ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸ್ಪೋಟ: ರಾಜ್ಯ ಮತ್ತು ಕೇಂದ್ರ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು

By ದಿವ್ಯಶ್ರೀ, ಬೆಂಗಳೂರು
|
Google Oneindia Kannada News

ದೇಶದಲ್ಲಿ ದಿನೇ ದಿನೇ ಕೊರೊನಾ ಸಂಖ್ಯೆ ಹೆಚ್ಚಾಗುತ್ತಿರುವುದು ದುರ್ಘಟನೆಯ ಸಂಗತಿ ಈ ತುರ್ತು ಸಂದರ್ಭದಲ್ಲಿ ಜನರು ಆಸ್ಪತ್ರೆಗಳಿಗೆ ಹೋಗುವುದಕ್ಕೂ ಭಯಪಡುವಂತಾಗಿದೆ.

ಅಲ್ಲಿರುವ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ ಎನ್ನುವುದು ದುಃಖಕರ. ರೋಗಿಗಳನ್ನು ತಮ್ಮ ಮನೆಯವರು ನೋಡುವುದಕ್ಕೂ ಆಸ್ಪತ್ರೆಯವರು ಬಿಡುವುದಿಲ್ಲ. ಯಾವ ಚಿಕಿತ್ಸೆ ಕೊಡುತ್ತಿದ್ದಾರೆ ಎನ್ನುವುದು ತಮ್ಮ ಮನೆಯವರಿಗೆ ತಿಳಿಯುತ್ತಿಲ್ಲ. ಇಂತಹ ವ್ಯವಸ್ಥೆಗೆ ಅನೇಕ ಜನರು ಸರ್ಕಾರದ ಮೇಲೆ ವಿಷಾದ ವ್ಯಕ್ತಪಡಿಸಿದ್ದಾರೆ.

ದಿನೇ ದಿನೇ ಸೋಂಕು ಹರಡುವಿಕೆ ಹೆಚ್ಚಾಗುತ್ತಿದ್ದು, ಈ ಕೊರೊನಾ ಎಂಬ ಸೋಂಕು ಬಂದು ಒಂದು ವರ್ಷಗಳಾದರೂ ಸಹ ಜನರಿಗೆ ಸರಿಯಾದ ಕ್ರಮದಲ್ಲಿ ಚಿಕಿತ್ಸೆ ಸಿಗುತ್ತಿಲ್ಲ. ಇದಕ್ಕೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಉತ್ತರಿಸಲೇಬೇಕು.

Coronavirus 2nd Wave: The Central And State Government Should Take Immediate Action

ದುರ್ಘಟನೆಯ ಸ್ಥಿತಿಯೆಂದರೆ ದೇಶದಲ್ಲಿ ಜನರಿಗೆ ಚಿಕಿತ್ಸೆ ಸಿಗದೇ, ಸರಿಯಾದ ಸಮಯಕ್ಕೆ ಐಸಿಯು ಲಸಿಕೆ ಸಿಗದೇ ಸಾಯುತ್ತಿರುವಾಗ ನಮ್ಮ ಕೇಂದ್ರ ಸರ್ಕಾರಕ್ಕೆ ಚುನಾವಣೆ ಚಿಂತೆಯಾಗಿದೆ ಇದು ಎಷ್ಟರ ಮಟ್ಟಿಗೆ ಸರಿ ಎನ್ನುವುದನ್ನು ಜನರೇ ಹೇಳಬೇಕು.

