‘ಬಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ ವಿಜಯೇಂದ್ರ ಹೆಸರೇ ಇಲ್ಲ: ಇದು ‘ಸಂತೋಷ ಕೂಟ’ದ ಕೈವಾಡವೇ?’
ಮಾಜಿ ಸಿಎಂ ಹಾಗೂ ಕರ್ನಾಟಕದಲ್ಲಿ ಬಿಜೆಪಿ ಪಕ್ಷವನ್ನು ತಳಮಟ್ಟದಿಂದ ಕಟ್ಟಿಬೆಳೆಸಿರುವ ಬಿ.ಎಸ್. ಯಡಿಯೂರಪ್ಪ ಅವರ ಪುತ್ರನಿಗೆ ಇಂದು, ಪಟ್ಟಾಭಿಷೇಕ ಆಗಿದೆ. ಈ ಮೂಲಕ ಕರ್ನಾಟಕದಲ್ಲಿ ಬಿಜೆಪಿ ಸಾರಥ್ಯ ಬಿ.ವೈ. ವಿಜಯೇಂದ್ರ ಅವರ ಪಾಲಾಗಿದೆ. ಆದರೆ ಇದೇ ವಿಚಾರಕ್ಕೆ ಬಿಜೆಪಿ ಒಳಗೆ ಬಣ ಬಡಿದಾಟ ಶುರುವಾಗಿದೆ ಅನ್ನೋ ಗಂಭೀರ ಆರೋಪ ಈಗ ಕೇಳಿಬರುತ್ತಿದೆ. ಈ ಆರೋಪದ ಬೆಂಕಿಗೆ ಇದೀಗ ಕರ್ನಾಟಕ ಕಾಂಗ್ರೆಸ್ ತುಪ್ಪ ಸುರಿದಿದೆ.
ಹೌದು ಕರ್ನಾಟಕ ಬಿಜೆಪಿ ಘಟಕದಲ್ಲಿ ಸಾಲು ಸಾಲು ಸಮಸ್ಯೆ ಮತ್ತು ಸವಾಲುಗಳು ಇವೆ. ಅದ್ರಲ್ಲೂ ಬಿ.ಎಸ್. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಈ ಸಮಸ್ಯೆ ದೊಡ್ಡದಾಗಿ ಉಲ್ಬಣಿಸಿ, ಕೊನೆಗೆ ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರು, ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಡಬೇಕಾಗಿ ಬಂತು. ಪರಿಸ್ಥಿತಿ ಹೀಗಿದ್ದಾಗಲೇ ಈಗ ಇನ್ನೊಂದು ರೀತಿ ಬೆಂಕಿ ಹೊತ್ತಿಕೊಂಡಿದೆಯಂತೆ, ಬಿಎಸ್‌ವೈ ಅವರ ಪುತ್ರ ವಿಜಯೇಂದ್ರರ ಪಟ್ಟಾಭಿಷೇಕದ ದಿನವೇ ಕಾಂಗ್ರೆಸ್ ಹೊಸ ಬಾಂಬ್ ಸಿಡಿಸಿದೆ.

ಕಾಂಗ್ರೆಸ್ 'ಸಂತೋಷ ಕೂಟ' ಎಂದಿದ್ದು ಯಾರಿಗೆ?
