ಒಡಿಶಾ ರೈಲು ದುರಂತ:ಮೃತದೇಹವನ್ನು ಕುಟುಂಬದವರು ಪಡೆದುಕೊಳ್ಳುವುದು ಹೇಗೆ? ಇಲ್ಲಿದೆ ಮಾಹಿತಿ
ಬೆಂಗಳೂರು, ಜೂನ್ 03: ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಬಳಿ ಸಂಭವಿಸಿದ ಭೀಕರ ರೈಲು ದುರಂತದಲ್ಲಿ 233 ಮೃತಪಟ್ಟಿದ್ದು, 900ಕ್ಕೂ ಹೆಚ್ಚು ಜನ ಗಂಭೀರ ಗಾಯಗೊಂಡಿದ್ದಾರೆ.
ನಿನ್ನೆ ಜೂನ್ 2ರ ರಾತ್ರಿ ಊಹಿಸಲಾರದ ಭೀಕರ ರೈಲು ದುರಂತ ದೇಶದಲ್ಲಿ ಸಂಭವಿಸಿದ್ದು, ಕೋರಮಂಡಲ್ ಎಕ್ಸಪ್ರೆಸ್, ಬೈಯಪ್ಪನಹಳ್ಳಿ ಸರ್ಎಂ ವಿಶ್ವೇಶ್ವರಯ್ಯ ಟರ್ಮಿನಲ್-ಹೌರಾ ಎಕ್ಸಪ್ರೆಸ್ ಮತ್ತು ಗೂಡ್ಸ್ ರೈಲುಗಳು ಡಿಕ್ಕಿಯಾಗಿವೆ. ಗಂಭೀರ ಗಾಯಗೊಂಡಿರುವ 900ಕ್ಕೂ ಹೆಚ್ಚು ಜನರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.

ಇನ್ನು 233 ಮೃತಪಟ್ಟಿದ್ದು ಮೃತರ ಮೃತ ದೇಹವನ್ನು ಕುಟುಂಬದವರು ಪಡೆದುಕೊಳ್ಳುವುದು ಹೇಗೆ ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಈ ಬಗ್ಗೆ ಭಾರತೀಯ ರೈಲ್ವೆ ನೈಋತ್ಯ ವಿಭಾಗದ ಡಿಜಿಎಂ ಅವರ ಪ್ರೊಟೋಕಾಲ್ ಅಧಿಕಾರಿ 'ಒನ್ ಇಂಡಿಯಾ'ಗೆ ಮಾಹಿತಿ ನೀಡಿದ್ದಾರೆ.
ರೈಲ್ವೆ ಇಲಾಖೆಯಲ್ಲಿ ರಿಸರ್ವ್ಡ್(ಮುಂಚಿತ ಕಾದಿರಿಸುವುದು) ಮತ್ತು ಅನ್ ರಿಸರ್ವ್ಡ್ (ನಿಲ್ದಾಣದಲ್ಲಿ ಟಿಕೆಟ್ ಪಡೆದುಕೊಳ್ಳುವುದು) ಹೀಗೆ ಎರಡು ಕ್ಯಾಟಗರಿ ಇರುತ್ತದೆ. ರಿಸರ್ವ್ಡ್ ನಲ್ಲಿ ಪ್ರಯಾಣಿಸುವ ಎಲ್ಲಾ ಪ್ಯಾಸೆಂಜರುಗಳ ಮಾಹಿತಿ ರೈಲ್ವೆ ಅಧಿಕಾರಿಗಳ ಬಳಿ ಇರುತ್ತದೆ. ಅನ್ ರಿಸರ್ವ್ಡ್ ಟಿಕೆಟಿನಲ್ಲಿ ಪ್ರಯಾಣಿಸುವವರ ಹೆಚ್ಚಿನ ಮಾಹಿತಿ ರೈಲ್ವೆ ಇಲಾಖೆ ಬಳಿ ಇರುವುದಿಲ್ಲ. ಟಿಕೆಟ್ ಎಷ್ಟು ಗಂಟೆಗೆ ಮತ್ತು ಯಾವ ಸ್ಟೇಶನ್‌ನಿಂದ ಯಾವ ಸ್ಟೇಶನಿಗೆ ಪಡೆದುಕೊಳ್ಳಲಾಯಿತು ಎನ್ನುವ ಆಧಾರದ ಮೇಲೆ ಪ್ರಯಾಣಿಕರ ಸಂಬಂಧಿಕರೇ ಮಾಹಿತಿಯನ್ನು ರೈಲ್ವೇ ಅಧಿಕಾರಿಗಳ ಜೊತೆ ಪಡೆದುಕೊಳ್ಳಬೇಕಾಗುತ್ತದೆ ಎಂದರು.

