ವಿವಾದ ಸೃಷ್ಟಿಸುವುದೇ ಸಂಸದ ಪ್ರತಾಪ ಸಿಂಹ ಕೆಲಸ: ಎಂ.ಲಕ್ಷ್ಮಣ್ ವಾಗ್ದಾಳಿ

ಬೆಂಳೂರು,ನವೆಂಬರ್ 16: ವಿವಾದಗಳನ್ನು ಸೃಷ್ಟಿಸುವುದೇ ಸಂಸದ ಪ್ರತಾಪ ಸಿಂಹ ಅವರ ಕೆಲಸವಾಗಿದೆ ಎಂದು ಕಾಂಗ್ರೆಸ್ ವಕ್ತಾರ ಎಂ. ಲಕ್ಷಣ್ ವಾಗ್ದಾಳಿ ನಡೆಸಿದ್ದಾರೆ

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಅವರು, ಮೈಸೂರು ಗುಂಬಜ್ ಬಸ್ ಸ್ಟಾಂಡ್ ವಿಚಾರವಾಗಿ ಸಂಸದ ಪ್ರತಾಪ್ ಸಿಂಹ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.ಮೈಸೂರಿನಲ್ಲಿ ಕಿಡಿ ಹೊತ್ತಿಸಲು ಪ್ರತಾಪ್ ಸಿಂಹ ಎಂಬ ಸಂಸದರಾಗಿದ್ದಾರೆ. ಈ ಹಿಂದಿನ ಸರ್ಕಾರಗಳು ಮೈಸೂರು ಸಿಟಿಯನ್ನು ಪಾರಂಪರಿಕ ನಗರಿ ಎಂದು ಪರಿಗಣಿಸಬೇಕು ಎಂದು ಆರ್ಕಿಯಾಲಜಿ ಇಲಾಖೆಗೆ ಪ್ರಸ್ತಾವನೆ ನೀಡಲಾಗಿತ್ತು. ಈ ಪರ್ಸ್ತಾವನೆಯಲ್ಲಿ 350 ಕಟ್ಟಡಗಳನ್ನು ಪಾರಂಪರಿಕ ಕಟ್ಟಡ ಎಂದು ಗುರುತಿಸಿದ್ದು, ಇದರಲ್ಲಿ ಅರಮನೆ ಸೇರಿದಂತೆ 180 ಕಟ್ಟಡಗಳು ಸರ್ಕಾರಿ ಕಟ್ಟಡಗಳಾಗಿವೆ.

ಇಡೀ ಪ್ರಪಂಚದಲ್ಲಿ 8 ಬಗೆಯ ಆರ್ಕಿಟೆಕ್ಚರ್ ಗಳನ್ನು ಬಳಸಲಾಗುತ್ತಿದೆ. ಮೈಸೂರು ಅರಮನೆಯ ಮೇಲ್ಬಾಗದ ಗೋಪುರವನ್ನು ಮೋಘಲರ ಆರ್ಕಿಟೆಕ್ಚರ್ ಎಂದು ಕರೆಯುತ್ತೇವೆ. ಬ್ರಿಟನ್ ಸೇರಿದಂತೆ ಪ್ರಪಂಚದಾದ್ಯಂತ ಈ ವಿನ್ಯಾಸ ಬಳಸಲಾಗಿದೆ. ಮೈಸೂರು ಅರಮನೆ ವಿನ್ಯಾಸ ಆಧಆರದ ಮೇಲೆ ಅಲ್ಲಿನ ಪಾಲಿಕೆ, ಶಾಸಕರು ಸೇರಿ ಅರಮನೆಯ ಮೂರು ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಕಟ್ಟಡ ನಿರ್ಮಾಣ ಮಾಡಬೇಕಾದರೂ ಅದು ಅರಮನೆಯ ಪಾರಂಪರಿಕ ವಿನ್ಯಾಸವನ್ನೇ ಹೊಂದಿರ ಬೇಕು ಎಂದು ತೀರ್ಮಾನಿಸಲಾಗಿದೆ. ಇದು ಮೈಸೂರು ಪಾಲಿಕೆಯ ಬೈಲಾದಲ್ಲೂ ಇದೆ. ಒಂದು ಶೌಚಾಲಯ ಕಟ್ಟಿದರೂ ಅದರ ವಿನ್ಯಾಸ ಈ ರೀತಿ ಇರಬೇಕು ಎಂದು ಕಾನೂನು ಇದೆ.

