• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜ್ಯದಲ್ಲಿ 5 ಸಾವಿರ ಗಡಿ ದಾಟಿದ ಕೊರೊನಾ ಸೋಂಕು; 6 ಜಿಲ್ಲೆಗಳ ಇಂದಿನ ಅಪ್ಡೇಟ್

By Lekhaka
|

ಬೆಂಗಳೂರು, ಜುಲೈ 23: ರಾಜ್ಯದಲ್ಲಿ ಇಂದು ಒಂದೇ ದಿನ 5030 ಜನರಿಗೆ ಕೊರೊನಾ ಸೋಂಕು ತಗುಲಿದ್ದು, 97 ಜನರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 80863ಕ್ಕೆ ಏರಿಕೆಯಾಗಿದ್ದು, ಪ್ರಸ್ತುತ 49931 ಪ್ರಕರಣಗಳು ಸಕ್ರಿಯವಾಗಿವೆ.

2071 ಮಂದಿ ಇಂದು ಗುಣಮುಖರಾಗಿ ಆಸ್ಪತ್ರೆಯಿಂದ ತೆರಳಿದ್ದಾರೆ. ಬೆಂಗಳೂರಿನಲ್ಲಿ ಇಂದು 2207 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 47 ಜನರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಇದುವರೆಗೂ 11,40,647 ಜನರಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದೆ. ಜಿಲ್ಲೆಗಳಲ್ಲೂ ಕೊರೊನಾ ವೈರಸ್ ಪ್ರಕರಣಗಳು ಮುಂದುವರೆದಿವೆ. ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಬಳ್ಳಾರಿ, ರಾಮನಗರ, ಚಿತ್ರದುರ್ಗ ಜಿಲ್ಲೆಗಳ ಕೊರೊನಾ ವೈರಸ್ ಪ್ರಕರಣಗಳ ಇಂದಿನ ಅಪ್ಡೇಟ್ ಇಲ್ಲಿದೆ...

 ಉಡುಪಿ‌ಯಲ್ಲಿ 160 ಕೊರೊನಾ ಪ್ರಕರಣ

ಉಡುಪಿ‌ಯಲ್ಲಿ 160 ಕೊರೊನಾ ಪ್ರಕರಣ

ಉಡುಪಿ ಜಿಲ್ಲೆಯಲ್ಲಿ ಇಂದು 160 ಮಂದಿಯಲ್ಲಿ ಕೊರೊನಾ ವೈರಸ್ ಪ್ರಕರಣ ದೃಢಪಟ್ಟಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ ‌2846ಕ್ಕೆ ಏರಿಕೆಯಾಗಿದೆ. ಸದ್ಯ 994 ಸಕ್ರಿಯ ಪ್ರಕರಣಗಳಿವೆ. ಇಂದು 65 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇಂದು ಇಬ್ಬರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದು, ಕೊರೊನಾದಿಂದ ಮೃತಪಟ್ಟವರ ಸಂಖ್ಯೆ ಜಿಲ್ಲೆಯಲ್ಲಿ 12ಕ್ಕೆ ಮುಟ್ಟಿದೆ ಎಂದು ಡಿಎಚ್ ಒ ಸುಧೀರ್‌ ಚಂದ್ರ ಸೂಡ ಮಾಹಿತಿ ನೀಡಿದ್ದಾರೆ.

ಕರ್ನಾಟಕದಲ್ಲಿ ಒಂದೇ ದಿನ 5 ಸಾವಿರ ಕೊರೊನಾ ಕೇಸ್

 ಉತ್ತರ ಕನ್ನಡ ಜಿಲ್ಲೆಯಲ್ಲಿ 83 ಪ್ರಕರಣಗಳು

ಉತ್ತರ ಕನ್ನಡ ಜಿಲ್ಲೆಯಲ್ಲಿ 83 ಪ್ರಕರಣಗಳು

ಇಂದು ಉತ್ತರ ಕನ್ನಡ ಜಿಲ್ಲೆಯಲ್ಲಿ 83 ಪ್ರಕರಣಗಳು ದಾಖಲಾಗಿವೆ. ಭಟ್ಕಳದಲ್ಲಿ 8, ಹಳಿಯಾಳದಲ್ಲಿ 50, ಕಾರವಾರದಲ್ಲಿ 5, ಕುಮಟಾದಲ್ಲಿ 1, ಮುಂಡಗೋಡ 2, ಅಂಕೋಲಾದಲ್ಲಿ 3, ಸಿದ್ದಾಪುರ 2, ಶಿರಸಿ ಹಾಗೂ ಯಲ್ಲಾಪುರದಲ್ಲಿ ತಲಾ ಆರು ಪ್ರಕರಣಗಳು ದೃಢಪಟ್ಟಿವೆ. ಇಂದು ಭಟ್ಕಳದಲ್ಲಿ 2, ಹಳಿಯಾಳ 9, ಹೊನ್ನಾವರದಲ್ಲಿ 16, ಕಾರವಾರ 6, ಕುಮಟಾದಲ್ಲಿ 14, ಮುಂಡಗೋಡ 14, ಸಿದ್ದಾಪುರದಲ್ಲಿ 4, ಶಿರಸಿಯಲ್ಲಿ 23, ಯಲ್ಲಾಪುರದಲ್ಲಿ 1, ಒಟ್ಟು 89 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈವರೆಗೆ ಜಿಲ್ಲೆಯ 1,418 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 705 ಮಂದಿ ಗುಣಮುಖರಾಗಿದ್ದಾರೆ.‌ 14 ಮಂದಿ ಸಾವನ್ನಪ್ಪಿದ್ದು, 700 ಸಕ್ರಿಯ ಸೋಂಕಿತರಿಗೆ ಚಿಕಿತ್ಸೆ ಮುಂದುವರಿದಿದೆ.