ಇನ್ನು ಮೃತದೇಹಗಳ ಪೋಸ್ಟ್ ಮಾರ್ಟಂ ಆದ ನಂತರ ರೈಲ್ವೆ ಅಧಿಕಾರಿಗಳು ಪ್ರಯಾಣಿಕರು ಬುಕ್ಕಿಂಗ್ ಮಾಡುವ ವೇಳೆ ನೀಡಿರುವ ಮಾಹಿತಿಯನ್ನು ಆಧರಿಸಿ ಸಂಬಂಧಿಕರಿಗೆ ತಿಳಿಸುತ್ತಾರೆ. ಮೃತ ಪಟ್ಟವರು ಸರ್ಕಾರಿ ಗುರುತಿನ ಚೀಟಿಯೊಂದಿಗೆ ಸಂಬಂಧಿಕರು ದೇಹವನ್ನು ಪಡೆದುಕೊಳ್ಳ ಬೇಕಾಗುತ್ತದೆ ಎಂದಿದ್ದಾರೆ.
ಇನ್ನು ಟಿಕೆಟ್ ರಹಿತ ಪ್ರಯಾಣಿಕರು ಇದೇ ರೈಲಿನಲ್ಲಿ ಟ್ರಾವೆಲ್ ಮಾಡಿದ್ದಾರೆ ಎನ್ನುವ ಬಗ್ಗೆ ಅಧಿಕೃತ ಮಾಹಿತಿ ರೈಲ್ವೆ ಇಲಾಖೆಗೆ ಇರುವುದಿಲ್ಲ. ಸದ್ಯ ನಾವು ಅಪಘಾತದಲ್ಲಿ ಸಿಲುಕಿರುವವರ ರಕ್ಷಣೆ ಕಾರ್ಯ ನಡೆಸುತ್ತಿದ್ದು, ಈ ಬಳಿಕ ಪೋಸ್ಟ್ ಮಾರ್ಟಂ ಬಗ್ಗೆ ಕ್ರಮ ವಹಿಸಲಾಗುತ್ತದೆ. ಮೃತದೇಹಗಳನ್ನು ಹತ್ತಿರದ ಕೆಲವು ಸರ್ಕಾರಿ ಕಟ್ಟಡಗಳು,ಸಮುದಾಯ ಕೇಂದ್ರಗಳು ಹಾಗೂ ಆಸ್ಪತ್ರೆಗಳಲ್ಲಿ ಇರಿಸಲಾಗಿದೆ ಎಂದು ಭಾರತೀಯ ರೈಲ್ವೇ ನೈಋತ್ಯ ವಿಭಾಗದ ಡಿಜಿಎಂ ಅವರ ಪ್ರೊಟೋಕಾಲ್ ಅಧಿಕಾರಿ 'ಒನ್ ಇಂಡಿಯಾ'ಗೆ ಹೇಳಿದ್ದಾರೆ.
ಮೃತ ದೇಹಗಳನ್ನು ಅಪಘಾತ ನಡೆದ ಸ್ಥಳಕ್ಕೆ ಹತ್ತಿರ ಇರುವ ಆಸ್ಪತ್ರೆಗಳು, ಸರ್ಕಾರೀ ಕಚೇರಿ, ಕಮ್ಯೂನಿಟಿ ಸೆಂಟರ್ ಮುಂತಾದ ಕಡೆ ಇಡಲಾಗಿದೆ. ಬಾಲಸೋರ್ ನಲ್ಲಿರುವ ಲೂಸಿಯಾ ಕನ್ವೆನ್ಸನ್ ಸೆಂಟರ್ ನಲ್ಲಿ ಮಿಡೀಯಾ ಹೆಲ್ಪ್ ಡೆಸ್ಕ್ ಅನ್ನು ತೆರೆಯಲಾಗಿದೆ.
ಸಂಪರ್ಕದ ಮಾಹಿತಿ ಈ ರೀತಿಯಿದೆ:
ಹೇಮಂತ್ ನಾಯಕ್ (ಉಪ ನಿರ್ದೇಶಕರು, ಕಟಕ್, 94370 56558)
ಬಬಾನಿ ಭೂಯಿಯಾ (ಡಿಪಿಆರ್ ಒ, ಬಾಲಸೋರ್, 98611 53399)
ರಮೇಶ್ ನಾಯಕ್ (ಡಿಪಿಆರ್ ಒ, ಭದ್ರಕ್, 94373 20762)












Click it and Unblock the Notifications