ಏ.30 ಅಂದು ಮಧ್ಯಾಹ್ನ 3.00 ಗಂಟೆಗೆ ನಮ್ಮ ಕರ್ನಾಟಕದ ಕವಚ ವಾದ ಕರ್ನಾಟಕ ರಕ್ಷಣಾ ವೇದಿಕೆಯು ಕೊರೊನಾಗೆ ಹೆದರದಿರೋಣ ಎಂಬ ಮಾತುಕತೆಯ ನೇರ ಪ್ರಸಾರವನ್ನು ನಮ್ಮ ನಾರಾಯಣಗೌಡರ ಫೇಸ್ಬುಕ್ ಖಾತೆಯ ಮೂಲಕ ಎರಡು ಗಂಟೆಯ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಡಾ.ಶ್ರೀನಿವಾಸ ಕಕ್ಕಿಲಾಯ ಅವರೊಂದಿಗೆ ಝೂಮ್ ಸಂವಾದವನ್ನು ನಮ್ಮ ಗೌಡರ ಉಪಸ್ಥಿತಿಯಲ್ಲಿ ನಡೆಯಿತು. ಇದರಲ್ಲಿ ಕೊರೊನಾಗೆ ಸಂಬಂಧಿಸಿದ ಅನೇಕ ವಿಚಾರವನ್ನು, ಅನೇಕ ಸಲಹೆಗಳನ್ನು ಡಾಕ್ಟರ್ ಶ್ರೀನಿವಾಸ್ ಅವರು ನೀಡಿದ್ದಾರೆ. ಈ ನೇರಪ್ರಸಾರಕ್ಕೆ ಅರುಣ್ ಜಾವಗಲ್, ದಿನೇಶ್ ಕುಮಾರ್ ಎಸ್.ಸಿ, ಚೇತನ್ ಜೀರಾಳ್, ಡಾ.ಭರತ ಶ್ರೀ ಭಾಗವಹಿಸಿದ್ದರು.

ನೇರ ಪ್ರಸಾರದ ಮೂಲಕ ನಮ್ಮ ಕರವೇ ಕೊರೊನಾ ಬಗ್ಗೆ ಎಚ್ಚರಿಕೆಯಿಂದ ಇರೋಣ. ಜಾಗೃತಿ ಇರಲಿ, ಭಯ ಬೇಡ ಎಂಬ ಸಂದೇಶವನ್ನು ನಮ್ಮ ನಾಡಿಗೆ ಹೇಳಿದೆ. ಇನ್ನು ಈ ಸಂದರ್ಭದಲ್ಲಿ ಕರವೇ ಕಡೆಯಿಂದ ಕೊರೊನಾ ಸಹಾಯವಾಣಿ ಶುರುವಾಗಿದ್ದು, ಇದಕ್ಕೆ ಕೊರೊನಾ ವ್ಯಾಕ್ಸಿನ್ ಹೇಗೆ ನೊಂದಣಿ ಮಾಡಿಕೊಳ್ಳುವುದು ಎಂದು ತಿಳಿಯುವುದಕ್ಕೆ ಸಹಾಯವಾಣಿ ಕೂಡ ರೂಪಿಸಿದೆ.

ಮೊಬೈಲ್ ಸಂಖ್ಯೆ 9008946912 ಮತ್ತು 8971225117 ಎಂಬ ಸಹಾಯ ಸಂಖ್ಯೆಯನ್ನು ಕೂಡ ಕರವೇ ಜನರಿಗೆ ದೊರಕಿಸಿದೆ. ರಾಜ್ಯದ ಹಾಟ್ ಸ್ಪಾಟ್ ಆಗಿರುವ ಬೆಂಗಳೂರಿನಲ್ಲಿ ಅತಿ ಹೆಚ್ಚು ಸಾವು ನೋವು ಕಾಣಿಸಿಕೊಳ್ಳುತ್ತಿದೆ. ಜನರು ಆಸ್ಪತ್ರೆಗಳಿಗೆ ಅಲೆದಾಡುತ್ತಿದ್ದಾರೆ. ಇದಕ್ಕೆ ನಮ್ಮ ಸರ್ಕಾರ, ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಆಕ್ಸಿಜನ್ ವ್ಯವಸ್ಥೆ, ಐಸಿಯು ಬೆಡ್ ವ್ಯವಸ್ಥೆ, ಆಂಬ್ಯುಲೆನ್ಸ್ ವ್ಯವಸ್ಥೆಗಳು ಎಲ್ಲರಿಗೂ ಆದಷ್ಟು ಬೇಗ ಸಿಗಲೇಬೇಕು.

