Get Updates
Get notified of breaking news, exclusive insights, and must-see stories!

ಕರ್ನಾಟಕದಲ್ಲಿ ಕೋವಿಡ್ ಸೋಂಕು ಹೆಚ್ಚಳ, ಕೊರೊನಾ ಬಿಕ್ಕಟ್ಟು ನಿರ್ವಹಣೆಗಾಗಿ ಇಂದು-ನಾಳೆ ಮಾಕ್ ಡ್ರಿಲ್

ಬೆಂಗಳೂರು, ಏಪ್ರಿಲ್ 10: ದೇಶಾದ್ಯಂತ ಕೊರೊನಾ ಹಾವಳಿ ಮತ್ತೆ ಹೆಚ್ಚಾಗುತ್ತಿದೆ. ಕರ್ನಾಟಕ ಸೇರದಂತೆ ದೇಶವ್ಯಾಪಿ ಅತ್ಯಧಿಕ ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲೂ ಕೋವಿಡ್ ಸೋಂಕು ಹೆಚ್ಚುತ್ತಿದ್ದು, ಇಂದು ಮತ್ತು ನಾಳೆ (ಏಪ್ರಿಲ್ 11) ಮಾಕ್ ಡ್ರಿಲ್ ನಡೆಯಲಿದೆ.

ಕೋವಿಡ್-19 ಸೊಂಕಿನ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಂಭವನೀಯ ಅಪಾಯವನ್ನು ಎದುರಿಸಲು ಕರ್ನಾಟಕದಲ್ಲಿ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಸೌಲಭ್ಯಗಳ ಮೂಲಕ ರಾಜ್ಯದ ಸನ್ನದ್ಧತೆಯನ್ನು ಖಚಿತಪಡಿಸಿಕೊಳ್ಳಲು ಇಂದು ಏಪ್ರಿಲ್ 10 ಮತ್ತು 11 ರಂದು ಆರೋಗ್ಯ ಇಲಾಖೆ ಅಣಕು ಡ್ರಿಲ್ ಹಮ್ಮಿಕೊಂಡಿದೆ.

Corona Virus Increase: Mock Drill In Karnataka Hospitals on April 10th And 11th

ಅಣಕು ಡ್ರಿಲ್ (ಮಾಕ್ ಡ್ರಿಲ್) ಸಂಬಂಧ ಆರೋಗ್ಯ ಇಲಾಖೆ ಅಧಿಕಾರಿಗಳು ಕಳೆದ ವಾರ ಏಪ್ರಿಲ್ 6 ರಂದು ಪೂರ್ವಸಿದ್ಧತಾ ಸಭೆ ನಡೆಸಿ ಮಾಹಿತಿ ಸಂಗ್ರಹಣೆ ಕುರಿತು ಮಾಹಿತಿ ನೀಡಿದ್ದಾರೆ. ಕೊರೊನಾ ಪಾಸಿಟಿವ್ ಪ್ರಕರಣಗಳ ಹೆಚ್ಚಳವನ್ನು ಎದುರಿಸಲು ಆರೋಗ್ಯ ಸೌಲಭ್ಯಗಳ ಕಾರ್ಯಾಚರಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಈ ಸಂಬಂಧ ಅಣಕು ಪ್ರದರ್ಶನ ನಡೆಯಲಿದೆ ಎಂದು ಇಲಾಖೆ ತಿಳಿಸಿದೆ.

ಆಸ್ಪತ್ರೆಗಳಲ್ಲಿನ ಮೂಲಸೌಕರ್ಯ ಖಚಿತತೆಗಾಗಿ ಕಾರ್ಯಕ್ರಮ

ಸರ್ಕಾರಿ ಆಸ್ಪತ್ರೆಗಳಲ್ಲಿ ಅಷ್ಟೇ ಅಲ್ಲದೆ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳು, ಆರೋಗ್ಯ ಸಿಬ್ಬಂದಿ (ಮಾನವಶಕ್ತಿ), ಆಂಬ್ಯುಲೆನ್ಸ್‌ಗಳು, ಅಗತ್ಯ ಔಷಧಗಳು, ಮಾಸ್ಕ್‌ಗಳು, ಪಿಪಿಇ ಕಿಟ್‌ಗಳು, ಟೆಲಿಮೆಡಿಸಿನ್ ಸೇವೆಗಳು ಮತ್ತು ಆಮ್ಲಜನಕ ಸಿಲಿಂಡರ್‌ಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವ ಪ್ರಯತ್ನ ಇದಾಗಿದೆ.

ಏಪ್ರಿಲ್ 10 ಮತ್ತು 11 ರಂದು ಎಲ್ಲಾ ರಾಜ್ಯಗಳಿಗೆ ಕೇಂದ್ರ ಸರ್ಕಾರವು ಕಡ್ಡಾಯಗೊಳಿಸಿದ ಅಣಕು ಡ್ರಿಲ್ ಅನ್ನು ನಮ್ಮ ರಾಜ್ಯದಲ್ಲೂ ಕೈಗೊಳ್ಳಲಾಗುತ್ತಿದೆ. ಈ ಮೂಲಕ ತುರ್ತು ಸಂದರ್ಭದಲ್ಲಿ, ಇಲ್ಲವೇ ದಿಢೀರ್ ಕೊರೊನಾ ಏರಿಕೆ ಆದರೂ ಕರ್ನಾಟಕ ಆರೋಗ್ಯ ಇಲಾಕೆ ಎದುರಿಸಲು ಸಿದ್ಧ ಎಂದು ತೋರ್ಪಡಿಸುತ್ತಿದೆ.

