ಕೊರೊನಾ ಭೀತಿ ಬೇಡ; ನಿರಾತಂಕವಾಗಿ ಐಸ್‌ ಕ್ರೀಂ ಸವಿಯಿರಿ

ಬೆಂಗಳೂರು, ಮಾರ್ಚ್ 19 : ಐಸ್ ಕ್ರೀಂ ತಿಂದರೆ ಕೊರೊನಾ ಹರಡುತ್ತದೆ ಎಂದು ಹರಿದಾಡುತ್ತಿದ್ದ ಸಂದೇಶವನ್ನು ವೈದ್ಯರು ತಳ್ಳಿ ಹಾಕಿದ್ದಾರೆ. ಬೇಸಿಗೆಯ ಬಿಸಿಯಲ್ಲಿ ಐಸ್‌ ಕ್ರೀಂ ತಿನ್ನುವವರು, ವ್ಯಾಪಾರಿಗಳು ಇದರಿಂದ ನಿಟ್ಟುಸಿರು ಬಿಟ್ಟಿದ್ದಾರೆ.

ಈ ತಿಂಗಳ ಮೊದಲ ವಾರದಲ್ಲಿ ಮೇಲಷ್ಯಾದಲ್ಲಿ ವಾಟ್ಸಪ್ ಮೂಲಕ ಹರಿದಾಡುತ್ತಿದ್ದ ಐಸ್‌ ಕ್ರೀಂ ಸಂದೇಶ ಬೆಂಗಳೂರಿಗೆ ಬಂದು ತಲುಪಿತ್ತು. ಐಸ್ ಕ್ರೀಂ ಪ್ರಿಯರ ಆತಂಕಕ್ಕೆ ಇದು ಕಾರಣವಾಗಿತ್ತು. ಈಗ ಯೂನಿಸೆಫ್ ವೈರಲ್ ಆಗಿರುವ ಸಂದೇಶ ಸುಳ್ಳು ಎಂದು ಹೇಳಿದೆ.

ಐಸ್‌ ಕ್ರೀಂ ತಿಂದರೆ ಕೊರೊನಾ ಹರಡಲಿದೆ ಎಂಬ ಸಂದೇಶ ಬೆಂಗಳೂರಿಗೂ ಬಂದಿತ್ತು. ಪಿಐಬಿ ಕೊರೊನಾ ಹರಡದಂತೆ ತಡೆಯಲು ಐಸ್‌ ಕ್ರೀಂನಿಂದ ದೂರವಿರಿ ಎಂಬ ಸಂದೇಶ ಸುಳ್ಳು ಎಂದು ಹೇಳಿತ್ತು. ಈಗ ಯೂನಿಸೆಫ್ ಸಹ ಈ ಕುರಿತು ಸ್ಪಷ್ಟನೆಯನ್ನು ನೀಡಿದೆ.

Enjoy Ice Cream Viral Message On Coronavirus Fake

ಭಾರತದಲ್ಲಿನ ಐಸ್‌ ಕ್ರೀಂ ತಯಾರಕರ ಸಂಘ ತನ್ನ ವೆಬ್‌ ಸೈಟ್‌ನಲ್ಲಿ ಯೂನಿಸೆಫ್ ಹೇಳಿಕೆಯನ್ನು ಅಪ್‌ ಲೋಡ್ ಮಾಡಿದ್ದು, ಜನರ ಆತಂಕವನ್ನು ದೂರಮಾಡಿದೆ. ಈ ಸುಳ್ಳು ವಾಟ್ಸಪ್ ಸುದ್ದಿಯ ಕಾರಣದಿಂದಾಗಿ ಸ್ಥಳೀಯವಾಗಿ ಐಸ್‌ ಕ್ರೀಂ ಮಾರಾಟದಲ್ಲಿ ಕುಸಿತ ಉಂಟಾಗಿತ್ತು.

8 ಅಪ್ಸರಾ ಐಸ್‌ ಕ್ರೀಂ ಔಟ್‌ ಲೆಟ್ ಹೊಂದಿರುವ ಪ್ರದೀಪ್ ಬಾಲಿ ಅವರು, "ಕಳೆದ ಐದು ದಿನಗಳಿಂದ ಐಸ್‌ ಕ್ರೀಂ ವ್ಯಾಪಾರದಲ್ಲಿ ಶೇ 20ರಷ್ಟು ಕುಸಿತವಾಗಿದೆ. ಯೂನಿಸೆಫ್ ನೀಡಿದ ಹೇಳಿಕೆ ಪ್ರತಿಯನ್ನು ಔಟ್ ಲೆಟ್‌ಗಳಲ್ಲಿ ಹಾಕಿದ್ದೇವೆ" ಎಂದು ಹೇಳಿಕೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳ ಮೂಲಕ ಬಂದ ಸಂದೇಶವನ್ನು ಇತರರಿಗೆ ಕಳಿಸುವ ಮುನ್ನ ಅವುಗಳ ಸತ್ಯಾಸತ್ಯತೆ ಬಗ್ಗೆ ಒಮ್ಮೆ ಪರಿಶೀಲಿಸಿಕೊಳ್ಳಿ. ಕೊರೊನಾ ಬಗ್ಗೆ ಹಲವಾರು ಸುಳ್ಳು ಸುದ್ದಿಗಳು ಹಬ್ಬುತ್ತಿವೆ ವಾಟ್ಸಪ್ ಮೂಲಕ ಎಲ್ಲರನ್ನೂ ತಲುಪುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+