ಲೋಕಾಯುಕ್ತದಲ್ಲಿ ಭ್ರಷ್ಟಾಚಾರ : ಪತ್ರಕರ್ತ ಸೇರಿ ಇಬ್ಬರ ಬಂಧನ
ಬೆಂಗಳೂರು, ಜುಲೈ 23 : ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರದ ತನಿಖೆ ನಡೆಸುತ್ತಿರುವ ಎಸ್‌ಐಟಿ ಮಂಗಳವಾರ ಇಬ್ಬರನ್ನು ಬಂಧಿಸಿದೆ. ಬಂಧಿತರನ್ನು ಜುಲೈ 31ರವರೆಗೆ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಮೂವರನ್ನು ಬಂಧಿಸಲಾಗಿದೆ.
ಮಂಗಳವಾರ ಎಸ್‌ಐಟಿ ಶ್ರೀನಿವಾಸಗೌಡ ಮತ್ತು ಶಂಕರಗೌಡ ಅವರನ್ನು ಬಂಧಿಸಿದ್ದು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ ತಮ್ಮ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದೆ. ಶ್ರೀನಿವಾಸ ಗೌಡ ಅವರು ಪತ್ರಕರ್ತರಾಗಿದ್ದು ಕೆಲವು ದಿನಗಳ ಹಿಂದೆ ಕೆಲಸ ಮಾಡುತ್ತಿದ್ದ ದೃಶ್ಯ ಮಾಧ್ಯಮದ ಸಂಸ್ಥೆಗೆ ರಾಜೀನಾಮೆ ನೀಡಿದ್ದಾರೆ.[SIT ಯಿಂದ ಅಶೋಕ್ ಕುಮಾರ್ ಬಂಧನ]

ಶಂಕರಗೌಡ ಅವರು ಮೂಲತಃ ತುಮಕೂರಿನವರಾಗಿದ್ದು ಆರ್‌ಟಿಐ ಕಾರ್ಯಕರ್ತರಾಗಿದ್ದಾರೆ. ಈ ಇಬ್ಬರೂ ಸೋಮವಾರ ಎಸ್‌ಐಟಿ ಬಂಧಿಸಿದ ಅಶೋಕ್ ಕುಮಾರ್ ಅವರ ಸ್ನೇಹಿತರಾಗಿದ್ದಾರೆ. ಈ ಪ್ರಕರಣದಲ್ಲಿ ಅಶ್ವಿನ್ ರಾವ್ ಮೊದಲ ಆರೋಪಿಯಾಗಿದ್ದು, ಅಶೋಕ್ ಕುಮಾರ್ ಎರಡನೇ ಆರೋಪಿಯಾಗಿದ್ದಾರೆ. ಶ್ರೀನಿವಾಸ ಗೌಡ ಮತ್ತು ಶಂಕರ ಗೌಡ ಮೂರು ಮತ್ತು ನಾಲ್ಕನೇ ಆರೋಪಿಗಳಾಗಿದ್ದಾರೆ. [ಲೋಕಾಯುಕ್ತದಲ್ಲಿ ಇದೇನಿದು ಹಗರಣ]
ಅಶ್ವಿನ್ ರಾವ್ ಅವರ ಜೊತೆ ಹಣದ ಬೇಡಿಕೆ ಪ್ರಕರಣದಲ್ಲಿ ಈ ಇಬ್ಬರು ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ನಡುವೆ ಜುಲೈ 25ರೊಳಗೆ ವಿಚಾರಣೆಗೆ ಹಾಜರಾಗಬೇಕು ಎಂದು ಎಸ್‌ಐಟಿ ಅಶ್ವಿನ್ ರಾವ್ ಅವರಿಗೆ ನೋಟಿಸ್ ಜಾರಿ ಮಾಡಿದೆ.












Click it and Unblock the Notifications