಯದ ಕಾಮಾಕ್ಷಿಪಾಳ್ಯ ಆರೋಗ್ಯ ಮತ್ತು ಆನೇಕಲ್‌ನ ಹಾರಗದ್ದೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಾಲೀಮು ನಡೆಯಲಿದೆ.

   ಕಲಬುರಗಿ ಜಿಲ್ಲೆ: ಅಶೋಕನರ ಪ್ರಾಥಮಿಕ ಆರೋಗ್ಯ ಕೇಂದ್ರ, ಜೇವರ್ಗಿ ತಾಲೂಕು ಆಸ್ಪತ್ರೆ, ಔರಾದ್ ಪ್ರಾಥಮಿಕ ಆರೋಗ್ಯ ಕೇಂದ್ರ.

   ಶಿವಮೊಗ್ಗ, ಮೈಸೂರು

   ಶಿವಮೊಗ್ಗ, ಮೈಸೂರು

   ಶಿವಮೊಗ್ಗ: ಭದ್ರಾವತಿ ಅಂತರಗಂಗೆ ಪ್ರಾಥಮಿಕ ಆರೋಗ್ಯ ಕೇಂದ್ರ, ಶಿಕಾರಿಪುರ ತಾಲೂಕು ಆಸ್ಪತ್ರೆ, ಶಿವಮೊಗ್ಗ ಮೆಡಿಕಲ್ ಕಾಲೇಜ್

   ಮೈಸೂರು: ಜಯನಗರದ ಸಮುದಾಯ ಆರೋಗ್ಯ ಕೇಂದ್ರ, ಕೆ.ಆರ್ ನಗರ ಸಾರ್ವಜನಿಕ ಆಸ್ಪತ್ರೆ, ಹುಣಸೂರಿನ ಬಿಳಿಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರ.

   ದೇಶದ 30 ಕೋಟಿ ಜನರಿಗೆ ಮಾತ್ರ ಉಚಿತ ಲಸಿಕೆ, ಎಲ್ಲರಿಗೂ ಅಲ್ಲ

   ಬೆಳಗಾವಿಯಲ್ಲಿ ಡ್ರೈ ರನ್

   ಬೆಳಗಾವಿಯಲ್ಲಿ ಡ್ರೈ ರನ್

   ಬೆಳಗಾವಿ: ವಂಟಮುರಿ ಪ್ರಾಥಮಿಕ ಆರೋಗ್ಯ ಕೇಂದ್ರ, ಕಿತ್ತೂರು ಸಮುದಾಯ ಆರೋಗ್ಯ ಕೇಂದ್ರ, ಹುಕ್ಕೇರಿ ತಾಲೂಕು ಅಸ್ಪತ್ರೆ

   ಇನ್ನು ದೆಹಲಿ, ಜಾರ್ಖಂಡ್, ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಗುಜರಾತ್, ಕೇರಳ, ಪಂಜಾಬ್, ಹರ್ಯಾಣಗಳಲ್ಲಿ ಕೂಡ ಲಸಿಕೆಯ ಡ್ರೈ ರನ್ ನಡೆಯಲಿದೆ. ಒಟ್ಟು 116 ಜಿಲ್ಲೆಗಳ 259 ಕೇಂದ್ರಗಳಲ್ಲಿ ತಾಲೀಮು ನಡೆಯಲಿದೆ.

   English summary
   Covid vaccine dry run in Karnataka's 5 districts on Saturday. All you need to know in Kannada.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X