ಚೈತ್ರಾ ಕುಂದಾಪುರ ಬಂಧನ ಬಗ್ಗೆ ಕಾಂಗ್ರೆಸ್ ವಕ್ತಾರೆಯ ಸ್ಪಷ್ಟನೆ ಇದು

ಉಡುಪಿ, ಸೆಪ್ಟಂಬರ್ 13: ಬಿಜೆಪಿಯ ಟಿಕೆಟ್ ಕೊಡಿಸುವುದಾಗಿ ಹೇಳಿ ಉದ್ಯಮಿಯೊಬ್ಬರಿಗೆ ವಂಚನೆ ಮಾಡಿದ್ದ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಹಿಂದೂ ಕಾರ್ಯಕರ್ತೆ ಚೈತ್ರಾಳನ್ನು ಬಂಧಿಸಲಾಗಿದೆ. ಈ ಬಂಧಿತ ಚೈತ್ರಾಳಿಗೆ ನಾನು ನಮ್ಮ ಮನೆಯಲ್ಲಿ ಆಶ್ರಯ ನೀಡಿಲ್ಲವೆಂದು, ಹರಿದಾಡುತ್ತಿರುವ ಸುದ್ದಿ ಸುಳ್ಳೆಂದು ಯುವ ಕಾಂಗ್ರೆಸ್ ವಕ್ತಾರೆ ಸುರಯ್ಯ ಅಂಜುಮ್ ಸ್ಪಷ್ಟಪಡಿಸಿದ್ದಾರೆ.

ಆರೋಪಿ ಹಿಂದೂ ಕಾರ್ಯಕರ್ತೆ ಚೈತ್ರಾಳಿಗೆ ನಾನು ಒಂದು ವಾರ (7ದಿನ) ಕಳೆದ ಏಳು ದಿನಗಳಿಂದ ಆಶ್ರಯ ನೀಡಿದ್ದೇನೆ ಎಂಬ ಸುದ್ದಿ ಹರಿದಾಡುತ್ತಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಸದರಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆ. 8ರಂದು ಎಫ್ಐಆರ್ ದಾಖಲಾಗಿದೆ. ಇದೆಲ್ಲ ನೋಡಿದರೆ ನಾನು ಏಳು ದಿನಗಗಳು ಆಗುವುದೇ ಇಲ್ಲ. ನಾನು ಅವರಿಗೆ ಶ್ರಯ ಕೊಟ್ಟಿಲ್ಲ ಎಂದು ಪುನುರುಚ್ಚಿರಿಸಿದ್ದಾರೆ.

congress-spokesperson-suraiya-anjum

ಸುದ್ದಿ ವಾಹಿನಿಯೊಂದಲ್ಲಿ ಕೆಲವು ವರ್ಷಗಳ ಕಾಲ ನಾನು ಮತ್ತು ಚೈತ್ರಾಳು ಕಾರ್ಯ ನಿರ್ವಹಿಸಿದ್ದೆವು. ಕೆಲಸ ಬಿಟ್ಟ ನಂತರ ನನಗೂ ಅವಳಿಗೂ ಯಾವುದೇ ಸಂಬಂಧವಿರಲಿಲ್ಲ. ಸುದ್ದಿ ವಾಹಿನಿಗಳಲ್ಲಿ ಬರುತ್ತಿರುವ ಸುಳ್ಳು ಸುದ್ದಿಗಳಿಂದ ನನಗೆ ಮಾನಸಿಕ ಹಿಂಸೆ ಆಗುತ್ತಿದೆ. ನಿತ್ಯವು ತೊಂದರೆ ಆಗುತ್ತಿದೆ. ಈ ಸಂಬಂಧ ನಾನು ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡುತ್ತೇವೆ ಎಂದು ಕಾಂಗ್ರೆಸ್ ವಕ್ತಾರೆ ಸುರಯ್ಯ ಅಂಜುಮ್ ತಿಳಿಸಿದ್ದಾರೆ.