Corona Virus Increase: Mock Drill In Karnataka Hospitals on April 10th And 11th

ಈ ಅಣಕು ಡ್ರಿಲ್ ಕಾರ್ಯಕ್ರಮ ಕೋವಿಡ್ ಪ್ರಕರಣಗಳ ಹೆಚ್ಚಳದಿಂದಾಗಿ ಯಾವುದೇ ಘಟನೆಯನ್ನು ನಿಭಾಯಿಸಲು ನಮ್ಮ ಸನ್ನದ್ಧತೆಯನ್ನು ಮರು ಮೌಲ್ಯಮಾಪನ ಮಾಡಲು ನಮಗೆ ಸಹಾಯ ಮಾಡುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆ ಆಯುಕ್ತರು ಡಿ.ರಂದೀಪ್ ಹೇಳಿದರು.

ಕೋವಿಡ್ ಬಿಕ್ಕಟ್ಟು ನಿರ್ವಹಣೆಗೆ ಇಲಾಖೆ ಸಜ್ಜು

ಆರೋಗ್ಯ ಮೂಲಸೌಕರ್ಯದ ಸನ್ನದ್ಧತೆ ಪರೀಕ್ಷೆಗೆ ಹಾಗೂ ಕೋವಿಡ್ ಬಿಕ್ಕಟ್ಟನ್ನು ಎದುರಿಸಲು ನಾವು ಎಷ್ಟು ಸಜ್ಜಾಗಿದ್ದೇವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಅದನ್ನು ಆರೋಗ್ಯ ಸಿಬ್ಬಂದಿಗೆ ತಿಳಿಸಿ ಮನವರಿಗೆ ಮಾಡಲು ಈ ಕಾರ್ಯಕ್ರಮ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಕರ್ನಾಟಕ ಸರ್ಕಾರದ ರಾಷ್ಟ್ರೀಯ ಆರೋಗ್ಯ ಮಿಷನ್‌ನ ನಿರ್ದೇಶಕ ನವೀನ್ ಭಟ್ ವೈ. ಹೇಳಿದರು.

ರಾಜ್ಯದಲ್ಲಿರುವ ಆಮ್ಲಜನಕ ಘಟಕಗಳು, ವೆಂಟಿಲೇಟರ್‌ ಸೇವೆ, ಐಸಿಯು ಘಟಕಗಳಿಂದ ತಕ್ಷಣಕ್ಕೆ ಹೇಗೆ ಸೇವೆ ನೀಡುತ್ತದೆ ಎಂಬುದನ್ನು ಪರಿಶೀಲಿಸುತ್ತೇವೆ. ಅದರ ಉಪಕರಣಗಳು ಯಾವ ಸ್ಥಿತಿಯಲ್ಲಿವೆ ಎಂದು ಸಂಭವನೀಯ ಕೊರೊನಾ ಬಿಕ್ಕಟ್ಟಿಗೂ ಮೊದಲು ನಾವು ಖಚಿತಪಡಿಸಿಕೊಳ್ಳುತ್ತೇವೆ ಎಂದು ಅವರು ವಿವರಿಸಿದರು.

ಕರ್ನಾಟಕದ ಧನಾತ್ಮಕ ದರ 2.9% ರಷ್ಟಿದೆ

ಕರ್ನಾಟಕದಲ್ಲಿ ಭಾನುವಾರ ಒಂದೇ ದಿನ 197 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ ಎಂದು ವರಿಯಾಗಿದೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯು 1,830ಕ್ಕೆ ತಲುಪಿದೆ. ದೈನಂದಿನ ಕೊರೊನಾ ಪಾಸಿಟಿವಿಟಿ ದರವು ಶೇಕಡಾ 2.9ರಷ್ಟಿದೆ. ವಾರದ ಪಾಸಿಟಿವಟಿ ದರ ಶೇಕಡಾ 3.7ರಷ್ಟು ಇದೆ.

ಇನ್ನೂ ಸಿಲಿಕಾನ ಸಿಟಿ ಬೆಂಗಳೂರಿನಲ್ಲಿ ಒಟ್ಟು 71 ಕೊರೊನ ಸೋಂಕಿನ ಪ್ರಕರಣಗಳು ದಾಖಲಾಗಿವೆ. ನಗರದಲ್ಲಿ ಪ್ರಸ್ತುತ 1,074 ಸಕ್ರಿಯ ಪ್ರಕರಣಗಳಿವೆ. ಬಾಗಲಕೋಟೆ, ಬೆಳಗಾವಿ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ 10 ಕ್ಕೂ ಹೆಚ್ಚು ಹೊಸ ಪ್ರಕರಣಗಳು ದಾಖಲಾಗಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+