‘ವಿಜಯೇಂದ್ರ ಒಬ್ಬನೇ ಎಲ್ಲವೂ ಅಲ್ಲ - ಈಶ್ವರಪ್ಪ’
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಕರ್ನಾಟಕ ಬಿಜೆಪಿ ಘಟಕಕ್ಕೆ ಅಧ್ಯಕ್ಷರಾಗಿ ಆಯ್ಕೆಯಾದ ನಂತರ, ಬಿಜೆಪಿ ಮತ್ತು ಕಾಂಗ್ರೆಸ್ ಕಿತ್ತಾಟವೂ ತಾರಕಕ್ಕೆ ಏರಿದೆ. ಅದರಲ್ಲೂ, ಬಿಜೆಪಿ ಆಂತರಿಕ ಕಿತ್ತಾಟದ ವಿಚಾರವನ್ನು ಪ್ರಸ್ತಾಪಿಸಿರುವ ಕಾಂಗ್ರೆಸ್ ಹೊಸ ಬಾಂಬ್ ಸಿಡಿಸಿದೆ. ಹಾಗೇ ಈ ವಿಚಾರದಲ್ಲಿ ಈಶ್ವರಪ್ಪ ಹೆಸರನ್ನು ಮತ್ತೆ ಮತ್ತೆ ಎಳೆದು ತರುತ್ತಿದೆ ಕರ್ನಾಟಕದ 'ಕೈ' ಪಾಳಯ!
ಅಷ್ಟಕ್ಕೂ ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಕರ್ನಾಟಕ ಕಾಂಗ್ರೆಸ್ ಹಲವು ಆರೋಪ ಮಾಡಿದೆ. ಬಿಜೆಪಿ ಕರ್ನಾಟಕ ಘಟಕಕ್ಕೆ ಅಧ್ಯಕ್ಷರಾಗಿ ಆಯ್ಕೆಯಾದ ನಂತರ, ಪಕ್ಷದ ಒಳಗೆ ಅಸಮಾಧಾನ ಭುಗಿಲೆದ್ದಿದೆ ಅಂತ ಹೇಳುತ್ತಿದೆ ಕರ್ನಾಟಕ ಕಾಂಗ್ರೆಸ್. ಹೀಗೆ ತನ್ನ ಆರೋಪದ ಸರಪಳಿಯ ಮುಂದುವರಿದ ಭಾಗವಾಗಿ ಬಿ.ವೈ. ವಿಜಯೇಂದ್ರ ಅವರು ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಯಾವೆಲ್ಲಾ ನಾಯಕರು ಹೇಗೆ ಪ್ರತಿಕ್ರಿಯೆ ನೀಡಿದ್ದಾರೆ? ಅನ್ನೋ ವಿಚಾರ ಇಟ್ಟುಕೊಂಡು ಹೊಸ ಅಸ್ತ್ರ ಹೂಡಿದೆ ಕಾಂಗ್ರೆಸ್.

'ವಿಜಯೇಂದ್ರ ಒಬ್ಬನೇ ಎಲ್ಲವೂ ಅಲ್ಲ'
ಕರ್ನಾಟಕ ಕಾಂಗ್ರೆಸ್ ಇದೀಗ ಬಿಜೆಪಿಯ ವಿರುದ್ಧ ಮಾಡಿದ ಟ್ವೀಟ್‌ನಲ್ಲಿ, '◆ವಿಜಯೇಂದ್ರ ಒಬ್ಬನೇ ಎಲ್ಲವೂ ಅಲ್ಲ - ಈಶ್ವರಪ್ಪ ◆ವಿಜಯೇಂದ್ರ 3 ವರ್ಷ ಮಾತ್ರ ಅಧ್ಯಕ್ಷ - ಪೇಶ್ವೆ ಜೋಷಿಗಳು (ಕುಮಾರಸ್ವಾಮಿಯವರು ಕೊಟ್ಟ ಹೆಸರು!) ◆ವಿಜಯೇಂದ್ರರ ಪದಗ್ರಹಣಕ್ಕೆ ನಾನು ಹೋಗುವುದಿಲ್ಲ - ಸಿ. ಟಿ ರವಿ ◆ - ವಿ. ಸೋಮಣ್ಣ ◆ವಿಜಯೇಂದ್ರ ಬಗ್ಗೆ ನೋ ಕಾಮೆಂಟ್ಸ್ - ಬೆಲ್ಲದ್ ◆ @blsanthosh, @BasanagoudaBJP ಗಾಢ ಮೌನ. ಇಷ್ಟು ದಿನ #FamilyJanataParty ಒಡೆದ ಮನೆಯಾಗಿತ್ತು, ಇನ್ಮುಂದೆ ಯುದ್ಧಕಣವಾಗುವುದು ನಿಶ್ಚಿತ, ಸಂತೋಷ ಕೂಟ ರಣವಿಳ್ಯ ನೀಡಲು ತಾಯರಾಗುತ್ತಿದೆ!' ಎಂದು ಹೊಸ ಆರೋಪ ಮಾಡಿದೆ.
