ಸಿಎಂ ಕಛೇರಿಯಲ್ಲಿ ಲಂಚ; ಸದನದಲ್ಲಿ ದಾಖಲೆ ನೀಡಲು ಹೆಚ್ಡಿಕೆ ಸಜ್ಜು? ಕಲಾಪದಲ್ಲಿ ನಡೆಯುತ್ತಾ ಜಟಾಪಟಿ

ಬೆಂಗಳೂರು, ಜುಲೈ04: ಕಾಂಗ್ರೆಸ್‌ ಸರ್ಕಾರ ವಿರುದ್ದ ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಭ್ರಷ್ಟಾಚಾರ ಹಾಗೂ ಕಮಿಷನ್‌ ಆರೋಪ ಮಾಡಿದ್ದು, ಇಂದು ನಡೆಯುವ ವಿಧಾನಮಂಡಲ ಅಧಿವೇಶನದಲ್ಲಿ ದಾಖಲೆಗಳನ್ನ ನೀಡಲು ಸಿದ್ದತೆಯನ್ನ ನಡೆಸಿದ್ದಾರೆ ಎನ್ನಲಾಗಿದೆ.

ಸಿಎಂ ಕಛೇರಿಯಲ್ಲೇ ಲಂಚ ಪ್ರಕರಣಗಳು ನಡೆಯುತ್ತಿವೆ. ಶಾಸಕರ ಶಿಫಾರಸ್ಸು ಪತ್ರವನ್ನ ತೆಗೆದುಕೊಂಡು ಹೋದ್ರು 30 ಲಕ್ಷ ಹಣವನ್ನ ಕೇಳಿದ್ದಾರೆ ಎಂದು ಆರೋಪಿಸಿದ್ದ ಕುಮಾರಸ್ವಾಮಿ, ನಾನು ಯಾರಿಗೂ ಹೆದರಲ್ಲ, ದಾಖಲೆಗಳಿಲ್ಲದೆ ಮಾತನಾಡುವುದಿಲ್ಲ ಎಂದು ಹೇಳಿದ್ದು, ಇಂದು ನಡೆಯುವ ಸದನದಲ್ಲಿ ದಾಖಲೆಗಳನ್ನ ಬಿಡುಗಡೆ ಮಾಡುವ ತಯಾರಿ ನಡೆಸಿದ್ದಾರೆ ಎನ್ನಲಾಗಿದೆ.

Corruption in CMO: HD Kumaraswamy to Produce Evidence in Assembly Session?

ವೈಎಸ್ಟಿ ಎಂಬ ತೆರಿಗೆ ಹೊಸದಾಗಿ ಬಂದಿದೆ ಎಂದು ಹೊಸ ಬಾಂಬ್ ಸಿಡಿಸಿದ್ದ ಮಾಜಿ ಸಿಎಂ ಹೆಚ್‌ ಡಿ ಕುಮಾರಸ್ವಾಮಿ ಆರೋಪಕ್ಕೆ ಕಾಂಗ್ರೆಸ್‌ ನಾಯಕರು ತಿರುಗೇಟು ನೀಡಿದ್ದು, ಕುಮಾರಸ್ವಾಮಿ ಗಾಳಿಯಲ್ಲಿ ಗುಂಡು ಹಾರಿಸುತ್ತಾರೆ. ಸೂಕ್ತ ದಾಖಲೆಗಳನ್ನು ಇಟ್ಟು ಮಾತಾಡಲಿ ಎಂದು ಕಾಂಗ್ರೆಸ್ ನಾಯಕರು ಹೇಳಿದ್ರು. ಹಾಗಾಗಿ ದಾಖಲೆಗಳ ಸಮೇತ ಸದನಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಬರಲಿದ್ದಾರೆ ಎಂದು ಹೇಳಲಾಗಿದೆ.