Congress spokesperson M Lakshman outraged on Mysuru MP Pratap Singh

ಈ ಭಾಗದ ಮೂವರು ಶಾಸಕರ ಪೈಕಿ ಬಿಜೆಪಿ ಶಾಸಕ ರಾಮದಾಸ್ ಅವರು 18 ಬಸ್ ಶೆಲ್ಟರ್ ಗಳನ್ನು ತಮ್ಮ ಅನುದಾನದಲ್ಲಿ ಹಣ ನೀಡಿದ್ದು, 12 ಬಸ್ ಶೆಲ್ಟರ್ ನಿರ್ಮಾಣವಾಗಿವೆ. ಇವುಗಳ ಡೂಮ್ ಸ್ಟಕ್ಚರ್ ಏನು ಎಂದು ಅರ್ಥ ಮಾಡಿಕೊಳ್ಲುವ ಯೋಗ್ಯತೆ ಇಲ್ಲದ ವ್ಯಕ್ತಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೇಲೆ ಒತ್ತಡ ತಂದು ಪಾಲಿಕೆ ಹಾಗೂ ರಾಜ್ಯ ರಸ್ತೆ ಸಂಸ್ಥೆಗೆ ಪತ್ರ ಬರೆದು ಅದರಲ್ಲಿ ಇದು ಧರ್ಮವನ್ನು ಬಿಂಬಿಸುವ ವಿನ್ಯಾಸವಾಗಿದೆ. ಹೀಗಾಗಿ ಇದನ್ನು ತೆರವುಗೊಳಿಸಬೇಕು ಎಂದು ಅಧಿಕಾರಿ ಕೈಯಲ್ಲಿ ಸಂಸದರು ಪತ್ರ ಬರೆಸುತ್ತಾರೆ.

ಇದಕ್ಕೆ ರಾಮದಾಸ್ ಅವರು ಸ್ಪಷ್ಟೀಕರಣ ನೀಡಿದ್ದು, ಇದು ಯಾವುದೇ ಧರ್ಮದ ಪ್ರತೀಕವಾಗಿಲ್ಲ. ಇದಕ್ಕೂ ಮಸೀದಿಗೆ ಸಂಬಂಧವಿಲ್ಲ ಹಾಗಾಗಿ ಇದನ್ನು ಒಡೆಯುವ ಪ್ರಶ್ನೆಯೇ ಇಲ್ಲ. ಪ್ರತಾಪ್ ಸಿಂಹ ಅವರು ರಾಜಕೀಯ ಮಾಡುವ ನಿಟ್ಟಿನಲ್ಲಿ ಹೇಳಿಕೆ ನೀಡುತ್ತಿದ್ದಾರೆ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ಪ್ರತಾಪ್ ಸಿಂಹ ಕಳೆದ ಎಂಟು ವರ್ಷಗಳಿಂದ ಕೊಡಗನ್ನು ಸಂಪೂರ್ಣವಾಗಿ 25 ವರ್ಷ ಹಿಂದಕ್ಕೆ ತೆಗೆದುಕೊಂಡಿದ್ದು, ಮೈಸೂರನ್ನು ಸುಮಾರು 10 ವರ್ಷ ಹಿಂದಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಉಳಿದಿರುವ ಎರಡು ವರ್ಷಗಳಲ್ಲಿ ಇನ್ನು 10 ವರ್ಷ ಹಿಂದಕ್ಕೆ ತೆಗೆದುಕೊಂಡು ಹೋಗುತ್ತಾರೆ. ಇವರ ಯೋಗ್ಯತೆಗೆ ಕೇಂದ್ರದಿಂದ ನಯಾ ಪೈಸೆ ತರಲಿಲ್ಲ. ಆದರೆ ರಾಜ್ಯದಲ್ಲಿ ಕಿಡಿ ಹೊತ್ತಿಸಲು ನಾಲ್ಕೈದು ಜನರಿದ್ದು ಇವರು ಮೊದಲ ಎರಡು ಸ್ಥಾನಗಳಲ್ಲಿ ಬರುತ್ತಾರೆ. ಪ್ರಹ್ಲಾದ್ ಜೋಷಿ, ಸಿ.ಟಿ ರವಿ, ರವಿ ಕುಮಾರ್ ಇವರೆಲ್ಲರೂ ಸುಳ್ಲು ಹೇಳುವುದರಲ್ಲೇ ಪಿಹೆಚ್ಡಿ ಮಾಡಿಕೊಂಡಿದ್ದರೆ.