ನನ್ನ ಮನೆಯಿಂದ ಚೈತ್ರಾಳ ಬಂಧನವಾಗಿಲ್ಲ

ಅಷ್ಟೇ ಅಲ್ಲದೆ ನನ್ನ ಮನೆಯಲ್ಲಿ ಚೈತ್ರಾಳು ಆಶ್ರಯಪಡೆದಿದ್ದಳು. ಆಕೆಯನ್ನು ನನ್ನ ಮನೆಯಿಂದಲೇ ಬಂಧಿಸಲಾಗಿದೆ ಎಂದೆಲ್ಲ ಕೆಲವು ಮಾಧ್ಯಮಗಳು ವರದಿ ಮಾಡಿದ್ದು, ಇದೆಲ್ಲ ಸುಳ್ಳು ಸುದ್ದಿ ಎಂದು ಪ್ರತಿಪಾದಿಸಿದರು. ನನ್ನಿಂದ ಯಾವುದೇ ತಪ್ಪುಗಳು ಆಗಿಲ್ಲ. ನನಗೆ ನ್ಯಾಯ ದೊರಕಿಸಿಕೊಡಬೇಕು ಎಂದು ವಕ್ತಾರೆ ಕೇಳಿಕೊಂಡಿದ್ದಾರೆ.

ಮಾಧ್ಯಮಗಳಲ್ಲಿ ವರದಿ ಆದಂತೆ ಏನು ನಡೆದಿಲ್ಲ. ನನಗೆ ಈವರೆಗೆ ಸಿಸಿಬಿ ಪೊಲೀಸರಿಂದ ಯಾವ ನೋಟಿಸ್ ಸಹ ಬಂದಿಲ್ಲ. ಸಿಸಿಬಿ ಪೊಲೀಸರು ಆಕೆಯನ್ನು ಶ್ರೀಕೃಷ್ಣ ಮಠದ ರಾಜಾಂಗಣ ಪಾರ್ಕಿಂಗ್ ಪ್ರದೇಶದಲ್ಲಿ ವಶಕ್ಕೆ ಪಡೆದಿರುವುದು ಸಂಬಂಧಿತ ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ ಎಂದು ಅವರು ವಿವರಿಸಿದರು.

congress-spokesperson-suraiya-anjum

ಹಿಂದೂ ಕಾರ್ಯಕರ್ತೆ ಚೈತ್ರಳು ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಉಡುಪಿ ಜಿಲ್ಲೆಯ ಕುಂದಾಪುರ ಉದ್ಯಮಿಯೊಬ್ಬರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದಾಳೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಆಕೆ ಸೇರಿದಂತೆ ಕೆಲವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಹಿಂದೂ ಧರ್ಮ ಕುರಿತು ವೇದಿಕೆಗಳ ಮೇಲೆ ಭಾಷಣಗಳ ಮೂಲಕ ಚೈತ್ರಾ ಹೆಚ್ಚು ಗುರುತಿಸಿಕೊಂಡಿದ್ದಾಳೆ.

ಬಿಜೆಪಿ ವಿರುದ್ಧ ಕಾಂಗ್ರೆಸ್ ತೀವ್ರ ಟೀಕೆ

ಪ್ರಕರಣ ಸಂಬಂಧ ಕಾಂಗ್ರೆಸ್ ಬಿಜೆಪಿ ವಿರುದ್ಧ ಕಿಡಿ ಕಾರಿದೆ. ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಏಳು ಕೋಟಿ ರೂಪಾಯಿ ವಂಚನೆ ಮಾಡಲಾಗಿದೆ. ಈ ಪ್ರಕರಣ ತಿಂಗಳಗಳ ಹಿಂದೆಯೇ ಬೆಳಕಿಗೆ ಬಂದಿದೆ. ಹೀಗಿದ್ದರೂ ಬಿಜೆಪಿ ಯಾಕೆ ದೂರು ಕೊಡದೇ ಸುಮ್ಮನಿದೆ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.

ಇದೆಲ್ಲ ನೋಡಿದರೆ ವಂಚನೆ ಪ್ರಕರಣದಲ್ಲಿ ಬಿಜೆಪಿಗರ ಪಾಲು ಮತ್ತು ಆರ್‌ಎಸ್‌ಎಸ್‌ನವರ ಪಾಲು ಎಷ್ಟಿದೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಹಾಗಾದರೆ ಬಿಜೆಪಿಯಲ್ಲಿ ಮುಖ್ಯಮಂತ್ರಿ ಹುದ್ದೆ, ಸಚಿವರ ಹುದ್ದೆ ಸೇರಿದಂತೆ ಟಿಕೆಟ್‌ಗಳು ಮಾರಾಟಕ್ಕಿವೆ ಎಂದು ಕಾಂಗ್ರೆಸ್ ಟೀಕಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+