ಈ ಕುರಿತು ಟ್ವೀಟ್ ಮಾಡಿದ ಕಾಂಗ್ರೆಸ್, 'ಯಡಿಯೂರಪ್ಪನವರ ಮಗ ಅಧ್ಯಕ್ಷನಾಗಿರುವುದು ಸಂತೋಷ ಕೂಟಕ್ಕೆ ತೀವ್ರ ಅಸಹನೆ ಇರುವುದು ಜಗತ್ತಿಗೆ ತಿಳಿದಿರುವ ಸತ್ಯ. ಅದೇ ಸಂತೋಷ ಕೂಟದ ಭಾಗವಾಗಿರುವ @BJP4Karnataka ಸಾಮಾಜಿಕ ಜಾಲತಾಣಕ್ಕೂ ವಿಜಯೇಂದ್ರರನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ವಿಜಯೇಂದ್ರ ಅಧ್ಯಕ್ಷರಾಗಿ ನೇಮಕವಾಗಿ ಮೂರ್ನಾಲ್ಕು ದಿನ ಕಳೆದಾಗಿದೆ, ಪದಗ್ರಹಣವೂ ಆಗಿದೆ, ಆದರೆ ಇನ್ನೂ ಸಹ ಬಿಜೆಪಿ ಪಕ್ಷದ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ನಳಿನ್ ಕುಮಾರ್ ಕಟೀಲ್ ಕಂಗೊಳಿಸುತ್ತಿದ್ದಾರೆ!' ಎಂದಿರುವ ಕರ್ನಾಟಕ ಕಾಂಗ್ರೆಸ್ ಮತ್ತೊಂದು ಆರೋಪದ ಬಾಂಬ್ ಕೂಡ ಸಿಡಿಸಿದೆ.
ಯಡಿಯೂರಪ್ಪನವರ ಮಗ ಅಧ್ಯಕ್ಷನಾಗಿರುವುದು ಸಂತೋಷ ಕೂಟಕ್ಕೆ ತೀವ್ರ ಅಸಹನೆ ಇರುವುದು ಜಗತ್ತಿಗೆ ತಿಳಿದಿರುವ ಸತ್ಯ.
— Karnataka Congress (@INCKarnataka) November 15, 2023
ಅದೇ ಸಂತೋಷ ಕೂಟದ ಭಾಗವಾಗಿರುವ @BJP4Karnataka ಸಾಮಾಜಿಕ ಜಾಲತಾಣಕ್ಕೂ ವಿಜಯೇಂದ್ರರನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ವಿಜಯೇಂದ್ರ ಅಧ್ಯಕ್ಷರಾಗಿ ನೇಮಕವಾಗಿ ಮೂರ್ನಾಲ್ಕು ದಿನ ಕಳೆದಾಗಿದೆ, ಪದಗ್ರಹಣವೂ ಆಗಿದೆ, ಆದರೆ… pic.twitter.com/F23XXwHHuM
'ವಿಜಯೇಂದ್ರರನ್ನು ಒಪ್ಪಿಕೊಂಡಿಲ್ಲ ಎಂಬುದಕ್ಕೆ...'
ಹೀಗೆ ಟ್ವೀಟ್ ಮೂಲಕ ತನ್ನ ಆರೋಪದ ಪಟ್ಟಿಯನ್ನು ಕಾಂಗ್ರೆಸ್ ಮುಂದುವರಿಸಿದ್ದು, 'ಬಿಜೆಪಿ ಪಕ್ಷ ವಿಜಯೇಂದ್ರರನ್ನು ಒಪ್ಪಿಕೊಂಡಿಲ್ಲ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ? ವಿಜಯೇಂದ್ರ ಕೇವಲ BSY ಬಣಕ್ಕೆ ಮಾತ್ರ ಅಧ್ಯಕ್ಷರೇ?' ಎಂದು ಹೇಳುವ ಮೂಲಕ ಕರ್ನಾಟಕ ಬಿಜೆಪಿಯ ಒಳಗೊಳಗೆ ಬಣ ಬಡಿದಾಟ ಶುರುವಾಗಿದೆ ಅನ್ನೋ ಆರೋಪವನ್ನು ಕಾಂಗ್ರೆಸ್ ಮಾಡಿದೆ. ಅಲ್ಲದೆ 'ಬಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ ವಿಜಯೇಂದ್ರ ಹೆಸರೇ ಇಲ್ಲ: ಇದು 'ಸಂತೋಷ ಕೂಟ'ದ ಕೈವಾಡವೇ?' ಎಂಬ ಪ್ರಶ್ನೆಯನ್ನು ಕಾಂಗ್ರೆಸ್ ಈ ಟ್ವೀಟ್‌ನ ಮೂಲಕ ಕೇಳುತ್ತಿದೆ. ಇದಕ್ಕೆ ಬಿಜೆಪಿ ನಾಯಕರ ಪ್ರತಿಕ್ರಿಯೆ ಹೇಗಿರುತ್ತದೆ? ಅಂತಾ ಕಾದು ನೋಡಬೇಕಿದೆ.