ಇಂದು ಅಥವಾ ನಾಳೆ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಮಾಡಲು ಕುಮಾರಸ್ವಾಮಿ ಗೆ ಅವಕಾಶ ಸಿಗಲಿದ್ದು, ಆ ಸಂಧರ್ಭದಲ್ಲಿ ಕಾಂಗ್ರೆಸ್ ಮೇಲಿನ ಭ್ರಷ್ಟಾಚಾರ ದ ಪ್ರಸ್ತಾಪ ಮಾಡಲು ಕುಮಾರಸ್ವಾಮಿ ಮುಂದಾಗಿದ್ದಾರೆ. ಒಂದು ವೇಳೆ ಕುಮಾರಸ್ವಾಮಿ ಭಾಷಣಕ್ಕೆ ಕಾಂಗ್ರೆಸ್ ಅಡ್ಡಿ ಪಡಿಸಿದರೆ ಅಥವಾ ದಾಖಲೆ ಕೇಳಿದರೆ ಸ್ಪೀಕರ್ ಗೆ ದಾಖಲೆ ನೀಡಲು ಕುಮಾರಸ್ವಾಮಿ ಸಿದ್ದತೆ ನಡೆಸಿದ್ದಾರೆ ಎನ್ನಲಾಗಿದೆ.

Corruption in CMO: HD Kumaraswamy to Produce Evidence in Assembly Session?

ಬಲ್ಲ ಮೂಲಗಳ ಪ್ರಕಾರ ಜೆಡಿಎಸ್ ಪಕ್ಷದ ಶಾಸಕರೊಬ್ಬರ ಶಿಫಾರಸು ಪತ್ರ ಇದ್ದರೂ ಸಿಎಂ ಕಛೇರಿಯ ಅಧಿಕಾರಿ 30 ಲಕ್ಷ ಕೇಳಿದ್ದಾರೆ ಎನ್ನಲಾಗಿದ್ದು. ಇದೇ ವಿಚಾರವನ್ನ ನಿನ್ನೆ ಕುಮಾರಸ್ವಾಮಿ ಅವರು ಸುದ್ದಿಗೋಷ್ಠಿಯಲ್ಲಿ ಪ್ರಸ್ತಾಪ ಮಾಡಿದ್ದು, ಕುಮಾರಸ್ವಾಮಿ ಅವರ ಬಳಿ ದಾಖಲೆಗಳಿವೆ ಎಂದು ಹೇಳಲಾಗಿದೆ. ಇತ್ತ ಕುಮಾರಸ್ವಾಮಿ 30 ಲಕ್ಷ ಆರೋಪಕ್ಕೆ ಬಿಜೆಪಿ ನಾಯಕ ಬಸವರಾಜ ಬೊಮ್ಮಾಯಿ ಅವರು ಸಹ ಕೋಟಿ ಕೋಟಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಇನ್ನೊಂದು ಬಾಂಬ್‌ ಸಿಡಿಸಿದ್ದು, ಕುಮಾರಸ್ವಾಮಿ ಅವರ ಆರೋಪಕ್ಕೆ ಮಾಪಜಿ ಮುಖ್ಯಮಂನತ್ರಿ ಪಬಿ ಎಸ್‌ ಯಡಿಯೂರಪ್ಪ ಬೆಂಬಲವನ್ನ ಸೂಚಿಸಿದ್ದು, ಕುಮಾರಸ್ವಾಮಿ ಅವರು ದಾಖಲೆ ಇಟ್ಟುಕೊಂಡೆ ಮಾತನಾಡುತ್ತಾರೆ ಎಂದು ಹೇಳಿದ್ದಾರೆ.

Corruption in CMO: HD Kumaraswamy to Produce Evidence in Assembly Session?

ಇತ್ತ ಕುಮಾರಸ್ವಾಮಿ ಅವರು ಸದನದಲ್ಲಿ ದಾಖಲೆಗಳನ್ನ ಬಿಡುಗಡೆ ಮಾಡುವ ಮೂಲಕ ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಲು ಪ್ಲಾನ್‌ ಹಾಕಿಕೊಂಡಿದ್ದು, ಸದನದಲ್ಲಿ ಕುಮಾರಸ್ವಾಮಿ ಅವರ ದಾಖಲೆ ಅಸ್ತ್ರ ವರ್ಕೌಟ್‌ ಆಗುತ್ತಾ ಅಂತ ಕಾದುನೋಡ್ಬೇಕಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+