ಕರ್ನಾಟಕ ಲೋಕಾಯುಕ್ತ ಹಗರಣದ Timeline
ಬೆಂಗಳೂರು, ಡಿಸೆಂಬರ್ 08 : ಸರ್ಕಾರಿ ಅಧಿಕಾರಿಯೊಬ್ಬರ ಮನೆ ಮೇಲೆ ನಡೆಯುವ ದಾಳಿ ತಪ್ಪಿಸಲು 1 ಕೋಟಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪ ಕರ್ನಾಟಕ ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣವನ್ನು ಬಯಲಿಗೆ ತಂದಿದೆ. ಭಾಸ್ಕರರಾವ್ ರಾಜೀನಾಮೆಯೊಂದಿಗೆ ಈ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ.
2015ರ ಮೇ 11ರಂದು ಲೋಕಾಯುಕ್ತ ಎಸ್ಪಿ ಸೋನಿಯಾ ನಾರಂಗ್ ಬರೆದ ಪತ್ರದಿಂದ ಲೋಕಾಯುಕ್ತದಲ್ಲಿ ನಡೆದ ಈ ಹಗರಣ ಬೆಳಕಿಗೆ ಬಂದಿತು. ಲೋಕಾಯುಕ್ತ ಕಚೇರಿಯಲ್ಲಿಯೇ ಹಣದ ಬೇಡಿಕೆ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿದೆ. [ಭಾಸ್ಕರರಾವ್ ರಾಜೀನಾಮೆ]

ಕರ್ನಾಟಕ ಸರ್ಕಾರ ಹಗರಣದ ತನಿಖೆಯನ್ನು ವಿಶೇಷ ತನಿಖಾ ದಳ (ಎಸ್‌ಐಟಿ)ಗೆ ನೀಡಿದೆ. ಕರ್ನಾಟಕದ ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರರಾವ್ ಪುತ್ರ ಅಶ್ವಿನ್ ರಾವ್ ಅವರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಗಳಿದ್ದು, ಜೈಲು ಸೇರಿದ್ದಾರೆ. ಲೋಕಾಯುಕ್ತ ಹಗರಣದ Timeline ಇಲ್ಲಿದೆ.....[ಕರ್ನಾಟಕ ಲೋಕಾಯುಕ್ತದಲ್ಲಿ ಇದೇನಿದು ಹಗರಣ?]
ಲೋಕಾಯುಕ್ತ ಹಗರಣದ Timeline
* 2015ರ ಮೇ 11ರಂದು ಲೋಕಾಯುಕ್ತ ಕಚೇರಿಯಲ್ಲಿನ ಡೀಲಿಂಗ್ ಬಗ್ಗೆ ಎಸ್‍ಪಿ ಸೋನಿಯಾ ನಾರಂಗ್ ಪತ್ರ
* ಜೂನ್ 11ರಂದು ಟಿವಿ ವಾಹಿನಿಗಳ ಮೂಲಕ ಲೋಕಾಯುಕ್ತ ರಿಜಿಸ್ಟ್ರಾರ್‌ಗೆ ನಾರಂಗ್ ಬರೆದ ಪತ್ರ ಬಹಿರಂಗ
* ಜೂನ್ 24 - ಆರೋಪದ ನಾರಂಗ್ ಅವರಿಂದ ವರದಿ ಕೇಳಿದ ಉಪ ಲೋಕಾಯುಕ್ತ ಸುಭಾಷ್ ಬಿ.ಅಡಿ
* ಹಗರಣದಲ್ಲಿ ಕೇಳಿಬಂತು ಲೋಕಾಯುಕ್ತರ ಪುತ್ರನ ಹೆಸರು
* ಜೂನ್ 26 - ಮೌನ ಮುರಿದ ಭಾಸ್ಕರರಾವ್, ಪುತ್ರ ಅಶ್ವಿನ್ ರಾವ್ ಭಾಗಿಯಾಗಿಲ್ಲ ಎಂದು ಸ್ಪಷ್ಟನೆ
* ಹಗರಣದ ತನಿಖೆಯನ್ನು ಸಿಸಿಬಿಗೆ ವಹಿಸುವುದಾಗಿ ಘೋಷಣೆ
* ಜುಲೈ 01 - ಸೋನಿಯಾ ನಾರಂಗ್ ನಡೆಸುತ್ತಿದ್ದ ತನಿಖೆಗೆ ಹೈಕೋರ್ಟ್ ತಡೆ, ತಡೆ ತಂದ ಅಶ್ವಿನ್ ರಾವ್
* ಜುಲೈ 06 - ಹಗರಣದ ತನಿಖೆಯನ್ನು ಎಸ್‌ಐಟಿಗೆ ವಹಿಸಿದ ಸರ್ಕಾರ
* ಜುಲೈ 21 - ಎಸ್‌ಐಟಿಯಿಂದ ಅಶೋಕ್ ಕುಮಾರ್ ಬಂಧನ
* ಜುಲೈ 26 - ಎಸ್‌ಐಟಿಯಿಂದ ಲೋಕಾಯುಕ್ತ ಜಂಟಿ ಆಯುಕ್ತ ಸಯ್ಯದ್ ರಿಯಾಜ್ ಬಂಧನ
* ಜುಲೈ 27 - ತೆಲಂಗಾಣದಲ್ಲಿ ಅಶ್ವಿನ್ ರಾವ್ ಬಂಧಿಸಿದ ಎಸ್‌ಐಟಿ
* ಆಗಸ್ಟ್ - ಭಾಸ್ಕರರಾವ್ ಪದಚ್ಯುತಿಗೆ ಪ್ರಕ್ರಿಯೆ ಆರಂಭಿಸಿದ ಪ್ರತಿಪಕ್ಷ ಬಿಜೆಪಿ, ಜೆಡಿಎಸ್
* ವೈ.ಭಾಸ್ಕರರಾವ್ ಪುತ್ರ ಅಶ್ವಿನ್ ರಾವ್ ವಿರುದ್ಧ 4ನೇ ಎಫ್‌ಐಆರ್ ದಾಖಲು
* ಸೆಪ್ಟೆಂಬರ್ 16 - ಎಸ್‌ಐಟಿಯಿಂದ 5 ಆರೋಪಿಗಳ ವಿರುದ್ಧ 1,550 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ
* ನವೆಂಬರ್ 23 - ಸದನದಲ್ಲಿ ಲೋಕಾಯುಕ್ತ ಪದಚ್ಯುತಿ ನಿರ್ಣಯ ಮಂಡನೆ, ಒಪ್ಪಿಗೆ
* ಡಿಸೆಂಬರ್ 7 - ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರರಾವ್ ರಾಜೀನಾಮೆ
* ಡಿಸೆಂಬರ್ 8 - ರಾಜ್ಯಪಾಲರಿಂದ ಭಾಸ್ಕರರಾವ್ ರಾಜೀನಾಮೆ ಅಂಗೀಕಾರ












Click it and Unblock the Notifications