ಈಗಲೂ ನಳನಳಿಸುತ್ತಿದೆ ನಳಿನ್ ಫೋಟೋ!
ಅಂದಹಾಗೆ ಕಾಂಗ್ರೆಸ್ ಈ ರೀತಿ ಬಿಜೆಪಿ ಒಳಜಗಳದ ಕುರಿತು ಗಂಭೀರ ಆರೋಪ ಮಾಡಲು ಪ್ರಮುಖ ಕಾರಣ, ಬಿಜೆಪಿ ಪಕ್ಷದ ಟ್ಟಿಟ್ಟರ್ ಖಾತೆ. ಅಷ್ಟಕ್ಕೂ ಬಿಜೆಪಿ ಕರ್ನಾಟಕ ಘಟಕದ ಅಧ್ಯಕ್ಷ ಎಂದು ಬಿ.ವೈ. ವಿಜಯೇಂದ್ರ ಅವರನ್ನ ಆಯ್ಕೆ ಮಾಡಿ ಹಲವು ದಿನವೆ ಕಳೆದಿದೆ. ಹೊಸ ಅಧ್ಯಕ್ಷರ ಹೆಸರು ಘೋಷಣೆಯಾದ್ರೂ ಕರ್ನಾಟಕ ಬಿಜೆಪಿ ಘಟಕದ ಟ್ವಿಟ್ಟರ್ ಅಂದ್ರೆ ಈಗಿನ 'X' ಸೋಷಿಯಲ್ ಮೀಡಿಯಾ ಖಾತೆಯಲ್ಲಿ, ವಿಜಯೇಂದ್ರರ ಫೋಟೋ ಹಾಕಿಲ್ಲ. ಬದಲಾಗಿ ಹಿಂದಿನ ಅಂದ್ರೆ ನಿರ್ಗಮಿತ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಭಾವಚಿತ್ರ ಹಾಕಲಾಗಿದೆ. ಇದೇ ಕಾರಣಕ್ಕೆ ಕಾಂಗ್ರೆಸ್ ಈಗ ಹೊಸ ಬಾಂಬ್ ಸಿಡಿಸಿದೆ.
ಒಟ್ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಫೈಟ್ ಜೋರಾಗಿದ್ದು, ಬಿಜೆಪಿ ಪಕ್ಷದಲ್ಲಿರುವ ಇನ್‌ಸೈಡ್ ಫೈಟ್ ಕೈ ಪಾಳಯಕ್ಕೆ ಅಸ್ತ್ರವಾಗಿದೆ. ಹೀಗೆ ಇದೆಲ್ಲಾ ಎಲ್ಲಿಗೆ ಬಂದು ನಿಲ್ಲುತ್ತೆ? ಅನ್ನೋದನ್ನ ಕಾದು ನೋಡಬೇಕಿದೆ. ಮತ್ತೊಂದು ಕಡೆ ಕಾಂಗ್ರೆಸ್ ಮಾಡಿರುವ ಆರೋಪ ಕುರಿತು, ಕರ್ನಾಟಕ ಬಿಜೆಪಿ ಘಟಕದ ನೂತನ ಅಧ್ಯಕ್ಷರು ಹೇಗೆ ಪ್ರತಿಕ್ರಿಯೆ ನೀಡಲಿದ್ದಾರೆ? ಅನ್ನೋದು ಕೂಡ ಕುತೂಹಲ ಕೆರಳಿಸಿದೆ.












Click it and Unblock the Notifications