BJP Candidate 3rd List: ಕುಟುಂಬ ರಾಜಕಾರಣಕ್ಕೆ ಬಿಜೆಪಿಯಿಂದ ಆರೈಕೆ, ಇದು ಬಂಡತನ ಎಂದ ಕಾಂಗ್ರೆಸ್
ಬೆಂಗಳೂರು, ಏಪ್ರಿಲ್ 18: ಕುಟುಂಬ ರಾಜಕಾರಣವನ್ನು ದ್ವೇಷ ಮಾಡುವ ಬಿಜೆಪಿ ಪಕ್ಷವು ತನ್ನ ಮೂರನೇ ಪಟ್ಟಿಯಲ್ಲಿ ಮತ್ತೆ ಒಂದೇ ಕುಟುಂಬದವರಿಗೆ ಟಿಕೆಟ್ ನೀಡಿ ಬಂಡತನ ತೋರಿದೆ ಎಂದು ಕರ್ನಾಟಕ ರಾಜ್ಯ ಕಾಂಗ್ರೆಸ್ ದೂರಿದೆ.
ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಸಂಬಂಧ ಬಿಜೆಪಿ ಪಕ್ಷವು ಸೋಮವಾರ ಸಂಜೆ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಒಟ್ಟು 10ಕ್ಷೇತ್ರಗಳ ಟಿಕೆಟ್ ನೀಡಿದೆ ಅಭ್ಯರ್ಥಿಗಳ ಹೆಸರನ್ನು ಘೊಷಿಸಿತು.

ಮಂಗಳವಾರ ಬಿಜೆಪಿ ಮೂರನೇ ಪಟ್ಟಿ ಕುರಿತು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿ ಕಿಡಿ ಕಾರಿದೆ. ಮೂರನೇ ಪಟ್ಟಿಯಲ್ಲೂ ಕುಟುಂಬ ರಾಜಕಾರಣದ ಕೂಸಿಗೆ ಆರೈಕೆ ಮಾಡಿ ಬೆಳೆಸುತ್ತಿದೆ. ವಂಶಪಾರಂಪರ್ಯದ ಹಕ್ಕು ಎಂಬಂತೆ ಟಿಕೆಟ್ ಹಂಚಿಕೆ ಮಾಡಿ ಇತರ ಪಕ್ಷಗಳತ್ತ ಬೆರಳು ತೋರಿಸುವುದು ರಾಜ್ಯ ಬಿಜೆಪಿ ಪಕ್ಷದ ಬಂಡತನಕ್ಕೆ ಸಾಕ್ಷಿ ಎಂದು ಕಾಂಗ್ರೆಸ್ ಜರಿದಿದೆ.
ಕುಟುಂಬ ರಾಜಕಾರಣ: ಬಿಜೆಪಿ ವಿರುದ್ಧ ಕಾಂಗ್ರೆಸ್ ಕೆಂಡ
ವಂಶಪಾರಂಪರ್ಯದ ಹಕ್ಕು ಎಂಬಂತೆ ಕುಟುಂಬ ರಾಜಕಾರಣದ ಕೂಸಿಗೆ ಟಿಕೆಟ್ ನೀಡಿ ಆರೈಕೆ ಮಾಡಿದೆ. ಹೀಗಿದ್ದರೂ ಅಭ್ಯರ್ಥಿಗಳ ಆಯ್ಕೆಗೆ ಕಾರ್ಯಕರ್ತರಿಂದ ಮತದಾನ ಮಾಡಿಸಿರುವ ಬಿಜೆಪಿಯದ್ದು ಒಂದು ಡೋಂಗಿ ನಾಟಕವಲ್ಲವೇ ಎಂದು ಬಿಜೆಪಿ ಪಕ್ಷ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟಿಲ್ ಅವರನ್ನು ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ಪಟ್ಟಿ ಬಿಡುಗಡೆಗೆ ತಡಮಾಡಿದ್ದ ಬಿಜೆಪಿಯು ಸರಣಿ ಸಭೆಗಳನ್ನು ನಡೆಸಿತ್ತು. ಅದಾದ ಬಳಿಕ ಒಂದನೇ ಪಟ್ಟಿಯಲ್ಲಿ ಬಿಜೆಪಿ 189 ಕ್ಷೇತ್ರಗಳಿಗೆ ಟಿಕೆಟ್ ಫೈನಲ್ ಮಾಡಿ ಹೆಸರು ಬಿಡುಗಡೆ ಮಾಡಿತ್ತು. ನಂತರ ಎರಡನೇ ಪಟ್ಟಿ ಬಿಡುಗಡೆ ಮಾಡಿತು. ಇದರಲ್ಲಿ ಒಟ್ಟು ಸುಮಾರು 10-12 ಕುಟುಂಬಗಳಿಗೆ, ರಾಜಕೀಯ ಹಿನ್ನೆಲೆ ಇರುವವರಿಗೆ ಟಿಕೆಟ್ ನೀಡಿದೆ ಎಂದ ಕಾಂಗ್ರೆಸ್ ಬಿಜೆಪಿ ರಾಜವಂಶಗಳ ಮಾಹಿತಿ ಕಲೆ ಹಾಕಿ ವಾಗ್ದಾಳಿ ನಡೆಸಿತ್ತು.
ರಾಜಕೀಯ ಹಿನ್ನೆಲೆವುಳ್ಳವರಿಗೆ ಮತ್ತೆ ಟಿಕೆಟ್
ಬಿಜೆಪಿ ಟಿಕೆಟ್ ಘೋಷಣೆಗೂ ಮುನ್ನ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಕೋರಿ ಒಟ್ಟು ರಾಜಕಾರಣದಲ್ಲಿ ಸಕ್ರಿಯವಾಗಿರುವ ಹತ್ತು ಕುಟುಂಬಗಳ ಸದಸ್ಯರು ತಮಗೆ ಟಿಕೆಟ್ ನೀಡುವಂತೆ ಕೇಳಿಕೊಂಡಿದ್ದರು ಎನ್ನಲಾಗಿದೆ. ಬಿಜೆಪಿಯಿಂದ ಎಷ್ಟು ಮಂದಿ ರಾಜಕೀಯ ಹಿನ್ನೆಲೆ ಇರುವವರಿಗೆ ಟಿಕೆಟ್ ಸಿಕ್ಕಿದೆ ಎಂಬ ಬಗ್ಗೆ ಕಾಂಗ್ರೆಸ್ ಪಟ್ಟಿ ಮಾಡಿತ್ತು.

