Breaking: ಕರ್ನಾಟಕದಲ್ಲಿ ಸಾವಿರದ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ

ಬೆಂಗಳೂರು, ಮೇ 15: ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟಿದೆ. ಸೋಂಕಿತರ ಸಂಖ್ಯೆ 1032ಕ್ಕೆ ತಲುಪಿದೆ. ಇದುವರೆಗೆ 35 ಮಂದಿ ಮೃತಪಟ್ಟಿದ್ದಾರೆ.

ಹೊಸದಾಗಿ ಕರ್ನಾಟಕದಲ್ಲಿ 45 ಪ್ರಕರಣಗಳು ಪತ್ತೆಯಾಗಿವೆ.ಬೀದರ್ 3, ಕೋಲಾರ 1, ಹಾಸನ 3, ಚಿತ್ರದುರ್ಗ 2, ಶಿವಮೊಗ್ಗ 1, ದಕ್ಷಿಣ ಕನ್ನಡ 16, ಕೋಲಾರ 1, ಬೆಂಗಳೂರು 13, ಉಡುಪಿ 5, ಬಾಗಲಕೋಟೆಯಲ್ಲಿ 1 ಪಾಸಿಟಿವ್ ಪ್ರಕರಣ ದಾಖಲಾಗಿದೆ.

ಒಟ್ಟು 1032 ಮಂದಿ ಸೋಂಕಿತರದಲ್ಲಿ 476 ಮಂದಿ ಗುಣಮುಖರಾಗಿದ್ದು, 520 ಮಂದಿ ವಿವಿಧ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Corona Cases Rises To 1032 In Karnataka

ದಕ್ಷಿಣ ಕನ್ನಡದಿಂದ ಒಂದೇ ದಿನ 16 ಪ್ರಕರಣಗಳು ದೃಢಪಟ್ಟಿದ್ದು ಇವರು ಮಾರ್ಚ್‌ನಲ್ಲಿ ದುಬೈನಿಂದ ದಕ್ಷಿಣ ಕನ್ನಡಕ್ಕೆ ಬಂದವರಾಗಿದ್ದಾರೆ. ಹಾಗೆಯೇ ಬೆಂಗಳೂರಿನಲ್ಲಿ 23 ಹೊಸ ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 81 ಸಾವಿರ ಗಡಿ ದಾಟಿದೆ. ಕಳೆದ 24 ಗಂಟೆಯಲ್ಲಿ 3967 ಕೇಸ್ ಪತ್ತೆಯಾಗಿದ್ದು, 100 ಮಂದಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಈವರೆಗೂ ದೇಶದಲ್ಲಿ 81,970 ಜನರಿಗೆ ಕೊವಿಡ್ ಸೋಂಕು ತಗುಲಿದೆ. ಇದರಲ್ಲಿ 51,401 ಪ್ರಕರಣಗಳು ಸಕ್ರಿಯವಾಗಿದೆ. 27,920 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಇದುವರೆಗೂ ದೇಶದಲ್ಲಿ ಒಟ್ಟು 2,649 ಜನ ಮರಣ ಹೊಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+