Congress spokesperson M Lakshman outraged on Mysuru MP Pratap Singh

ಪ್ರಸಾತ್ಪ್ ಸಿಂಹ ಅವರು ಸತ್ಯಹರಿಶ್ಚಂದ್ರರ ಕುಟುಂಬಕ್ಕೆ ಸೇರಿದ್ದರೆ ನಾನು ಮೈಸೂರು ಡಿಸಿಗೆ ನೀಡಿರುವ ದೂರಿನಲ್ಲಿ ಸಂಸದರ ನಿಧಿಯ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದೇನೆ. ಇವರು ದಕ್ಷಿಣ ಕನ್ನಡದ ಕಿಕ್ಕಂಜೆ ಊರಿನಲ್ಲಿ ಡಾ.ಮುರಳಿಕೃಷ್ಣ ಎಂಬ ಇವರ ಸ್ನೇಹಿತರ ಆಸ್ಪತ್ರೆ ಇದೆ. ಅದಕ್ಕೆ ಇವರು 18 ಲಕ್ಷ ರೂಪಾಯಿಯ ಆಂಬುಲೆನ್ಸ್ ಅನ್ನು ದೇಣಿಗೆ ನೀಡುತ್ತಾರೆ. ಮುರಳಿಕೃಷ್ಣ ಅವರ ಮತ್ತೊಂದು ಕ್ಲೀನಿಕ್ ಹೊಯ್ಸಳ ಕ್ಲೀನಿಕ್ ಗೆ ನಿರ್ದೇಶಕರನ್ನಾಗಿ ಪ್ರತಾಪ್ ಸಿಂಹ ಅವರ ಪತ್ನಿ ಅರ್ಪಿತಾ ಸಿಂಹ ಅವರನ್ನು ನೇಮಿಸಲಾಗಿದೆ.

ಸಂಸದರ ನಿಧಿಯಿಂದ ಬೇರೆ ಜಿಲ್ಲೆ ಕ್ಷೇತ್ರಗಳಿಗೇ ದೇಣಿಗೆ ರೂಪದಲ್ಲಿ ನೀಡಲು ಅವಕಾಶವಿದೆ. ಆದರೆ ಅದಕ್ಕೆ ಒಂದು ಷರತ್ತು ಇದ್ದು, ನೀವು ಯಾವುದೇ ಟ್ರಸ್ಟ್, ಸೊಸೈಟಿ ಅಥವಾ ಸಹಕಾರಿ ಸೊಸೈಟಿ ಆಗಿರಬಾರದು. ಆದರೆ ಪ್ರತಾಪ್ ಸಿಂಹ ಅವರು ನೀಡಿರುವ ಹಣ ವೆಂಕಟಕೃಷ್ಣ ಯೂರತ್ರೇಯ ಮೆಮೋರಿಯಲ್ ಟ್ರಸ್ಟ್ ಗೆ ನೀಡಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ? ಇನ್ನು ಮೈಸೂರಿನಲ್ಲಿ ಒಂದು ಟ್ರಸ್ಟ್ ಗೆ ಹಣ ನೀಡಿದ್ದು, ಎಂ.ಗೋಪಿನಾಥ್ ಶೆಣೈ ಚಾರಿಟಬಲ್ ಟ್ರಸ್ಟ್ ಗೆ ನೀಡಿದ್ದಾರೆ. ಈ ಟ್ರಸ್ಟ್ ನ ವಿಳಾಸ ಹುಡುಕಿಕೊಂಡು ಹೋದಾಗ ಸರಸ್ವತಿಪುರಂ ನ ವಿಶ್ವಮಾನವ ರಸ್ತೆ 12ನೇ ನಂಬರ್ ಜಾಗದಲ್ಲಿ ಈ ಟ್ರಸ್ಟ್ ನ ಕಚೇರಿ ಬದಲು ಮೆಕ್ ಡೊನಾಲ್ಡ್ ಹೊಟೇಲ್ ಇದೆ. ಇದಕ್ಕೆ ಪ್ರತಾಪ್ ಸಿಂಹ ಅವರು ಉತ್ತರಿಸಬೇಕು. ಇದುವರೆಗೂ ಈ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡಿ, ಎರಡು ಪತ್ರಿಕಾಗೋಷ್ಠಿ ಮಾಡಿದ್ದರೂ ಅವರು ಉತ್ತರ ನೀಡಿಲ್ಲ.