ಕುಟುಂಬ ರಾಜಕಾರಣ ಎಂದರೆ ಅದು ಕಾಂಗ್ರೆಸ್ ಎಂದು ಇತರ ಪಕ್ಷಗಳತ್ತ ಬೆಟ್ಟು ಮಾಡುತ್ತಿದ್ದ ಬಿಜೆಪಿಯು ಇಂದು ಸುಮಾರು ಎರಡು ಡಜನ್‌ಗೂ ಹೆಚ್ಚು ಮಂದಿಗೆ ಟಿಕೆಟ್ ನೀಡಿದೆ. ಈ ಮೂಲಕ ಕುಟುಂಬ ರಾಜಕಾರಣವನ್ನು ಆರೈಕೆ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕರು ಬಿಜೆಪಿಯನ್ನು ಜಾಡಿಸಿದರು.
ಬಿಜೆಪಿ ಟಿಕೆಟ್ ಪಡೆದ ಒಂದೇ ಕುಟುಂಬದ ನಾಯಕರ ವಿವರ
ಮೂರನೇ ಪಟ್ಟಿಯಲ್ಲಿ ಮಹದೇವಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿಗೆ ಪತ್ನಿಗೆ ಈ ಬಾರಿ ಟಿಕೆಟ್ ನೀಡಲಾಗಿದೆ. ಕೊಪ್ಪಳ ಸಂಸದ ಸಂಗಣ್ಣ ಕರಡಿ ಸೊಸೆ ಮಂಜುಳಾ ಅಮರೇಶ್ ಕರಡಿಗೆ ಟಿಕೆಟ್ ಘೋಷಣೆ ಆಗಿದೆ. ಈ ಹಿಂದೆಯೆ ಟಿಕೆಟ್‌ಗಾಗಿ ಸಂಸದರು ಪಟ್ಟು ಹಿಡಿದಿದ್ದರು. ಆಗ ನೀಡಿ ದ ಮಾತಿನಂತೆ ಬಿಜೆಪಿ ಅವರ ಸೊಸಿಗೆ ಟಿಕೆಟ್ ಕರುಣಿಸಿದೆ.
ನಿಪ್ಪಾಣಿಯ ಶಶಿಕಲಾ ಜೊಲ್ಲೆ ಅವರ ಪತಿ ಅಣ್ಣಸಾಹೇಬ್ ಜೊಲ್ಲೆ, ಶಿಕಾರಿಪುರದಲ್ಲಿ ಮಾಜಿ ಮುಖ್ಯಮಂತ್ರಿ ಪುತ್ರ ಬಿವೈ ವಿಜಯಜೇಂದ್ರ ಅವರಿಗೆ ಟಿಕೆಟ್ ಸಿಕ್ಕಿದೆ. ಅವರ ಸಹೋದರ ಬಿ.ವೈ ರಾಘವೇಂದ್ರ ಬಿಜೆಪಿ ಸಂಸದರಾಗಿದ್ದಾರೆ. ಕಲಬುರಗಿಯಲ್ಲಿ ಉಮೇಶ್ ಜಾಧವ್ ಪುತ್ರ ಅವಿನಾಶ್ ಜಾಧವ್‌ಗೆ ಟಿಕೆಟ್ ಸಿಕ್ಕಿದೆ.
ತುಮಕೂರು ಸಂಸದ ಬಸವರಾಜ ಜಿ.ಎಸ್. ಅವರ ಮತ ಜ್ಯೋತಿ ಗಣೇಶ್, ಗಾಳಿ ಜನಾರ್ಧನ ರೆಡ್ಡಿ ಅವರ ಪುತ್ರ ಸೋಮಶೇಖರ್ ರೆಡ್ಡಿ, ಆನಂದ್ ಸಿಂಗ್ ಪುತ್ರ ಸಿದ್ಧಾರ್ಥ್ ಸಿಂಗ್, ಸಂಸದರಾದ ತೇಜಸ್ವಿ ಸೂರ್ಯ ಅವರ ಚಿಕ್ಕಪ್ಪ ರವಿ ಸುಬ್ರಹ್ಮಣ್ಯ ಅವರಿಗೆ ಬಿಜೆಪಿ ಟಿಕೆಟ್ ನೀಡುವ ಮೂಲಕ ವಂಶಾವಾಹಿ ರಾಜಕಾರಣ ಮಾಡಿದೆ ಎಂದು ಕಾಂಗ್ರೆಸ್ ಕಿಡಿ ಕಾರಿದೆ.












Click it and Unblock the Notifications