ಕೇಂದ್ರ ಬಜೆಟ್ ನಲ್ಲಿ 35 ಸಾವಿರ ಕೋಟಿ ರೂಪಾಯಿಯನ್ನು ವ್ಯಾಕ್ಸಿನ್ ಗಾಗಿಯೇ ಎತ್ತಿಡಲಾಗಿದೆ. ಈಗ ಅದು ಎಲ್ಲಿ, ಏನಾಯಿತು ಎಂದು ಕೇಂದ್ರ ಸರ್ಕಾರ ಉತ್ತರಿಸಲೇಬೇಕು. ಇನ್ನು ಕೆಲವರಿಗೆ ಎರಡನೇ ಹಂತದ ಲಸಿಕೆ ಲಭ್ಯವಾಗುತ್ತಿಲ್ಲ. ದೇಶದಲ್ಲಿ ಆಗುತ್ತಿರುವ ತೊಂದರೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರವೇ ಕಾರಣ.

ಹೇಳುವುದು ಒಂದು ಮಾಡುವುದು ಇನ್ನೊಂದು ಎನ್ನುವ ಹಾಗೆ, ಸರ್ಕಾರ ಹೇಳಿರುವುದು ಮತ್ತು ಮಾಡುತ್ತಿರುವುದಕ್ಕೂ ಸಂಬಂಧನೇ ಇಲ್ಲ. ಜನರ ಜೀವ ಮತ್ತು ಜೀವನ ಜೊತೆ ಸರ್ಕಾರವು ಆಟವಾಡುತ್ತಿದೆ. ನಮ್ಮ ರಾಜ್ಯ ಸರ್ಕಾರ ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರವನ್ನು ಕೈಗೊಳ್ಳದಿರುವುದು ಇಂದು ರಾಜ್ಯದಲ್ಲಿ ಈ ಪರಿಸ್ಥಿತಿ ಸಂಭವಿಸಿದೆ.

ಇದಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಹೊಣೆಯಾಗಿದೆ ಕೇವಲ ಜನರಿಗೆ ಮಾತ್ರ ಜವಾಬ್ದಾರಿಯಿಂದ ನಡೆದುಕೊಳ್ಳಬೇಕೆಂಬ ಮಾತು ಪದೇ ಪದೇ ಕೇಂದ್ರ ಸರ್ಕಾರವು ಹೇಳುತ್ತಿರುವುದು ಸರಿಯಲ್ಲ. ಜನರು ತಮ್ಮ ಜವಾಬ್ದಾರಿಯಿಂದ ಇದ್ದಾರೆ. ಕೇಂದ್ರ ಸರ್ಕಾರದ ಜವಾಬ್ದಾರಿಯನ್ನು ಅವರು ಸರಿಯಾಗಿ ಪಾಲಿಸಬೇಕು. ಜನರು ಕೂಡ ತಮ್ಮ ಜವಾಬ್ದಾರಿಯನ್ನು ಸರಿಯಾಗಿ ಪಾಲಿಸಿ, ತಮ್ಮ ತಮ್ಮ ಆರೋಗ್ಯವನ್ನು ನೋಡಿಕೊಳ್ಳಬೇಕು ಮತ್ತು ಸರ್ಕಾರವು ಇನ್ನು ತಡ ಮಾಡದೆ ಬೇಗ ಕ್ರಮವನ್ನು ತೆಗೆದುಕೊಳ್ಳಲೇಬೇಕು ಇದು ಅನಿವಾರ್ಯವಾಗಿದೆ.

Recommended Video

ಸಿಎಂ ಬಿಎಸ್ ವೈ ಖಾಸಗಿ ಆಸ್ಪತ್ರೆ ರೌಂಡ್ಸ್ | Oneindia Kannada

English summary
State and central governments must take serious action to control coronavirus infection.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X