ಇಂತಹ ವ್ಯಕ್ತಿ ಬೆಂಗಳೂರು ಮೈಸೂರು ರಸ್ತೆಯನ್ನು ತನ್ನ ಮನೆ ಆಸ್ತಿಯಿಂದ ಮಾಡುತ್ತಿರುವಂತೆ ಮಂಡ್ಯ, ಮದ್ದೂರಿನಲ್ಲಿ ಫೇಸ್ಬುಕ್ ಲೈವ್ ಮಾಡುತ್ತಿದ್ದಾರೆ. ಈ ರೀತಿ ಮಾಡಿ ಗುತ್ತಿಗೆದಾರರಿಂದ 3 ಕೋಟಿಯಷ್ಟು ಲಂಚ ಪಡೆದಿದ್ದಾರೆ ಎಂದು ಮಂಡ್ಯದ ಜನ ಪತ್ರಿಕಾಗೋಷ್ಠಿ ಮಾಡಿ ಹೇಳುತ್ತಿದ್ದಾರೆ. ಇಂತಹ ವ್ಯಕ್ತಿ ಚುನಾವಣೆ ಸಮಯದಲ್ಲಿ ಕಿಡಿ ಹಚ್ಚಲು ಈ ರೀತಿ ಗೊಂದಲ ಸೃಷ್ಟಿಸಿ ಜನರ ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿಯವರ ಈ ಸುಳ್ಳು ಹೇಳಿಕೆಗಳನ್ನು ನಂಬಬಾರದು ಎಂದು ಜನರಲ್ಲಿ ಮನವಿ ಮಾಡಿಕೊಳ್ಳುತ್ತೇನೆ.

ಅವರು ತಾವು ಇಂತಹ ಭರವಸೆ ನೀಡಿದ್ದು, ಅದರಲ್ಲಿ ಎಷ್ಟು ಭರವಸೆ ಈಡೇರಿಸಿದ್ದೇವೆ, ಇಂತಹ ಯೋಜನೆ ಮಾಡಿದ್ದೇವೆ ಎಂದು ತಮ್ಮ ಕೆಲಸದ ಪಟ್ಟಿ ನೀಡಿ ಮತ ಕೇಳಲಿ. ಅದನ್ನು ಬಿಟ್ಟು ದಿನಬೆಳಗಾದರೆ ಸಿದ್ದರಾಮಯ್ಯ ಅವರನ್ನು ನೆನೆಯುತ್ತಾರೆ. ಬಿಜೆಪಿ ನಾಯಕರು ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಹೆಸರು ಬಳಸದೇ ಯಾವುದಾದರೂ ಒಂದು ಕಾರ್ಯಕ್ರಮವನ್ನು ಮಾಡಲಿ.

ಶ್ರೀರಾಮುಲು ಅವರು ಅಂದರಗಾನಿ ಎಂದು ವೀರಾವೇಷದಲ್ಲಿ ಮಾತನಾಡುವುದರ ಹೊರತಾಗಿ ಬೇರೇನು ಮಾಡಿಲ್ಲ. ಆ ಪದದ ಅರ್ಥ ಹುಡುಕುತ್ತಿದ್ದು ಈವರೆಗೂ ಸಿಕ್ಕಿಲ್ಲ. ಅವರು ಸಿದ್ದರಾಮಯ್ಯನವರು ಕ್ಷೇತ್ರಕ್ಕೆ ಅನ್ಯಾಯಾ ಮಾಡಿದ್ದಾರೆ ಎಂದು ಹೇಳುತ್ತಾರೆ. ಅವರು ಯಾವ ಕ್ಷಏತ್ರದವರು ಅವರು ಏನು ಅನ್ಯಾಯಾ ಮಾಡಿದ್ದಾರೆ ಎಂದು ಅರಿಯುತ್ತಿಲ್ಲ. ಶ್ರೀರಾಮುಲು ಅವರೇ ನೀವು ಮುಂದಿನ ಚುನಾವಣೆಯಲ್ಲಿ 25 ಸಾವಿರ ಮತಗಳ ಅಂತರದಲ್ಲಿ ಸೋಲುವುದು ನಿಶ್ಚಿತ. ನಿಮ್ಮನ್ನು ಸೋಲಿಸಲು ಎಲ್ಲ ವ್ಯವಸ್ಥೆಯನ್ನು ಜನ ಮಾಡಿಕೊಂಡಿದ್ದಾರೆ.

ರಾಮದಾಸ್ ಹಾಗೂ ಪ್ರತಾಪ್ ಸಿಂಹ ಅವರ ನಡುವಣ ತಿಕ್ಕಾಟ ಬಹಳ ಹಿಂದಿನಿಂದಲೂ ನಡೆಯುತ್ತಿದೆ. ಒಳಗೆ ಅವರು ಬಟ್ಟೆ ಹರಿದುಕೊಂಡು ಹೊಡೆದಾಡಿ ಹೊರಗಡೆ ಏನೂ ಆಗಿಲ್ಲ ಎಂಬಂತೆ ಬಿಂಬಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದು ಅನ್ನು ದೊಡ್ಡ ಮಟ್ಟಕ್ಕೆ ಹೋಗಲಿದ್ದು. ಜನಗಳು ಇದನ್ನು ಮನರಂಜನೆಯಾಗಿ ನೋಡಲಿ ಎಂದು ಮನವಿ ಮಾಡುತ್ತೇನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+