ಮತ ಎಣಿಕೆ ಆರಂಭ: ದೆಹಲಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ ಶುರು
ನವದೆಹಲಿ, ಮೇ 13: ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶ ಆರಂಭವಾದ ಬೆನ್ನಲ್ಲೇ ದೆಹಲಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಈಗಾಗಲೇ ಸಂಭ್ರಮಾಚರಣೆ ಆರಂಭಿಸಿದ್ದಾರೆ.
ವಿಧಾನಸಭಾ ಚುನಾವಣೆಗೂ ಮುನ್ನ ಹೊರಬಿದ್ದಿದ್ದ ಎಕ್ಸಿಟ್ ಪೋಲ್ ಹಾಗೂ ಕೇಂದ್ರ, ರಾಜ್ಯ ಗುಪ್ತ ಚರ ಸಂಸ್ಥೆಗಳ ಮಾಹಿತಿಗಳು ಕಾಂಗ್ರೆಸ್‌ಗೆ ಬಹುಮತ ಬರಲಿದೆ ಎಂದು ಹೇಳಲಾಗಿತ್ತು. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಚುನಾವಣಾ ತಂತ್ರಕ್ಕಿಂತ ಕಾಂಗ್ರೆಸ್ ಚುನಾವಣಾ ತಂತ್ರವೂ ಕೂಡ ಹೆಚ್ಚು ಪ್ರಬಲವಾಗಿತ್ತು.

ತಾವು ಬಹುಮತ ಪಡದೇ ತೀರುತ್ತೇವೆ ಎಂದು ಹೇಳುತ್ತಿರುವ ಕಾಂಗ್ರೆಸ್ ನಾಯಕ ವಿಶ್ವಾಸದ ನುಡಿಯಿಂದ ದೇಶಾದ್ಯಂತ ಈಗ ಮಿಂಚಿನ ಸಂಚಾರ ಶುರುವಾದ ಬೆನ್ನಲ್ಲೇ ಈಗ ಕಾಂಗ್ರೆಸ್ ಕಾರ್ಯಕರ್ತರು ಫಲಿತಾಂಶ ಹೊರಬೀಳುವ ಮುನ್ನವೇ ಈಗ ಸಂಭ್ರಮಾಚರಣೆ ಆರಂಭಿಸಿದ್ದಾರೆ. ಫಲಿತಾಂಶಕ್ಕೂ ಮುನ್ನವೇ ಈಗ ಸಿದ್ದರಾಮಯ್ಯ ಅವರ ಅಭಿಮಾನಿಗಳು ಮುಂದಿನ ಮೈ ಸಿಎಂ ಎಂದು ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.
#WATCH | Celebration begins at the Congress office in Delhi ahead of the counting of votes for the 224 seats in the Karnataka Legislative Assembly elections held on May 10.#KarnatakaElectionResults2023 pic.twitter.com/FCSZrwv01C
— ANI (@ANI) May 13, 2023
ಈಗ ಫಲಿತಾಂಶದ ಹೊತ್ತಿನಲ್ಲಿ ಕಾಂಗ್ರೆಸ್ ಪರ ಅಲೆ ಎಂಬ ನಂಬಿಕೆಯನ್ನು ಕೈ ಬೆಂಬಲಿಗರು ವ್ಯಕ್ತಪಡಿಸಿದ್ದಾರೆ. ಆ ಕಾರಣಕ್ಕಾಗಿ ಅವರು 'MyCM' ಕ್ಯಾಂಪೇನ್ ಅನ್ನು ಆರಂಭಿಸಿದ್ದಾರೆ. ಕಾಂಗ್ರೆಸ್‌ಗೆ ಬಹುಮತ ಬಂದರೆ ಸಿದ್ದರಾಮಯ್ಯನವರೇ ಸಿಎಂ ಆಗಬೇಕೆಂದು ಬೆಂಬಲಗರು ಒತ್ತಾಯಿಸುತ್ತಿದ್ದಾರೆ.












Click it and Unblock the Notifications