• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಕೊರೊನಾ ನಶಿಸಿ ಹೋಗುತ್ತಿದೆ' : ಸಂಕ್ರಾಂತಿಗೆ ಸಖತ್ ಶುಭ ಸುದ್ದಿ

|
Google Oneindia Kannada News

ದಿನೇದಿನೇ ಕೊರೊನಾ ಪ್ರಕರಣಗಳು ರಾಜಧಾನಿ ಬೆಂಗಳೂರು ಸೇರಿದಂತೆ ಒಂದೇ ಸಮನೆ ಏರುತ್ತಿದ್ದರೂ, ವೈದ್ಯಲೋಕದ ಹಲವರು ಹೇಳುವಂತೆ ಮೃತ ಪಡುತ್ತಿರುವವರ ಸಂಖ್ಯೆ ಕಮ್ಮಿಯಿರುವುದು ಸಮಾಧಾನಕಾರ ಪಡುವ ವಿಚಾರ.

ಅಂದರೆ ವೈದ್ಯರು ಹೇಳುವಂತೆ, ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದ್ದರೂ, ಅದರ ತೀವ್ರತೆ ಭಯ ಪಡುವಂತಿಲ್ಲ ಎನ್ನುವುದು. ಕರ್ನಾಟಕದಲ್ಲಿ ಗುರುವಾರ (ಜ 13) 25,005 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದೆ, ಇದರಲ್ಲಿ ಬೆಂಗಳೂರಿನ ಪಾಲು 18,374 ಮತ್ತು ಮೃತ ಪಟ್ಟವರ ಸಂಖ್ಯೆ 8.

ಕೊರೊನಾ ಹೆಚ್ಚಾಗುತ್ತಿರುವುದು ಯಾಕೆ? ಸತ್ಯ ಬಿಚ್ಚಿಟ್ಟ ಡಾ.ರಾಜು ಕೃಷ್ಣಮೂರ್ತಿಕೊರೊನಾ ಹೆಚ್ಚಾಗುತ್ತಿರುವುದು ಯಾಕೆ? ಸತ್ಯ ಬಿಚ್ಚಿಟ್ಟ ಡಾ.ರಾಜು ಕೃಷ್ಣಮೂರ್ತಿ

ಕಳೆದ ಒಂದು ವಾರದ ತೀವ್ರ ಏರಿಕೆಯಿಂದಾಗಿ ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 1,15,733 ಮತ್ತು ಪಾಟಿಸಿವಿಟಿ ದರ ಶೇ 12.39, ಜೊತೆಗೆ, ಸಾವಿನ ಪ್ರಮಾಣ ಶೇ. 0.03. ಬಿಬಿಎಂಪಿ ಆಯುಕ್ತರಾದ ಗೌರವ್ ಗುಪ್ತ ಈಗಾಗಲೇ ಹೇಳಿದ ಹಾಗೆ, ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ನೂರರ ಗಡಿ ದಾಟಿಲ್ಲ.

ಈ ಎಲ್ಲಾ ಅಂಕಿಅಂಶ ಒಂದು ಕಡೆಯಾದರೆ, ಕೊರೊನಾ ವೈರಸ್ ತನ್ನ ಆಟವನ್ನು ಮುಗಿಸುವ ಹಂತದಲ್ಲಿದೆ ಎಂದು ರಾಜೂ ಹೆಲ್ತಿ ಇಂಡಿಯಾದ ಖ್ಯಾತ ವೈದ್ಯರಾದ ಡಾ.ರಾಜು ಕೃಷ್ಣಮೂರ್ತಿ ಹೇಳಿರುವುದು ಸಂಕ್ರಾಂತಿಗೆ ಸಿಕ್ಕ ಶುಭಸುದ್ದಿ ಎಂದೇ ಹೇಳಬಹುದು. ಮುಂದೆ ಓದಿ.. (ಲೇಖನದಲ್ಲಿ ಸಾಂದರ್ಭಿಕ ಚಿತ್ರವನ್ನು ಬಳಸಿಕೊಳ್ಳಲಾಗಿದೆ)

 ಕಾಂಗ್ರೆಸ್ ಪಾದಯಾತ್ರೆಯಿಂದ ಕೋವಿಡ್ ಕೇಸ್ ಹೆಚ್ಚಳ: ಸುಧಾಕರ್ ಕಾಂಗ್ರೆಸ್ ಪಾದಯಾತ್ರೆಯಿಂದ ಕೋವಿಡ್ ಕೇಸ್ ಹೆಚ್ಚಳ: ಸುಧಾಕರ್

   Indian Army Day: ಭಾರತೀಯ ಸೇನಾ ದಿನಾಚರಣೆಯ ಇತಿಹಾಸ ಮತ್ತು ಮಹತ್ವ | Oneindia Kannada
    ಆರ್ಟಿಪಿಸಿಆರ್ ಟೆಸ್ಟ್ (ವೈರಲ್ ಆಂಟಿಜೆನ್ ಪರೀಕ್ಷೆ ಮಾಡುವ ವಿಧಾನ)

