ಕಾಂಗ್ರೆಸ್ ವಿರುದ್ಧ ಅಮಿತ್ ಮಾಳವೀಯ ಕಿಡಿ, ಕರ್ನಾಟಕವನ್ನು ಹಾಳು ಮಾಡಲಿದೆ ಎಂದು ಆಕ್ರೋಶ
ಬೆಂಗಳೂರು, ಜುಲೈ. 27: ತಮ್ಮ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಶಾಸಕರಿಗೆ "ಹಣವಿಲ್ಲ" ಎಂದು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಹೇಳುತ್ತಿದೆ ಎಂದು ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ರಾಜ್ಯ ಸರ್ಕಾರದ ವಿರುದ್ಧ ಗುರುವಾರ ವಾಗ್ದಾಳಿ ನಡೆಸಿದ್ದಾರೆ.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಹೇಳಿಕೆಗೆ ಬಿಜೆಪಿ ನಾಯಕ ಅಮಿತ್ ಮಾಳವಿಯಾ ಪ್ರತಿಕ್ರಿಯಿಸಿದ್ದಾರೆ. 'ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ತನ್ನ ಐದು ಚುನಾವಣಾ ಗ್ಯಾರೆಂಟಿಗಳ ಅನುಷ್ಠಾನದಿಂದಾಗಿ ಆರ್ಥಿಕ ಅಡಚಣೆಯಿಂದಾಗಿ ಈ ವರ್ಷ ಅಭಿವೃದ್ಧಿಗೆ ಹಣವನ್ನು ನೀಡಲು ಸಾಧ್ಯವಿಲ್ಲ ಎಂದು ಡಿಕೆ ಶಿವಕುಮಾರ್ ಬುಧವಾರ ಹೇಳಿದ್ದಾರೆ.

ಐದು ಗ್ಯಾರಂಟಿಗಳ ಕಾರಣದಿಂದಾಗಿ ಸರ್ಕಾರ ಹಣಕಾಸಿನ ಇಕ್ಕಟ್ಟಿನಲ್ಲಿದೆ ಎನ್ನುವುದನ್ನೂ ಭಾರೀ ನಿರೀಕ್ಷೆಗಳನ್ನು ಹೊಂದಿರುವ ತಮ್ಮ ಪಕ್ಷದ ಅಸಮಾಧಾನಗೊಂಡಿರುವ ಶಾಸಕರು ಅರ್ಥಮಾಡಿಕೊಳ್ಳಬೇಕು. ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯಲ್ಲಿ ಶಾಸಕರಿಗೆ ಸರ್ಕಾರದ ಪರಿಸ್ಥಿತಿ ವಿವರಿಸಲಾಗುವುದು ಎಂದು ಶಿವಕುಮಾರ್ ತಿಳಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಅಮಿತ್ ಮಾಳವೀಯ, ನಾವು ಈ ವರ್ಷ 40,000 ಕೋಟಿಗಳನ್ನು ಮೀಸಲಿಡಬೇಕಾಗಿತ್ತು (5 ಗ್ಯಾರಂಟಿಗಳಿಗೆ). ಈ ವರ್ಷ ನಾವು ಅಭಿವೃದ್ಧಿಗಾಗಿ ಹಣ ನೀಡಲು ಸಾಧ್ಯವಿಲ್ಲ ಎಂಬ ಡಿಕೆ ಶಿವಕುಮಾರ್ ಆವರ ಮಾತಿಗಳನ್ನು ಉಲ್ಲೇಖಿಸಿರುವ ಅವರು, "ಕಾಂಗ್ರೆಸ್ ಕರ್ನಾಟಕವನ್ನು ಹಾಳು ಮಾಡುತ್ತದೆ. 5 ಗ್ಯಾರಂಟಿಗಳು ಕಾರ್ಯಗತಗೊಳ್ಳುವ ಯಾವುದೇ ಲಕ್ಷಣಗಳಿಲ್ಲ ಮತ್ತು ಈಗ ಯಾವುದೇ ಅಭಿವೃದ್ಧಿಯೂ ಇಲ್ಲ. ಹಣದ ಕೊರತೆಯಿಂದ ಜನರ ಮುಂದೆ ಹೋಗಲು ಶಾಸಕರಿಗೆ ಮುಖವಿಲ್ಲದಂತಾಗಿದೆ" ಎಂದಿದ್ದಾರೆ.
ತಮ್ಮ ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸರ್ಕಾರ ಅನುದಾನ ನೀಡುತ್ತಿಲ್ಲ ಎನ್ನುವ ಕುರಿತು ಶಾಸಕರು ಅಸಮಾಧಾನ ವ್ಯಕ್ತಪಡಿಸುತ್ತಿರುವ ನಡುವೆ ಡಿಸಿಎಂ ಡಿಕೆ ಶಿವಕುಮಾರ್ ಈ ಹೇಳಿಕೆ ನೀಡಿದ್ದರು. "ನಾವು ಈ ವರ್ಷ ಐದು ಗ್ಯಾರಂಟಿಗಾಗಿ 40,000 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದ್ದೇವೆ. ಗ್ಯಾರಂಟಿ ಯೋಜನೆ ಜಾರಿ ಮಾಡುತ್ತಿರುವುದರಿಂದ ಮೊದಲ ವರ್ಷದಲ್ಲಿ ಅನುದಾನಗಳನ್ನ ನೀಡಲು ಸಾಧ್ಯವಾಗುವುದಿಲ್ಲ. ಅತ್ಯಗತ್ಯ ಕೆಲಸಗಳಿಗೆ ಹಣ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದ್ದರು.












Click it and Unblock the Notifications