 ಕಾಫಿನಾಡಿನಲ್ಲಿ ಕೊರೊನಾಗೆ ಇಬ್ಬರು ಸಾವು

ಕಾಫಿನಾಡಿನಲ್ಲಿ ಕೊರೊನಾಗೆ ಇಬ್ಬರು ಸಾವು

ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂದು 62 ಮಂದಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಚಿಕ್ಕಮಗಳೂರು 21, ಕಡೂರು 20, ಕೊಪ್ಪ 7, ಶೃಂಗೇರಿ 6, ತರೀಕೆರೆ 4, ಎನ್ಆರ್ ಪುರ 2, ಮೂಡಿಗೆರೆಯಲ್ಲಿ 2 ಪ್ರಕರಣ ದಾಖಲಾಗಿದೆ. 261 ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಇದುವರೆಗೂ ಕೊರೊನಾ ಸೋಂಕಿನಿಂದ 14 ಮಂದಿ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 546ಕ್ಕೆ ಏರಿಕೆಯಾಗಿದೆ.

ಕಾಫಿನಾಡಲ್ಲಿ ಇಂದು 82 ಮಂದಿಗೆ ಕೊರೊನಾ ಸೋಂಕು ದೃಢ

 ಬಳ್ಳಾರಿಯಲ್ಲಿ 156 ಕೊರೊನಾ ಪ್ರಕರಣ, ಐದು ಸಾವು

ಬಳ್ಳಾರಿಯಲ್ಲಿ 156 ಕೊರೊನಾ ಪ್ರಕರಣ, ಐದು ಸಾವು

ಗಣಿಜಿಲ್ಲೆ ಬಳ್ಳಾರಿಯಲ್ಲಿಂದು 156 ಕೊರೊನಾ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 3101ಕ್ಕೇರಿಕೆಯಾಗಿದೆ. ಜಿಲ್ಲೆಯಲ್ಲಿ ಈ ದಿನ ಒಂದೇ 156 ಮಂದಿಗೆ ಕೊರೊನಾ ಸೋಂಕು ಧೃಡಪಟ್ಟಿದೆ. ಕೇವಲ ಜಿಂದಾಲ್ ಒಂದರಲ್ಲೇ ಈವರೆಗೆ 643 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. 1472 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. 67 ಮಂದಿ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ 1562 ಸಕ್ರಿಯ ಪ್ರಕರಣಗಳಿವೆ. ಇಂದು ಒಂದೇ ದಿನ ಐದು ಮಂದಿ ಸಾವನ್ನಪ್ಪಿದ್ದಾರೆ. 36 ಮಂದಿ ಗುಣಮುಖರಾಗಿ ಜಿಲ್ಲಾ ಕೋವಿಡ್ - 19 ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.

 ರಾಮನಗರದಲ್ಲಿ 31 ಪ್ರಕರಣ ದಾಖಲು

ರಾಮನಗರದಲ್ಲಿ 31 ಪ್ರಕರಣ ದಾಖಲು

ರಾಮನಗರ ಜಿಲ್ಲೆಯಲ್ಲಿ ಇಂದು 31 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 612ಕ್ಕೆ ಏರಿದೆ. ಚನ್ನಪಟ್ಟಣ 10, ಮಾಗಡಿಯಲ್ಲಿ 3, ಕನಕಪುರದಲ್ಲಿ 8, ರಾಮನಗರ ತಾಲ್ಲೂಕಿನಲ್ಲಿ 10 ಪ್ರಕರಣಗಳು ದಾಖಲಾಗಿವೆ.

ಇನ್ಫೋಗ್ರಾಫಿಕ್ಸ್: ವಿಶ್ವದಲ್ಲಿ 1 ಮಿಲಿಯನ್ ಮಂದಿ ಗುಣಮುಖ

 ಚಿತ್ರದುರ್ಗದಲ್ಲಿ 10 ಜನರಿಗೆ ಸೋಂಕು ದೃಢ

ಚಿತ್ರದುರ್ಗದಲ್ಲಿ 10 ಜನರಿಗೆ ಸೋಂಕು ದೃಢ

ಚಿತ್ರದುರ್ಗ ಜಿಲ್ಲೆಯಲ್ಲಿ 10 ಮಂದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 320ಕ್ಕೆ ಏರಿಕೆಯಾಗಿದೆ. ಚಿತ್ರದುರ್ಗ ತಾಲ್ಲೂಕು 3, ಹಿರಿಯೂರು 1, ಚಳ್ಳಕೆರೆ 3, ಹೊಸದುರ್ಗ 3 ಸೇರಿದಂತೆ ಒಟ್ಟು 10 ಪಾಸಿಟಿವ್ ಪ್ರಕರಣ ವರದಿಯಾಗಿವೆ. ಚಿತ್ರದುರ್ಗ ನಗರದ 71 ವರ್ಷದ ಮಹಿಳೆ ಇಂದು ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ಮೃತಪಟ್ಟವರ ಸಂಖ್ಯೆ 7 ಆಗಿದೆ. ಸೋಂಕಿತರ ಪೈಕಿ ಈಗಾಗಲೆ 135 ಜನರು ಗುಣಮುಖರಾಗಿ ಬಿಡುಗಡೆ ಹೊಂದಿದ್ದು, ಸದ್ಯ 178 ಸಕ್ರಿಯ ಪ್ರಕರಣಗಳು ಇವೆ. ಒಟ್ಟು 87 ಕಂಟೈನ್ಮೆಂಟ್ ವಲಯಗಳಿವೆ.

English summary
5030 coronavirus cases has been confirmed today in karnataka state. Here is a report of six districts coronavirus cases on july 23
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X