   ಆರ್ಟಿಪಿಸಿಆರ್ ಟೆಸ್ಟ್ (ವೈರಲ್ ಆಂಟಿಜೆನ್ ಪರೀಕ್ಷೆ ಮಾಡುವ ವಿಧಾನ)

   "ವರ್ಷಕ್ಕೆ ಪ್ರತೀ ಮೂರು ತಿಂಗಳು ವಾತಾವರಣದಲ್ಲಿ ಬದಲಾವಣೆ ಆಗುವುದರಿಂದ ಜ್ವರದ ಮಾದರಿ (ಫ್ಲ್ಯೂ) ಕಾಣಿಸಿಕೊಳ್ಳುತ್ತದೆ. ಇದರಿಂದಾಗಿ ಕಳೆದ ಹತ್ತು ದಿನಗಳಿಂದ ಫ್ಲ್ಯೂ ಕೇಸುಗಳು ಹೆಚ್ಚಾಗುತ್ತಿವೆ. ಆರ್ಟಿಪಿಸಿಆರ್ ಟೆಸ್ಟ್ (ವೈರಲ್ ಆಂಟಿಜೆನ್ ಪರೀಕ್ಷೆ ಮಾಡುವ ವಿಧಾನ) ಮಾಡಿಸಿದಾಗ ಅದು ಯಾವುದೇ ವೈರಸ್ ಇದ್ದರೂ ಅದು ಪಾಸಿಟೀವ್ ಎಂದು ತೋರಿಸುತ್ತದೆ. ನಾವು ಇದನ್ನು ಕೋವಿಡ್ ಪಾಸಿಟೀವ್ ಎಂದು ಟ್ಯಾಗ್ ಮಾಡುತ್ತಿರುವುದರಿಂದ ಹೊಸ ಕೇಸುಗಳು ಜಾಸ್ತಿಯಾಗುತ್ತಿದೆ ಎನ್ನುವ ಸಂದೇಶ ಜನರಿಗೆ ರವಾನೆಯಾಗುತ್ತದೆ" ಎಂದು ಡಾ.ರಾಜು ಕೃಷ್ಣಮೂರ್ತಿ ಅಭಿಪ್ರಾಯ ಪಟ್ಟಿದ್ದಾರೆ.

    ನೆಗಡಿ, ಕೆಮ್ಮು, ಜ್ವರ ಇಂತಹ ಚಳಿಯ ವಾತಾವರಣದಲ್ಲಿ ಕಾಣುವುದು ಹೆಚ್ಚು

   ನೆಗಡಿ, ಕೆಮ್ಮು, ಜ್ವರ ಇಂತಹ ಚಳಿಯ ವಾತಾವರಣದಲ್ಲಿ ಕಾಣುವುದು ಹೆಚ್ಚು

   ನೆಗಡಿ, ಕೆಮ್ಮು, ಜ್ವರ ಇಂತಹ ಚಳಿಯ ವಾತಾವರಣದಲ್ಲಿ ಕಾಣುವುದು ಹೆಚ್ಚು, ಇದನ್ನು ಕೋವಿಡ್ ಕೇಸುಗಳು ಹೆಚ್ಚಾಗುತ್ತಿದೆ ಎಂದು ಸಾರುವ ಅವಶ್ಯಕತೆಯಿಲ್ಲ. ಮನೆಯಲ್ಲಿ ಒಬ್ಬರಿಗೆ ಈ ಸಮಸ್ಯೆ ಎದುರಾದರೆ, ಟೆಸ್ಟಿಂಗ್ ನಲ್ಲಿ ಪಾಸಿಟೀವ್ ಎಂದು ಬರುತ್ತದೆ. ಆಗ, ಮನೆಯಲ್ಲಿ ಎಲ್ಲರಿಗೂ ಪರೀಕ್ಷೆ ಮಾಡಲು ಸೂಚಿಸಲಾಗುತ್ತದೆ. ಫ್ಲ್ಯೂ ಮನೆಯಲ್ಲಿ ಒಬ್ಬರಿಗಿದ್ದರೆ ಎಲ್ಲರಿಗೂ ಅದರ ಅಂಟು ತಾಗುತ್ತದೆ. ಎಲ್ಲರನ್ನೂ ಇದೇ ರೀತಿ ಪರೀಕ್ಷೆಗೆ ಒಳಪಡಿಸಿದರೆ ಪಾಸಿಟಿವಿಟಿ ರೇಟ್ ನೂರಕ್ಕೆ ಏರುತ್ತದೆ. ಹಾಗಾಗಿ, ನಾನು ಮತ್ತೆ ಪದೇಪದೇ ಹೇಳುತ್ತಿದ್ದೇನೆ, ಜನರು ಭಯ ಪಡುವ ಅವಶ್ಯಕತೆಯಿಲ್ಲ ಎಂದು ಡಾ.ರಾಜು ಕೃಷ್ಣಮೂರ್ತಿ ಅಭಯ ನೀಡಿದ್ದಾರೆ.