◆ವಿಜಯೇಂದ್ರ ಒಬ್ಬನೇ ಎಲ್ಲವೂ ಅಲ್ಲ - ಈಶ್ವರಪ್ಪ
— Karnataka Congress (@INCKarnataka) November 14, 2023
◆ವಿಜಯೇಂದ್ರ 3 ವರ್ಷ ಮಾತ್ರ ಅಧ್ಯಕ್ಷ - ಪೇಶ್ವೆ ಜೋಷಿಗಳು (ಕುಮಾರಸ್ವಾಮಿಯವರು ಕೊಟ್ಟ ಹೆಸರು!)
◆ವಿಜಯೇಂದ್ರರ ಪದಗ್ರಹಣಕ್ಕೆ ನಾನು ಹೋಗುವುದಿಲ್ಲ - ಸಿ. ಟಿ ರವಿ
◆................... - ವಿ. ಸೋಮಣ್ಣ
◆ವಿಜಯೇಂದ್ರ ಬಗ್ಗೆ ನೋ ಕಾಮೆಂಟ್ಸ್ - ಬೆಲ್ಲದ್
◆ @blsanthosh ,…
'ಯಡಿಯೂರಪ್ಪನವರ ಮಗ ನಿಮ್ಮ ಮಗನ..'
ನಿನ್ನೆ ಕೂಡ ಕಾಂಗ್ರೆಸ್ ಈ ಕುರಿತು ಟ್ವೀಟ್ ಮಾಡಿ ಈಶ್ವರಪ್ಪ ಅವರ ಹೆಸರು ಪ್ರಸ್ತಾಪಿಸಿತ್ತು, 'ರಿಟೈರ್ಡ್ ರಾಜಾಕಾರಿಣಿ @ikseshwarappa ಅವರೇ, ಇದೆಂತಹಾ ದುಸ್ಥಿತಿ ನಿಮ್ಮದು, ಬಿಜೆಪಿ ನಿಮ್ಮ ಮಂತ್ರಿಗಿರಿ ಕಿತ್ತುಕೊಂಡಿತು, ನಿಮ್ಮನ್ನು ಸಿಎಂ ಮಾಡದೆ ವಂಚಿಸಿತು, ಕೊನೆಗೆ ಟಿಕೆಟ್ ನಿರಾಕರಿಸಿ ರಾಜಕೀಯ ಭವಿಷ್ಯವನ್ನೂ ಕಸಿಯಿತು. ಈಗ ಯಡಿಯೂರಪ್ಪನವರ ಮಗ ನಿಮ್ಮ ಮಗನ ರಾಜಕೀಯ ಭವಿಷ್ಯಕ್ಕೂ ಕಲ್ಲು ಹಾಕುವುದು ಖಚಿತ. ಬಿಜೆಪಿ ಕಾರ್ಯಕ್ರಮದಲ್ಲಿ ನಿಮಗೊಂದು ಕುರ್ಚಿಯೂ ಇಲ್ಲ ಈಗ, ನಿಮ್ಮ ವ್ಯರ್ಥಪ್ರಲಾಪದ ಬಗ್ಗೆ ನಮಗೆ ಮರುಕವಿದೆ!' ಅಂತಾ ಹೇಳಿತ್ತು. ಈಗ ಮತ್ತೊಂದು ಗಂಭೀರ ಆರೋಪ ಮಾಡಿದೆ.
ರಿಟೈರ್ಡ್ ರಾಜಾಕಾರಿಣಿ @ikseshwarappa ಅವರೇ,
— Karnataka Congress (@INCKarnataka) November 13, 2023
ಇದೆಂತಹಾ ದುಸ್ಥಿತಿ ನಿಮ್ಮದು, ಬಿಜೆಪಿ ನಿಮ್ಮ ಮಂತ್ರಿಗಿರಿ ಕಿತ್ತುಕೊಂಡಿತು, ನಿಮ್ಮನ್ನು ಸಿಎಂ ಮಾಡದೆ ವಂಚಿಸಿತು, ಕೊನೆಗೆ ಟಿಕೆಟ್ ನಿರಾಕರಿಸಿ ರಾಜಕೀಯ ಭವಿಷ್ಯವನ್ನೂ ಕಸಿಯಿತು.
ಈಗ ಯಡಿಯೂರಪ್ಪನವರ ಮಗ ನಿಮ್ಮ ಮಗನ ರಾಜಕೀಯ ಭವಿಷ್ಯಕ್ಕೂ ಕಲ್ಲು ಹಾಕುವುದು ಖಚಿತ.
ಬಿಜೆಪಿ ಕಾರ್ಯಕ್ರಮದಲ್ಲಿ… pic.twitter.com/EzZwQfvKc7












Click it and Unblock the Notifications