    ಜನರಿಗೆ ಭಯದ ಪ್ರತಿಕೂಲ ಪರಿಸ್ಥಿತಿ ಎದುರಾಗಲಿದೆ - ಡಾ.ರಾಜು ಕೃಷ್ಣಮೂರ್ತಿ

   ಜನರಿಗೆ ಭಯದ ಪ್ರತಿಕೂಲ ಪರಿಸ್ಥಿತಿ ಎದುರಾಗಲಿದೆ - ಡಾ.ರಾಜು ಕೃಷ್ಣಮೂರ್ತಿ

   ಎರಡನೇ ಅಲೆಯ ವೇಳೆ ಕೆಮ್ಮು, ಜ್ವರದ ಜೊತೆಗೆ saturation ರೇಟ್ ಕಮ್ಮಿ ಮತ್ತು ಹೃದಯದ ಬಡಿತದಲ್ಲಿ ಏರಿಳಿತವಾಗುತ್ತಿತ್ತು, ಇದರಿಂದ ಉಸಿರಾಟಕ್ಕೆ ತೊಂದರೆಯಾಗುತ್ತಿತ್ತು. ಈ ರೀತಿಯ ಸಮಸ್ಯೆಯನ್ನು ಹಿಡಿದುಕೊಂಡು ಒಂದೇ ಒಂದು ರೋಗಿ ನನ್ನ ಬಳಿ ಬಂದಿಲ್ಲ. ಹಾಗಾಗಿ, ಕೋವಿಡ್ ಎನ್ನುವುದು ಸಿಂಪಲ್ ವೈರಲ್ ಇನ್ಫೆಕ್ಷನ್. ಇದು ಕೂರೊನಾದ ಎಂಡೆಮಿಕ್, ಇದನ್ನು ಹೀಗೇ ಬಿಟ್ಟರೆ ಒಳ್ಳೆಯದು. ಇದಕ್ಕೆ ಇನ್ನೊಂದು ಲಸಿಕೆ ಕಂಡು ಹಿಡಿಯುತ್ತೇವೆ ಎಂದು ಹೋದರೆ, ಜನರಿಗೆ ಭಯದ ಪ್ರತಿಕೂಲ ಪರಿಸ್ಥಿತಿ ಎದುರಾಗಲಿದೆ ಎಂದು ಡಾ.ರಾಜು ಕೃಷ್ಣಮೂರ್ತಿ ಹೇಳಿದ್ದಾರೆ.

    ಲಾಕ್ಡೌನ್, ಸೀಲ್ಡೌನ್ ಮಾಡಿಕೊಂಡು ಹೋದರೆ ಜನಸಾಮಾನ್ಯರಿಗೆ ತೊಂದರೆ

   ಲಾಕ್ಡೌನ್, ಸೀಲ್ಡೌನ್ ಮಾಡಿಕೊಂಡು ಹೋದರೆ ಜನಸಾಮಾನ್ಯರಿಗೆ ತೊಂದರೆ

   ಲಾಕ್ಡೌನ್, ಸೀಲ್ಡೌನ್ ಮಾಡಿಕೊಂಡು ಹೋದರೆ ಜನಸಾಮಾನ್ಯರಿಗೆ ತೊಂದರೆಯಾಗುತ್ತದೆ ಎನ್ನುವುದನ್ನು ಅರಿಯಬೇಕಾಗುತ್ತದೆ. ಕೊರೊನಾ ತಾನಾಗಿಯೇ ನಶಿಸಿ ಹೋಗುತ್ತಿದೆ, ಇದನ್ನು ಹೀಗೇ ಬಿಟ್ಟರೆ ಎಲ್ಲರಿಗೂ ಒಳ್ಳೆಯದು ಎಂದು ಡಾ. ರಾಜು ಕೃಷ್ಣಮೂರ್ತಿಯವರು ಹೇಳುವ ಮೂಲಕ, ಮಕರ ಸಂಕ್ರಾಂತಿ ಹಬ್ಬದ ಸಮಯದಲ್ಲಿ ಜನರಿಗೆ ಶುಭಸುದ್ದಿಯನ್ನು ನೀಡಿದ್ದಾರೆ. ಕೊರೊನಾ ಮೊದಲನೇ ಅಲೆಯಿಂದಲೂ ಡಾ.ರಾಜು ಅವರು ಜನರಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡುತ್ತಾ ಜನಾನುರಾಗಿ ವೈದ್ಯರಾಗಿದ್ದಾರೆ.

   English summary
   Corona Virus Will Vanish Very Soon: Good News Given By Dr.Raju Krishnamurthy. Know More,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X